ಲಖನೌ: ಉತ್ತರಪ್ರದೇಶದ ಜನಸತ್ತಾ ದಳ(Jana Sattha Dal)ದ ಶಾಸಕ ರಘುರಾಜ್ ಪ್ರತಾಪ್ ಸಿಂಗ್ ಅಲಿಯಾಸ್ ರಾಜಾ ಭಯ್ಯಾ(Raja Bhayya’s Father) ಅವರ ತಂದೆ ಉದಯ್ ಪ್ರತಾಪ್ ಸಿಂಗ್(Uday Prathap Singh) ಅವರನ್ನು ಸೋಮವಾರ ಜಿಲ್ಲಾ ಪೊಲೀಸರು ಬೇಟಿಯಲ್ಲಿರುವ ಅವರ ಅರಮನೆಯ ಭದ್ರಿ ಮಹಲ್‌ನಲ್ಲಿ ಗೃಹಬಂಧನದಲ್ಲಿ ಇರಿಸಿದ್ದಾರೆ. ಮುಂಬರುವ ಮೊಹಾರಂ ಹಬ್ಬ(Moharram) ಇರುವ ಕಾರಣ ಗೃಹ ಬಂಧನ(House Arrest)ದಲ್ಲಿಡಲಾಗಿತ್ತು.
ಭದ್ರಿ ಮಹಲ್‌ನ ಹೊರಗೆ ಪೊಲೀಸ್ ಮತ್ತು ಪಿಎಸಿ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸ್ಥಳೀಯ ಅಧಿಕಾರಿಗಳು ಹೊರಗೆ ನೋಟಿಸ್ ಅಂಟಿಸಿದ್ದಾರೆ. ಮೊಹರಂ ಸಂದರ್ಭದಲ್ಲಿ ಉಭಯ ಸಮುದಾಯಗಳ ನಡುವೆ ಘರ್ಷಣೆ ಉಂಟಾಗುವುದನ್ನು ತಪ್ಪಿಸಲು ಜಿಲ್ಲಾಡಳಿತ ಉದಯ ಪ್ರತಾಪ್ ಸಿಂಹ ವಿರುದ್ಧ ಕ್ರಮ ಕೈಗೊಂಡಿದೆ. ಅವರನ್ನು ಮೂರು ದಿನಗಳ ಕಾಲ ಅವರ ಅರಮನೆಯಲ್ಲಿ ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಇಲ್ಲಿನ ಸ್ಥಳೀಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಉದಯ್ ಪ್ರತಾಪ್ ಸಿಂಗ್ ಸೋಮವಾರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಬರೆದಿದ್ದಾರೆ, “ಆಡಳಿತವು ಇದಕ್ಕೆ ಪರಿಹಾರವನ್ನು ಕಂಡುಕೊಂಡಿದೆ. ಮುಸಲ್ಮಾನರನ್ನು ವಿರೋಧಿಸುವವರನ್ನು ಬಂಧಿಸಿ ಸರ್ಕಾರ ಬಂಧಿಸುತ್ತಿದೆ. ಶೇಖ್‌ಪುರದಲ್ಲಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಹಿಂದೂಗಳ ಭಂಡಾರವನ್ನು (ಸಾರ್ವಜನಿಕ ಔತಣ) ಆಡಳಿತವು ಹೊಸ ಪದ್ಧತಿ ಎಂದು ಕರೆದು ನಿಲ್ಲಿಸಿತು, ಆದರೆ ಮಜಿಲ್‌ಗಾಂವ್‌ನಲ್ಲಿ ರಸ್ತೆಗೆ ಅಡ್ಡಲಾಗಿ ಮುಸ್ಲಿಮರು ಹೊಸ ಗೇಟ್ ಸ್ಥಾಪಿಸುವುದನ್ನು ಅವರು ತಡೆಯುತ್ತಿಲ್ಲ ಎಂದು ಟ್ವೀಟ್ ಮಾಡಿ ಕಿಡಿ ಕಾರಿದ್ದಾರೆ.
