Joshimath Sinking | ಜೋಶಿಮಠ ಪಟ್ಟಣದ ತುಂಬ ಬಿರುಕು, ಇಲ್ಲಿವೆ ಭೀಕರ ಕತೆ ಹೇಳುವ ʼಛಿದ್ರ ಚಿತ್ರʼಗಳು - Vistara News

ದೇಶ

Joshimath Sinking | ಜೋಶಿಮಠ ಪಟ್ಟಣದ ತುಂಬ ಬಿರುಕು, ಇಲ್ಲಿವೆ ಭೀಕರ ಕತೆ ಹೇಳುವ ʼಛಿದ್ರ ಚಿತ್ರʼಗಳು

ಉತ್ತರಾಖಂಡದ ಜೋಶಿಮಠ ಪಟ್ಟಣವೀಗ ಒಡೆದ (Joshimath Sinking) ಮನೆಯಾಗುತ್ತಿದೆ. ಊರು ತುಂಬ ಬಿರುಕುಗಳೇ ಕಾಣುತ್ತಿವೆ. ಹಾಗಾಗಿ, ಸಾವಿರಾರು ಜನ ಆತಂಕದಲ್ಲಿಯೇ ದಿನದೂಡುತ್ತಿದ್ದಾರೆ.

VISTARANEWS.COM


on

Joshimath Is Sinking
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಡೆಹ್ರಾಡೂನ್:‌ ಗಿರಿ ಪ್ರದೇಶದ ಮೇಲೊಂದು ಊರು, ಸುತ್ತಲೂ ಹಸಿರ ಕಾನನ, ಮೈಯ ಜತೆ ಮನಸ್ಸಿಗೂ ಮುದ ನೀಡುವಂತಹ ಚಳಿ, ಪ್ರಕೃತಿ ಸೌಂದರ್ಯವೇ ಹಾಸಿಗೆ ಹೊದ್ದು ಮಲಗಿದ ಅನುಭವ… ಹೀಗೆ, ಸ್ವಚ್ಛಂದ ಪರಿಸರದ ಮಧ್ಯೆ ನಿರುಮ್ಮಳವಾಗಿದ್ದ ಉತ್ತರಾಖಂಡದ ಜೋಶಿಮಠ ಪಟ್ಟಣ ಈಗ ‘ಮುಳುಗುತ್ತಿರುವ ಪಟ್ಟಣ’ (Joshimath Sinking) ಎಂದೇ ಖ್ಯಾತಿಯಾಗುತ್ತಿದೆ. ಊರು ತುಂಬ ಬಿರುಕುಗಳೇ ಕಾಣುತ್ತಿರುವುದರಿಂದ, ಮನೆಗಳು ಯಾವಾಗ ಕುಸಿಯುತ್ತವೆಯೋ ಎಂಬ ಆತಂಕ ಮನೆಮಾಡಿದ ಕಾರಣ ನೂರಾರು ಜನರನ್ನು ಏರ್‌ಲಿಫ್ಟ್‌ ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಹಾಗಾದರೆ, ಜೋಶಿಮಠದ ಪರಿಸ್ಥಿತಿ ಹೇಗಿದೆ? ಇಲ್ಲಿರುವ ಚಿತ್ರಗಳೇ ನೂರು ಕತೆ ಹೇಳುತ್ತಿವೆ.

ಬಿರುಕುಬಿಟ್ಟ ಮನೆ, ಭೀತಿಗೊಳಗಾದ ಮನ.
ಚದುರಿದ ರಸ್ತೆಗಳು, ಮುದುಡಿದ ಭರವಸೆಗಳು.
ಮನೆಯೊಂದು, ಬಿರುಕುಗಳು ಹಲವು.
ಭೂಕುಸಿತ, ನೆಮ್ಮದಿ ಕಸಿತ.
1890ರ ಜೋಶಿಮಠ, 2022ರ ಜೋಶಿಮಠ, ಇದು ‘ಚಿತ್ರ’ಕತೆ
ಬಾಯಿ ತೆರೆಯುತ್ತಿರುವ ಭೂಮಿ.
ಮನೆಯ ಜತೆಗೆ ಭರವಸೆಯೂ ಛಿದ್ರ ಛಿದ್ರ.
ಮನೆಯ ಎದುರು ‘ಬಿರುಕು’ಗಳ ರಂಗೋಲಿ.

ಇದನ್ನೂ ಓದಿ | Joshimath Sinking | ಉತ್ತರಾಖಂಡದ ಜೋಶಿಮಠ ಪಟ್ಟಣ ಶೀಘ್ರವೇ ಕುಸಿಯಲಿದೆ, ಆತಂಕ ಹೆಚ್ಚಿಸಿದ ತಜ್ಞರ ಎಚ್ಚರಿಕೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

Ram Mandir: ರಾಮಮಂದಿರ ‘ಯೂಸ್‌ಲೆಸ್’ ಎಂದ ಸಮಾಜವಾದಿ ಪಕ್ಷದ ನಾಯಕ; ಬಿಜೆಪಿ ಆಕ್ರೋಶ

Ram Mandir: ಚುನಾವಣೆಯಲ್ಲಿ ರಾಮಮಂದಿರ ವಿಷಯವು ಭಾರಿ ಚರ್ಚೆಯಾಗುತ್ತಿದೆ. ನರೇಂದ್ರ ಮೋದಿ ಅವರೂ ರಾಮಮಂದಿರವನ್ನು ಪ್ರಸ್ತಾಪಿಸುತ್ತಿದ್ದಾರೆ. ಕಾಂಗ್ರೆಸ್‌ನವರು ಕೂಡ, ನಾವೂ ರಾಮನ ಭಕ್ತರು ಎನ್ನುತ್ತಿದ್ದಾರೆ. ಇದರ ಮಧ್ಯೆಯೇ ರಾಮಮಂದಿರ ಕುರಿತು ಸಮಾಜವಾದಿ ಪಕ್ಷದ ನಾಯಕ ರಾಮ್‌ ಗೋಪಾಲ್‌ ಯಾದವ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

VISTARANEWS.COM


on

Ram Mandir
Koo

ಲಖನೌ: ಲೋಕಸಭೆ ಚುನಾವಣೆ (Lok Sabha Electio) ಹಿನ್ನೆಲೆಯಲ್ಲಿ ರಾಜಕಾರಣಿಗಳ ಭಾಷಣಗಳು ಮೊನಚಾಗಿವೆ. ಒಂದೊಂದು ವಿಷಯಗಳು ಕೂಡ ವಿವಾದ, ಚರ್ಚೆ, ವಾಗ್ವಾದಗಳಿಗೆ ಕಾರಣವಾಗುತ್ತಿವೆ. ಚುನಾವಣೆ ವೇಳೆ ರಾಮಮಂದಿರ ವಿಷಯವೂ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೂ ರಾಮಮಂದಿರವನ್ನು ಪ್ರಸ್ತಾಪಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ಸಮಾಜವಾದಿ ಪಕ್ಷದ ನಾಯಕ ರಾಮ್‌ ಗೋಪಾಲ್‌ ಯಾದವ್‌ (Ram Gopal Yadav) ಅವರು “ರಾಮಮಂದಿರ ಯೂಸ್‌ಲೆಸ್”‌ ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ.

