Site icon Vistara News

India Canada Row : ಕೆನಡಾದಲ್ಲಿ ಹಿಂದೂಗಳಿಗೆ ಬೆದರಿಕೆ ಹಾಕಿದ್ದ ಖಲಿಸ್ತಾನಿ ಉಗ್ರನಿಗೆ ಎನ್​ಐಎ ಟಕ್ಕರ್​

Kahlistani

ನವದೆಹಲಿ: ಹರ್ದೀಪ್ ಸಿಂಗ್ ನಿಜ್ಜರ್​ ಹತ್ಯೆಯ ಬಳಿಕ ಭಾರತ ಹಾಗೂ ಕೆನಡಾದ ಸಂಬಂಧ (India Canada Row)) ಹದಗೆಟ್ಟಿವೆ. ಇದರ ಬೆನ್ನಲ್ಲೇ ಖಲಿಸ್ತಾನಿ ಉಗ್ರರ ನಿಜಬಣ್ಣ ಬಯಲಾಗುತ್ತಿದೆ. ಅವರು ಭಾರತಕ್ಕೆ ಅಪಾಯಕಾರಿ ಹಾಗೂ ಹಿಂದೂಗಳ ವಿರುದ್ಧ ಅಪಾರ ದ್ವೇಷ ಇಟ್ಟುಕೊಂಡಿದ್ದಾರೆ ಎಂಬುದು ಸಾಬೀತಾಗಿದೆ. ನಿಜ್ಜರ್​ ನಿಕಟವರ್ತಿ ಹಾಗೂ ಯುಎಸ್ ಮೂಲದ ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ (ಎಸ್ಎಫ್​ಜಿ) ಗುಂಪಿನ ಸ್ಥಾಪಕರಲ್ಲಿ ಒಬ್ಬ. ಕೆನಡಾದ ಟೊರೊಂಟೊದ ನಿವಾಸಿ ಗುರ್​ಪತ್ವಂತ್ ಸಿಂಗ್ ಪನ್ನುನ್ ಕೆನಡಾದಲ್ಲಿರುವ ಹಿಂದೂಗಳಿಗೆ ಬೆದರಿಕೆ ಹಾಕಲು ಆರಂಭಿಸಿದ್ದಾರೆ. ಕುಕೃತ್ಯ ಬಯಲಿಗೆ ಬರುತ್ತಿದ್ದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಆತನಿಗೆ ಟಕ್ಕರ್​ ಕೊಟ್ಟಿದೆ.

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ), 1967 ರ ಸೆಕ್ಷನ್ 33 (5) ರ ಅಡಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಗುರ್​ಪತ್ವಂತ್ ಸಿಂಗ್ ಪನ್ನುನ್​ಗೆ ಸೇರಿದ ಚಂಡೀಗಢದಲ್ಲಿನ ಮನೆ ಮತ್ತು ಅಮೃತಸರದ ಕೃಷಿ ಭೂಮಿಯನ್ನು ವಶಪಡಿಸಿಕೊಂಡಿದೆ. ಈ ಮೂಲಕ ಆತನಿಗೆ ಭಾರತದ ಬಾಗಿಲನ್ನು ಸಂಪೂರ್ಣ ಬಂದ್ ಮಾಡುವ ಜತೆಗೆ ಆತನಿಗೆ ಇಲ್ಲಿಂದ ಒಂದು ಪೈಸೆಯೂ ದೊರೆಯದಂತೆ ಮಾಡಿದೆ.

ನಿಜ್ಜರ್ ಹತ್ಯೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಮಾಡಿ ಬಿಟ್ಟಿದ್ದ ಪನ್ನುನ್​ ಕೆನಡಾದಲ್ಲಿರುವ ಹಿಂದೂಗಳ ಮೇಲೆ ದಾಳಿ ಮಾಡುವ ಬೆದರಿಕೆ ಹಾಕಿದ್ದಾರೆ. ಆ ವಿಡಿಯೊಗೆ ಅಲ್ಲಿಯೂ ವಿರೋಧ ವ್ಯಕ್ತಗೊಂಡಿವೆ. ಆದರೆ ಆತ ನಿಧಾನಕ್ಕೆ ಬಾಲ ಬಿಚ್ಚುತ್ತಿದ್ದಂತೆ ಭಾರತದ ತನಿಖಾ ಸಂಸ್ಥೆಗಳು ಆತನ ಬಾಲ ಕಟ್ ಮಾಡಲು ಮುಂದಾಗಿದೆ.

