Site icon Vistara News

Vistara Top 10 News : ರಾಮಲಲ್ಲಾನ ಮೊದಲ ದರ್ಶನ, BIETC Campus ಉದ್ಘಾಟಿಸಿದ ಮೋದಿ ಇತ್ಯಾದಿ ದಿನದ ಪ್ರಮುಖ ಸುದ್ದಿಗಳು

Top 10 news in kannada

1. ನಗುಮೊಗದ ರಾಮಲಲ್ಲಾ, ನೀನೇ ಮನದ ತುಂಬೆಲ್ಲ; ಹೊಸ ಫೋಟೊ ಕಣ್ತುಂಬಿಕೊಳ್ಳಿ
ಅಯೋಧ್ಯೆ: ಮೈಸೂರಿನ ಹೆಮ್ಮೆಯ ಶಿಲ್ಪಿ ಅರುಣ್‌ ಯೋಗಿರಾಜ್‌ (Arun Yogiraj) ಕೆತ್ತಿದ ರಾಮಲಲ್ಲಾನ ಮೂರ್ತಿಯು (Ram Lalla Idol) ಅಯೋಧ್ಯೆಯ ರಾಮಮಂದಿರದ (Ram Mandir) ಗರ್ಭಗುಡಿ ಪ್ರವೇಶಿಸಿದೆ. ಇದರ ಬೆನ್ನಲ್ಲೇ, ರಾಮಲಲ್ಲಾನ ನಗುಮೊಗದ ಫೋಟೊವನ್ನು ಅನಾವರಣಗೊಳಿಸಲಾಗಿದೆ. ಮಂದಸ್ಮಿತ ರಾಮಲಲ್ಲಾನ ಫೋಟೊವನ್ನು ನೋಡಿದ ಜನರ ಮನದುಂಬಿ ಬಂದಿದೆ. ಸಾಮಾಜಿಕ ಜಾಲತಾಣಗಲ್ಲಿ ರಾಮಲಲ್ಲಾನ ಫೋಟೊಗಳು ಭಾರಿ ವೈರಲ್‌ ಆಗಿವೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : Ram Mandir : ರಾಮ ಮಂದಿರ ಉದ್ಘಾಟನೆ ದಿನ ನೆರೆಯ ಮಹಾರಾಷ್ಟ್ರದಲ್ಲಿ ಸರ್ಕಾರಿ ರಜೆ; ಕರ್ನಾಟಕದಲ್ಲಿ?
ಇದನ್ನೂ ಓದಿ : Ram Mandir : ಕೋರ್ಟ್​ ಕೇಸ್​ ಗೆದ್ದ ರಾಮ್​ಲಲ್ಲಾ ವಿರಾಜ್​ಮಾನ್​ಗೆ ಅನ್ಯಾಯ; ಶಂಕರಾಚಾರ್ಯ ಹೊಸ ತಕರಾರು​
ಈ ಸುದ್ದಿಯನ್ನೂ ಓದಿ : Ram Mandir: ರಾಮಲಲ್ಲಾ ವಿಗ್ರಹ ಬಾಲಕ ರಾಮನಂತೆ ಕಾಣುತ್ತಿಲ್ಲ ಎಂದ ದಿಗ್ವಿಜಯ್ ಸಿಂಗ್

