1. ರಾಮ ಮಂದಿರಕ್ಕೆ ಕನ್ನಡಿಗ ಯೋಗಿರಾಜ್ ಕೆತ್ತನೆಯ ರಾಮಲಲ್ಲಾ ವಿಗ್ರಹ ಆಯ್ಕೆ
ಅಯೋಧ್ಯೆ: ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ (Ayodhya Ramajanmabhumi) ಪ್ರತಿಷ್ಠಾಪನೆಗೊಳ್ಳಲಿರುವ ಮೂರ್ತಿಯನ್ನು ಅಂತಿಮಗೊಳಿಸಲಾಗಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಅವರು ಕೆತ್ತನೆಯ ಮೂರ್ತಿ(Ram lalla Statue)ಯನ್ನೇ ಅಯೋಧ್ಯೆ ರಾಮ ಮಂದಿರದಲ್ಲಿ (Ram Mandir) ಪ್ರಾಣ ಪ್ರತಿಷ್ಠೆ ಮಾಡಲಾಗುತ್ತಿದೆ ಎಂದು ರಾಮಮಂದಿರ ಟ್ರಸ್ಟ್ (Rama Mandir Trust) ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ತಿಳಿಸಿದ್ದಾರೆಂದು ಪಿಟಿಐ ವರದಿ ಮಾಡಿದೆ. ಈಗ ಸದ್ಯ ಇರುವ ರಾಮಲಲ್ಲಾ ವಿಗ್ರಹವನ್ನೂ ಹೊಸ ದೇವಾಲಯದಲ್ಲೂ ಇಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಇದನ್ನೂ ಓದಿ : Divya Ayodhya: ರಾಮಮಂದಿರ ಯಾತ್ರಿಕರಿಗಾಗಿ ಬಂತು ಆ್ಯಪ್; ಆಲ್ ಇನ್ ಒನ್ ಗೈಡ್‌ನಲ್ಲೇನಿದೆ?
2. ಅಯೋಧ್ಯೆಗೆ ಆಹ್ವಾನಿಸಿ WhatsApp ಮೆಸೇಜ್ ಬಂದರೆ ಎಚ್ಚರ; ಅದು ನಕಲಿ
ನವದೆಹಲಿ: ಜನವರಿ 22ರಂದು ಅಯೋಧ್ಯೆಯ ರಾಮಮಂದಿರ (Ram Mandir) ಉದ್ಘಾಟನೆಯ ವಿಚಾರವು ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ. ಹಾಗೆಯೇ, ಆನ್‌ಲೈನ್ ವಂಚಕರು, ಸೈಬರ್ ಅಪರಾಧಿಗಳು ಕೂಡ ರಾಮಮಂದಿರ ಉದ್ಘಾಟನೆ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದಾರೆ. ಹೌದು, ರಾಮಮಂದಿರದ ಉದ್ಘಾಟನೆ ಕಾರ್ಯಕ್ರಮಕ್ಕೆ ನಿಮ್ಮನ್ನು ಆಹ್ವಾನಿಸಲಾಗಿದೆ ಎಂದು ವಾಟ್ಸ್‌ಆ್ಯಪ್‌ಗೆ ಮೆಸೇಜ್ (Fake Invitation) ಕಳುಹಿಸುತ್ತಿದ್ದು, ಅವರು ಕಳುಹಿಸಿದ ಎಪಿಕೆ ಫೈಲ್ (APK File) ಮೇಲೆ ಕ್ಲಿಕ್ ಮಾಡಿದರೆ ಮೊಬೈಲ್ ಹ್ಯಾಕ್ ಆಗುತ್ತಿವೆ. ಹಾಗಾಗಿ, ಜನರು ವಾಟ್ಸ್‌ಆ್ಯಪ್ ಮೆಸೇಜ್ ಕುರಿತು ಜಾಗ್ರತೆಯಿಂದ ಇರಬೇಕಾಗಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : Ram Mandir: ಸಾಮಾನ್ಯ ಜನರಿಗೂ ರಾಮಮಂದಿರಕ್ಕೆ ಆಮಂತ್ರಣ; ಇವರೇ ಆ ಅದೃಷ್ಟವಂತರು!
3. ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿತ; ಶೇ. 40ಕ್ಕಿಂತ ಕಡಿಮೆ ನೀರು!
