ಲಕ್ನೋ: ಭಾರತದ ಪ್ರಮುಖ ಹಬ್ಬಗಳಲ್ಲಿ ಹೋಳಿಯೂ ಒಂದು (Holi 2024). ದೇಶದ ನಾನಾ ಭಾಗಗಗಳಲ್ಲಿ ಇದನ್ನು ವಿವಿಧ ಆಚರಿಸಲಾಗುತ್ತದೆ. ಬಣ್ಣದೋಕುಳಿಯೊಂದಿಗೆ ಕಾಮದಹನವೂ ಈ ಹಬ್ಬದ ವೈಶಿಷ್ಟ್ಯ. ಉತ್ತರ ಪ್ರದೇಶದ ಮಥುರಾದಲ್ಲಿ ಈ ಹಬ್ಬಕ್ಕೆ ವಿಶೇಷ ಸ್ಥಾನವಿದೆ. ಇಲ್ಲಿ ವಾರಗಳ ಕಾಲ ಆಚರಣೆ ನಡೆಯುತ್ತದೆ. ಅದರಂತೆ ಹೋಳಿ ಹಬ್ಬದ ಭಾಗವಾಗಿ ಮಥುರಾ ಜಿಲ್ಲೆಯ ಬರ್ಸಾನಾದಲ್ಲಿ ಸೋಮವಾರ (ಮಾರ್ಚ್ 18ರಂದು) ‘ಲತ್ಮಾರ್’ (Lathmaar) ಆಚರಣೆ ನಡೆಯಿತು. ಆ ಮೂಲಕ ಹೋಳಿ ಸಂಭ್ರಮಕ್ಕೆ ನಾಂದಿ ಹಾಡಲಾಯಿತು.
#WATCH | Mathura, Uttar Pradesh: 'Lathmaar' Holi celebration in Nandgaon as a part of the elaborated Holi festival celebrations pic.twitter.com/b2bqGRwzSo
— ANI (@ANI) March 19, 2024
ಏನಿದು ಲತ್ಮಾರ್ ಹೋಳಿ ?
ನಂದಗಾಂವ್‌ನ ಪುರುಷರು ಬರ್ಸಾನಾದ ಮಹಿಳೆಯರ ಮೇಲೆ ಬಣ್ಣದ ನೀರನ್ನು ಎರಚುತ್ತಾರೆ. ಬಳಿಕ ಮಹಿಳೆಯರು ಪುರುಷರ ಮೇಲೆ ಕೋಲುಗಳಿಂದ ಹಲ್ಲೆ ಮಾಡುವ ಮೂಲಕ ‘ಲತ್ಮಾರ್’ ಹೋಳಿ ಆಚರಣೆ ನಡೆಯುತ್ತದೆ. ಈ ಧಾರ್ಮಿಕ ಹೊಡೆತದಿಂದ ಪುರುಷರಿಗೆ ಯಾವುದೇ ರೀತಿಯ ಗಾಯಗಳಾಗುವುದಿಲ್ಲ. ಈ ಆಚರಣೆಯ ವಿಡಿಯೊಗಳು ಇದೀಗ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ.
#WATCH | Mathura, Uttar Pradesh: 'Lathmaar' Holi celebrations underway in Nandgaon as a part of the elaborate Holi festival celebrations. pic.twitter.com/hWpqOwlR3k
— ANI (@ANI) March 19, 2024
ಲತ್ಮಾರ್ ಹೋಳಿಯ ಹಿನ್ನೆಲೆ
ಭಗವಾನ್ ಕೃಷ್ಣ ಮತ್ತು ರಾಧಾ ಅವರ ಕಥೆಯೊಂದಿಗೆ ‘ಲತ್ಮಾರ್’ ಹೋಳಿ ಆಚರಣೆ ಥಳುಕು ಹಾಕಿಕೊಂಡಿದೆ. ಅಂದರೆ ಇದು ದ್ವಾಪರ ಯುಗದಿಂದ ಪ್ರಾರಂಭವಾಯಿತು ಎನ್ನಲಾಗುತ್ತಿದೆ. ಮಥುರಾದ ಬರ್ಸಾನಾಕ್ಕೆ ಶ್ರೀಕೃಷ್ಣ ತನ್ನ ಸ್ನೇಹಿತರೊಂದಿಗೆ ಹೋಳಿ ಆಡಲು ತೆರಳಿತ್ತಾನೆ. ಆಗ ಶ್ರೀಕೃಷ್ಣ ಮತ್ತು ಆತನ ಸ್ನೇಹಿತರನ್ನು ರಾಧಾ ಮತ್ತು ಆಕೆಯ ಸ್ನೇಹಿತೆಯರು ತಮಾಷೆ ಮಾಡಲು ಪ್ರಾರಂಭಿಸುತ್ತಾರೆ. ಬಳಿಕ ಶ್ರೀಕೃಷ್ಣ ಮತ್ತು ಸಂಗಡಿಗರು ಬಣ್ಣದ ನೀರನ್ನು ಅವರ ಮೇಲೆ ಎರಚತೊಡಗುತ್ತಾರೆ.