ನ್ಯೂಸ್‌ 18 ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ರಾಮ್‌ ಗೋಪಾಲ್‌ ಯಾದವ್‌, “ನಾನು ಪ್ರತಿ ದಿನವೂ ರಾಮನನ್ನು ಆರಾಧಿಸುತ್ತೇನೆ. ಆದರೆ, ಕೆಲವರು ರಾಮನವಮಿಯ ಪೇಟೆಂಟ್‌ಅನ್ನು ತೆಗೆದುಕೊಂಡಿದ್ದಾರೆ. ಇದರ ಮಧ್ಯೆ, ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರದಿಂದ ಯಾವುದೇ ಉಪಯೋಗವಿಲ್ಲ. ಅದು ಶಾಸ್ತ್ರೋಕ್ತವಾಗಿ ನಿರ್ಮಾಣ ಆಗಿಲ್ಲ. ದೇಶದ ಪುರಾತನ ದೇವಾಲಯಗಳನ್ನು ನೋಡಿಕೊಂಡು ಬನ್ನಿ. ಉತ್ತರದಿಂದ ದಕ್ಷಿಣದವರೆಗೆ ನಿರ್ಮಿಸಿದ ದೇವಾಲಯಗಳನ್ನು ನೋಡಿ. ರಾಮಮಂದಿರವು ನಮ್ಮ ಹಳೆಯ ಮಂದಿರಗಳಂತೆ ನಿರ್ಮಾಣ ಮಾಡಿಲ್ಲ” ಎಂದಿದ್ದಾರೆ.

Ram Mandir

“ರಾಮಮಂದಿರವನ್ನು ವಾಸ್ತು ಪ್ರಕಾರ ನಿರ್ಮಿಸಿಲ್ಲ. ನಮ್ಮ ದೇಶದ ಹಳೆಯ ದೇವಾಲಯಗಳಂತೆ ವೈಜ್ಞಾನಿಕವಾದ ವಾಸ್ತುವನ್ನು ಪಾಲಿಸಿಲ್ಲ. ಯಾರಾದರೂ ಈ ರೀತಿ ದೇವಾಲಯವನ್ನು ನಿರ್ಮಾಣ ಮಾಡುತ್ತಾರೆಯೇ? ದೇವಾಲಯ ನಿರ್ಮಾಣಕ್ಕೂ ಮೊದಲು ಅದರ ಬಗ್ಗೆ ಅಧ್ಯಯನ ನಡೆಯಬೇಕು. ದೇವಾಲಯಗಳ ವಾಸ್ತುವನ್ನು ಅಧ್ಯಯನ ಮಾಡಬೇಕು. ಆ ಮೂಲಕ ವೈಜ್ಞಾನಿಕವಾಗಿ ದೇವಾಲಯವನ್ನು ನಿರ್ಮಾಣ ಮಾಡಬೇಕು. ಆದರೆ, ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ದೇವಾಲಯವು ಯಾವುದೇ ರೀತಿಯಲ್ಲಿ ವೈಜ್ಞಾನಿಕವಾಗಿಲ್ಲ” ಎಂದು ತಿಳಿಸಿದರು.

ತಿರುಗೇಟು ನೀಡಿದ ಯೋಗಿ

ರಾಮ್‌ ಗೋಪಾಲ್‌ ಯಾದವ್‌ ಹೇಳಿಕೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ತಿರುಗೇಟು ನೀಡಿದ್ದಾರೆ. “ಭಗವಾನ್‌ ಶ್ರೀರಾಮನಿಗೆ, ರಾಮಮಂದಿರಕ್ಕೆ, ಸನಾತನ ಧರ್ಮಕ್ಕೆ, ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆ ತರುವ ಮೂಲಕ ತಮ್ಮ ವೋಟ್‌ ಬ್ಯಾಂಕ್‌ಅನ್ನು ಭದ್ರಪಡಿಸಿಕೊಳ್ಳುವುದೇ ಇಂತಹವರ ಉದ್ದೇಶವಾಗಿದೆ. ಆದರೆ, ಒಂದು ವಿಷಯ ನೆನಪಿರಲಿ, ಭಾರತೀಯರ ನಂಬಿಕೆಯ ಬಗ್ಗೆ, ದೈವತ್ವದ ಬಗ್ಗೆ ಕೆಟ್ಟದಾಗಿ ಮಾತನಾಡಿದವರಿಗೆ ದೈವವೇ ಸರಿಯಾದ ಪಾಠ ಕಲಿಸಿದೆ. ಇದು ಇತಿಹಾಸದಿಂದ ಸಾಬೀತಾಗಿದೆ” ಎಂದು ಹೇಳಿದರು.

ಇದನ್ನೂ ಓದಿ: PM Modi: ರಾಮಮಂದಿರಕ್ಕೆ ಕಾಂಗ್ರೆಸ್‌ ಬೀಗ ಹಾಕಬಾರದು ಎಂದರೆ ನಮಗೆ 400 ಸೀಟು ಕೊಡಿ ಎಂದ ಮೋದಿ

Continue Reading

ಪ್ರಮುಖ ಸುದ್ದಿ

PM Narendra Modi: “ಚರ್ಮದ ಬಣ್ಣದ ಮೇಲಿನ ಈ ಅವಮಾನವನ್ನು ಸಹಿಸುವುದಿಲ್ಲ…” ಪಿತ್ರೋಡಾಗೆ ಮೋದಿ ತಪರಾಕಿ

ತೆಲಂಗಾಣದ ವಾರಂಗಲ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಪಿಎಂ ನರೇಂದ್ರ ಮೋದಿ (PM Narendra Modi) ಅವರು, ಪಿತ್ರೋಡಾ (Sam Pitroda) ಹೇಳಿಕೆಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. “ಕಾಂಗ್ರೆಸ್‌ನ ಶೆಹಜಾದಾ ಅಮೆರಿಕದ ಅಂಕಲ್‌ನಿಂದ ಸ್ಫೂರ್ತಿ ಪಡೆಯುತ್ತಿದ್ದಾರೆ ಎಂದು ಕುಟುಕಿದ್ದಾರೆ.

