Site icon Vistara News

ಜಿಯೋಮಾರ್ಟ್- ಮೆಟಾಗೆ ಒಂದು ವರ್ಷದ ಸಂಭ್ರಮ; ಗ್ರಾಹಕರಿಗೆ ಭಾರೀ ಆಫರ್‌ಗಳ ಮಹಾಪೂರ!

Huge offers on the occasion of JioMart and Meta Year celebration

ಮುಂಬೈ, ಮಹಾರಾಷ್ಟ್ರ: ಭಾರತೀಯರಿಗೆ ಖರೀದಿಯನ್ನು ಸುಲಭ ಮಾಡಿಕೊಟ್ಟಂಥ ಒಂದು ವರ್ಷದ ಸಂಭ್ರಮಾಚರಣೆ ಜಿಯೋಮಾರ್ಟ್- ಮೆಟಾದಿಂದ (Meta) ನಡೆಯುತ್ತಿದೆ. ನಿಮ್ಮೆಲ್ಲರಿಗೂ ಗೊತ್ತಿರುವಂತೆ ಜಿಯೋಮಾರ್ಟ್ (JioMart) ಮತ್ತು ವಾಟ್ಸಾಪ್ – WhatsApp (ಮೆಟಾದ ಒಡೆತನ ಇರುವಂಥದ್ದು) ಸಹಯೋಗವು ದೇಶೀಯ ರೀಟೇಲ್ ಕ್ಷೇತ್ರದಲ್ಲಿ (Retail Sector) ಅತ್ಯಂತ ಯಶಸ್ವಿ ಪಾಲುದಾರಿಕೆ ಎಂಬುದು ಸಾಬೀತಾಗಿದೆ. ಭಾರತದ ಪ್ರಮುಖ ಇ-ಮಾರ್ಕೆಟ್ ಪ್ಲೇಸ್‌ಗಳಲ್ಲಿ ಒಂದಾದ ರಿಲಯನ್ಸ್ ರಿಟೇಲ್‌ (Reliance Retail) ಒಡೆತನದ ಜಿಯೋಮಾರ್ಟ್, ವಾಟ್ಸಾಪ್ ಮೂಲಕ ಆರ್ಡರ್‌ಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ ಮತ್ತು ಪೂರೈಸಿದೆ. ವಾಟ್ಸಾಪ್ ಚಾಟ್ (WhatsApp Chats) ಸೇವೆಗಳ ಮೂಲಕ ಗ್ರಾಹಕರು ತಮ್ಮ ಮನೆಯ ಅಗತ್ಯಗಳಿಗಾಗಿ ಸರಳವಾಗಿ ಬ್ರೌಸ್ ಮತ್ತು ಶಾಪಿಂಗ್ ಮಾಡಲು ಈ ಪಾಲುದಾರಿಕೆಯನ್ನು ಮಾಡಿಕೊಳ್ಳಲಾಗಿದೆ.

ಮೆಟಾ ಜೊತೆಗಿನ ಪಾಲುದಾರಿಕೆಯೊಂದಿಗೆ ಜಿಯೋಮಾರ್ಟ್ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ವಾಟ್ಸಾಪ್ ಮೂಲಕ ಬರುವಂಥ ಮಾಸಿಕ ಆರ್ಡರ್‌ಗಳಲ್ಲಿ ಏಳು ಪಟ್ಟು ಬೆಳವಣಿಗೆಯನ್ನು ಕಂಡಿದೆ. ಗ್ರಾಹಕರಿಗೆ ಏನು ಬೇಕೋ ಎಲ್ಲವೂ, ಅಂದರೆ ವಾಟ್ಸಾಪ್ ನಲ್ಲಿಯೇ ಶಾಪಿಂಗ್ ಅನುಭವ ಪಡೆಯುವುದರೊಂದಿಗೆ ಜಿಯೋಮಾರ್ಟ್ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಲು ಹಿಂಜರಿಯುವ ಗ್ರಾಹಕರಿಗೆ ನೆರವಾಗುತ್ತದೆ. ಪ್ಲಾಟ್‌ಫಾರ್ಮ್‌ನ ಬಳಕೆದಾರ ಸ್ನೇಹಿ ಕಾರ್ಯಚಟುವಟಿಕೆಯು ಜಿಯೋಮಾರ್ಟ್-ಆನ್-ವಾಟ್ಸಾಪ್ ನಲ್ಲಿ (JioMart-on-WhatsApp) ನಲ್ಲಿ ಹೊಸ ಗ್ರಾಹಕರು ಬರುವುದನ್ನು ತಿಂಗಳ ಲೆಕ್ಕದಲ್ಲಿ ಆರು ಪಟ್ಟು ಬೆಳವಣಿಗೆ ಕಾಣುವಂತೆ ಮಾಡಿದೆ. ಇದಲ್ಲದೆ, ಈ ಪಾಲುದಾರಿಕೆಯು ಭಾರತದ ಡಿಜಿಟಲ್ ರೂಪಾಂತರವನ್ನು ಹೆಚ್ಚಿಸಿದೆ ಮತ್ತು ಎಲ್ಲ ಪ್ರಮಾಣದ ಗ್ರಾಹಕರು ಮತ್ತು ವ್ಯವಹಾರಗಳನ್ನು ಹೊಸ ರೀತಿಯಲ್ಲಿ ಸಂಪರ್ಕಿಸಲು ಸಹಾಯ ಮಾಡಿದೆ.