2. ಕರ್ನಾಟಕ ಅತಿ ದೊಡ್ಡ ಏವಿಯೇಷನ್‌ ಹಬ್‌ ಆಗಲಿದೆ : ಮೋದಿ ಭವಿಷ್ಯ
ಬೆಂಗಳೂರು: ಕರ್ನಾಟಕವು ಮುಂದಿನ ದಿನಗಳಲ್ಲಿ ಅತಿ ದೊಡ್ಡ ಏವಿಯೇಷನ್‌ ಹಬ್‌ (Aviation Hub) ಆಗಲಿದೆ ಎಂದು‌ ಪ್ರಧಾನಿ ನರೇಂದ್ರ ಮೋದಿ (PM Narendra Modi) ಭವಿಷ್ಯ ನುಡಿದರು. ದೇಶದಲ್ಲಿ ವಿಮಾನ ಯಾನ ಕ್ಷೇತ್ರ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಮೂಲೆ ಮೂಲೆಗೆ ಸಂಪರ್ಕ ವ್ಯವಸ್ಥೆ ನಿರ್ಮಾಣವಾಗುತ್ತಿದೆ. ಅದೇ ಹೊತ್ತಿಗೆ ಕರ್ನಾಟಕ ವೈಮಾನಿಕ ತಂತ್ರಜ್ಞಾನ (Aviation technology) ಮತ್ತು ಉತ್ಪಾದನೆಯ ಕೇಂದ್ರವಾಗಿ ಮೂಡುತ್ತಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು. ಈ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : BIETC Campus : ಮೋದಿ ಉದ್ಘಾಟಿಸಿದ ಬೋಯಿಂಗ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕೇಂದ್ರದಲ್ಲಿ ಏನಿದೆ?

3. ಕುಚುಕು ಗೆಳೆಯರಂತಾದ ಮೋದಿ, ಸಿದ್ದರಾಮಯ್ಯ; ನಾಚಿ ನೀರಾದ ಸಿಎಂ!
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶುಕ್ರವಾರ ಬೆಂಗಳೂರಿಗೆ ಆಗಮಿಸಿ ದೇವನಹಳ್ಳಿ ಸಮೀಪ ಬೋಯಿಂಗ್‌ ಇಂಡಿಯಾ ಎಂಜಿನಿಯರಿಂಗ್‌ ಮತ್ತು ಟೆಕ್ನಾಲಜಿ ಸೆಂಟರ್‌ ಕ್ಯಾಂಪಸನ್ನು (BIETC Campus) ಲೋಕಾರ್ಪಣೆ ಮಾಡಿದರು (Modi in Bangalore). ಈ ಸಂದರ್ಭದಲ್ಲಿ ಅಲ್ಲಿ ಸೇರಿದ್ದ ಜನರು ʻಮೋದಿ.. ಮೋದಿʼ ಎಂದು ಘೋಷಣೆ ಕೂಗಿದಾಗ ಪ್ರಧಾನಿಯವರು ‌ ವೇದಿಕೆಯಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರನ್ನು ನೋಡಿ ನಕ್ಕ ಘಟನೆ ನಡೆಯಿತು. ಒಟ್ಟಾರೆಯಾಗಿ ಈ ಕಾರ್ಯಕ್ರಮದಲ್ಲಿ ಸಿಎಂ ಮತ್ತು ಪ್ರಧಾನಿ ಮೋದಿಯವರು ಕುಚುಕು ಗೆಳೆಯರಂತೆ (Modi-Siddaramaiah became friends) ಕಂಡರು! ಈ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : Modi in Bangalore: ಪ್ರಧಾನಿ ಮೋದಿಯನ್ನು ಆತ್ಮೀಯವಾಗಿ ಸ್ವಾಗತಿಸಿದ ಡಿಕೆಶಿ

4.ಪಿಎಸ್‌ಐ ಪರೀಕ್ಷೆ ಪ್ರಶ್ನೆ ಪತ್ರಿಕೆ ಮತ್ತೊಮ್ಮೆ ಲೀಕ್‌; ಅಭ್ಯರ್ಥಿಗಳಿಂದ ಪ್ರತಿಭಟನೆ
ಬೆಂಗಳೂರು: ಈ ಹಿಂದೆ 545 ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ಭಾರಿ ಅಕ್ರಮ (PSI Exam Scam) ನಡೆದ ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಸಲಾಗುತ್ತಿದೆ. ಜ. 23ರಂದು ಮರು ಪರೀಕ್ಷೆ ನಡೆಯುವುದರಿಂದ ಅಭ್ಯರ್ಥಿಗಳು ಅಂತಿಮ ಹಂತದ ಸಿದ್ಧತೆಯಲ್ಲಿದ್ದಾರೆ. ಆದರೆ, ಇದೀಗ ಪಿಎಸ್‌ಐ ಪರೀಕ್ಷೆ ಪ್ರಶ್ನೆ ಪತ್ರಿಕೆ ಮತ್ತೊಮ್ಮೆ ಸೋರಿಕೆಯಾಗಿದೆ (PSI Exam Question Paper Leak) ಎಂಬ ಗಂಭೀರ ಆರೋಪ ಕೇಳಿಬಂದಿದೆ. ಪಿಎಸ್ಐ, ವಾಣಿಜ್ಯ ತೆರಿಗೆ ಪರಿವೀಕ್ಷಕರು (ಸಿಟಿಐ) ಪರೀಕ್ಷೆ ಪತ್ರಿಕೆ ಸೋರಿಕೆ ಆಗಿದೆ ಎಂದು ಆಕ್ರೋಶ ಹೊರಹಾಕಿರುವ ಅಭ್ಯರ್ಥಿಗಳು, ಚಂದ್ರ ಲೇಔಟ್ ಪೊಲೀಸ್ ಠಾಣೆ ಎದುರು ಶುಕ್ರವಾರ ರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಈ ಸುದ್ದಿಯನ್ನು ಓದಿ ಲಿಂಕ್ ಕ್ಲಿಕ್ ಮಾಡಿ.

