Site icon Vistara News

VISTARA TOP 10 NEWS : ವಿಶ್ವದ ಒಗ್ಗಟ್ಟಿಗೆ ಜಿ20 ಸಭೆಯಲ್ಲಿ ಮೋದಿ ಕರೆ, ಭಾರತ- ಪಾಕ್​ ಬಿಗ್​ ಫೈಟ್​ಗೆ ವೇದಿಕೆ ಸಜ್ಜು ಇತರ ಪ್ರಮುಖ ಸುದ್ದಿಗಳು

Top 10 news

1. G20 Summit 2023: ಜಿ20 ಶೃಂಗಸಭೆ ಆರಂಭ; ಮಾನವ ಕೇಂದ್ರಿತ ಸಭೆ, ವಿಶ್ವದ ಒಗ್ಗಟ್ಟಿಗೆ ಮೋದಿ ಕರೆ
ನವದೆಹಲಿ: ಜಿ-20 ಶೃಂಗಸಭೆಗೆ ದೆಹಲಿಯ ಭಾರತ ಮಂಟಪದಲ್ಲಿ ಅದ್ಧೂರಿ ಚಾಲನೆ ದೊರೆತಿದೆ. ಜಾಗತಿಕ ನಾಯಕರನ್ನು ಸಭೆಗೆ ಸ್ವಾಗತಿಸಿದ ಪ್ರಧಾನಿ ನರೇಂದ್ರ ಮೋದಿ, ಮೊದಲ ಅಧಿವೇಶನ ಉದ್ದೇಶಿಸಿ ಮಾತನಾಡಿದರು. “ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ-20 ಸಭೆಯು ಜಗತ್ತನ್ನು ಒಳಗೊಂಡು ನಡೆಯುತ್ತಿರುವ ಸಭೆಯಾಗಿದೆ. ಜಗತ್ತು ಒಗ್ಗೂಡುವ ಮೂಲಕ ಏಳಿಗೆ ಹೊಂದಬೇಕು ಎಂಬುದು ನಮ್ಮ ಆಶಯವಾಗಿದೆ” ಎಂದು ತಿಳಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ : G20 Summit 2023: ಜಿ20 ಶೃಂಗಸಭೆ; ನಾಯಕರ ನಿರ್ಣಯ ಅಂಗೀಕರಿಸಿದ ಮೋದಿ, ಮಹತ್ವದ ಘಟ್ಟದತ್ತ ಸಭೆ
ಇದನ್ನೂ ಓದಿ: India vs Bharat: ಜಿ20 ಶೃಂಗಸಭೆಯಲ್ಲಿ ನೀಡಿರುವ ಕಿರುಪುಸ್ತಕದಲ್ಲೂ ದೇಶದ ಅಧಿಕೃತ ಹೆಸರು ʼಭಾರತʼ
ಜಿ 20 ಶೃಂಗ ಸಭೆ ಕುರಿತ ಸಮಗ್ರ ವಿವರಗಳಿಗಾಗಿ ಕ್ಲಿಕ್‌ ಮಾಡಿ

2. ಗೆಲುವಿನ ಹುಮ್ಮಸ್ಸಿನಲ್ಲಿರುವ ಪಾಕ್​ ತಂಡ ಜಂಘಾಬಲ ಉಡುಗಿಸಲು ಟೀಮ್​ ಇಂಡಿಯಾ ರೆಡಿ
ಕೊಲೊಂಬೊ: ಏಷ್ಯಾಕಪ್ 2023ರ (Asia Cup 2023) ಸೂಪರ್ ಫೋರ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ (ind vs pak) ತಂಡಗಳು ಸೆಣಸಲಿವೆ. ಕೊಲಂಬೊದ ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮೀಸಲು ದಿನ ನಿಗದಿ ಮಾಡಲಾಗಿದೆ. ಪಂದ್ಯಕ್ಕೆ ಮಳೆ ಬರುವ ಸಾಧ್ಯತೆ ಇದೆ. ಹೀಗಾಗಿ ಮೀಸಲು ದಿನ ಫಿಕ್ಸ್​ ಮಾಡಲಾಗಿದೆ. ಹಾಲಿ ಆವೃತ್ತಿಯ ಕಾಂಟಿನೆಂಟಲ್ ಚಾಂಪಿಯನ್ ಶಿಪ್ ನ ಫೈನಲ್ ಹೊರತುಪಡಿಸಿ ಮೀಸಲು ದಿನವನ್ನು ಹೊಂದಿರುವ ಏಕೈಕ ಪಂದ್ಯ ಇದಾಗಿದೆ. ಸೆಪ್ಟಂಬರ್ 2ರಂದು ಪಲ್ಲೆಕೆಲೆಯಲ್ಲಿ ನಡೆದ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ‘ಎ’ ಗುಂಪಿನ ಪಂದ್ಯ ಮಳೆಯಿಂದ ರದ್ದಾಗಿತ್ತು. ಹೀಗಾಗಿ ಅಭಿಮಾನಿಗಳಿಗೆ ನಿರಾಸೆ ಮಾಡದಿರಲು ಮೀಸಲು ದಿನ ನಿಗದಿ ಮಾಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : ಪಾಕ್​ ವಿರುದ್ಧ ರಾಹುಲ್​ ಆಡುವುದು ಖಚಿತ: ಬ್ಯಾಟಿಂಗ್​ ಕ್ರಮಾಂಕದ ಕುರಿತು ರೋಹಿತ್​ ಬಿಗ್​ ಅಪ್​ಡೇಟ್​