ಈ ಸುದ್ದಿಯನ್ನೂ ಓದಿ : Reliance Jio: ಅಬ್ಬಬ್ಬಾ ಲಾಟರಿ..! ಐಫೋನ್ 15 ಖರೀದಿಸಿದರೆ 6 ತಿಂಗಳು ರಿಲಯನ್ಸ್ ಜಿಯೋ ಫ್ರೀ ಪ್ಲಾನ್

ಕಳೆದ ವರ್ಷ, ಜಾಗತಿಕವಾಗಿ ಮೊದಲು ಉತ್ಪನ್ನದ (global-first product) ಅನುಭವದ ಉಪಕ್ರಮದಲ್ಲಿ, ಜಿಯೋ ಪ್ಲಾಟ್‌ಫಾರ್ಮ್‌ಗಳು ಜಿಯೋಮಾರ್ಟ್-ಆನ್-ವಾಟ್ಸಾಪ್ ಅನ್ನು ನೀಡಲು ಮೆಟಾದೊಂದಿಗೆ ಪಾಲುದಾರಿಕೆ ಹೊಂದಿದ್ದವು. ಜಿಯೋಮಾರ್ಟ್-ಆನ್-ವಾಟ್ಸಾಪ್ ಅನುಭವವು ದೇಶದಾದ್ಯಂತ ಲಕ್ಷಾಂತರ ವ್ಯವಹಾರಗಳು ತಮ್ಮ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸುವ ರೀತಿಯಲ್ಲಿ ಕ್ರಾಂತಿಕಾರಿಯಾಗಿದೆ ಮತ್ತು ಜನರ ಖರೀದಿ ಅನುಭವಕ್ಕೆ ಊಹೆಗೆ ನಿಲುಕದಷ್ಟು ಸರಳತೆ ಮತ್ತು ಅನುಕೂಲತೆಯನ್ನು ತರುತ್ತದೆ.

ಮೆಟಾ ಇಂಡಿಯಾದ ಉಪಾಧ್ಯಕ್ಷೆ ಸಂಧ್ಯಾ ದೇವನಾಥನ್ ಮಾತನಾಡಿ, “ವಾಟ್ಸಾಪ್ ನಲ್ಲಿ ಜಿಯೋಮಾರ್ಟ್ ನ ಎಲ್ಲವೂ ಖರೀದಿ ಮಾಡಬಹುದಾದ ಅನುಭವವು ಮೆಟಾಗಾಗಿ ಜಾಗತಿಕ-ಮೊದಲ ನಾವೀನ್ಯತೆಯ ಸಂಯೋಜನೆ ಆಗಿದೆ ಮತ್ತು ಈ ಕಾರ್ಯತಂತ್ರದ ಪಾಲುದಾರಿಕೆಯಿಂದ ನಾವು ಸಂತಸಗೊಂಡಿದ್ದೇವೆ. ವಾಟ್ಸಾಪ್ ನಲ್ಲಿ ಮಾರಾಟ ಮತ್ತು ಗ್ರಾಹಕರನ್ನು ಪಡೆಯುತ್ತಿರುವುದು ಎರಡರಿಂದಲೂ ಜಿಯೋಮಾರ್ಟ್ ಕಂಡ ಬೆಳವಣಿಗೆಯು ವ್ಯವಹಾರಗಳು ಮತ್ತು ಜನರು ಕೆಲಸಗಳನ್ನು ವೇಗವಾಗಿ ಮಾಡಲು ಹೆಚ್ಚು ಅನುಕೂಲಕರ ಮಾರ್ಗವೆಂದು ಮೆಸೇಜಿಂಗ್ ಅನ್ನು ಕಂಡುಕೊಳ್ಳುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ವ್ಯಾಪಾರ ಸಂದೇಶ ಕಳುಹಿಸುವುದು ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಕ್ಷೇತ್ರವಾಗಿದ್ದು, ಈ ಚಾಟ್-ಆಧಾರಿತ ಅನುಭವಗಳು ಪ್ರಪಂಚದಾದ್ಯಂತ ವ್ಯವಹಾರದ ರೀತಿಯನ್ನೇ ಬದಲಾಯಿಸುವ ಶಕ್ತಿ ಹೊಂದಿದೆ,” ಎಂದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version