ಬೆಂಗಳೂರು: ರಾಜ್ಯದಲ್ಲಿ ಸಮರ್ಪಕ ಮಳೆಯಾಗದೆ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಕೊರತೆಯಿಂದ ರಾಜ್ಯದ 11 ಪ್ರಮುಖ ಜಲಾಶಯಗಳಲ್ಲೂ (Karnataka Reservoirs) ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದರಿಂದ ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
4. ಈ ಬಾರಿ 14ರ ಬದಲು ಜ.15ರಂದು ಸಂಕ್ರಾಂತಿ ಆಚರಣೆ ಏಕೆ?
ವಿಸ್ತಾರ ನ್ಯೂಸ್ ಬೆಂಗಳೂರು: ಭಾರತೀಯರು ಹಾಗೂ ಬಹುಸಂಖ್ಯಾತ ಹಿಂದೂಗಳ ಪಾಲಿಗೆ ಮಕರ ಸಂಕ್ರಾಂತಿ (Makar Sankranti) ಅತ್ಯಂತ ಮಹತ್ವದ ಹಾಗೂ ಪವಿತ್ರ ಹಬ್ಬ. ಇದು ಉತ್ತರಾಯಣದ ಆರಂಭದ ಸೂಚಕ. ಜತೆಗೆ ಸುಗ್ಗಿಯ ಸಂಭ್ರಮಕ್ಕೆ ಪ್ರಾಮುಖ್ಯತೆ ನೀಡುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಭಾರತದ ವಿವಿಧತೆಯಲ್ಲಿ ಏಕತೆಯ ಸಾರವನ್ನು ಪ್ರತಿಬಿಂಬಿಸುವ ಆಚರಣೆ. ಸೂರ್ಯ ದೇವರು, ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ಏಕಕಾಲಕ್ಕೆ ಪೂಜಿಸುವ ದಿನವೂ ಹೌದು. ಮಹಾಭಾರತದಲ್ಲಿ ಭೀಷ್ಮ ಪಿತಾಮಹ ಈ ವೇಳೆಯಲ್ಲಿ ಮರಣವನ್ನಪ್ಪಿ ಮೋಕ್ಷ ಪಡೆಯುತ್ತಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
5. ಸಂಕ್ರಮಣದ 24 ಗಂಟೆಯಲ್ಲಿ 9 ಭೀಕರ ಅಪಘಾತ; 15 ಮಂದಿ ಸಾವು
ಬೆಂಗಳೂರು: ಮನೆಯಿಂದ ಹೊರಗೆ ಬಂದರೆ ಯಾವಾಗ? ಹೇಗೆ ಪ್ರಾಣಪಕ್ಷಿ ಹಾರಿಹೋಗುತ್ತೋ ಎಂಬುದೇ ತಿಳಿದಿರುವುದಿಲ್ಲ. ಕೆಲವೊಮ್ಮೆ ನಮ್ಮದಲ್ಲದ ತಪ್ಪಿಗೆ ಅಪಘಾತ (Road Accidents) ನಡೆದು ಜನರು ಜೀವ ಬಿಟ್ಟರೆ, ಮತ್ತೊಂದು ಕಡೆ ನಿರ್ಲಕ್ಷ್ಯದ ಚಾಲನೆಗೆ ಅಮಾಯಕರು ಪ್ರಾಣಬಿಟ್ಟಿದ್ದಾರೆ. ಸಂಕ್ರಾಂತಿ ಹಬ್ಬದ (Sankranti Fest) ಸಂಭ್ರಮದಲ್ಲಿ ರಾಜ್ಯದ ಹಲವು ಕಡೆ ಅಪಘಾತಗಳು ಸಂಭವಿಸಿದ್ದು, ಸಾಕಷ್ಟು ಸಾವು-ನೋವುಗಳು ವರದಿಯಾಗಿವೆ. ವಾಹನಗಳನ್ನು ರಸ್ತೆಗಿಳಿಸುವ ಮುನ್ನ ಸವಾರರೇ ಎಚ್ಚರವಾಗಿರಿ. ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಲ್ಲಿ (Within 24 Hours) 9 ಭೀಕರ ಅಪಘಾತಗಳು ಸಂಭವಿಸಿವೆ. ಅಪಘಾತಗಳಲ್ಲಿ 15 ಮಂದಿ ದಾರುಣವಾಗಿ ಮೃತಪಟ್ಟಿದ್ದರೆ, 10ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
6. ಕರ್ನಾಟಕ ತಂಡಕ್ಕೆ 6 ರನ್ಗಳ ಆಘಾತಕಾರಿ ಸೋಲು
