ಒಟ್ಟಾವಾ, ಕೆನಡಾ: ಕೆನಡಿಯನ್ ಹಿಂದೂಗಳಿಗೆ (Canadian Hindus) ಭಾರತಕ್ಕೆ ವಾಪಸ್ ಹೋಗುವಂತೆ ಖಲಿಸ್ತಾನಿ ಉಗ್ರರು ಬೆದರಿಕೆ ಹಾಕುತ್ತಿದ್ದಾರೆ (Khalistani Threat) ಎಂದು ಕರ್ನಾಟಕ ಮೂಲದ ಕೆನಡಾ ಸಂಸದ ಚಂದ್ರ ಆರ್ಯ ಅವರು ಆರೋಪಿಸಿದ್ದಾರೆ(Canadian MP Chandra Arya). ಆದರೆ, ಕೆನಡಾದಲ್ಲಿರುವ (Canada) ಹಿಂದೂಗಳು ಭಯ ಪಡಬೇಕಿಲ್ಲ. ಹಿಂದೂಗಳು ಯಾವುದೇ ಬೆದರಿಕೆಗೆ ಬಗ್ಗದೇ ಶಾಂತವಾಗಿರಬೇಕು. ಬೆದರಿಕೆಯಂಥ ಯಾವುದೇ ಘಟನೆಗಳು ನಡೆದರೆ ಕೂಡಲೇ ಕೆನಾಡದ ಕಾನೂನು ಜಾರಿ ಸಂಸ್ಥೆಗಳಿಗೆ ವರದಿ ಮಾಡಬೇಕು ಎಂದು ಹೇಳಿದ್ದಾರೆ(India Canada Row:). ಪ್ರಧಾನಿ ಜಸ್ಟಿನ್ ಟ್ರೂಡೋ ಅವರು ಪ್ರತಿನಿಧಿಸುವ ಕೆನಡಾದ ಲಿಬರ್ ಪಾರ್ಟಿಯಿಂದಲೇ ಸಂಸದರಾಗಿದ್ದಾರೆ. ಕರ್ನಾಟಕದ (Karnataka) ಮೂಲದ ಈ ಸಂಸದ ಆರ್ಯ ಅವರು ತುಮಕೂರಿನವರು(tumkur).
ಕೆಲವು ದಿನಗಳ ಹಿಂದೆ ಕೆನಡಾದಲ್ಲಿ ಖಲಿಸ್ತಾನ್ ಚಳವಳಿಯ ನಾಯಕ ಮತ್ತು ಜನಾಭಿಪ್ರಾಯ ಸಂಗ್ರಹಣೆಯನ್ನು ಆಯೋಜಿಸುವ ಸಿಖ್ಸ್ ಫಾರ್ ಜಸ್ಟಿಸ್ ಅಧ್ಯಕ್ಷ ಗುರುಪತ್ವಂತ್ ಸಿಂಗ್ ಪನ್ನುನ್ ಅವರು ಕೆನಡಾವನ್ನು ತೊರೆದು ಭಾರತಕ್ಕೆ ಹಿಂತಿರುಗಿ ಎಂದು ಹಿಂದೂ ಕೆನಡಿಯನ್ನರಿಗೆ ಬೆದರಿಕೆ ಹಾಕಿದ್ದಾರೆ ಎಂದು ಸಂಸದ ಚಂದ್ರ ಆರ್ಯ ಅವರು ತಮ್ಮ ಎಕ್ಸ್ ವೇದಿಕೆಯ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ದಾಳಿ ನಡೆಸುವ ಈ ಬೆದರಿಕೆಯ ನಂತರ ಕೆನಡಾದಲ್ಲಿರುವ ಹಿಂದೂಗಳು ಭಯಭೀತರಾಗಿದ್ದಾರೆಂದು ಕೇಳಿದ್ದೇನೆ. ಹಿಂದೂ-ಕೆನಡಿಯನ್ನರು ಶಾಂತವಾಗಿರಲು ಮತ್ತು ಜಾಗರೂಕರಾಗಿರಲು ನಾನು ಒತ್ತಾಯಿಸುತ್ತೇನೆ. ದಯವಿಟ್ಟು ನಿಮ್ಮ ಸ್ಥಳೀಯ ಕಾನೂನು ಜಾರಿ ಏಜೆನ್ಸಿಗಳಿಗೆ ಹಿಂದೂ ಫೋಬಿಯಾದ ಯಾವುದೇ ಘಟನೆಯನ್ನು ವರದಿ ಮಾಡಿ ಎಂದು ಅವರು ಕರೆ ನೀಡಿದ್ದಾರೆ.