VISTARANEWS.COM


on

sam pitroda pm narendra modi
Koo

ಹೈದರಾಬಾದ್:‌ ಕಾಂಗ್ರೆಸ್‌ನ ಹಿರಿಯ ನಾಯಕ ಸ್ಯಾಮ್ ಪಿತ್ರೋಡಾ (Congress Leader Sam Pitroda) ಅವರ ಹೊಸ ವಿವಾದಿತ ಹೇಳಿಕೆಗೆ (Controversial statement) ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi), “ಚರ್ಮದ ಬಣ್ಣದ (skin colour) ಆಧಾರದ ಮೇಲೆ ಭಾರತೀಯರಿಗೆ ಮಾಡುವ ಅವಮಾನವನ್ನು ಈ ದೇಶ ಸಹಿಸುವುದಿಲ್ಲ” ಎಂದು ಹೇಳಿದ್ದಾರೆ.

ವೈವಿಧ್ಯತೆಯ ಬಗ್ಗೆ ಮಾತನಾಡುವಾಗ ರಾಷ್ಟ್ರದ ವಿವಿಧ ಭಾಗಗಳ ಜನತೆಯನ್ನು ಚೀನಿಯರು, ಅರಬ್ಬರು, ಬಿಳಿಯರು ಮತ್ತು ಆಫ್ರಿಕನ್ನರಿಗೆ ಹೋಲಿಸಿ ಸ್ಯಾಮ್‌ ಪಿತ್ರೋಡಾ ವಿವಾದ ಹುಟ್ಟುಹಾಕಿದ್ದರು. “ನಾವು ಜಗತ್ತಿನಲ್ಲಿ ಪ್ರಜಾಪ್ರಭುತ್ವದ ಉಜ್ವಲ ಉದಾಹರಣೆಯಾಗಿದ್ದೇವೆ. ನಾವು ವೈವಿಧ್ಯತೆಯನ್ನು ಒಟ್ಟಿಗೆ ಹಿಡಿದಿಟ್ಟುಕೊಂಡಿರುವ ದೇಶವಾಗಿದ್ದೇವೆ. ಇಲ್ಲಿ ಪೂರ್ವದಲ್ಲಿರುವ ಜನರು ಚೀನಿಯರಂತೆ ಕಾಣುತ್ತಾರೆ. ಪಶ್ಚಿಮದಲ್ಲಿ ಜನರು ಹಾಗೆ ಅರಬ್ಬರಂತೆ, ಉತ್ತರದ ಜನರು ಬಹುಶಃ ಶ್ವೇತವರ್ಣೀಯರಂತೆ ಹಾಗೂ ದಕ್ಷಿಣದ ಜನರು ದಕ್ಷಿಣ ಆಫ್ರಿಕಾದವರಂತೆ ಕಾಣುತ್ತಾರೆ. ಪರವಾಗಿಲ್ಲ, ನಾವೆಲ್ಲರೂ ಸಹೋದರರು ಮತ್ತು ಸಹೋದರಿಯರು” ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್ ವಿಭಾಗದ ಅಧ್ಯಕ್ಷ ಪಿತ್ರೋಡಾ ಹೇಳಿದ್ದರು.

ತೆಲಂಗಾಣದ ವಾರಂಗಲ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಪಿಎಂ ನರೇಂದ್ರ ಮೋದಿ ಇದಕ್ಕೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. “ಆದಿವಾಸಿ ಕುಟುಂಬದ ಮಗಳಾದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಪದವಿಯ ಸ್ಪರ್ಧೆಯ ವೇಳೆ ಸೋಲಿಸಲು ಕಾಂಗ್ರೆಸ್ ಏಕೆ ಶ್ರಮಿಸಿತು ಎಂದು ನಾನು ತುಂಬಾ ಯೋಚಿಸುತ್ತಿದ್ದೆ. ಇಂದು ನನಗೆ ಅದರ ಕಾರಣ ತಿಳಿಯಿತು. ‘ಶೆಹಜಾದಾ’ನ ಅಂಕಲ್‌ ಹಾಗೂ ಫಿಲಾಸಫಿ ಮಾರ್ಗದರ್ಶಕನೊಬ್ಬ ಅಮೆರಿಕದಲ್ಲಿದ್ದಾನೆ. ಆತ ಕ್ರಿಕೆಟ್‌ನ ಮೂರನೇ ಅಂಪೈರ್‌ನಂತೆ. ಈ ‘ಶೆಹಜಾದಾ’ ಮೂರನೇ ಅಂಪೈರ್‌ನಿಂದ ಸಲಹೆ ಪಡೆಯುತ್ತಾನೆ. ಕಪ್ಪು ಚರ್ಮ ಇರುವ ಭಾರತೀಯರು ಆಫ್ರಿಕಾದವರು ಎಂದು ಈ ʼತತ್ವಜ್ಞಾನಿ ಅಂಕಲ್‌ʼ ಹೇಳಿದ್ದಾರೆ. ಇದರರ್ಥ, ನೀವು ದೇಶದ ಹಲವಾರು ಜನರನ್ನು ಅವರ ಚರ್ಮದ ಬಣ್ಣದ ಆಧಾರದ ಮೇಲೆ ನಿಂದಿಸುತ್ತಿದ್ದೀರಿ.. ” ಎಂದು ಪಿತ್ರೋಡಾ ಮೇಲೆ ನರೇಂದ್ರ ಮೋದಿ ಹರಿಹಾಯ್ದರು.

ಪಿತ್ರೋಡಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, “ನಾವು ವಿಭಿನ್ನವಾಗಿ ಕಾಣಿಸಬಹುದು, ಆದರೆ ನಾವೆಲ್ಲರೂ ಒಂದೇ” ಎಂದಿದ್ದಾರೆ. “ಸ್ಯಾಮ್ ಭಾಯ್, ನಾನು ಈಶಾನ್ಯದಿಂದ ಬಂದವನು ಮತ್ತು ನಾನು ಭಾರತೀಯನಂತೆ ಕಾಣುತ್ತೇನೆ. ನಮ್ಮದು ವೈವಿಧ್ಯಮಯ ದೇಶ. ನಾವು ವಿಭಿನ್ನವಾಗಿ ಕಾಣಿಸಬಹುದು ಆದರೆ ನಾವೆಲ್ಲರೂ ಒಂದೇ. ಹಮಾರೆ ದೇಶ್ ಕೆ ಬಾರೆ ಮೇ ಥೋಡಾ ತೊ ಸಮಜ್ ಲೋ! (ನಮ್ಮ ದೇಶದ ಬಗ್ಗೆ ಸ್ವಲ್ಪ ತಿಳುವಳಿಕೆ ಇರಲಿ)” ಎಂದಿದ್ದಾರೆ ಶರ್ಮಾ.