2012ರಲ್ಲಿ ಮೊಹರಂ ದಿನದಂದು ಶೇಖ್‌ಪುರ ಗ್ರಾಮದ ರಸ್ತೆಬದಿಯಲ್ಲಿ ಮಂಗವೊಂದನ್ನು ಗುಂಡು ಹಾರಿಸಿ ಕೊಲ್ಲಲಾಗಿತ್ತು. ಅಂದಿನಿಂದ, ಗ್ರಾಮಸ್ಥರು ಅಲ್ಲಿ ಹನುಮಾನ್ ದೇವಾಲಯವನ್ನು ನಿರ್ಮಿಸಿದರು ಮತ್ತು ಸಿಂಗ್ ಅವರ ಆಶ್ರಯದಲ್ಲಿ ಮೊಹರಂನಲ್ಲಿ ಹನುಮಾನ್ ಪಠಣ ಮತ್ತು ಭಂಡಾರವನ್ನು ಆಯೋಜಿಸಲು ಪ್ರಾರಂಭಿಸಿದರು.
ಮೊಹರಂ ದಿನದಂದು ಮಾತ್ರ ಭಂಡಾರ ನಡೆಯುವುದು ವಿಶೇಷ. ಎರಡು ಆರಂಭಿಕ ವರ್ಷಗಳಲ್ಲಿ, ಭಂಡಾರ ಮತ್ತು ಮೊಹರಂ ಮೆರವಣಿಗೆಗಳು ಏಕಕಾಲದಲ್ಲಿ ನಡೆದವು. 2015ರಲ್ಲಿ ದೇವಸ್ಥಾನದಲ್ಲಿ ಭಂಡಾರ ಮತ್ತು ಧ್ವಜಗಳನ್ನು ವಿರೋಧಿಸಿ ಮುಸ್ಲಿಂ ಸಮುದಾಯದವರು ತಾಜಿಯಾ ಮೆರವಣಿಗೆ ನಡೆಸಿರಲಿಲ್ಲ. ವಿಷಯ ತಾರಕಕ್ಕೇರಿದಾಗ ಆಡಳಿತ ಮಧ್ಯ ಪ್ರವೇಶಿಸಬೇಕಾಯಿತು.
2016 ರಲ್ಲಿ, ಜಿಲ್ಲಾಡಳಿತವು ಭಂಡಾರಕ್ಕೆ ಅನುಮತಿಯನ್ನು ತಡೆಹಿಡಿದು ಶೇಖ್‌ಪುರದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿತು. ಇದೀಗ ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಬಗ್ಗೆ ಡಿಎಂ ಅವರ ವಿವೇಚನೆಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಲಾಗಿದ್ದು, ಹೀಗಾಗಿ ರಾಜಾ ಉದಯ್ ಪ್ರತಾಪ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇನ್ನು ಮುಂಜಾಗೃತಾ ಕ್ರಮವಾಗಿ ಪ್ರತಿ ಮೊಹರಂಗೆ ಅವರನ್ನು ಗೃಹಬಂಧನದಲ್ಲಿ ಇಡುವುದು ವಾಡಿಕೆ. ಈ ಬಾರಿ ಶಾಂತಿ ಕಾಪಾಡಲು ಅವರ ಮಹಲ್ ಸುತ್ತಲೂ ಹಲವು ಪೊಲೀಸ್ ಠಾಣೆಗಳ ಪಡೆಗಳನ್ನು ನಿಯೋಜಿಸಲಾಗಿದೆ. ಜುಲೈ 17 ರಂದು ಮುಹರಂ ಮೆರವಣಿಗೆ ನಡೆಯಲಿದೆ.
ಇದನ್ನೂ ಓದಿ: One Nation One Rate: ಚಿನ್ನಕ್ಕೆ ದೇಶಾದ್ಯಂತ ಒಂದೇ ದರ! ಹೊಸ ನಿಯಮ ಶೀಘ್ರ! ಬಂಗಾರ ದರ ಇಳಿಕೆ?