Site icon Vistara News

Exit Poll 2022 | ಎಲ್ಲ ಸಮೀಕ್ಷೆಯಲ್ಲೂ ಕಾಂಗ್ರೆಸ್ ‘ಎಕ್ಸಿಟ್’, ಬಿಜೆಪಿಗೆ ಗೆಲುವಿನ ಸ್ವೀಟ್! ಡಿ.8ರತ್ತ ನೆಟ್ಟ ಎಲ್ಲರ ದೃಷ್ಟಿ

Exit Polls 2022

ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳು ಪ್ರಕಟಗೊಂಡಿವೆ. ಗುಜರಾತ್ ಎಲೆಕ್ಷನ್‌ಗೆ ಸಂಬಂಧಿಸಿದಂತೆ ಐದು ಎಕ್ಸಿಟ್ ಪೋಲ್‌ಗಳಲ್ಲಿ (Exit Poll 2022) ಬಿಜೆಪಿಗೆ ಭರ್ಜರಿ ದೊರೆಯಲಿದ್ದು, ಅಧಿಕಾರವನ್ನು ತನ್ನಲ್ಲೇ ಉಳಿಸಿಕೊಳ್ಳಲು ಯಶಸ್ವಿಯಾಗಲಿದೆ. ಆದರೆ, ಕಾಂಗ್ರೆಸ್‌ಗೆ ಮತ್ತೆ ನಿರಾಸೆ ಎದುರಾಗಿದ್ದು, ಕಳೆದ ಬಾರಿಗಿಂತಲೂ ಕಡಿಮೆ ಪ್ರದರ್ಶನವನ್ನು ತೋರುವ ಸಾಧ್ಯತೆಗಳನ್ನು ಎಕ್ಸಿಟ್ ಪೋಲ್‌ಗಳು ಹೊರ ಹಾಕಿವೆ. ಇನ್ನು ಭಾರೀ ಸದ್ದು ಮಾಡಿದ್ದ ಆಪ್ ಗುಜರಾತ್‌ನಲ್ಲಿ ನೆಲಕಚ್ಚಲಿದೆ.

ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣಾ ಮತದಾನೋತ್ತರ ಸಮೀಕ್ಷೆಯಲ್ಲೂ ಬಹುತೇಕ ಸಮೀಕ್ಷೆಗಳಲ್ಲಿ ಬಿಜೆಪಿಗೆ ಅಧಿಕಾರ ದೊರೆಯಲಿದೆ. ಒಂದೆರಡು ಸಮೀಕ್ಷೆಗಳು ಅತಂತ್ರ ಸ್ಥಿತಿ ನಿರ್ಮಾಣವಾಗುವ ಭವಿಷ್ಯವನ್ನು ನುಡಿದಿವೆ. ಇಲ್ಲೂ ಆಪ್ ಪ್ರದರ್ಶನ ಹೇಳಿಕೊಳ್ಳುವಂತಿಲ್ಲ ಎಂಬ ಅಂಶವು ಎಕ್ಸಿಟ್ ಪೋಲ್‌ಗಳಿಂದ ವ್ಯಕ್ತವಾಗಿದೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶವು ಡಿಸೆಂಬರ್ 8ರಂದು ಪ್ರಕಟವಾಗಲಿದೆ.

ಸೋಮವಾರ ಪ್ರಕಟವಾದ ಎಕ್ಸಿಟ್ ಪೋಲ್‌ಗಳ ಅಪ್‌ಡೇಟ್ಸ್ ಇಲ್ಲಿದೆ………..

Mallikarjun Tippar

ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ

ಒಟ್ಟು ಕ್ಷೇತ್ರ- 68, ಮ್ಯಾಜಿಕ್ ನಂಬರ್ – 35

ಇಂಡಿಯಾ ಟಿವಿ ಸಮೀಕ್ಷೆಯಲ್ಲೂ ಬಿಜೆಪಿ ಠೀವಿ

ಬಿಜೆಪಿ- 35ರಿಂದ 40

ಕಾಂಗ್ರೆಸ್- 26ರಿಂದ 31

ಆಪ್- 00

ಇತರರು- 03

Mallikarjun Tippar

ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ

ಒಟ್ಟು ಕ್ಷೇತ್ರ- 68, ಮ್ಯಾಜಿಕ್ ನಂಬರ್- 35

ಇಟಿಜಿ ಸಮೀಕ್ಷೆಯಲ್ಲಿ ಬಿಜೆಪಿಗೆ ಗೆಲುವು

ಬಿಜೆಪಿ- 38

ಕಾಂಗ್ರೆಸ್-28

ಆಪ್-00

ಇತರರು-02

Mallikarjun Tippar

ಗುಜರಾತ್ ವಿಧಾನಸಭೆ ಚುನಾವಣೆ

ನ್ಯೂಸ್ ಎಕ್ಸ್ ಸಮೀಕ್ಷೆಯಲ್ಲಿ ಬಿಜೆಗೆ ಗೆಲುವು

ಒಟ್ಟು ಸ್ಥಾನ- 182, ಮ್ಯಾಜಿಕ್ ನಂಬರ್- 98

ಬಿಜೆಪಿ- 117ರಿಂದ 140

ಕಾಂಗ್ರೆಸ್- 34ರಿಂದ 51

ಆಪ್- 6ರಿಂದ 13

ಇತರ-00

Mallikarjun Tippar

ಹಿಮಾಚಲ ಪ್ರದೇಶ, ಒಟ್ಟು ಕ್ಷೇತ್ರ 68, ಮ್ಯಾಜಿಕ್ ನಂಬರ್ 35

ಜೀ ನ್ಯೂಸ್ ಸಮೀಕ್ಷೆಯಲ್ಲಿ ಬಿಜೆಪಿಗೇ ಗೆಲುವು

ಬಿಜೆಪಿ- 35ರಿಂದ 40

ಕಾಂಗ್ರೆಸ್- 20ರಿಂದ 25

ಆಪ್- 0 ದಿಂದ 02

ಇತರೆ- 1ರಿಂದ 5

B Somashekhar

ಗುಜರಾತ್‌ನಲ್ಲಿ ಬಿಜೆಪಿಯ ಅಶ್ವಮೇಧಯಾಗಕ್ಕಿಲ್ಲ ಲಗಾಮು

ರಿಪಬ್ಲಿಕ್‌ ಟಿವಿ ಚುನಾವಣೋತ್ತರ ಸಮೀಕ್ಷೆ

ಒಟ್ಟು ಸ್ಥಾನ 182

ಮ್ಯಾಜಿಕ್‌ ನಂಬರ್‌ 92

ಬಿಜೆಪಿ 128-148

ಕಾಂಗ್ರೆಸ್‌ 30-42

ಆಪ್‌ 02-10

ಇತರೆ 0-03

Exit mobile version