Site icon Vistara News

ICSE Result 2022 | ಐಸಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟ: ಶೇ. 99.97 ಮಂದಿ ಉತ್ತೀರ್ಣ

student

ನವ ದೆಹಲಿ: ಐಸಿಎಸ್‌ಇ 10ನೇ ತರಗತಿಯ (ICSE Result 2022) ಫಲಿತಾಂಶ ಭಾನುವಾರ (ಜುಲೈ 7) ಸಂಜೆ ಪ್ರಕಟಗೊಂಡಿದ್ದು, ಶೇ. 99.97ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು https://cisceresults.trafficmanager.net/ ಅಧಿಕೃತ ವೆಬ್‌ಸೈಟ್‌ ಮೂಲಕ ನೋಡಬಹುದು. ಐಸಿಎಸ್‌ಇ ಕೋರ್ಸ್‌ ಎಂಬ ಆಯ್ಕೆಯನ್ನು ಕ್ಲಿಕ್‌ ಮಾಡಿ ಹಾಗೂ UID ಸಂಖ್ಯೆ ನಮೂದಿಸಿ, Index no ಅನ್ನು ಸಲ್ಲಿಸಿದರೆ ಫಲಿತಾಂಶ ಲಭ್ಯವಾಗಲಿದೆ.

ಎಸ್‌ಎಂಎಸ್ ಮೂಲಕ ಫಲಿತಾಂಶವನ್ನು ಪಡೆಯಲು, ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಐಸಿಎಸ್‌ಇ 09248082883 ಗೆ ಎಸ್‌ಎಂಎಸ್ ಮಾಡಬೇಕು. ಫಲಿತಾಂಶವನ್ನು ಅಭ್ಯರ್ಥಿಗಳಿಗೆ ಅವರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.

ಮೊದಲ ಮತ್ತು ಎರಡನೇ ಸೆಮಿಸ್ಟರ್‌ ಫಲಿತಾಂಶವನ್ನು ಸಮಾನವಾಗಿ ಪರಿಗಣಿಸಿ ಅಂತಿಮ ಫಲಿತಾಂಶವನ್ನು ನೀಡಲಾಗಿದೆ. ಎರಡು ಸೆಮಿಸ್ಟರ್‌ಗಳಲ್ಲಿ ವಿದ್ಯಾರ್ಥಿಗಳು ಯಾವುದಾದರೂ ಒಂದು ಸೆಮಿಸ್ಟರ್‌ ಪರೀಕ್ಷೆಗೆ ಗೈರು ಹಾಜರಾಗಿದ್ದರೆ ಅವರ ಫಲಿತಾಂಶವನ್ನು ತಡೆಹಿಡಿಯಲಾಗುತ್ತದೆ. 2021 ರ ನವೆಂಬರ್‌-ಡಿಸೆಂಬರ್‌ ಅವಧಿಯಲ್ಲಿ ಮೊದಲ ಸೆಮಿಸ್ಟರ್‌ ಪರೀಕ್ಷೆ ಹಾಗೂ 2022 ರ ಏಪ್ರಿಲ್‌-ಡಿಸೆಂಬರ್‌ ಅವಧಿಯಲ್ಲಿ ಸೆಮಿಸ್ಟರ್‌-2 ರ ಪರೀಕ್ಷೆಗಳನ್ನು ನಡೆಸಲಾಗಿತ್ತು. ಈ ವರ್ಷ ಒಟ್ಟು 2,31,063 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಇದನ್ನೂ ಓದಿ | CBSE Result | ಜುಲೈ ತಿಂಗಳಲ್ಲಿ ಸಿಬಿಎಸ್‌ಇ ಫಲಿತಾಂಶ ಪ್ರಕಟ, ವಿದ್ಯಾರ್ಥಿಗಳು ನಿರಾಳ

Exit mobile version