ಇದರಿಂದ ಕೋಪಗೊಂಡ ರಾಧಾ ಮತ್ತು ಆಕೆಯ ಸ್ನೇಹಿತರು ಕೋಲು ಹಿಡಿದು ಹೊಡೆಯಲು ಮುಂದಾಗುತ್ತಾರೆ. ಇದನ್ನು ತಪ್ಪಿಸಲು, ಶ್ರೀಕೃಷ್ಣ ಮತ್ತು ಆತನ ಸಂಗಡಿಗರು ಗುರಾಣಿಗಳನ್ನು ಬಳಸುತ್ತಾರೆ. ಅಂದಿನಿಂದ ಲಾತ್ಮಾರ್ ಹೋಳಿ ಆಡುವ ಸಂಪ್ರದಾಯ ನಡೆಯುತ್ತಿದೆ ಎಂಬ ನಂಬಿಕೆ ಇದೆ. ಈ ಆಚರಣೆತನ್ನು ನೋಡಲು ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ ಪ್ರತಿ ವರ್ಷ ಆಗಮಿಸುತ್ತಾರೆ.
ವ್ಯಾಪಕ ಸಿದ್ಧತೆ
ಜಿಲ್ಲಾ ಮ್ಯಾಜಿಸ್ಟ್ರೇಟ್ ಶೈಲೇಂದ್ರ ಸಿಂಗ್ ಮಾಹಿತಿ ನೀಡಿ, ʼʼಮಥುರಾದ ಬರ್ಸಾನಾದಲ್ಲಿ ಭಾರಿ ಭದ್ರತೆ ನಡುವೆ ಲತ್ಮಾರ್ ಹೋಳಿ ಆಚರಿಸಲಾಯಿತು. ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಆಂಬ್ಯುಲೆನ್ಸ್ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಹಲವು ಲಕ್ಷ ಯಾತ್ರಾರ್ಥಿಗಳ ಉಪಸ್ಥಿತಿಯ ಹೊರತಾಗಿಯೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ” ಎಂದು ಅವರು ವಿವರಿಸಿದ್ದಾರೆ. ʼʼಯಾವುದೇ ಗಾಯದ ಪ್ರಕರಣ ವರದಿಯಾಗಿಲ್ಲʼʼ ಎಂದು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಉಸ್ತುವಾರಿ ಡಾ.ಮನೋಜ್ ವಸಿಷ್ಠ ತಿಳಿಸಿದ್ದಾರೆ. ಮಾರ್ಚ್ 25ರಂದು ಹೋಳಿಯೊಂದಿಗೆ ಮುಕ್ತಾಯಗೊಳ್ಳುವ ಒಂದು ವಾರದ ಆಚರಣೆಗಾಗಿ ಇಡೀ ಪ್ರದೇಶವನ್ನು ವಿವಿಧ ವಲಯಗಳಾಗಿ ವಿಂಗಡಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Holi 2024: ಹೋಳಿ ಹಬ್ಬದ ಪೌರಾಣಿಕ ಹಿನ್ನೆಲೆ ರೋಚಕ! ಬಣ್ಣ ಎರಚುವುದಕ್ಕೂ ಇದೆ ಅರ್ಥ…
ಸಂಚಾರ ದಟ್ಟಣೆಯನ್ನು ತಪ್ಪಿಸಲು, ಬರ್ಸಾನಾದಲ್ಲಿ 78 ತಡೆಗೋಡೆಗಳು ಮತ್ತು 45 ಪಾರ್ಕಿಂಗ್ ಸ್ಲಾಟ್‌ಗಳನ್ನು ಸ್ಥಾಪಿಸಲಾಗಿದೆ. ನಂದಗಾಂವ್‌ನಲ್ಲಿ ಇಪ್ಪತ್ತೊಂಬತ್ತು ತಡೆಗೋಡೆಗಳು ಮತ್ತು 12 ಪಾರ್ಕಿಂಗ್ ಪ್ರದೇಶಗಳನ್ನು ಗುರುತಿಸಲಾಗಿದೆ. ಸಮರ್ಪಕ ಸಂಚಾರ ವ್ಯವಸ್ಥೆಗಾಗಿ ಬರ್ಸಾನಾದಲ್ಲಿ ನಾಲ್ಕು ಮತ್ತು ನಂದಗಾಂವ್‌ನಲ್ಲಿ ಎರಡು ವೀಕ್ಷಣಾ ಗೋಪುರಗಳನ್ನು ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜತೆಗೆ ಬರ್ಸಾನಾದಲ್ಲಿ 13 ಆಂಬ್ಯುಲೆನ್ಸ್ ಮತ್ತು ನಂದಗಾಂವ್‌ನಲ್ಲಿ 4 ಆಂಬ್ಯುಲೆನ್ಸ್‌ಗಳನ್ನು ಹೊಂದಿರುವ 12 ತಾತ್ಕಾಲಿಕ ಮಿನಿ ಆಸ್ಪತ್ರೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