ಲಖನೌ: ಹಿಟ್ ಆ್ಯಂಡ್ ರನ್‌ನಿಂದ (Hit and Run) ಮೃತಪಟ್ಟ ವ್ಯಕ್ತಿಯ ಮೇಲೆ ರಾತ್ರಿಯಿಡಿ ನೂರಾರು ವಾಹನಗಳು ಹರಿದು ಹೋದ ಘಟನೆ ಉತ್ತರ ಪ್ರದೇಶದ (UP Police) ಆಗ್ರಾ (Agra) ಬಳಿಯ ಎಕ್ಸ್‌ಪ್ರೆಸ್‌ವೇನಲ್ಲಿ (Express Way) ನಡೆದಿದೆ. ರಸ್ತೆಗಂಟಿದ ದೇಹವು ಮೇಲ್ಮೈನಲ್ಲಿ ಗೋಚರಿಸಿದಾಗಲೇ ಈ ಭೀಭತ್ಸ ಘಟನೆ ಬೆಳಕಿಗೆ ಬಂದಿದೆ. ಅಪ್ಪಚ್ಚಿಯಾಗಿ ರಸ್ತೆಗೆ ಅಂಟಿದ ಶವವನ್ನು ಬಿಡಿಸಲು ಪೊಲೀಸರು ಸಲಿಕೆಯನ್ನು ಬಳಸಬೇಕಾಯಿತು.
ಶವವು ಸಂಪೂರ್ಣವಾಗಿ ಹೆದ್ದಾರಿಗೆ ಅಂಟಿದ್ದು, ಅದು 500 ಮೀಟರ್‌ಗಳವರೆಗೂ ಹಂಚಿಹೋಗಿತ್ತು. ಹಾದು ಹೋಗಿರುವ ಟೈರ್‌ಗಳಿಗೆ ದೇಹದ ಭಾಗಗಳು ಅಂಟಿಕೊಂಡಿದ್ದವು. ಅಂತಿಮವಾಗಿ ಪೊಲೀಸರು ಸಲಕೆಯನ್ನು ಬಳಸಿ ದೇಹವನ್ನು ರಸ್ತೆಯಿಂದ ಕೆದರಿ ಕೆದರಿ ಹೊರ ತೆಗೆದರು ಎಂದು ಹೇಳಲಾಗಿದೆ.
ಪೊಲೀಸರಿಗೆ ವ್ಯಕ್ತಿಯ ಬೆರಳು ಮಾತ್ರ ಪೂರ್ಣ ಪ್ರಮಾಣದಲ್ಲಿ ದೊರೆತಿದ್ದು, ಅದನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಗುರುತಿಸಲು ಫೋರೆನ್ಸಿಕ್ ತಂಡಕ್ಕೆ ಫಿಂಗರ್‌ಪ್ರಿಂಟ್ ಸಹಾಯ ಮಾಡಲಿದೆ ಎಂದು ಪೊಲೀಸರು ಭಾವಿಸಿದ್ದಾರೆ. ಸ್ಥಳದಲ್ಲಿ ಶೂಗಳು ದೊರೆತಿದ್ದು ಅವರು ಮೃತಪಟ್ಟ ವ್ಯಕ್ತಿಗೆ ಸೇರಿದ್ದವಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಶವವನ್ನು ಎಷ್ಟು ಗಂಟೆಯವರೆಗೂ ಎಕ್ಸ್‌ಪ್ರೆಸ್ ಬಿಡಲಾಗಿತ್ತು ಮತ್ತು ವಾಹನ ಸವಾರರು ಈ ಶವವನ್ನು ತೆರವುಗೊಳಿಸಲಿಲ್ಲ ಎಂದು ಸ್ಪಷ್ಟವಾಗಿಲ್ಲ. ಬಹುಶಃ ಉತ್ತರ ಪ್ರದೇಶದಲ್ಲಿ ಭಾರೀ ಮಂಜು ಬೀಳುತ್ತಿರುವುದರಿಂದ ಚಾಲಕರಿಗೆ ಶವವು ಗೋಚರಿಸಿರಕ್ಕಿಲ್ಲ ಎಂದು ಭಾವಿಸಲಾಗಿದೆ. ಅಲ್ಲದೇ, ಎಕ್ಸ್‌ಪ್ರೆಸ್ ವೇನಲ್ಲಿ ಕಾರುಗಳು ಸರಾಸರಿ 100 ಕಿ.ಮೀ ವೇಗದಲ್ಲಿ ಚಲಿಸುತ್ತವೆ. ಈ ಹಂತದಲ್ಲಿ ತಕ್ಷಣವೇ ಕಾರನ್ನು ನಿಲ್ಲಿಸುವುದು ಕೂಡ ಅಪಾಯಕಾರಿಯಾಗಿರುತ್ತದೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.
ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆಗೆ ಪೊಲೀಸರು ಪ್ರಯತ್ನಿಸಿದ್ದು, ವ್ಯಾಪಕ ತನಿಖೆಯನ್ನು ಕೈಗೊಂಡಿದ್ದಾರೆ. ಅಳಿದುಳಿದ ಶವದ ತುಂಡುಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟ ವ್ಯಕ್ತಿಯ ಸುಮಾರು 40 ವರ್ಷದವನಿರಬಹುದು. ಆದರೆ, ಇನ್ನೂ ಮೃತಪಟ್ಟ ವ್ಯಕ್ತಿಯನ್ನು ಗುರುತಿಸಲು ಸಾಧ್ಯವಾಗಿಲ್ಲ. ನೂರಾರು ಕಾರುಗಳು ಹಾದು ಹೋಗಿದ್ದರಿಂದ, ಶವ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ರಸ್ತೆಗೆ ಅಂಟಿಕೊಂಡಿದೆ. ಈ ಶವವನ್ನು ಹೆಕ್ಕಲು ಪೊಲೀಸರು ಸಲಿಕೆಯನ್ನು ಬಳಸಬೇಕಾಯಿತು. ಒಂದು ಬೆರಳು ಮಾತ್ರ ದೊರೆತಿದೆ. ಫಿಂಗರ್ ಪ್ರಿಂಟ್ ಮೂಲಕ ಮೃತಪಟ್ಟ ವ್ಯಕ್ತಿ ಯಾರೆಂದು ಗುರುತಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಇನ್ಸ್‌ಪೆಕ್ಟರ್ ದೇವೇಂದ್ರ ಸಿಂಗ್ ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Hit and Run: ಶಿವಮೊಗ್ಗದಲ್ಲಿ ಹಿಟ್ ಆ್ಯಂಡ್ ರನ್, ಒಬ್ಬ ಸಾವು, ಇಬ್ಬರಿಗೆ ಗಾಯ