ಹಿಮಾಚಲ ಪ್ರದೇಶದ ಮಂಡಿಯ ಬಿಜೆಪಿ ಲೋಕಸಭೆ ಅಭ್ಯರ್ಥಿ ಕಂಗನಾ ರಣಾವತ್, ಪಿತ್ರೋಡಾ ಮಾತಿಗೆ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ, “ಸ್ಯಾಮ್ ಪಿತ್ರೋಡಾ ಅವರು ರಾಹುಲ್ ಗಾಂಧಿಯವರ ಮಾರ್ಗದರ್ಶಕರು. ಅವರ ಜನಾಂಗೀಯವಾದಿಗಳ ಮಾತುಗಳನ್ನು ಕೇಳಿ. ಇವರು ಭಾರತೀಯರನ್ನು ವಿಭಜಿಸುವವರು. ಅವರ ಸಂಪೂರ್ಣ ಸಿದ್ಧಾಂತವೇ ವಿಭಜಿಸು ಮತ್ತು ಆಳು. ಸಹ ಭಾರತೀಯರನ್ನು ಚೈನೀಸ್, ಆಫ್ರಿಕನ್ ಎಂದು ಕರೆಯುವುದು ಬೇಸರದ ಸಂಗತಿ‌; ಇದು ಕಾಂಗ್ರೆಸ್‌ಗೂ ಅವಮಾನಕಾರಿ!” ಎಂದು ಕಂಗನಾ ಎಕ್ಸ್‌ನಲ್ಲಿ ಬರೆದಿದ್ದಾರೆ.

ಕಾಂಗ್ರೆಸ್ ನಾಯಕ ಪಿತ್ರೋಡಾ ಈ ರೀತಿ ಹೇಳಿಕೆ ನೀಡಿ ರಾಜಕೀಯ ಬಿರುಗಾಳಿ ಎಬ್ಬಿಸುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಅವರು ʼಅಮೆರಿಕದ ಮಾದರಿಯ ಪಿತ್ರಾರ್ಜಿತ ತೆರಿಗೆʼ ಹಾಗೂ ʼಆಸ್ತಿ ಮರುಹಂಚಿಕೆʼ ಉಲ್ಲೇಖ ಮಾಡಿದ್ದರು. ಅಮೆರಿಕದಲ್ಲಿ ಶ್ರೀಮಂತರು ಮರಣ ಹೊಂದಿದಾಗ, ಅವರ ಆಸ್ತಿಯ ಒಂದು ಭಾಗವನ್ನು ಮಾತ್ರ ಅವರ ಮಕ್ಕಳಿಗೆ ವರ್ಗಾಯಿಸಲಾಗುತ್ತದೆ. ಸರ್ಕಾರ ಗಮನಾರ್ಹ ಪಾಲನ್ನು ವಶಪಡಿಸಿಕೊಳ್ಳುತ್ತದೆ. ಭಾರತದಲ್ಲಿ ಈ ರೀತಿಯ ವಿಧಾನ ನ್ಯಾಯಯುತ ಮತ್ತು ಪ್ರಯೋಜನಕಾರಿ ಎಂದಿದ್ದರು. ಕಾಂಗ್ರೆಸ್‌ ಪಕ್ಷ ಈ ಹೇಳಿಕೆಯಿಂದ ಉಂಟಾದ ಕೋಲಾಹಲದಿಂದ ಬೆಚ್ಚಿಬಿದ್ದು, ಪಿತ್ರೋಡಾ ಹೇಳಿಕೆಯಿಂದ ಅಂತರ ಕಾಪಾಡಿಕೊಂಡಿತ್ತು.

ಇದನ್ನೂ ಓದಿ: Sam Pitroda: “ದಕ್ಷಿಣ ಭಾರತೀಯರು ಆಫ್ರಿಕನ್ನರಂತೆ…” ಸ್ಯಾಮ್‌ ಪಿತ್ರೋಡಾ ಮತ್ತೊಂದು ಆತ್ಮಹತ್ಯಾ ಬಾಂಬ್!

Continue Reading

ದೇಶ

Sam Pitroda: “ದಕ್ಷಿಣ ಭಾರತೀಯರು ಆಫ್ರಿಕನ್ನರಂತೆ…” ಸ್ಯಾಮ್‌ ಪಿತ್ರೋಡಾ ಮತ್ತೊಂದು ಆತ್ಮಹತ್ಯಾ ಬಾಂಬ್!

Sam Pitroda: ಕಾಂಗ್ರೆಸ್ ನಾಯಕ ಪಿತ್ರೋಡಾ ಈ ರೀತಿ ಹೇಳಿಕೆ ನೀಡಿ ರಾಜಕೀಯ ಬಿರುಗಾಳಿ ಎಬ್ಬಿಸುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಅವರು ʼಅಮೆರಿಕದ ಮಾದರಿಯ ಪಿತ್ರಾರ್ಜಿತ ತೆರಿಗೆʼ ಹಾಗೂ ʼಆಸ್ತಿ ಮರುಹಂಚಿಕೆʼ ಉಲ್ಲೇಖ ಮಾಡಿದ್ದರು. ಇದು ಕೂಡ ರಾಜಕೀಯ ಬಿರುಗಾಳಿಗೆ ಕಾರಣವಾಗಿತ್ತು.

VISTARANEWS.COM


on

Sam Pitroda
Koo

ಹೊಸದಿಲ್ಲಿ: `ಪಿತ್ರಾರ್ಜಿತ ತೆರಿಗೆʼ (inheritance tax) ವಿಚಾರ ತೆಗೆದು ಪಕ್ಷಕ್ಕೆ ಮುಜುಗರ ಸೃಷ್ಟಿಸಿ ನಂತರ ನಾಲಿಗೆ ಕಚ್ಚಿಕೊಂಡಿದ್ದ ಕಾಂಗ್ರೆಸ್‌ ನಾಯಕ (congress leader) ಸ್ಯಾಮ್‌ ಪಿತ್ರೋಡಾ (Sam Pitroda), ಇನ್ನೊಂದು ಅಂಥದೇ ಎಡವಟ್ಟು ಮಾಡಿಕೊಂಡಿದ್ದಾರೆ. ಇದೀಗ ಅವರು ಭಾರತೀಯರನ್ನು ಅವರ ಹೊರನೋಟದಿಂದ ವಿಂಗಡಿಸಿ, ಜನತೆಯ ಸಿಟ್ಟಿಗೆ ಕಾರಣರಾಗಿದ್ದಾರೆ.