ಗುರುಪತ್ವಂತ್ ಸಿಂಗ್ ಪನ್ನುನ್ ಯಾರು?

2020 ರಲ್ಲಿ ಭಾರತದಿಂದ ಭಯೋತ್ಪಾದಕ ಎಂದು ಕರೆಯಲಾದ ಪನ್ನುನ್, ಯುಎಸ್ ಮೂಲದ ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ (ಎಸ್ಎಫ್​ಜಿ) ಗುಂಪಿನ ಸ್ಥಾಪಕರಲ್ಲಿ ಒಬ್ಬ. ಕೆನಡಾದ ಟೊರೊಂಟೊದಲ್ಲಿ ವಾಸಿಸುತ್ತಿದ್ದ ಆತ ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯದಿಂದ ಪದವಿ ಪಡೆದ್ದಾನೆ. ಹರ್ದೀಪ್ ಸಿಂಗ್ ನಿಜ್ಜರ್ ಜತೆ ನಿಕಟ ಸಂಬಂಧ ಹೊಂದಿದ್ದ ಎಂದು ವರದಿಯಾಗಿದೆ, ನಿಜ್ನರ್​ ಹತ್ಯೆಯ ಹಿಂದೆ ಭಾರತ ಸರ್ಕಾರದವಿದೆ ಎಂದು ಕೆನಡಾ ಆರೋಪಿಸಿದ ಬಳಿಕ ಪನ್ನುನ್​ ಭಾರತದ ಹಿಂದೂಗಳಿಗೆ ಬೆದರಿಕೆ ಹಾಕಿದ್ದರ. ಪನ್ನುನ್​ ಮೇಲೆ ಭಯೋತ್ಪಾದನೆ ಮತ್ತು ದೇಶದ್ರೋಹದ ಆರೋಪಗಳು ಸೇರಿದಂತೆ 2017 ರಿಂದ ಪನ್ನುನ್ ವಿರುದ್ಧ 22 ಪ್ರಕರಣಗಳು ದಾಖಲಾಗಿವೆ.

ತನಿಖಾ ಸಂಸ್ಥೆ ದಾಖಲಿಸಿರುವ ಭಯೋತ್ಪಾದಕ ಪ್ರಕರಣಗಳಲ್ಲಿ ಭಾಗಿಯಾಗಿರುವ ವಾಂಟೆಡ್ ಗ್ಯಾಂಗ್​ಸ್ಟರ್​ಗಳ ಪಟ್ಟಿಯನ್ನು ಎನ್ಐಎ ಬುಧವಾರ ಬಿಡುಗಡೆ ಮಾಡಿದೆ. ಲಾರೆನ್ಸ್ ಬಿಷ್ಣೋಯ್, ಜಸ್ದೀಪ್ ಸಿಂಗ್, ಕಲಾ ಜತೇರಿ, ಅಲಿಯಾಸ್ ಸಂದೀಪ್, ವೀರೇಂದ್ರ ಪ್ರತಾಪ್, ಅಲಿಯಾಸ್ ಕಲಾ ರಾಣಾ, ಜೋಗಿಂದರ್ ಸಿಂಗ್, ರಾಜೇಶ್ ಕುಮಾರ್, ಅಲಿಯಾಸ್ ರಾಜು ಮೋಟಾ, ರಾಜ್ ಕುಮಾರ್, ಅಲಿಯಾಸ್ ರಾಜು ಬಸೋಡಿ, ಅನಿಲ್ ಚಿಪ್ಪಿ, ಮೊಹಮ್ಮದ್ ಶಹಬಾಜ್, ಗೋಲ್ಡಿ ಬ್ರಾರ್, ಅನ್ಸಾರಿ, ಸಚಿನ್ ಥಾಪನ್ ಬಿಷ್ಣೋಯ್, ಅನ್ಮೋಲ್ ಬಿಷ್ಣೋಯ್, ವಿಕ್ರಮ್ಜಿತ್ ಸಿಂಗ್, ಅಲಿಯಾಸ್ ವಿಕ್ರಮ್ ಬ್ರಾರ್, ದರ್ಮನ್ ಸಿಂಗ್, ಅಲಿಯಾಸ್ ದರ್ಮನ್ಜೋತ್ ಕಹ್ಲೋನ್, ಅರ್ಷ್ದೀಪ್ ಸಿಂಗ್, ಸುರೇಂದರ್ ಸಿಂಗ್ ಅಲಿಯಾಸ್ ಚಿಕು, ದಲೀಪ್ ಕುಮಾರ್ ಅಲಿಯಾಸ್ ಭೋಲಾ ಅವರ ಹೆಸರುಗಳು ಎನ್ಐಎ ಪಟ್ಟಿಯಲ್ಲಿವೆ.

