ನಾಗ್ಪುರ, ಮಹಾರಾಷ್ಟ್ರ: ನೀವು ನಿಮ್ಮ ಮಕ್ಕಳಿಗೆ ಆಟ ಆಡಲು ಚೀನಿ ಆಟಿಕೆಗಳನ್ನು (China Toys) ಕೊಡುತ್ತಿದ್ದೀರಾ? ಹಾಗಿದ್ದರೆ ಈ ಸುದ್ದಿ ಓದಿ. ಚೀನಿ ಆಟಿಕೆಯ ಬ್ಯಾಟರಿಯೊಂದು (Chinese battery) ಮಗುವಿನ ಬಾಯಲ್ಲಿ ಸ್ಫೋಟಗೊಂಡ (explode) ಘಟನೆ ಮಹಾರಾಷ್ಟ್ರದ (Maharashtra) ನಾಗ್ಪುರದಲ್ಲಿ (Nagpur) ನಡೆದಿದೆ. ಮಗು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿನ ತಂದೆ ಕೂಲಿ ಕಾರ್ಮಿಕನಾಗಿದ್ದು, ಅಜ್ಜ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ತಂತಿಯಿಂದ ಜೋಡಿಸಲಾದ ಸಣ್ಣ ಮೋಟಾರ್ ಅನ್ನು ಪೇಪರ್ ಫ್ಯಾನ್ ಇಟ್ಟುಕೊಂಡು ಚಿಕ್ಕ ಬಾಲಕ ಆಟ ಆಡುತ್ತಿದ್ದ. ಇದೇ ವೇಳೆ ಆತ ಬ್ಯಾಟರಿಯನ್ನು ಬಾಯಿಗೆ ಹಾಕಿಕೊಂಡು ಆ ತಂತಿಗೆ ಜೋಡಿಸಿದ್ದಾನೆ. ಆಗ ಫ್ಯಾನ್ ತಿರುಗಲು ಆರಂಭಿಸಿದೆ. ಇದಾದ ಕೆಲವೇ ಕ್ಷಣದಲ್ಲಿ ಬ್ಯಾಟರಿ ಓವರ್ ಹೀಟ್ ಆಗಿ ಬಾಯಿಯೊಳಗೇ ಸ್ಫೋಟವಾಗಿದೆ. ಬಾಲಕನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚೀನಿ ಆಟಿಕೆಗಳು ಮತ್ತು ವಸ್ತುಗಳು ಸೃಷ್ಟಿಸುತ್ತಿರುವ ಅವಘಟ ಇದೇ ಮೊದಲಲ್ಲ. ಈ ಹಿಂದೆ ಚೀನಿ ಮೊಬೈಲ್ ಸ್ಫೋಟಗೊಂಡ 16 ವರ್ಷದ ಬಾಲಕ ಹಾಗೂ ಆತನ 11 ವರ್ಷದ ಸಹೋದರಿ ಗಾಯಗೊಂಡಿದ್ದರು. ಕುಟುಂಬಸ್ಥರ ಪ್ರಕಾರ, ಆನ್‌ಲೈನ್‌ನಲ್ಲಿ ಪಾಠ ಕೇಳುತ್ತಿದ್ದಾಗ ಸ್ಫೋಟ ಸಂಭವಿಸಿದೆ ಎಂದು ಕುಟುಂಬ ಸದಸ್ಯರು ಹೇಳಿಕೆ ನೀಡಿದ್ದರು.
ಈ ಸುದ್ದಿಯನ್ನೂ ಓದಿ: Viral News: ಹೆತ್ತ ಮಕ್ಕಳನ್ನೇ ಕೊಂದು ವರ್ಷಗಟ್ಟಲೆ ಫ್ರಿಜ್‌ನಲ್ಲಿ ಇಟ್ಟ ಮಹಾತಾಯಿ!
ವಿಶೇಷವಾಗಿ ಆಟಿಕೆಗಳು, ಮೊಬೈಲ್ ಫೋನುಗಳನ್ನುಮಕ್ಕಳು ಬಳಸುತ್ತಿದ್ದರೆ, ಹಿರಿಯರ ಅವರ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಮಕ್ಕಳ ಕೈಗೆ ನೀಡಲಾಗಿರುವ ವಸ್ತುಗಳು, ಆಟಿಕೆಗಳು ಸುರಕ್ಷಿತವಾಗಿಯೇ ಎಂಬುದನ್ನು ಪರಿಶೀಲಿಸಲು ಮರೆಯ ಬಾರದು ಎನ್ನುತ್ತಾರೆ ತಜ್ಞರು.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.