3. ಖಾಸಗಿ ವಾಹನ ಪ್ರಯಾಣಿಕರೇ ಬಸ್‌ ನೋಡಿ ಪ್ಲ್ಯಾನ್‌ ಮಾಡಿ; ನಾಳೆ ಮಧ್ಯ ರಾತ್ರಿಯಿಂದಲೇ ರಾಜಧಾನಿ ಸ್ತಬ್ಧ
ಬೆಂಗಳೂರು: ಶಕ್ತಿ ಯೋಜನೆ ಜಾರಿ ಬಳಿಕ ಸಂಕಷ್ಟಕ್ಕೀಡಾಗಿರುವ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ, ಇದೀಗ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಬಂದ್‌ ಅಸ್ತ್ರ ಪ್ರಯೋಗಕ್ಕೆ ಸಜ್ಜಾಗಿದೆ. ಬೈಕ್‌ ಟ್ಯಾಕ್ಸಿ ನಿರ್ಬಂಧ, ಚಾಲಕರಿಗೆ ಸಹಾಯಧನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸೆ.11ರಂದು ಸೋಮವಾರ ಬೆಂಗಳೂರು ಬಂದ್‌ಗೆ (Transport Strike) ಕರೆಕೊಟ್ಟಿದೆ. ಭಾನುವಾರ ಮಧ್ಯ ರಾತ್ರಿಯಿಂದಲೇ ಖಾಸಗಿ ವಾಹನಗಳ ಸೇವೆ ಸ್ಥಗಿತವಾಗುವ ಹಿನ್ನೆಲೆಯಲ್ಲಿ ದೂರದ ಊರುಗಳಿಗೆ ಹೋಗುವ ಪ್ರಯಾಣಿಕರಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

4. ರಾತ್ರಿ ಸೀಟ್ ಹಂಚಿಕೆ, ಬೆಳಗ್ಗೆಯೇ Admission; ಕೆಇಎ ಅವ್ಯವಸ್ಥೆಯಿಂದ ವಿದ್ಯಾರ್ಥಿಗಳು, ಹೆತ್ತವರು ಕಂಗಾಲು
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karantaka Examination Authority) ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (Common Entrance test -CET) ಮೂಲಕ ನಾನಾ ಕೋರ್ಸ್‌ಗಳಿಗೆ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಮತ್ತು ಹೆತ್ತವರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ರಾತ್ರಿ ಸೀಟು ಹಂಚಿಕೆಯನ್ನು ಪ್ರಕಟಿಸಿ (CET Seat allottment) ಮರುದಿನವೇ ಪ್ರವೇಶ ಪ್ರಕ್ರಿಯೆಗಳನ್ನು ಮುಗಿಸಿಕೊಳ್ಳಬೇಕಾದ ಅವಸರದ ಡೆಡ್‌ಲೈನ್‌ಗೆ ಸಿಲುಕಿ ಅವರು ಕಂಗಾಲಾಗಿದ್ದಾರೆ. ಒಂದು ಪ್ರವೇಶ ಪ್ರಕ್ರಿಯೆ ಹೇಗಿರುತ್ತದೆ ಎನ್ನುವ ಸಾಮಾನ್ಯ ಜ್ಞಾನವಾಗಲೀ, ಬ್ಯಾಂಕ್‌ ರಜೆಗಳ ಅವಗಾಹನೆಯಾಗಲೀ ಇಲ್ಲದೆ ಬೇಕಾಬಿಟ್ಟಿ ನಿರ್ಧಾರ ಮಾಡಲಾಗುತ್ತದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