ಇದನ್ನೂ ಓದಿ : India Canada Row: ಉಗ್ರ ನಿಜ್ಜರ್‌ ಪರ ನಿಂತ ಜಸ್ಟಿನ್‌ ಟ್ರುಡೋ ವಿರುದ್ಧ ಕೆನಡಾದಲ್ಲೇ ಆಕ್ರೋಶ; ಏನಾಗ್ತಿದೆ ನೋಡಿ

ಈ ಪಟ್ಟಿಯಲ್ಲಿ ಕೆನಡಾದ ಮ್ಯಾನಿಟೋಬಾ ಪ್ರಾಂತ್ಯದ ಅತಿದೊಡ್ಡ ನಗರವಾದ ವಿನ್ನಿಪೆಗ್ನ್​ನಲ್ಲಿ ಪ್ರತಿಸ್ಪರ್ಧಿ ಗ್ಯಾಂಗ್​ನಿಂದ ಹತ್ಯೆಗೊಳಗಾದ ಸುಖದೂಲ್ ಸಿಂಗ್ ಅಲಿಯಾಸ್ ಸುಖಾ ಡುನೆಕೆ ಕೂಡ ಸೇರಿದ್ದಾನೆ. ಪರ್ವೀನ್ ವಾಧ್ವಾ, ಅಲಿಯಾಸ್ ಪ್ರಿನ್ಸ್, ಯುಧ್ವೀರ್ ಸಿಂಗ್, ವಿಕಾಸ್ ಸಿಂಗ್, ಲಖ್ಬೀರ್ ಸಿಂಗ್, ಅಲಿಯಾಸ್ ಲಾಂಡಾ, ಗೌರವ್ ಪಟ್ಯಾಲ್, ಅಲಿಯಾಸ್ ಸೌರವ್ ಠಾಕೂರ್, ಸುಖ್ಪ್ರೀತ್ ಸಿಂಗ್, ಅಲಿಯಾಸ್ ಬುಡ್ಡಾ, ಅಮಿತ್ ದಾಗರ್, ಕೌಶಲ್ ಚೌಧರಿ, ಆಸಿಫ್ ಖಾನ್, ನವೀನ್ ದಬಾಸ್, ಅಲಿಯಾಸ್ ನವೀನ್ ಬಾಲಿ, ಛೋಟು ರಾಮ್, ಅಲಿಯಾಸ್ ಭಟ್, ಜಗ್ಸೀರ್ ಸಿಂಗ್, ಅಲಿಯಾಸ್ ಜಗ್ಗಾ, ಸುನಿಲ್ ಬಲ್ವಾನ್, ಅಲಿಯಾಸ್ ಟಿಲ್ಲು ತಾಜ್ಪುರಿಯಾ, ಭೂಪಿಂದರ್ ಸಿಂಗ್, ಭೂಪಿಂದರ್ ಸಿಂಗ್, ಅಲಿಯಾಸ್ ಭೂಪಿ ರಾಣಾ. ಸುಖ್ದೂಲ್ ಸಿಂಗ್, ಗುರ್ಪಿಂದರ್ ಸಿಂಗ್, ನೀರಾಯ್, ಅಲಿಯಾಸ್ ಪಾಂಡಿ, ದಲೇರ್ ಸಿಂಗ್, ದಿನೇಶ್ ಶರ್ಮಾ, ಮನ್ಪ್ರೀತ್ ಸಿಂಗ್ ಪೀಟಾ, ಹರಿಯೋಮ್, ಅಲಿಯಾಸ್ ಟಿಟು, ಹರ್ಪ್ರೀತ್, ಲಖ್ವೀರ್ ಸಿಂಗ್, ಇರ್ಫಾನ್ ಅಲಿಯಾಸ್ ಚೆನು ಪೆಹಲ್ವಾನ್ ಮತ್ತು ಸನ್ನಿ ದಾಗರ್ ಪಟ್ಟಿಯಲ್ಲಿದ್ದಾರೆ.

Exit mobile version