ನವ ದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ರೆಪೊ ದರ ಏರಿಕೆ ಮಾಡಿದ ಬೆನ್ನಲ್ಲೇ (Home loan Interest) ಕೆಲವು ಬ್ಯಾಂಕ್‌ಗಳಲ್ಲಿ ಬಡ್ಡಿ ದರ ಹೆಚ್ಚಳವಾಗಿದೆ. ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಲ್ಲಿ ಸಾಲದ ಬಡ್ಡಿ ದರಗಳಲ್ಲಿ ಏರಿಕೆಯಾಗಿದೆ.
ಬ್ಯಾಂಕ್ ಆಫ್ ಬರೋಡಾದಲ್ಲಿ ಡಿಸೆಂಬರ್ 8ರಿಂದ ಅನ್ವಯಿಸುವಂತೆ ರೆಪೊ ದರ ಆಧಾರಿತ ಸಾಲಗಳ ಬಡ್ಡಿ ದರಗಳನ್ನು ಏರಿಸಲಾಗಿದೆ. ರಿಟೇಲ್ ಸಾಲಗಳಿಗೆ 8.85% ಬಡ್ಡಿ ದರ ನಿಗದಿಯಾಗಿದೆ.
ಬ್ಯಾಂಕ್ ಆಫ್ ಇಂಡಿಯಾದಲ್ಲಿ ರೆಪೊ ದರ ಆಧಾರಿತ ಸಾಲದ ಬಡ್ಡಿ ದರವನ್ನು ಡಿಸೆಂಬರ್ 7 ರಿಂದ ಅನ್ವಯವಾಗುವಂತೆ 9.10%ಕ್ಕೆ ಏರಿಸಲಾಗಿದೆ. ಎಂಸಿಎಲ್‌ಆರ್ ದರವನ್ನು 7.95%ರಿಂದ 8.15%ಕ್ಕೆ ಏರಿಸಲಾಗಿದೆ. ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಲ್ಲಿ ಡಿಸೆಂಬರ್ 10ರಿಂದ ಅನ್ವಯವಾಗುವಂತೆ ಸಾಲದ ಬಡ್ಡಿದರವನ್ನು ಪರಿಷ್ಕರಿಸಲಾಗಿದೆ.