ಕರಾಚಿ, ಪಾಕಿಸ್ತಾನ: ನಮ್ಮ ನೆರೆಯ ಪಾಕಿಸ್ತಾನದಲ್ಲಿನ ಹಿಂದೂ ಅಲ್ಪಸಂಖ್ಯಾತರು ಹೋಳಿ ಹಬ್ಬವನ್ನು ಆಚರಿಸಿ ಸಂಭ್ರಮಪಟ್ಟಿದ್ದಾರೆ(Holi Celebration). ಪಾಕಿಸ್ತಾನದ ಕರಾಚಿಯಲ್ಲಿರುವ ಹಿಂದೂಗಳು ಹೋಳಿ ಬಣ್ಣಗಳಲ್ಲಿ ಮಿಂದೆದ್ದಿದ್ದಾರೆ. ಹಿಂದೂಗಳ ಹೋಳಿಯ ವಿಡಿಯೋವೊಂದನ್ನು ಅಸೋಸಿಯೇಟೆಡ್ ಪ್ರೆಸ್ ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿದ್ದು, ಅದರಲ್ಲಿ ಜನರು, ಸಿಲ್‌ಸಿಲಾ ಚಿತ್ರದ ಅಮಿತಾಭ್ ಬಚ್ಚನ್ ಅವರ ಐಕಾನಿಕ್ ಸಾಂಗ್ ರಂಗ್ ಬರ್ಸೆ ಹಾಡಿಗೆ ನೃತ್ಯ ಮಾಡುತ್ತಿದ್ದಾರೆ.
ದುಷ್ಟರ ವಿರುದ್ಧ ಒಳಿತಿನ ವಿಜಯವನ್ನು ಆಚರಿಸುವ ಹಬ್ಬ ಹೋಳಿ ಎಂದು ಸಮುದಾಯದವರೊಬ್ಬರು ಹೇಳುತ್ತಿರುವುದು ವಿಡಿಯೋದಲ್ಲಿ ಕಾಣಬಹುದು. ಜನರು ಒಬ್ಬರಿಗೊಬ್ಬರು ಪುಡಿಮಾಡಿದ ಬಣ್ಣಗಳನ್ನು ಲೇಪಿಸಿಕೊಳ್ಳುವುದು ಮತ್ತು ಫೋಟೋಗಳನ್ನು ತೆಗೆದುಕೊಳ್ಳುವುದನ್ನು ವೀಡಿಯೊದಲ್ಲಿ ನೋಡಬಹುದಾಗಿದೆ.
ಇದನ್ನೂ ಓದಿ: Team India Holi: ಹೋಳಿ ಆಚರಿಸಿದ ಟೀಮ್ ಇಂಡಿಯಾ
15 ಹಿಂದೂ ವಿದ್ಯಾರ್ಥಿಗಳಿಗೆ ಗಾಯ
ಮತ್ತೊಂದೆಡೆ, ಕರಾಚಿ ವಿವಿಯಲ್ಲಿ ಹೋಳಿ ಆಚರಣೆಯಲ್ಲಿ ತೊಡಗಿದ್ದ ಹಿಂದೂ ಅಲ್ಪಸಂಖ್ಯಾತ 15 ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದ ಘಟನೆಯು ವರದಿಯಾಗಿದೆ. ಈ ರೀತಿಯಾಗಿ ಅಲ್ಪಸಂಖ್ಯಾತರ ಮೇಲೆ ಹಲ್ಲೆ ನಡೆಯುತ್ತಿರುವ ಎರಡು ದಿನಗಳಲ್ಲಿ ಎರಡನೇ ಘಟನೆಯಾಗಿದೆ. ಇದಕ್ಕೂ ಮೊದಲು ಪಂಜಾಬ್ ವಿವಿಯಲ್ಲೂ 15 ಹಿಂದೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿತ್ತು.