5. ಮೋದಿಗೆ ಕೃಷ್ಣನ ವರ್ಣಚಿತ್ರ ಕೊಟ್ಟ ಜಸ್ನಾ ಸಲೀಂ; ಇವರ ಮಗನಿಗೆ ಮದ್ರಸಾದಲ್ಲಿ ನೋ ಎಂಟ್ರಿ!
ತ್ರಿಶೂರ್: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಬುಧವಾರ ಗುರುವಾಯೂರಿನಲ್ಲಿ ಇಸ್ಲಾಂ ಧರ್ಮಕ್ಕೆ ಸೇರಿರುವ ಕಲಾವಿದೆ ಜಸ್ನಾ ಸಲೀಂ ಅವರಿಂದ ಅತ್ಯಾಕರ್ಷಕ ಬಾಲ ಕಷ್ಣದನ ಚಿತ್ರವೊಂದನ್ನು ಸ್ವೀಕರಿಸಿದರು. ಇದೇ ವೇಳೆ ಅವರು ಭಗವಾನ್ ಶ್ರೀ ಕೃಷ್ಣನ ಬಗ್ಗೆ ಜಸ್ನಾ ಅವರು ಹೊಂದಿರುವ ಅಚಲ ಭಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಪರ್ಯಾಸ ಎಂದರೆ ಪೂರ್ವಾಗ್ರಹವಿಲ್ಲದೇ ಕೃಷ್ಣನ ಮೇಲೆ ಭಕ್ತಿ ಇಟ್ಟಿರುವ ಇವರು ಇಸ್ಲಾಂ ಸಮುದಾಯದೊಳಗಿನಿಂದ ತೀವ್ರ ವಿರೋಧ ಎದುರಿಸುತ್ತಿದ್ದಾರೆ. ಎಲ್ಲಿಯ ತನಕ ಎಂದರೆ, ಅವರ ಪುತ್ರನಿಗೆ ಮದ್ರಸಾ ಶಿಕ್ಷಣಕ್ಕೆ ಪ್ರವೇಶವೇ ನೀಡಿಲ್ಲವಂತೆ. ಈ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.

6. ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಪಿ.ಎಸ್‌ ದಿನೇಶ್‌ ಕುಮಾರ್‌ ಹೆಸರು ಶಿಫಾರಸು
ಬೆಂಗಳೂರು: ಕರ್ನಾಟಕ ಹೈಕೋರ್ಟ್‌ (Karnataka High Court) ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅವರ ಹೆಸರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸ್ಸು ಮಾಡಿರುವ ಬೆನ್ನಿಗೇ, ಅವರ ಪದೋನ್ನತಿಯಿಂದ ತೆರವಾಗುವ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ (Chief justice of Karnataka High court)  ನ್ಯಾ. ಪಿ.ಎಸ್‌ ದಿನೇಶ್‌ ಕುಮಾರ್‌ (Justice PS Dinesh Kumar) ಅವರ ಹೆಸರನ್ನು ಕೊಲಿಜಿಯಂ (Collegium decision) ಶುಕ್ರವಾರ ಶಿಫಾರಸು ಮಾಡಿದೆ. ಈ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಇದನ್ನೂ ಓದಿ : Collegium decision : ಹೈಕೋರ್ಟ್‌ನ ಸಿಜೆ ಪ್ರಸನ್ನ ಬಿ ವರಾಳೆ ಸುಪ್ರೀಂಗೆ: ಕೊಲಿಜಿಯಂ ಶಿಫಾರಸು

