ಡೆಹ್ರಾಡೂನ್: ಗಿರಿ ಪ್ರದೇಶದ ಮೇಲೊಂದು ಊರು, ಸುತ್ತಲೂ ಹಸಿರ ಕಾನನ, ಮೈಯ ಜತೆ ಮನಸ್ಸಿಗೂ ಮುದ ನೀಡುವಂತಹ ಚಳಿ, ಪ್ರಕೃತಿ ಸೌಂದರ್ಯವೇ ಹಾಸಿಗೆ ಹೊದ್ದು ಮಲಗಿದ ಅನುಭವ… ಹೀಗೆ, ಸ್ವಚ್ಛಂದ ಪರಿಸರದ ಮಧ್ಯೆ ನಿರುಮ್ಮಳವಾಗಿದ್ದ ಉತ್ತರಾಖಂಡದ ಜೋಶಿಮಠ ಪಟ್ಟಣ ಈಗ ‘ಮುಳುಗುತ್ತಿರುವ ಪಟ್ಟಣ’ (Joshimath Sinking) ಎಂದೇ ಖ್ಯಾತಿಯಾಗುತ್ತಿದೆ. ಊರು ತುಂಬ ಬಿರುಕುಗಳೇ ಕಾಣುತ್ತಿರುವುದರಿಂದ, ಮನೆಗಳು ಯಾವಾಗ ಕುಸಿಯುತ್ತವೆಯೋ ಎಂಬ ಆತಂಕ ಮನೆಮಾಡಿದ ಕಾರಣ ನೂರಾರು ಜನರನ್ನು ಏರ್‌ಲಿಫ್ಟ್ ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಹಾಗಾದರೆ, ಜೋಶಿಮಠದ ಪರಿಸ್ಥಿತಿ ಹೇಗಿದೆ? ಇಲ್ಲಿರುವ ಚಿತ್ರಗಳೇ ನೂರು ಕತೆ ಹೇಳುತ್ತಿವೆ.
ಇದನ್ನೂ ಓದಿ | Joshimath Sinking | ಉತ್ತರಾಖಂಡದ ಜೋಶಿಮಠ ಪಟ್ಟಣ ಶೀಘ್ರವೇ ಕುಸಿಯಲಿದೆ, ಆತಂಕ ಹೆಚ್ಚಿಸಿದ ತಜ್ಞರ ಎಚ್ಚರಿಕೆ