Site icon Vistara News

Hindenburg Report: ಷೇರು ಮಾರುಕಟ್ಟೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ರಾಹುಲ್‌ ಗಾಂಧಿಗೆ ಬಿಜೆಪಿ ಟಾಂಗ್‌

Hindenburg Report

ನವದೆಹಲಿ: ಸೆಬಿ ಅಧ್ಯಕ್ಷೆ(SEBI President) ಮಾಧಾಬಿ ಬುಚ್ ವಿರುದ್ಧ ಯುಎಸ್ ಶಾರ್ಟ್ ಸೆಲ್ಲರ್ ಹಿಂಡೆನ್​ಬರ್ಗ್​​ ರಿಸರ್ಚ್ ಮಾಡಿರುವ ಹೊಸ ವರದಿ(Hindenburg Report) ಬಗ್ಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿಕೆ ನೀಡಿರುವ ಬೆನ್ನಲ್ಲೇ ಬಿಜೆಪಿ ಕಿಡಿ ಕಾರಿದೆ. ಬಿಜೆಪಿ ನಾಯಕ ಅಮಿತ್ ಮಾಳವಿಯಾ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರತಿಪಕ್ಷದ ನಾಯಕ ಈಗ ಬಹಿರಂಗವಾಗಿ ಭಾರತೀಯ ಷೇರು ಮಾರುಕಟ್ಟೆಯ ನೈಜತೆಯ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುತ್ತಿದ್ದಾರೆ. ನಮ್ಮ ಆರ್ಥಿಕತೆಯ ಮೇಲಿನ ವಿಶ್ವಾಸವನ್ನು ಹಾಳುಮಾಡುವ ಈ ಅಬ್ಬರದ ಪ್ರಯತ್ನವು ರಾಹುಲ್ ಗಾಂಧಿಯವರ ನಿಜವಾದ ಉದ್ದೇಶವನ್ನು ಬಹಿರಂಗಪಡಿಸುತ್ತದೆ, ಇದು ಭಾರತದ ವಿನಾಶವಲ್ಲದೆ ಬೇರೇನೂ ಅಲ್ಲ ಎಂದು ಬಿಜೆಪಿ ನಾಯಕ ಅಮಿತ್ ಮಾಳವಿಯಾ ಪೋಸ್ಟ್ ಮಾಡಿದ್ದಾರೆ.

ಹಿಂಡೆನ್‌ಬರ್ಗ್ ಮಾಡಿರುವ ಆರೋಪಗಳಿಗೆ ಯಾವುದೇ ಆಧಾರಗಳಿಲ್ಲ ಎಂದು ಸುಪ್ರೀಂ ಕೋರ್ಟ್ ನೇಮಿಸಿದ ತಜ್ಞರ ಸಮಿತಿಯೇ ಹೇಳಿದೆ. ಜನವರಿ 3, 2024 ರಂದು, ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್, ಸೆಬಿಯಿಂದ ಯಾವುದೇ ಉದ್ದೇಶಪೂರ್ವಕ ಉಲ್ಲಂಘನೆ ಮಾಡಿಲ್ಲ ಎಂದು ಮಾಳವಿಯಾ ಹೇಳಿದ್ದಾರೆ..

ಸೆಬಿ ಅಧ್ಯಕ್ಷರು ಇನ್ನೂ ಏಕೆ ರಾಜೀನಾಮೆ ನೀಡಿಲ್ಲ ಎಂದು ದೇಶಾದ್ಯಂತದ ಹೂಡಿಕೆದಾರರು ತಿಳಿಯಲು ಬಯಸುತ್ತಾರೆ ಎಂದು ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ. “ದೇಶಾದ್ಯಂತದ ಪ್ರಾಮಾಣಿಕ ಹೂಡಿಕೆದಾರರು ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಸೆಬಿ ಅಧ್ಯಕ್ಷೆ ಮಾಧಾಬಿ ಪುರಿ ಬುಚ್ ಇನ್ನೂ ಏಕೆ ರಾಜೀನಾಮೆ ನೀಡಿಲ್ಲ? ಹೂಡಿಕೆದಾರರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕಳೆದುಕೊಂಡರೆ ಯಾರು ಜವಾಬ್ದಾರರು. ಪ್ರಧಾನಿ ಮೋದಿ, ಸೆಬಿ ಅಧ್ಯಕ್ಷರು ಅಥವಾ ಗೌತಮ್ ಅದಾನಿಯೇ? ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಈ ವಿಷಯವನ್ನು ಮತ್ತೊಮ್ಮೆ ಸ್ವಯಂಪ್ರೇರಿತವಾಗಿ ಪರಿಶೀಲಿಸುತ್ತದೆಯೇ ಎಂದು ರಾಹುಲ್​ ಹೇಳಿದ್ದಾರೆ. “ಜೆಪಿಸಿ ತನಿಖೆಗೆ ಪ್ರಧಾನಿ ಮೋದಿ ಏಕೆ ಹೆದರುತ್ತಾರೆ ಎಂಬುದು ಸ್ಪಷ್ಟವಾಗಿದೆ. ಅದು ಸತ್ಯ ಬಹಿರಂಗಪಡಿಸಬಹುದು ಎಂಬುದು ಸ್ಪಷ್ಟವಾಗಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇದನ್ನೂ ಓದಿ: Hindenburg Report : ಮೋದಿ ಹೆದರುತ್ತಿದ್ದಾರೆ; ಹಿಂಡೆನ್​ಬರ್ಗ್​ ವರದಿ ಉಲ್ಲೇಖಿಸಿ ಸೆಬಿ, ಪ್ರಧಾನಿಯನ್ನು ಟೀಕಿಸಿದ ರಾಹುಲ್ ಗಾಂಧಿ

Exit mobile version