Site icon Vistara News

ಜಾಬ್‌ ಸಿಕ್ಕಿದೆ ಎಂದು ಗೆಳೆಯರಿಗೆ ಪಾರ್ಟಿ ಕೊಟ್ಟ ಯುವತಿ; ಕುಡಿದ ಸ್ನೇಹಿತರು ಆಕೆಯನ್ನೇ ರೇಪ್ ಮಾಡಿದರು!

Girl

ಹೈದರಾಬಾದ್:‌ ಹೆಣ್ಣುಮಕ್ಕಳಿಗೆ ಮನೆಯ ಹೊರಗೆ ಬಿಡಿ ಮನೆಯ ಒಳಗೆ ಕೂಡ ರಕ್ಷಣೆ ಇಲ್ಲದಂತಾಗಿದೆ. ಅಪರಿಚಿತರು ಬಿಡಿ ಸಂಬಂಧಿಕರನ್ನೇ ನಂಬದಂತಹ ಸ್ಥಿತಿ ಎದುರಾಗಿದೆ. ಮಧ್ಯಪ್ರದೇಶದ ರೇವಾದಲ್ಲಿ 13 ವರ್ಷದ ಬಾಲಕನು 9 ವರ್ಷದ ತಂಗಿಯ ಮೇಲೆಯೇ ಅತ್ಯಾಚಾರ (Rape Case) ಎಸಗಿ, ಕೊಲೆ ಮಾಡಿದ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದೆ. ಇಂತಹ ಪ್ರಕರಣಗಳು ಹೆಣ್ಣುಮಕ್ಕಳ ಸುರಕ್ಷತೆ ಕುರಿತು ಭಯ ಹುಟ್ಟಿಸುತ್ತಿವೆ. ಇದರ ಬೆನ್ನಲ್ಲೇ, ಹೈದರಾಬಾದ್‌ನಲ್ಲಿ (Hyderabad) ಒಬ್ಬ ಬಾಲ್ಯ ಸ್ನೇಹಿತ ಸೇರಿ ಇಬ್ಬರು ಯುವಕರು ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ.

ಹೈದರಾಬಾದ್‌ ಯುವತಿಗೆ ಸಾಫ್ಟ್‌ವೇರ್‌ ಎಂಜಿನಿಯರ್‌ ಜಾಬ್‌ ಸಿಕ್ಕಿದ್ದು, ಬಾಲ್ಯದ ಸ್ನೇಹಿತನಾದ ಗೌತಮ್‌ ರೆಡ್ಡಿಗೆ ವಿಷಯ ತಿಳಿಸಿದ್ದಾಳೆ. ಆಗ ಗೆಳೆಯನು ಪಾರ್ಟಿ ಕೊಡಿಸು ಎಂದಿದ್ದಾನೆ. ಜಾಬ್‌ ಸಿಕ್ಕ ಖುಷಿಯಲ್ಲಿದ್ದ ಯುವತಿಯು ಬಾರ್‌ & ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಕೊಡಿಸುವುದಾಗಿ ಒಪ್ಪಿಕೊಂಡಿದ್ದಾಳೆ. ಸೋಮವಾರ (ಜುಲೈ 29) ಸಂಜೆ ಗೌತಮ್‌ ರೆಡ್ಡಿಯು ತನ್ನ ಮತ್ತೊಬ್ಬ ಸ್ನೇಹಿತನೊಂದಿಗೆ ವನಸ್ಥಲಿಪುರಂನಲ್ಲಿರುವ ರೆಸ್ಟೋರೆಂಟ್‌ಗೆ ತೆರಳಿದ್ದಾನೆ. ಅಲ್ಲಿ, ಯುವತಿ, ಗೌತಮ್‌ ರೆಡ್ಡಿ ಹಾಗೂ ಆತನ ಗೆಳೆಯ ಸೇರಿ ಪಾರ್ಟಿ ಮಾಡಿದ್ದಾರೆ. ಅದಾದ ಬಳಿಕ ಇಬ್ಬರೂ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ.

“ಗೌತಮ್‌ ರೆಡ್ಡಿ ಹಾಗೂ ಯುವತಿಯು 2ನೇ ಕ್ಲಾಸ್‌ನಿಂದ 10ನೇ ತರಗತಿವರೆಗೆ ಒಂದೇ ಶಾಲೆಯಲ್ಲಿ ಓದಿದ್ದಾರೆ. ಜಾಬ್‌ ಸಿಕ್ಕ ಖುಷಿಯಲ್ಲಿ ಯುವತಿಯು ಪಾರ್ಟಿಗೆ ಕರೆದಿದ್ದಾಳೆ. ಬಾರ್‌ & ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮಾಡಿದ ಬಳಿಕ ಕುಡಿದ ಮತ್ತಿನಲ್ಲಿ ಯುವತಿಯನ್ನು ಇಬ್ಬರೂ ಕೋಣೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಇಬ್ಬರೂ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ” ಎಂಬುದಾಗಿ ವನಸ್ಥಲಿಪುರಂ ಪೊಲೀಸ್‌ ಇನ್ಸ್‌ಪೆಕ್ಟರ್‌ ಡಿ ಜಲೇಂದರ್‌ ರೆಡ್ಡಿ ಮಾಹಿತಿ ನೀಡಿದ್ದಾರೆ.

ಬಸ್‌ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ

ತೆಲಂಗಾಣದಲ್ಲಿಯೇ ಮಂಗಳವಾರ (ಜುಲೈ 30) ಬಸ್‌ನಲ್ಲಿ ಮಹಿಳೆ ಮೇಲೆ ಬಸ್‌ ಚಾಲಕನು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಿರ್ಮಲ್‌ದಿಂದ ಖಾಸಗಿ ಬಸ್‌ನಲ್ಲಿ ಪ್ರಕಾಶಂ ಜಿಲ್ಲೆಗೆ ಮಹಿಳೆ ತೆರಳುತ್ತಿದ್ದರು. ಬೆಳಗಿನ ಜಾವ ಬಸ್‌ ಚಾಲಕನು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಕುರಿತು ಮಹಿಳೆಯು ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಪೊಲೀಸರು ಬಸ್‌ ಚಾಲಕನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Physical Abuse: 85 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ; ಭೀಕರ ಘಟನೆ ಬಳಿಕ ಮಹಿಳೆ ಸಾವು

Exit mobile version