ರಣಜಿ ಟ್ರೋಫಿ (Ranji Trophy) ಎಲೈಟ್ ಸಿ ಗುಂಪಿನ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ನೇತೃತ್ವದ ಕರ್ನಾಟಕ ತಂಡ ಆಘಾತಕಾರಿ ಸೋಲು ಅನುಭವಿಸಿದೆ. ಗೆಲ್ಲುವ ಪಂದ್ಯದಲ್ಲಿ ಹೀನಾಯ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಕಳಪೆ ದಾಖಲೆಯೊಂದನ್ನು ಸೃಷ್ಟಿಸಿದೆ. ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದ ನಾಲ್ಕನೇ ದಿನ ಕರ್ನಾಟಕ ತಂಡದ ಗೆಲುವಿಗೆ 109 ರನ್ಗಳು ಬೇಕಾಗಿದ್ದವು. ಆದರೆ, 103 ರನ್ಗಳಿಗೆ ಆಲ್ಔಟ್ ಆಗುವ ಮೂಲಕ ಹೀನಾಯ ಸೋಲಿಗೆ ಒಳಗಾಗಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
7. 73 ಸಾವಿರ ಅಂಕ ದಾಟಿದ ಸೆನ್ಸೆಕ್ಸ್; ವಿಪ್ರೋ, ಟಿಸಿಎಸ್ ಷೇರು ಏರಿಕೆ
ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ಫಲಿತಾಂಶಗಳು (Q3 Results) ಷೇರು ಪೇಟೆ ಮೇಲೆ ಪರಿಣಾಮ ಬೀರಿದ್ದು, ಸೋಮವಾರ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ (BSE Sensex) 73 ಸಾವಿರ ಅಂಕಗಳನ್ನು ದಾಟಿದೆ. ಅದೇ ವೇಳೆ, ಎನ್‌ಎಸ್‌ಇ ನಿಫ್ಟಿ (NSE Nifty) ಕೂಡ 22 ಸಾವಿರ ಗಡಿಯನ್ನು ದಾಟಿತು. ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ 73,108.31 ಅಂಕಗಳ ಹೊಸ ಎತ್ತರವನ್ನು ಕಂಡಿತು. ನಿಫ್ಟಿ ಕೂಡ ತನ್ನ ಸಾರ್ವಕಾಲಿಕ 22,053.15 ಅಂಕಗಳ ಏರಿಕೆಯೊಂದಿಗೆ ವಹಿವಾಟು ಆರಂಭಿಸಿತು ಮತ್ತು 21,189 ಅಂಕಗಳಲ್ಲಿ ಅಂತ್ಯವಾಯಿತು. ವಿಪ್ರೋ (Wipro Shares) ಕಂಪನಿ ಷೇರುಗಳು ಹೆಚ್ಚಿನ ಲಾಭ ತಂದುಕೊಟ್ಟಿವೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
8. ಶಿಂಧೆ ಬಣ ರಿಯಲ್ ಶಿವ ಸೇನೆ; ಸುಪ್ರೀಂ ಕೋರ್ಟ್‌ನಲ್ಲಿ ಸ್ಪೀಕರ್ ಆದೇಶ ಪ್ರಶ್ನಿಸಿದ ಠಾಕ್ರೆ
ನವದೆಹಲಿ: ಮುಖ್ಯಮಂತ್ರಿ ಏಕನಾಥ ಶಿಂಧೆ (CM Eknath Shinde) ನೇತೃತ್ವದ ಬಣವೇ ನಿಜವಾದ ಶಿವಸೇನೆ(Real Shiv Sena) ಎಂದು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ (Speaker Rahul Narvekar) ಅವರು ನೀಡಿರುವ ಆದೇಶವನ್ನು ಪ್ರಶ್ನಿಸಿ ಉದ್ಧವ್ ಠಾಕ್ರೆ (Uddhav Thackeray) ನೇತೃತ್ವದ ಶಿವಸೇನೆ ಬಣವು ಸುಪ್ರೀಂ ಕೋರ್ಟ್‌ಗೆ (Supreme Court) ಮೊರೆ ಹೋಗಿದೆ. ಶಿಂಧೆ ಬಣದ 16 ಶಾಸಕರನ್ನು ಅಮಾನತುಗೊಳಿಸುವಂತೆ ಉದ್ದವ್ ಠಾಕ್ರೆ ಅವರು ಸಲ್ಲಿಸಿದ್ದ ಅರ್ಜಿಯನ್ನೂ ಸ್ಪೀಕರ್ ಅವರು ವಜಾ ಮಾಡಿದ್ದರು. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
9. ದೊಡ್ಡ ಚಿತ್ರಗಳ ನಿದ್ದೆಗೆಡಿಸಿ ಮ್ಯಾಜಿಕ್ ಮಾಡಿದ ‘ಹನುಮಾನ್’; ವಾರಾಂತ್ಯದ ಗಳಿಕೆ ಎಷ್ಟು?
