Site icon Vistara News

Hindi in American schools : ಅಮೆರಿಕದ ಶಾಲೆಗಳಲ್ಲಿ ಎರಡನೇ ಭಾಷೆಯಾಗಿ ಹಿಂದಿ ಕಲಿಕೆಗೆ ಅವಕಾಶ

US President Biden and modi

ವಾಷಿಂಗ್ಟನ್:‌ ಅಮೆರಿಕದ ಶಾಲೆಗಳಲ್ಲಿ ಶೀಘ್ರದಲ್ಲಿಯೇ ಹಿಂದಿಯನ್ನು ಎರಡನೇ ಭಾಷೆಯಾಗಿ ಕಲಿಯಲು ಅವಕಾಶ ನೀಡುವ ಸಾಧ್ಯತೆ ಇದೆ (Hindi in American schools) ಎಂದು ವರದಿಯಾಗಿದೆ. ಆಡಳಿತಾರೂಢ ಡೆಮಾಕ್ರಟಿಕ್‌ ಪಕ್ಷದ ಸಂಘಟನೆಯಾದ ಏಷ್ಯಾ ಸೊಸೈಟಿ (AS) ಮತ್ತು ಇಂಡಿಯನ್‌ ಅಮೆರಿಕನ್‌ ಇಂಪ್ಯಾಕ್ಟ್‌ (IAI) ಈ ಸಂಬಂಧ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರಿಗೆ ಪ್ರಸ್ತಾಪ ಸಲ್ಲಿಸಿದೆ. ಈ ಪ್ರಸ್ತಾಪದ ಪ್ರಕಾರ 1000 ಶಾಲೆಗಳಲ್ಲಿ ಹಿಂದಿಯನ್ನು ಕಲಿಸಲಯ ವ್ಯವಸ್ಥೆಯಾಗಲಿದೆ. ಇದಕ್ಕೆ 816 ಕೋಟಿ ರೂ. ನಿಧಿ ಸಿದ್ಧವಾಗಲಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ಈ ಪ್ರಸ್ತಾಪವನ್ನು ಅಂಗೀಕರಿಸಲಿದ್ದಾರೆ. ಮುಂದಿನ ವರ್ಷ ಅಧ್ಯಕ್ಷೀಯ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಹಾಗೂ ಉಭಯ ದೇಶಗಳ ಬಾಂಧವ್ಯ ವೃದ್ಧಿಸುತ್ತಿರುವ ಕಾರಣದಿಂದ ಪ್ರಸ್ತಾಪ ಅಂಗೀಕಾರವಾಗುವ ಸಾಧ್ಯತೆ ನಿಚ್ಚಳವಾಗಿದೆ.

ಮುಂದಿನ ವರ್ಷ ಸೆಪ್ಟೆಂಬರ್‌ ವೇಳೆಗೆ ಅಮೆರಿಕದ ಶಾಲೆಗಳಲ್ಲಿ ಹಿಂದಿ ಬೋಧನೆ ಶುರುವಾಗುವ ನಿರೀಕ್ಷೆ ಇದೆ. ಎಎಸ್‌ ಮತ್ತು ಐಎಐ ಶಿಕ್ಷಕರನ್ನು ಹಾಗೀ ಪಠ್ಯಕ್ರಮ ಅಳವಡಿಕೆಗೆ ಸಹಕರಿಸಲಿದೆ. ಪ್ರಾಥಮಿಕ ತರಗತಿಗಳಲ್ಲಿ ಇಂಗ್ಲಿಷ್‌ ಬಳಿಕ ಎರಡನೇ ಭಾಷೆಯಾಗು ಹಿಂದಿಯನ್ನು ಆಯ್ಕೆ ಮಾಡಬಹುದು. ಅಮೆರಿಕದಲ್ಲಿ ಇರುವ 45 ಲಕ್ಷಕ್ಕೂ ಹೆಚ್ಚು ಭಾರತೀಯರಲ್ಲಿ 9 ಲಕ್ಷ ಮಂದಿ ಹಿಂದಿ ಭಾಷಿಕರಾಗಿದ್ದಾರೆ.

ಅಮೆರಿಕದಲ್ಲಿ ಈಗ ಹೈಸ್ಕೂಲ್‌ಗಳಲ್ಲಿ ಮಾತ್ರ ಹಿಂದಿಯಲ್ಲಿ ಕಲಿಸಲಾಗುತ್ತಿದೆ. ಪ್ರಾಥಮಿಕ ಶಾಲೆಯ ಹಂತದಲ್ಲಿಯೇ ಹಿಂದಿ ಕಲಿಸದಿದ್ದರೆ ಪ್ರೌಢ ಶಾಲೆ ಹಂತದಲ್ಲಿ ಕಲಿಕೆ ಕಷ್ಟ ಎನ್ನುತ್ತಾರೆ ಇಂಡಿಯಾ ಇಂಪ್ಯಾಕ್ಟ್‌ ಸಂಘಟನೆಯ ಅಧ್ಯಕ್ಷ ನೇಲ್‌ ಮಕಾಜಾ ಹೇಳಿದ್ದಾರೆ.

ಇದನ್ನೂ ಓದಿ: ಬೇರೆ ದೇಶಕ್ಕಿಂತ ಕಡಿಮೆ ಬೆಲೆಗೆ ಡ್ರೋನ್‌ ನೀಡಲಿದೆ ಅಮೆರಿಕ, ಮೋದಿ ಭೇಟಿಯಿಂದ 15 ಸಾವಿರ ಕೋಟಿ ರೂ. ಸೇವ್

ಅಮೆರಿಕದಲ್ಲಿ ಭಾರತೀಯ ಮೂಲದ ಸಮುದಾಯ ಪ್ರಮುಖ ವಲಸಿಗ ಗುಂಪುಗಳಲ್ಲಿ ಒಂದಾಗಿದೆ. ಅಮೆರಿಕದ ಐಟಿ ವಲಯದ ಪ್ರಮುಖ ಕಂಪನಿಗಳಲ್ಲಿ ಭಾರತೀಯ ಮೂಲದವರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹಲವಾರು ಐಟಿ ಕಂಪನಿಗಳಲ್ಲಿ ಸಿಇಒ ಭಾರತೀಯ ಮೂಲದವರಾಗಿದ್ದಾರೆ. ಉಭಯ ದೇಶಗಳ ನಡುವೆ ವಾಣಿಜ್ಯ ವಹಿವಾಟು ಕೂಡ ಪ್ರತಿ ವರ್ಷ ಹೆಚ್ಚುತ್ತಿದೆ. ಇತ್ತೀಚೆಗೆ ಪ್ರಧಾನಿ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ್ದಾಗ ಅಲ್ಲಿನ ಅನಿವಾಸಿ ಭಾರತೀಯರೊಡನೆ ಮಾತುಕತೆ ನಡೆಸಿದ್ದರು.

Exit mobile version