ಖಲಿಸ್ತಾನದ ನಾಯಕ ಕೆನಾಡದ ಹಿಂದೂ ಮತ್ತು ಸಿಖ್ ಸಮುದಾಯಗಳ ನಡುವೆ ಒಡಕು ಉಂಟು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕಾಗಿ ಹಿಂದೂಗಳನ್ನು ಪ್ರಚೋದಿಸುತ್ತಿದ್ದಾರೆ. ಆದರೆ, ಸಿಖ್ಖರ ಪೈಕಿ ಹೆಚ್ಚಿನವರು ಖಲಿಸ್ತಾನ್ ಚಳವಳಿಯನ್ನು ಬೆಂಬಲಿಸುವುದಿಲ್ಲ ಎಂದು ಕೆನಡಾ ಸಂಸದ ಚಂದ್ರ ಆರ್ಯ ಹೇಳಿದ್ದಾರೆ.
India Canada Row: ಕೆನಡಾಗೆ ಭಾರತ ಮತ್ತೊಂದು ಗುದ್ದು; ವೀಸಾ ಸೇವೆಯೇ ರದ್ದು
ಭಾರತದ ಜತೆಗಿನ ಒಪ್ಪಂದವನ್ನು ಮುಂದೂಡಿ, ಭಾರತದ ರಾಯಭಾರಿಯನ್ನು ಉಚ್ಚಾಟಿಸಿ, ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದೆಲ್ಲ ಆರೋಪ ಮಾಡುತ್ತಿರುವ ಕೆನಡಾ ಸರ್ಕಾರಕ್ಕೆ (India Canada Row) ಭಾರತ ಸರ್ಕಾರ ಮತ್ತೊಂದು ಪೆಟ್ಟು ನೀಡಿದೆ. ಕೆನಡಾ ನಾಗರಿಕರಿಗೆ ವೀಸಾ ನೀಡುವುದನ್ನೇ (Visa Services) ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಆ ಮೂಲಕ ದಿನಕ್ಕೊಂದು ಉಪಟಳ ಮಾಡುತ್ತಿರುವ ಕೆನಡಾಗೆ ತಿರುಗೇಟು ನೀಡಿದೆ.
ಭಾರತ ಹಾಗೂ ಕೆನಡಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಹಾಗೂ ಕೆನಡಾ ಸರ್ಕಾರ ಭಾರತದ ವಿರುದ್ಧ ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಮುಂದಿನ ಆದೇಶದವರೆಗೆ ಅಥವಾ ಅನಿರ್ದಿಷ್ಟಾವಧಿವರೆಗೆ ಕೆನಡಾ ನಾಗರಿಕರಿಗೆ ವೀಸಾ ನೀಡುವುದನ್ನು ಸ್ಥಗಿತಗೊಳಿಸಿದೆ. ಈ ಕುರಿತು ಭಾರತ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸದಿದ್ದರೂ, ಕೆನಡಾದಲ್ಲಿ ವೀಸಾ ಅಪ್ಲಿಕೇಶನ್ ಸೆಂಟರ್ ಹೊಂದಿರುವ ಬಿಎಲ್‌ಎಸ್ ಇಂಟರ್‌ನ್ಯಾಷನಲ್ ಸಂಸ್ಥೆಯು ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಪೋಸ್ಟ್ ಮಾಡಿದೆ.
ಈ ಸುದ್ದಿಯನ್ನೂ ಓದಿ: Khalistani Terrorist: ಕೆನಡಾದಲ್ಲಿ ಖಲಿಸ್ತಾನಿ ಉಗ್ರನ ಹತ್ಯೆ; ಹೊಣೆ ಹೊತ್ತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ!
ಕೆನಡಾದಿಂದ ಭಾರತೀಯ ರಾಯಭಾರಿಯನ್ನು ಉಚ್ಚಾಟಿಸಿದ ಜಸ್ಟಿನ್ ಟ್ರುಡೊ ಕ್ರಮಕ್ಕೆ ಪ್ರತೀಕಾರವಾಗಿ ಕೆನಡಾದ ರಾಯಭಾರಿಯನ್ನು ಭಾರತ ಆಚೆಗಟ್ಟಿದೆ. ಇದರೊಂದಿಗೆ ಭಾರತ- ಕೆನಡಾ ಸಂಬಂಧ ಇನ್ನಷ್ಟು ಬಿಗಡಾಯಿಸಿದೆ. ಭಾರತೀಯ ವಿದೇಶಾಂಗ ಇಲಾಖೆಯು ಕೆನಡಾದ ರಾಯಭಾರಿಯನ್ನು ಕರೆಸಿಕೊಂಡು, ಇನ್ನು ಐದು ದಿನದಲ್ಲಿ ದೇಶ ಬಿಟ್ಟು ಆಚೆಗೆ ಹೋಗುವಂತೆ ಆದೇಶ ನೀಡಿದೆ. ಭಾರತದ ಆಂತರಿಕ ವ್ಯವಹಾರಗಳಲ್ಲಿ ಕೆನಡಾದ ಹಸ್ತಕ್ಷೇಪವನ್ನು ಖಂಡಿಸಿ ಈ ಕ್ರಮ ತೆಗೆದುಕೊಳ್ಳಲಾಗಿದೆ.