7. ಅಜ್ಜಿ ಶವ ಕೊಂಡೊಯ್ಯುವಾಗ ಕಾರಿನ ಟೈರ್‌ ಸ್ಫೋಟ; ಮೂವರು ಮೃತ್ಯು, ನಾಲ್ವರು ಗಂಭೀರ
ಚಿತ್ರದುರ್ಗ: ಆ ಕುಟುಂಬದ ಸದಸ್ಯರು ಮನೆಯ ಹಿರಿಜೀವ ಕಳೆದುಕೊಂಡ ದುಃಖದಲ್ಲಿದ್ದರು. ಬೆಂಗಳೂರಿನಿಂದ ಸಿರುಗುಪ್ಪಕ್ಕೆ ಅಜ್ಜಿಯ ಮೃತದೇಹವನ್ನು ಕೊಂಡೊಯ್ಯುತ್ತಿದ್ದರು. ಈ ವೇಳೆ ಕಾರಿನ ಟೈಯರ್‌ ಸ್ಫೋಟಗೊಂಡು (Road Accident) ಪಲ್ಟಿಯಾಗಿದೆ. ವಿಧಿ ಅದೆಷ್ಟು ಕ್ರೂರಿ ಅಂದರೆ ಸ್ಥಳದಲ್ಲೇ ಮೂವರು ಮೃತಪಟ್ಟರೆ, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನ ರಾಂಪುರದ ಗ್ರ್ಯಾಂಡ್ ಪೋರ್ಡ್ ಹೋಟೆಲ್ ಬಳಿ ಈ ಘಟನೆ ನಡೆದಿದೆ. ಬಳ್ಳಾರಿಯ ಸಿರುಗುಪ್ಪ ತಾಲೂಕಿನ ದೇಸನೂರು ಮೂಲದ ಸುರೇಶ್ (40) , ಮಲ್ಲಿಕಾರ್ಜುನ (25), ಭೂಮಿಕ (9) ಮೃತರು. ನಾಗಮ್ಮ (31), ತಾಯಮ್ಮ (56), ಧನರಾಜ್ (39) ಹಾಗೂ ಚಾಲಕ ಶಿವು (26) ಗಾಯಾಳುಗಳು. ಈ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.

8. ಲೋಡ್‌ ಟೆಸ್ಟಿಂಗ್‌ ಕಂಪ್ಲೀಟ್‌; ಪೀಣ್ಯ ಫ್ಲೈಓವರ್‌ ಸಂಚಾರಕ್ಕೆ ಮುಕ್ತ
ಬೆಂಗಳೂರು: ಲೋಡ್‌ ಟೆಸ್ಟಿಂಗ್‌ ಹಿನ್ನೆಲೆಯಲ್ಲಿ ಬೆಂಗಳೂರಿನ ಪೀಣ್ಯ ಫ್ಲೈಓವರ್‌ (Peenya Flyover)ನಲ್ಲಿ ಜನವರಿ 16ರಿಂದ ವಾಹನ ಸಂಚಾರವು (peenya flyover news) ಬಂದ್‌ ಆಗಿತ್ತು. ಇದೀಗ ಲೋಡ್‌ ಟೆಸ್ಟಿಂಗ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ. ಜ.19ರ ಬೆಳಗ್ಗೆ 11 ಗಂಟೆಗೆ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ. ಕಳೆದ ಮೂರು ದಿನಗಳಿಂದ ಟ್ರಾಫಿಕ್‌ ಕಿರಿಕಿರಿಯಿಂದ ಬೇಸತ್ತಿದ್ದ ಜನರು ನಿಟ್ಟುಸಿರು ಬಿಡುವಂತಾಗಿದೆ. ಈ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.