ವೈವಿಧ್ಯತೆಯ ಬಗ್ಗೆ ಮಾತನಾಡುವಾಗ ರಾಷ್ಟ್ರದ ವಿವಿಧ ಭಾಗಗಳ ಜನತೆಯನ್ನು ಚೀನಿಯರು, ಅರಬ್ಬರು, ಬಿಳಿಯರು ಮತ್ತು ಆಫ್ರಿಕನ್ನರಿಗೆ ಹೋಲಿಸಿ ಅವರು ವಿವಾದ ಹುಟ್ಟುಹಾಕಿದರು. “ನಾವು ಜಗತ್ತಿನಲ್ಲಿ ಪ್ರಜಾಪ್ರಭುತ್ವದ ಉಜ್ವಲ ಉದಾಹರಣೆಯಾಗಿದ್ದೇವೆ. ನಾವು ವೈವಿಧ್ಯತೆಯನ್ನು ಒಟ್ಟಿಗೆ ಹಿಡಿದಿಟ್ಟುಕೊಂಡಿರುವ ದೇಶವಾಗಿದ್ದೇವೆ. ಇಲ್ಲಿ ಪೂರ್ವದಲ್ಲಿರುವ ಜನರು ಚೀನಿಯರಂತೆ ಕಾಣುತ್ತಾರೆ. ಪಶ್ಚಿಮದಲ್ಲಿ ಜನರು ಹಾಗೆ ಅರಬ್ಬರಂತೆ, ಉತ್ತರದ ಜನರು ಬಹುಶಃ ಶ್ವೇತವರ್ಣೀಯರಂತೆ ಹಾಗೂ ದಕ್ಷಿಣದ ಜನರು ದಕ್ಷಿಣ ಆಫ್ರಿಕಾದವರಂತೆ ಕಾಣುತ್ತಾರೆ. ಪರವಾಗಿಲ್ಲ, ನಾವೆಲ್ಲರೂ ಸಹೋದರರು ಮತ್ತು ಸಹೋದರಿಯರು” ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್ ವಿಭಾಗದ ಅಧ್ಯಕ್ಷ ಪಿತ್ರೋಡಾ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Assam CM Himanta Biswa Sharma) , “ನಾವು ವಿಭಿನ್ನವಾಗಿ ಕಾಣಿಸಬಹುದು, ಆದರೆ ನಾವೆಲ್ಲರೂ ಒಂದೇ” ಎಂದಿದ್ದಾರೆ. “ಸ್ಯಾಮ್ ಭಾಯ್, ನಾನು ಈಶಾನ್ಯದಿಂದ ಬಂದವನು ಮತ್ತು ನಾನು ಭಾರತೀಯನಂತೆ ಕಾಣುತ್ತೇನೆ. ನಮ್ಮದು ವೈವಿಧ್ಯಮಯ ದೇಶ. ನಾವು ವಿಭಿನ್ನವಾಗಿ ಕಾಣಿಸಬಹುದು ಆದರೆ ನಾವೆಲ್ಲರೂ ಒಂದೇ. ಹಮಾರೆ ದೇಶ್ ಕೆ ಬಾರೆ ಮೇ ಥೋಡಾ ತೊ ಸಮಜ್ ಲೋ! (ನಮ್ಮ ದೇಶದ ಬಗ್ಗೆ ಸ್ವಲ್ಪ ತಿಳುವಳಿಕೆ ಇರಲಿ)” ಎಂದಿದ್ದಾರೆ ಶರ್ಮಾ.

ಹಿಮಾಚಲ ಪ್ರದೇಶದ ಮಂಡಿಯ ಬಿಜೆಪಿ ಲೋಕಸಭೆ ಅಭ್ಯರ್ಥಿ ಕಂಗನಾ ರಣಾವತ್ (Kangana Ranaut) , ಪಿತ್ರೋಡಾ ಮಾತಿಗೆ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ, “ಸ್ಯಾಮ್ ಪಿತ್ರೋಡಾ ಅವರು ರಾಹುಲ್ ಗಾಂಧಿ (Rahul Gandhi) ಅವರ ಮಾರ್ಗದರ್ಶಕರು. ಅವರ ಜನಾಂಗೀಯವಾದಿಗಳ ಮಾತುಗಳನ್ನು ಕೇಳಿ. ಇವರು ಭಾರತೀಯರನ್ನು ವಿಭಜಿಸುವವರು. ಅವರ ಸಂಪೂರ್ಣ ಸಿದ್ಧಾಂತವೇ ವಿಭಜಿಸು ಮತ್ತು ಆಳು. ಸಹ ಭಾರತೀಯರನ್ನು ಚೈನೀಸ್, ಆಫ್ರಿಕನ್ ಎಂದು ಕರೆಯುವುದು ಬೇಸರದ ಸಂಗತಿ‌; ಇದು ಕಾಂಗ್ರೆಸ್‌ಗೂ ಅವಮಾನಕಾರಿ!” ಎಂದು ಕಂಗನಾ ಎಕ್ಸ್‌ನಲ್ಲಿ ಬರೆದಿದ್ದಾರೆ.

ಕಾಂಗ್ರೆಸ್ ನಾಯಕ ಪಿತ್ರೋಡಾ ಈ ರೀತಿ ಹೇಳಿಕೆ ನೀಡಿ ರಾಜಕೀಯ ಬಿರುಗಾಳಿ ಎಬ್ಬಿಸುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಅವರು ʼಅಮೆರಿಕದ ಮಾದರಿಯ ಪಿತ್ರಾರ್ಜಿತ ತೆರಿಗೆʼ ಹಾಗೂ ʼಆಸ್ತಿ ಮರುಹಂಚಿಕೆʼ ಉಲ್ಲೇಖ ಮಾಡಿದ್ದರು. ಅಮೆರಿಕದಲ್ಲಿ ಶ್ರೀಮಂತರು ಮರಣ ಹೊಂದಿದಾಗ, ಅವರ ಆಸ್ತಿಯ ಒಂದು ಭಾಗವನ್ನು ಮಾತ್ರ ಅವರ ಮಕ್ಕಳಿಗೆ ವರ್ಗಾಯಿಸಲಾಗುತ್ತದೆ. ಸರ್ಕಾರ ಗಮನಾರ್ಹ ಪಾಲನ್ನು ವಶಪಡಿಸಿಕೊಳ್ಳುತ್ತದೆ. ಭಾರತದಲ್ಲಿ ಈ ರೀತಿಯ ವಿಧಾನ ನ್ಯಾಯಯುತ ಮತ್ತು ಪ್ರಯೋಜನಕಾರಿ ಎಂದಿದ್ದರು.

