ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬಹುತೇಕ ಸಂದರ್ಭದಲ್ಲಿ ಗಂಭೀರವಾಗಿರುತ್ತಾರೆ. ಚುನಾವಣೆ ಭಾಷಣಗಳು, ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸುವಾಗಂತಲೂ ತೀಕ್ಷ್ಣವಾಗಿ ಮಾತನಾಡುತ್ತಾರೆ. ಟೀಕೆ, ಆರೋಪ, ಆಕ್ರೋಶ ಹೊರಹಾಕುತ್ತಾರೆ. ಹಾಗೆಯೇ, ಪ್ರತಿಪಕ್ಷಗಳನ್ನು ಅವರು ವ್ಯಂಗ್ಯ ಮಾಡುತ್ತಾರೆ. ಹಾಸ್ಯ ಚಟಾಕಿ ಮೂಲಕವೂ ಟಾಂಗ್ ಕೊಡುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ಚುನಾವಣೆಯಲ್ಲಿ (Lok Sabha Election 2024) ಬಿಜೆಪಿ ನೇತೃತ್ವದ ಎನ್‌ಡಿಎ 400 ಸೀಟು ಗೆಲ್ಲುತ್ತದೆ ಎಂಬುದನ್ನು ಪದೇಪದೆ ಹೇಳಿ ಪ್ರತಿಪಕ್ಷಗಳು ಕೂಡ ತಮ್ಮ ಪರವಾಗಿ ಪ್ರಚಾರಕ್ಕೆ ಹೇಗೆ ಬಳಸಿಕೊಂಡರು ಎಂಬುದನ್ನು ಖುದ್ದು ನರೇಂದ್ರ ಮೋದಿ ಅವರೇ ಹೇಳಿದ್ದಾರೆ.
ಇಂಡಿಯಾ ಟಿವಿ ಚಾನೆಲ್‌ಗೆ ಸಂದರ್ಶನ ನೀಡುವ ವೇಳೆ ಚಾರ್ ಸೌ ಪಾರ್ ಅಭಿಯಾನದ ಕುರಿತು ತಮಾಷೆಯಾಗಿ ಮಾತನಾಡಿದ್ದಾರೆ. “ನಾವು 400ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದೆವು. ಆದರೆ, ಪ್ರತಿಪಕ್ಷಗಳು ಪದೇಪದೆ ಹೇಳಿದವು. ಎನ್‌ಡಿಎ 400 ಸೀಟು ಗೆಲ್ಲುವುದೇ ಇಲ್ಲ ಎಂದು ಹೇಳಿದವು. ಆದರೆ, ಕೊನೆಗೆ ಏನಾಯಿತು? ಪ್ರತಿಪಕ್ಷಗಳೇ 400 ಸೀಟು ಗೆಲ್ಲಲ್ಲ ಗೆಲ್ಲಲ್ಲ ಎಂದು ಅಭಿಯಾನ ಮಾಡಿದವು. ನಾನು ಅವರನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೇನೆ ಎಂಬುದು ಪ್ರತಿಪಕ್ಷಗಳ ನಾಯಕರಿಗೆ ಗೊತ್ತೇ ಆಗಲಿಲ್ಲ. 3 ಹಂತಗಳ ಮತದಾನ ಮುಗಿದ ಬಳಿಕ, ನೀವೇಕೆ 400 ಸೀಟು ಗೆಲ್ಲುತ್ತಾರೋ, ಇಲ್ಲವೋ ಎಂಬುದರ ಕುರಿತು ಚುನಾವಣೆ ಪ್ರಚಾರ ಮಾಡುತ್ತಿದ್ದೀರಿ ಎಂಬುದಾಗಿ ಬೇರೆ ಯಾರೋ ಪಕ್ಷಗಳಿಗೆ ಹೇಳಿದರು” ಎಂದು ನಗುತ್ತಲೇ ಪ್ರತಿಪಕ್ಷಗಳನ್ನು ಯಾಮಾರಿಸಿದ ರೀತಿಯನ್ನು ಮೋದಿ ವಿವರಿಸಿದರು.
400 Paar is a great strategy by Modiji. This is pure mind games 😂🔥 pic.twitter.com/HvW4PAT6kU
— BALA (@erbmjha) May 23, 2024
ಪಾಕ್‌ನಲ್ಲಿ ಉಗ್ರರ ಹತ್ಯೆ ಹಿಂದೆ ಇರೋದು ಯಾರು?
