ಗಾಂಧಿನಗರ: ಗುಜರಾತ್ನ ಅಹ್ಮದಾಬಾದ್ನಲ್ಲಿ (Ahmedabad) ಹಿಂದು ಯುವಕ ಹಾಗೂ ಮುಸ್ಲಿಂ ಯುವತಿ ತಿರುಗಾಡುತ್ತಿದ್ದಾಗ ಅವರ ಮೇಲೆ ಗುಂಪೊಂದು ದಾಳಿ ನಡೆಸಿದೆ. ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಕೆಲ ಮುಸ್ಲಿಮರು ಯುವಕ ಹಾಗೂ ಯುವತಿಯನ್ನು ಥಳಿಸಿದ್ದಾರೆ. ಈ ವಿಡಿಯೊ (Viral Video) ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಅಹಮದಾಬಾದ್ನ ದನಿಲಿಮ್ದಾ ಪ್ರದೇಶದಲ್ಲಿ ಹಿಂದು ಯುವಕ ಹಾಗೂ ಮುಸ್ಲಿಂ ಯುವತಿ ಜತೆಯಾಗಿ ತಿರುಗಾಡುತ್ತಿದ್ದರು. ಇದೇ ವೇಳೆ ಕೆಲವು ಜನರ ಗುಂಪೊಂದು ಅವರ ಮೇಲೆ ದಾಳಿ ನಡೆಸಿದೆ. ಮೊದಲಿಗೆ ಯುವತಿ ಧರಿಸಿದ್ದ ಬುರ್ಖಾ ತೆಗೆಸಿದ ಅವರು, ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಇದಾದ ಬಳಿಕ, “ಮುಸ್ಲಿಂ ಯುವತಿ ಜತೆ ತಿರುಗಾಡಲು ಎಷ್ಟೋ ಧೈರ್ಯ ನಿನಗೆ” ಎಂದು ಗದರುತ್ತಲೇ ಯುವಕನ ಮೇಲೂ ಹಲ್ಲೆ ನಡೆಸಿದ್ದಾರೆ.
ವೈರಲ್ ವಿಡಿಯೊ
ಹಿಂದು ಯುವಕನ ಜತೆ ತಿರುಗಾಡಿದ್ದಕ್ಕೆ ಯುವತಿಯ ಕಪಾಳಕ್ಕೆ ಹೊಡೆದಿದ್ದಾರೆ. ಆಕೆ ಮುಖ ಮುಚ್ಚಿಕೊಳ್ಳಲು ಯತ್ನಿಸಿದಾಗ ಬುರ್ಖಾ ತೆಗೆಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಹ್ಮದಾಬಾದ್ ಪೊಲೀಸರು ಅಕ್ಬರ್ ಪಠಾಣ್, ಫೈಜನ್ ಶೇಖ್ ಹಾಗೂ ಹುಸೇನ್ ಸೈಯದ್ ಎಂಬುವರನ್ನು ಬಂಧಿಸಿ, ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಹಲವು ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: Pakistan Temple Attack: ಹಿಂದು ಯುವಕನ ಜತೆ ಸೀಮಾ ಹೈದರ್ ಮದುವೆ; ಪಾಕ್ನಲ್ಲಿ ದೇಗುಲ ಮೇಲೆ ದಾಳಿ
ವಡೋದರದಲ್ಲೂ ಇದೇ ರೀತಿ ದಾಳಿ
ವಡೋದರದಲ್ಲಿಯೂ ಆಗಸ್ಟ್ 28ರಂದು ಇಂತಹದ್ದೇ ಪ್ರಕರಣದಲ್ಲಿ ಪೊಲೀಸರು ಮೂವರು ಮುಸ್ಲಿಮರನ್ನು ಬಂಧಿಸಿದ್ದರು. ಹಿಂದು ಯುವಕ ಹಾಗೂ ಮುಸ್ಲಿಂ ಮಹಿಳೆ ಮದುವೆಯಾಗಿದ್ದನ್ನು ಸಹಿಸದೆ ಅವರಿಗೆ ಕಿರುಕುಳ ನೀಡುವ ಜತೆಗೆ ಅವರ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಕ್ಕಾಗಿ ಮುಸ್ತಕಿಮ್ ಶೇಖ್, ಬುರ್ಹಾನ್ ಸೈಯದ್ ಹಾಗೂ ಸಾಹಿಲ್ ಶೇಖ್ ಎಂಬುವರನ್ನು ಪೊಲೀಸರು ಬಂಧಿಸಿದ್ದರು.