ಬೆಂಗಳೂರು: ಸಂಕ್ರಾಂತಿ ಪ್ರಯುಕ್ತ ದಕ್ಷಿಣ ಭಾರತದ ಪ್ರಮುಖ ಚಿತ್ರಗಳು ತೆರೆ ಕಂಡಿದ್ದು, ಬಾಕ್ಸ್ ಆಫೀಸ್ ಕಲೆಕ್ಷನ್ (Box Office Collection)ವಿಚಾರದಲ್ಲಿ ಭಾರೀ ಪೈಪೋಟಿ ನಡೆದಿದೆ. ಜನವರಿ 12ರಂದು ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ʼಗುಂಟೂರು ಖಾರಂʼ (Guntur Kaaram) ತೆಲುಗು ಚಿತ್ರದ ಜತೆಗೆ ಧನುಷ್ ನಟನೆಯ ತಮಿಳು ಸಿನಿಮಾ ʼಕ್ಯಾಪ್ಟ್‌ನ್ ಮಿಲ್ಲರ್ʼ (Captain Miller) ಬಿಡುಗಡೆಯಾಗಿದೆ. ಈ ಸ್ಟಾರ್‌ಗಳ ಬಹು ನಿರೀಕ್ಷಿತ ಚಿತ್ರಗಳಿಗೆ ಇದೀಗ ಟಾಲಿವುಡ್‌ನ ಪ್ಯಾನ್ ಇಂಡಿಯಾ ಸಿನಿಮಾ ‘ಹನುಮಾನ್’ (HanuMan) ಸೆಡ್ಡು ಹೊಡೆಯುತ್ತಿದ್ದು, ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
10. ಗರ್ಲ್‌ಫ್ರೆಂಡ್ ಪರ ಪರೀಕ್ಷೆ ಬರೆಯಲು ಆಕೆಯಂತೆ ವೇಷ ಧರಿಸಿ ಹೋದ ಭೂಪ; ಸಿಕ್ಕಿಬಿದ್ದಿದ್ದು ಹೇಗೆ?
ಚಂಡೀಗಢ: ಎವರಿಥಿಂಗ್ ಈಸ್ ಫೇರ್ ಇನ್ ಲವ್ ಆ್ಯಂಡ್ ವಾರ್ (Everything Is Fair In Love And War) ಎಂಬ ಮಾತಿದೆ. ಪ್ರೀತಿ ಕುರುಡು (Love Is Blind) ಎಂದು ಕೂಡ ಹಿರಿಯರು ಹೇಳಿದ್ದಾರೆ. ಇಂತಹದ್ದೇ ಮಾತುಗಳಿಂದ ಸ್ಫೂರ್ತಿಗೊಂಡು ಪಂಜಾಬ್‌ನಲ್ಲಿ ವ್ಯಕ್ತಿಯೊಬ್ಬ ಗರ್ಲ್‌ಫ್ರೆಂಡ್ (Girl Friend) ಪರವಾಗಿ ಪರೀಕ್ಷೆ ಬರೆಯಲು ಆಕೆಯಂತೆಯೇ ವೇಷ ಧರಿಸಿ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದಾನೆ. ಕೊನೆಗೆ ಸಿನಿಮೀಯ ರೀತಿಯಲ್ಲಿ ಪರೀಕ್ಷಾ ಕೇಂದ್ರದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಗರ್ಲ್‌ಫ್ರೆಂಡ್‌ಗೆ ಈತ ಮಾಡಿದ ಸಾಹಸದ ಸುದ್ದಿ ಈಗ ಭಾರಿ ವೈರಲ್ ಆಗಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.