ಪಾಕಿಸ್ತಾನದಲ್ಲಿ ಅಪರಿಚಿತರ ಗುಂಡಿನ ದಾಳಿಗೆ ಉಗ್ರರು ಬಲಿಯಾಗುತ್ತಿರುವುದರ ಹಿಂದೆ ಭಾರತದ ಕೈವಾಡ ಇದೆ ಎಂಬುದಾಗಿ ಸಂದರ್ಶಕ ಕೇಳಿದ ಪ್ರಶ್ನೆಗೆ ನರೇಂದ್ರ ಮೋದಿ ಉತ್ತರಿಸಿದರು. “ಪಾಕಿಸ್ತಾನದವರು ಇದರ ಕುರಿತು ಚಿಂತೆ ಮಾಡುತ್ತಾರೆ. ಆದರೆ, ಪಾಕಿಸ್ತಾನದಲ್ಲಿ ಉಗ್ರರು ಹತ್ಯೆಗೀಡಾದರೆ, ಭಾರತದಲ್ಲಿರುವ ಕೆಲವರ ಕಣ್ಣಿನಲ್ಲಿ ನೀರು ಏಕೆ ಬರುತ್ತದೆ ಎಂಬುದೇ ನನಗೆ ಗೊತ್ತಾಗುತ್ತಿಲ್ಲ” ಎಂದಷ್ಟೇ ಹೇಳಿದರು. ಸಂದರ್ಶನದ ವೇಳೆ ರಾಹುಲ್ ಗಾಂಧಿ, ಪ್ರತಿಪಕ್ಷಗಳು, ಅಭಿವೃದ್ಧಿ, ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧ ಸೇರಿ ಹಲವು ವಿಷಯಗಳ ಕುರಿತು ಮೋದಿ ಮಾತನಾಡಿದರು.
ಮಣಿಶಂಕರ್ ಅಯ್ಯರ್ ‘ಅಣುಬಾಂಬ್’ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿರು. “ನಾನೇ ಪಾಕಿಸ್ತಾನಕ್ಕೆ (Pakistan) ಹೋಗಿ, ಆ ದೇಶದ ಶಕ್ತಿ ಎಷ್ಟಿದೆ ಎಂಬುದನ್ನು ನೋಡಿಕೊಂಡು ಬಂದಿದ್ದೇನೆ” ಎಂದು ಹೇಳುವ ಮೂಲಕ ತಿರುಗೇಟು ನೀಡಿದರು. “ನಾನೇ ಲಾಹೋರ್‌ಗೆ ತೆರಳಿ ಆ ಪಾಕಿಸ್ತಾನದ ಶಕ್ತಿ ಎಷ್ಟಿದೆ ಎಂಬುದನ್ನು ನೋಡಿಕೊಂಡು ಬಂದಿದ್ದೇನೆ. ನನ್ನನ್ನು ನೋಡಿ, ಪಾಕಿಸ್ತಾನದ ಒಬ್ಬ ಪತ್ರಕರ್ತ ಆಶ್ಚರ್ಯದಿಂದ ಕೇಳಿದ. ‘ವೀಸಾ ಇಲ್ಲದೆ ನೀವೇಗೆ ಇಲ್ಲಿಗೆ ಬಂದಿದ್ದೀರಿ’ ಎಂದ. ಅದಕ್ಕೆ ನಾನು, ‘ಪಾಕಿಸ್ತಾನ ಒಂದು ಕಾಲಕ್ಕೆ ನಮ್ಮದೇ ದೇಶದ ಭಾಗವಾಗಿತ್ತು’ ಎಂಬುದಾಗಿ ಉತ್ತರಿಸಿದೆ” ಎಂಬುದಾಗಿ ನರೇಂದ್ರ ಮೋದಿ ಹೇಳಿದ್ದಾರೆ. ಆ ಮೂಲಕ ಮಣಿಶಂಕರ್ ಅಯ್ಯರ್ ಹೇಳಿಕೆಗೆ ವ್ಯಂಗ್ಯವಾಗಿಯೇ ಉತ್ತರ ಕೊಟ್ಟರು.
ಇದನ್ನೂ ಓದಿ: Narendra Modi: ಪಾಕ್ ʼಬಂಡವಾಳʼ ಏನೆಂದು ಅಲ್ಲಿಗೇ ಹೋಗಿ ನೋಡಿ ಬಂದಿರುವೆ; ಕಾಂಗ್ರೆಸ್ ‘ಬಾಂಬ್’ ಹೇಳಿಕೆಗೆ ಮೋದಿ ಟಾಂಗ್!