ಈ ಹೇಳಿಕೆ ಹಾಗೂ ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿರುವ “ಸಾಮಾಜಿಕ- ಆರ್ಥಿಕ ಸಮೀಕ್ಷೆ”ಯನ್ನು ಜೊತೆ ಸೇರಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಟೀಕೆಗೊಡ್ಡಿದ್ದರು. “ಕಾಂಗ್ರೆಸ್‌ ಹಿಂದೂಗಳ ಆಸ್ತಿಯನ್ನು ಮುಸ್ಲಿಮರಿಗೆ ಮರುಹಂಚಿಕೆ ಮಾಡಲಿದೆ” ಎಂದಿದ್ದರು. ಇದು ಕೋಲಾಹಲವನ್ನೇ ಸೃಷ್ಟಿಸಿತ್ತು. ಕಾಂಗ್ರೆಸ್‌ ಪಕ್ಷ ಈ ಹೇಳಿಕೆಯಿಂದ ಉಂಟಾದ ಕೋಲಾಹಲದಿಂದ ಬೆಚ್ಚಿಬಿದ್ದು, ಪಿತ್ರೋಡಾ ಹೇಳಿಕೆಯಿಂದ ಅಂತರ ಕಾಪಾಡಿಕೊಂಡಿತ್ತು. “ಪ್ರಧಾನಿ ನರೇಂದ್ರ ಮೋದಿಯವರು ದುರುದ್ದೇಶಪೂರ್ವಕ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆ” ಎಂದು ಆರೋಪಿಸಿತ್ತು.

ಪಿತ್ರೋಡಾ ಅವರು ನಂತರ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದರು. “ಟಿವಿಯಲ್ಲಿ ನಡೆದ ಸಂದರ್ಶನವೊಂದರಲ್ಲಿ, ಅಮೆರಿಕದ ಪಿತ್ರಾರ್ಜಿತ ತೆರಿಗೆಯನ್ನು ಉದಾಹರಣೆಯಾಗಿ ಮಾತ್ರ ಉಲ್ಲೇಖಿಸಲಾಗಿದೆ. ತನ್ನ ಕಾಮೆಂಟ್‌ಗಳಿಗೂ ಪಕ್ಷದ ನೀತಿಗಳಿಗೂ ಯಾವುದೇ ಸಂಬಂಧವಿಲ್ಲ” ಎಂದು ಅವರು ಒತ್ತಿ ಹೇಳಿದ್ದರು.

ಇದನ್ನೂ ಓದಿ: Lok Sabha Election 2024: ಕಾಂಗ್ರೆಸ್‌ಗೆ ಅಧಿಕಾರ ಸಿಕ್ಕರೆ ಪಿತ್ರಾರ್ಜಿತ ಆಸ್ತಿಯಲ್ಲಿ ಸರ್ಕಾರಕ್ಕೆ ಪಾಲು; ‘ಕೈ’ಗೆ ಇಕ್ಕಟ್ಟು, ಬಿಜೆಪಿಗೆ ಅಸ್ತ್ರ

Continue Reading

Latest

World Red Cross Day: ದಾನ ಮತ್ತು ಸೇವೆಯಿಂದ ಸಂತೋಷ; ಇದು ರೆಡ್ ಕ್ರಾಸ್ ದಿನದ ಸಂದೇಶ

ಇಂದು ವಿಶ್ವದಾದ್ಯಂತ ವಿಶ್ವ ರೆಡ್ ಕ್ರಾಸ್ ದಿನವನ್ನು (World Red Cross Day) ಆಚರಿಸಲಾಗುತ್ತಿದೆ. ಇದರ ಮುಖ್ಯ ಉದ್ದೇಶ ತುರ್ತು ಮತ್ತು ಸಂಘರ್ಷದ ಸಮಯದಲ್ಲಿ ಅಗತ್ಯವಿರುವವರಿಗೆ ಸಹಾಯ ಹಸ್ತ ಚಾಚುವುದಾಗಿದೆ. ಈ ದಿನದ ವಿಶೇಷ ಏನು? ಈ ದಿನದ ಸಂದೇಶ ಏನು? ಈ ಕುರಿತ ವಿಶೇಷ ಲೇಖನ ಇಲ್ಲಿದೆ.

VISTARANEWS.COM


on

By

World Red Cross Day
Koo

ರೆಡ್ ಕ್ರೆಸೆಂಟ್ ಡೇ ಅಥವಾ ವಿಶ್ವ ರೆಡ್ ಕ್ರಾಸ್ ದಿನವನ್ನು (World Red Cross Day) ವಿಶ್ವದಾದ್ಯಂತ ಮೇ 8ರಂದು ಆಚರಿಸಲಾಗುತ್ತದೆ. ಸ್ವಿಸ್ ಉದ್ಯಮಿ ಮತ್ತು ವಿಶ್ವದ ಅತಿದೊಡ್ಡ ಮಾನವೀಯ ನೆರವು ಸಂಸ್ಥೆಯಾದ ರೆಡ್ ಕ್ರಾಸ್ ನ ಸಂಸ್ಥಾಪಕ ಹೆನ್ರಿ ಡ್ಯುನಾಂಟ್ (Henry Dunant) ಅವರ ಜನ್ಮ ದಿನದ ಅಂಗವಾಗಿ ಆಚರಿಸಲಾಗುತ್ತದೆ. 1901ರಲ್ಲಿ ಮೊದಲ ನೊಬೆಲ್ ಶಾಂತಿ ಪ್ರಶಸ್ತಿಯನ್ನು (Nobel Peace Prize) ಪಡೆದ ಅವರು, ರೆಡ್‌ಕ್ರಾಸ್‌ನ ಅಂತಾರಾಷ್ಟ್ರೀಯ ಸಮಿತಿಯ ಸ್ಥಾಪಕರಾಗಿದ್ದಾರೆ.

