Site icon Vistara News

Bangladesh Leader | ಹಿಂದೂ ಧಾರ್ಮಿಕ ಗ್ರಂಥಗಳು ಅಶ್ಲೀಲ ಪಠ್ಯಗಳು: ಬಾಂಗ್ಲಾದೇಶದ ನಾಯಕ ರೆಹಮಾನ್

Tarique Rahman @ Bangladesh

ನವದೆಹಲಿ: ನೆರೆಯ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಲೇ ಇರುತ್ತವೆ. ಇದರ ಮಧ್ಯೆಯೇ, ಪ್ರಮುಖ ಪ್ರತಿಪಕ್ಷ ನಾಯಕರಾಗಿರುವ(Bangladesh Leader), ಗೋನೋ ಅಧಿಕಾರ್ ಪರಿಷತ್ ಮುಖ್ಯಸ್ಥ ತಾರಿಖ್ ರೆಹಮಾನ್ ಅವರು, “ಹಿಂದೂ ಧಾರ್ಮಿಕ ಗ್ರಂಥಗಳು ಕೇವಲ ಅಶ್ಲೀಲ ಪಠ್ಯಗಳಾಗಿವೆ” ಎಂದು ಹೇಳುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಹಿಂದೂ ಧರ್ಮದ ಗ್ರಂಥಗಳು ಯಾವುದೇ ನೈತಿಕ ಬೋಧನೆಗಳನ್ನು ಹೊಂದಿಲ್ಲ. ಎಲ್ಲ ಧಾರ್ಮಿಕ ಗ್ರಂಥಗಳು ಅಶ್ಲೀಲ ಪಠ್ಯಗಳಾಗಿವೆ ಎಂದು ತಾರಿಖ್ ರೆಹಮಾನ್ ಅವರು ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿದ್ದಾರೆ. ಅವರ ಈ ಭಾಷಣವನ್ನು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಷೇರ್ ಮಾಡಲಾಗುತ್ತಿದೆ.

ಹಿಂದೂಗಳ ದೇಗುಲಗಳು ಮತ್ತು ಹಿಂದೂಗಳ ಮೇಲೆ ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಹೆಚ್ಚಿನ ದಾಳಿಗಳಾಗುತ್ತಿವೆ. ಈ ಸಂದರ್ಭದಲ್ಲಿ ತಾರಿಖ್ ಅವರ ಈ ಮಾತುಗಳು ಹೆಚ್ಚು ಚರ್ಚೆಗೊಳಗುತ್ತಿವೆ. ತಾರಿಖ್ ಅವರು, 2024ರ ಚುನಾವಣೆಯಲ್ಲಿ ಹಾಲಿ ಶೇಖ್ ಹಸೀನಾ ಅವರ ಸರ್ಕಾರವನ್ನು ಸೋಲಿಸಲು ಪ್ರಯತ್ನಿಸಿದ್ದ ಪ್ರತಿಪಕ್ಷ ನಾಯಕ ನೂರುಲ್ ಹಕ್ ನೂರ್ ಅವರ ನಿಕಟವರ್ತಿ ವ್ಯಕ್ತಿಯಾಗಿದ್ದಾರೆ.

ಇದನ್ನೂ ಓದಿ | Bihar Education Minister | ರಾಮಚರಿತಮಾನಸ, ಮನುಸ್ಮೃತಿಯಿಂದ ಸಮಾಜದಲ್ಲಿ ದ್ವೇಷ: ಬಿಹಾರ ಶಿಕ್ಷಣ ಸಚಿವ

Exit mobile version