9.ಮಹಿಳೆಯರ ಹಾಕಿ ತಂಡಕ್ಕೆ ಪ್ಯಾರಿಸ್​ ಒಲಿಂಪಿಕ್ಸ್​ ಪ್ರವೇಶವೇ ಇಲ್ಲ!
ವಿಸ್ತಾರನ್ಯೂಸ್​ ಬೆಂಗಳೂರು: ಟೋಕಿಯೊ ಒಲಿಂಪಿಕ್ಸ್​ನಲ್ಲಿ ನಾಲ್ಕನೇ ಸ್ಥಾನ ಪಡೆದ ಭಾರತೀಯ ಮಹಿಳಾ ಹಾಕಿ ತಂಡವು ಮುಂದಿನ ಪ್ಯಾರಿಸ್ ಒಲಿಂಪಿಕ್ಸ್​​ಗೆ ಅರ್ಹತೆಯನ್ನೇ ಪಡೆಯದಿರುವುದು ವಿಪರ್ಯಾಸ. ಶುಕ್ರವಾರ ನಡೆದ ಎಫ್ಐಎಚ್ ಕ್ಯಾಲಿಫೈಯರ್​ ಸುತ್ತಿನ ಮೂರನೇ ಸ್ಥಾನದ ಪಂದ್ಯದಲ್ಲಿ ಜಪಾನ್ ವಿರುದ್ಧ 1-0 ಅಂತರದಿಂದ ಸೋತ ವನಿತೆಯರ ಪಡೆ ನಿರಾಸೆ ಎದುರಿಸಿದೆ. ಪಂದ್ಯದಲ್ಲಿ ಜಪಾನ್​​ ಕರಣ್ ಉರಾಟಾ ಆರನೇ ನಿಮಿಷದಲ್ಲಿ ಗೋಲು ಗಳಿಸಿ ಭಾರತವನ್ನು ಜಾಗತಿಕ ಕ್ರೀಡಾಕೂಟದಿಂದ ಹೊರಗಿಟ್ಟರು. 2012ರ ಬಳಿಕ ಇದೇ ಮೊದಲ ಬಾರಿಗೆ ಭಾರತ ಮಹಿಳಾ ಹಾಕಿ ತಂಡ ಒಲಿಂಪಿಕ್ಸ್​ನಲ್ಲಿ ಅವಕಾಶ ಪಡೆಯಲು ವಿಫಲಗೊಂಡಿತು. ಈ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.

10. ಇನ್ನೆಂದೂ ಕಳವು ಮಾಡದಂತೆ ರೈಲು ಪ್ರಯಾಣಿಕರು ಖದೀಮನಿಗೆ ಪಾಠ ಕಲಿಸಿದ್ದು ಹೀಗೆ
ಪಾಟ್ನಾ: ʼಮಾಡಿದ್ದುಣ್ಣೋ ಮಹಾರಾಯʼ ಎನ್ನುವ ಮಾತಿದೆ. ನಾವು ಏನನ್ನು ಮಾಡುತ್ತೇವೆಯೋ ಅದಕ್ಕೆ ತಕ್ಕಂತೆ ಪ್ರತಿಫಲ ದೊರೆಯುತ್ತದೆ ಎನ್ನುವುದು ಈ ಮಾತಿನ ಅರ್ಥ. ಈ ಮಾತು ಮೊಬೈಲ್‌ ಕಳ್ಳನೊಬ್ಬನಿಗೆ ಸರಿಯಾಗಿ ಅರ್ಥವಾದಂತಿದೆ. ಅಷ್ಟಕ್ಕೂ ರೈಲು ಪ್ರಯಾಣಿಕರು ಕಳ್ಳನಿಗೆ ಹೇಗೆ ಪಾಠ ಕಲಿಸಿದ್ದಾರೆ ಎನ್ನುವುದನ್ನು ತಿಳಿಯಲು ಈ ವೈರಲ್‌ ವಿಡಿಯೊ (Viral Video) ನೋಡಿ. ಈ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.

Exit mobile version