ತುರ್ತು ಮತ್ತು ಸಂಘರ್ಷದ ಸಮಯದಲ್ಲಿ ಅಗತ್ಯವಿರುವವರಿಗೆ ಬೆಂಬಲ ನೀಡುವ ಸಲುವಾಗಿ ರೆಡ್ ಕ್ರಾಸ್ ಅನ್ನು ಸ್ಥಾಪಿಸಲಾಗಿದೆ. ವಿಶ್ವ ರೆಡ್ ಕ್ರಾಸ್ ದಿನದಂದು ಸ್ವಯಂ ಸೇವಕರು 192 ದೇಶಗಳಲ್ಲಿ ರಾಷ್ಟ್ರೀಯ ಅಧ್ಯಾಯಗಳನ್ನು ಹೊಂದಿರುವ 161 ವರ್ಷ ಹಳೆಯ ಅಂತಾರಾಷ್ಟ್ರೀಯ ನೆರವು ಸಂಸ್ಥೆಯ ಧ್ಯೇಯ ಮತ್ತು ತತ್ತ್ವಗಳನ್ನು ಪ್ರಚಾರ ಮಾಡುತ್ತಾರೆ.

ವಿಶ್ವ ರೆಡ್ ಕ್ರಾಸ್ ದಿನದ ಇತಿಹಾಸ ಏನು?

ಇಟಲಿಯಲ್ಲಿನ ಸೋಲ್ಫೆರಿನೊ ಕದನದ ವೇಳೆ ಗಾಯಗೊಂಡ ಸೈನಿಕರು ಮತ್ತು ನಾಗರಿಕರಿಗೆ ಚಿಕಿತ್ಸೆ ನೀಡಲು ಕೊರತೆ ಉಂಟಾದ ಪರಿಣಾಮ ತೀವ್ರವಾಗಿ ಮನನೊಂದ ಸ್ವಿಸ್ ಉದ್ಯಮಿ ಹೆನ್ರಿ ಡ್ಯೂನಾಂಟ್ ಅವರು ಕೆಲವು ವರ್ಷಗಳ ಅನಂತರ 1863 ರಲ್ಲಿ ಡ್ಯುನಾಂಟ್ ಸ್ವಯಂಸೇವಕ-ಬೆಂಬಲಿತ ಪರಿಹಾರ ಸಂಘಗಳನ್ನು ಸಂಘಟಿಸಿದರು. ಅದು ಯುದ್ಧಕಾಲ ಅಥವಾ ಸಂಘರ್ಷದ ಸಮಯದಲ್ಲಿ ಗಾಯಗೊಂಡವರಿಗೆ ಪಕ್ಷಾತೀತ ಸಹಾಯವನ್ನು ಒದಗಿಸಲು ಬದ್ಧವಾಗಿದೆ.

ಅದೇ ವರ್ಷ ಡ್ಯೂನಾಂಟ್ ಮತ್ತು ಐದು ಸಹೋದ್ಯೋಗಿಗಳು ಗಾಯಗೊಂಡವರಿಗೆ ಪರಿಹಾರಕ್ಕಾಗಿ ಅಂತಾರಾಷ್ಟ್ರೀಯ ಸಮಿತಿಯನ್ನು ಸ್ಥಾಪಿಸಿದರು. ಇದು ರೆಡ್ ಕ್ರಾಸ್‌ನ ಅಂತಾರಾಷ್ಟ್ರೀಯ ಸಮಿತಿಯಾಗಿ ವಿಕಸನಗೊಂಡಿತು.

ಸ್ವಿಸ್ ರಾಷ್ಟ್ರೀಯ ಧ್ವಜದಿಂದ ಪ್ರೇರಿತವಾದ ಲಾಂಛನ ಪಡೆದ ಸಂಸ್ಥೆಯು ಶೀಘ್ರದಲ್ಲೇ ರೆಡ್ ಕ್ರಾಸ್ ಎಂದು ಜನಪ್ರಿಯವಾಯಿತು. ಮೊದಲನೇ ಮಹಾಯುದ್ಧ ಮತ್ತು ಎರಡನೇ ಮಹಾಯುದ್ಧದಲ್ಲಿ ಗಾಯಗೊಂಡ ನಾಗರಿಕರು ಮತ್ತು ಯುದ್ಧ ಕೈದಿಗಳಿಗೆ ಸಹಾಯ ಮಾಡುವಲ್ಲಿ ರೆಡ್ ಕ್ರಾಸ್ ಪ್ರಮುಖ ಪಾತ್ರ ವಹಿಸಿತು. ಇಂದು ಇದು ಪ್ರಪಂಚದಾದ್ಯಂತ ಅನೇಕ ಸ್ಥಳೀಯ ಮತ್ತು ರಾಷ್ಟ್ರೀಯ ಸಂಘಟನೆಗಳನ್ನು ಒಳಗೊಂಡಿದೆ.


ಪ್ರಾಮುಖ್ಯತೆ

ಮಾನವ ಹಕ್ಕುಗಳ ಸಂರಕ್ಷಣೆಗೆ ರೆಡ್‌ಕ್ರಾಸ್‌ನ ಪ್ರಾಮುಖ್ಯತೆ ಅಗಾಧವಾಗಿದೆ. ಲಾಭರಹಿತ ಸಂಸ್ಥೆಯ ಮುಖ್ಯ ಧ್ಯೇಯ “ಪರ್ ಹ್ಯುಮಾನಿಟೇಟಮ್ ಆಡ್ ಪೇಸೆಮ್” ಅಂದರೆ “ಮಾನವೀಯತೆಯೊಂದಿಗೆ, ಶಾಂತಿಯ ಕಡೆಗೆ” ಎಂಬುದಾಗಿದೆ. ಇದು ವಿಶ್ವ ಶಾಂತಿಯ ಸಂದೇಶವನ್ನು ಪ್ರತಿಪಾದಿಸುತ್ತದೆ. ಸಂಘಟನೆಯು ಸಂಘರ್ಷ ವಲಯಗಳು ಅಥವಾ ನೈಸರ್ಗಿಕ ವಿಕೋಪಗಳ ಸ್ಥಳಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತದೆ.

196 ದೇಶಗಳಲ್ಲಿ ಸಕ್ರಿಯ

ಯುದ್ಧದ ಸಮಯದಲ್ಲಿ ಸೈನಿಕರು ಮತ್ತು ನಾಗರಿಕರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದರ ಕುರಿತು ನಾಲ್ಕು ಅಂಶಗಳ ಒಪ್ಪಂದವಾದ ಜಿನೀವಾ ಒಪ್ಪಂದಗಳನ್ನು ಕ್ರೋಡೀಕರಿಸಿದ ಕೀರ್ತಿ ವಿಶ್ವ ಸಂಸ್ಥೆಗೆ ಸಲ್ಲುತ್ತದೆ. ಪ್ರಪಂಚದ ಎಲ್ಲಾ 196 ದೇಶಗಳು ನಾಲ್ಕು ಜಿನೀವಾ ಒಪ್ಪಂದಗಳನ್ನು ಅಂಗೀಕರಿಸಿವೆ.