5. ಸಿದ್ದರಾಮಯ್ಯ ವಿರುದ್ಧ ಹರಿಪ್ರಸಾದ್‌ ಶಕ್ತಿ ಪ್ರದರ್ಶನ; ಖಾಕಿ ಚಡ್ಡಿ ಹಾಕಿಕೊಂಡ ಸಮಾಜವಾದಿ ಎಂದು ಗೇಲಿ
ಬೆಂಗಳೂರು: ತಮಗೆ ಮಂತ್ರಿ ಸ್ಥಾನ ಸಿಗದ ಸಿಟ್ಟಿನಲ್ಲಿ ಕುದಿಯುತ್ತಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್‌ (BK Hariprasad) ಅವರು ಶನಿವಾರ ಅರಮನೆ ಮೈದಾನದಲ್ಲಿ (Palace Grounds) ತಮಗೆ ಅಪಮಾನ ಮಾಡಿದ ಸಿಎಂ ಸಿದ್ದರಾಮಯ್ಯ (CM Siddaamaiah) ವಿರುದ್ಧ ಶಕ್ತಿ ಪ್ರದರ್ಶನ ಮಾಡಿದರು. ತಮಗೆ ಸಚಿವ ಸ್ಥಾನ ಸಿಗದೆ ಇರುವುದು ಅತಿ ಹಿಂದುಳಿದ ವರ್ಗಗಳಿಗೆ (Most Backward Communities) ಮಾಡಿದ ಅಪಮಾನ ಎಂದು ಬಿಂಬಿಸಿರುವ ಹರಿಪ್ರಸಾದ್‌ ಅವರು ನಾರಾಯಣಗುರು ಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ (Pranavanda swameeji) ಅವರನ್ನು ಮುಂದಿಟ್ಟುಕೊಂಡು ಶನಿವಾರ ಅರಮನೆ ಮೈದಾನದಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಸಮಾರಂಭದಲ್ಲಿ ಭಾಗವಹಿಸಿದ್ದ ಸ್ವಾಮೀಜಿಗಳೂ ಸೇರಿದಂತೆ ಎಲ್ಲರೂ ಹರಿಪ್ರಸಾದ್‌ ಅವರನ್ನು ಅವಗಣಿಸಲಾಗಿದೆ ಎಂಬ ಮಾತನ್ನೇ ಆಡಿದ್ದು ಸಭೆಯ ಹಿನ್ನೆಲೆಯನ್ನು ಸ್ಪಷ್ಟಪಡಿಸಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

6. HD Kumaraswamy : ಬಿಜೆಪಿ-ಜೆಡಿಎಸ್‌ ಮೈತ್ರಿ ನಾಳೆ ಘೋಷಣೆ?; ಕ್ಷೇತ್ರ ಹಂಚಿಕೆ ನಡೆದಿಲ್ಲ ಎಂದ ಕುಮಾರಸ್ವಾಮಿ

7. ಪಕ್ಷ ಸಂಘಟನೆ ಜತೆಗೆ ಅತೃಪ್ತಿ ಶಮನಕ್ಕೆ ಇಳಿದ ಬಿಎಸ್‌ವೈ; ಸಮಾಧಾನಗೊಂಡ್ರಾ ರೇಣುಕಾ, ಮುನೇನಕೊಪ್ಪ?

8. cm Siddaramaiah : ಆ ಪತ್ರ ಓದಿದಾಗಿನಿಂದ ಈ ಮಗುವನ್ನು ಭೇಟಿ ಆಗ್ಬೇಕು ಎಂದು ಬಯಸಿದ್ದೆ, ಇವತ್ತು ಸಿಕ್ಳು; ಭಾವುಕರಾದ ಸಿದ್ದರಾಮಯ್ಯ

9. Weather Report : ಭಾರಿ ಮಳೆಗೆ ಬಿರುಗಾಳಿ ಸಾಥ್‌; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

10. ಗಾಯದಿಂದ ನಡೆಯಲಾಗದೆ ಕಣ್ಣೀರು ಹಾಕುತ್ತಿದ್ದ ಆನೆಗೆ ಚಪ್ಪಲಿ ಹೊಲಿದ ಡಾಕ್ಟರ್‌; ಯಾರೀ ದೇವತಾ ಮನುಷ್ಯ?
ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ.

Exit mobile version