ಇದನ್ನೂ ಓದಿ: Flights cancelled: 300 ಸಿಬ್ಬಂದಿ ಸಾಮೂಹಿಕ ರಜೆ; 86 ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಗಳು ಕ್ಯಾನ್ಸಲ್‌

ಜಿನೀವಾ ಒಪ್ಪಂದದ ಪ್ರಕಾರ ಎಲ್ಲಾ ನಾಗರಿಕರು ಮತ್ತು ಆಕ್ರಮಿತ ಪ್ರದೇಶದಲ್ಲಿರುವವರನ್ನು ರಕ್ಷಿಸಬೇಕು. ಯುದ್ಧ ಕೈದಿಗಳನ್ನು ಮಾನವೀಯತೆಯಿಂದ ನಡೆಸಿಕೊಳ್ಳಬೇಕು, ಸಂಘರ್ಷದ ಸಮಯದಲ್ಲಿ ಅನಾರೋಗ್ಯ, ಗಾಯಗೊಂಡ, ವೈದ್ಯಕೀಯ ಮತ್ತು ಧಾರ್ಮಿಕ ಸಿಬ್ಬಂದಿ ಮೇಲೆ ದಾಳಿ ಮಾಡಬಾರದು, ಸಮುದ್ರದಲ್ಲಿ ಯುದ್ಧದ ಸಮಯದಲ್ಲಿ ಗಾಯಗೊಂಡವರು, ರೋಗಿಗಳು ಮತ್ತು ಹಡಗು ನಾಶವಾದವರು ರಕ್ಷಿಸಬೇಕು.

ವಿಶ್ವ ರೆಡ್ ಕ್ರಾಸ್ ದಿನದ ಥೀಮ್ ಏನು?

2024ರ ವಿಶ್ವ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ದಿನದ ಥೀಮ್ “ನಾನು ಸಂತೋಷದಿಂದ ನೀಡುತ್ತೇನೆ ಮತ್ತು ನಾನು ನೀಡುವ ಸಂತೋಷವು ಬಹುಮಾನವಾಗಿದೆ”. ಇದು ದಾನ ಮತ್ತು ಸೇವೆಯ ಸಂತೋಷವನ್ನು ಪ್ರೋತ್ಸಾಹಿಸುತ್ತದೆ.

Continue Reading
Advertisement
Ram Mandir
ದೇಶ5 mins ago

Ram Mandir: ರಾಮಮಂದಿರ ‘ಯೂಸ್‌ಲೆಸ್’ ಎಂದ ಸಮಾಜವಾದಿ ಪಕ್ಷದ ನಾಯಕ; ಬಿಜೆಪಿ ಆಕ್ರೋಶ

IPL 2024
ಕ್ರೀಡೆ30 mins ago

IPL 2024: ಅಂಪೈರ್​ ಜತೆ ವಾಗ್ವಾದ; ಸಂಜುಗೆ ಬಿತ್ತು ಭಾರೀ ದಂಡ

gold rate today tapasi
ಚಿನ್ನದ ದರ51 mins ago

Gold Rate today: ಇದು ಚಿನ್ನದಂಥಾ ವಿಷಯ! ಬಂಗಾರದ ಬೆಲೆ ತುಸು ಇಳಿಕೆ; ಎಷ್ಟಿದೆ ಇಂದು?

IPL 2024 Points Table
ಕ್ರಿಕೆಟ್1 hour ago

IPL 2024 Points Table: ಡೆಲ್ಲಿಗೆ ಗೆಲುವು ಅಂಕಪಟ್ಟಿಯಲ್ಲಿ ಕುಸಿತ ಕಂಡ ಲಕ್ನೋ

sam pitroda pm narendra modi
ಪ್ರಮುಖ ಸುದ್ದಿ1 hour ago

PM Narendra Modi: “ಚರ್ಮದ ಬಣ್ಣದ ಮೇಲಿನ ಈ ಅವಮಾನವನ್ನು ಸಹಿಸುವುದಿಲ್ಲ…” ಪಿತ್ರೋಡಾಗೆ ಮೋದಿ ತಪರಾಕಿ

ವೈರಲ್ ನ್ಯೂಸ್2 hours ago

Viral Video: ಅಬ್ಬಾ.. ಎಂಥಾ ಭೀಕರ ದೃಶ್ಯ! ಕರೆಂಟ್‌ ಶಾಕ್‌ ಹೊಡೆದು ವ್ಯಕ್ತಿ ಒದ್ದಾಡಿ ಸಾವು

Double Murder Fakirappa stabs brothers to death for falling behind daughter
ಕ್ರೈಂ2 hours ago

Double Murder: ಮಗಳ ಹಿಂದೆ ಬಿದ್ದಿದ್ದಕ್ಕೆ ಸಹೋದರರನ್ನೇ ಚಾಕುವಿನಿಂದ ಇರಿದು ಕೊಂದ ಫಕೀರಪ್ಪ!

SSLC Exam Result 2024 to be declared tomorrow Here are the details
ಶಿಕ್ಷಣ2 hours ago

SSLC Exam Result 2024: ನಾಳೆ ಎಸ್‌ಎಸ್‌ಎಲ್‌ಸಿ ರಿಸಲ್ಟ್‌ ಪ್ರಕಟ; ಎಷ್ಟು ಗಂಟೆಗೆ? ಎಲ್ಲಿ ನೋಡಬಹುದು? ಇಲ್ಲಿದೆ ಡಿಟೇಲ್ಸ್‌

Srinidhi Shetty Attends Daiva Kola Festivities in Mangalore
ಸ್ಯಾಂಡಲ್ ವುಡ್2 hours ago

Srinidhi Shetty: ಕೋಲ ಸೇವೆ ಸಲ್ಲಿಸಿದ ಕೆಜಿಎಫ್‌ ಬೆಡಗಿ; ಶ್ರೀನಿಧಿ ಶೆಟ್ಟಿಗೆ ದೈವ ಅಭಯ ನೀಡಿದ್ದೇನು?

Pepper spray
ಕರ್ನಾಟಕ2 hours ago

Pepper Spray: ಪೆಪ್ಪರ್‌ ಸ್ಪ್ರೇ ಬಹಳ ಡೇಂಜರ್‌..ಅದನ್ನು ರಕ್ಷಣೆಗೆ ಬಳಸುವಂತಿಲ್ಲ- ಹೈಕೋರ್ಟ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ11 hours ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ19 hours ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ22 hours ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ23 hours ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ2 days ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ2 days ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ2 days ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ3 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ3 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಟ್ರೆಂಡಿಂಗ್‌