ನವದೆಹಲಿ: ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದಾನ ನಿರ್ಣಯ ಚರ್ಚೆಯ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ದ ಕಿಡಿಕಾರಿದರು. ಒಂದು ವೇಳೆ ಜವಾಹರ್ ಲಾಲ್ ನೆಹರು ಅವರು ಅಷ್ಟು ದೊಡ್ಡ ವ್ಯಕ್ತಿಯೇ ಆಗಿದ್ದರೆ, ನೆಹರು ಅಡ್ಡಹೆಸರನ್ನು ಅವರ ಕುಟುಂಬವೇಕೆ ಬಳಸುತ್ತಿಲ್ಲ ಎಂದು ಪ್ರಶ್ನಿಸಿದರು. ದೇಶದಲ್ಲಿ ನೆಹರು ಮತ್ತ ಗಾಂಧಿ ಹೆಸರಿನಲ್ಲಿ 600ಕ್ಕೂ ಹೆಚ್ಚು ಯೋಜನೆಗಳಿವೆ. ಆದರೂ, ಕುಟುಂಬದವರು ನೆಹರು ಹೆಸರನ್ನು ಬಳಸುತ್ತಿಲ್ಲ ಎಂದು ವ್ಯಂಗ್ಯವಾಡಿದರು(PM Modi Speech in Rajya Sabha).
ನಾವು 60 ವರ್ಷಗಳಿಂದ ಏನೆಲ್ಲ ಕೆಲಸ ಮಾಡಿದ್ದೇವೆ. ಅದರ ಕ್ರೆಡಿಟ್ನ್ನು ಪ್ರಧಾನಿ ಮೋದಿ ತೆಗೆದುಕೊಳ್ಳುತ್ತಿದ್ದಾರೆ ಎಂದೂ ಮಲ್ಲಿಕಾರ್ಜುನ್ ಖರ್ಗೆಯವರು ಹೇಳಿದ್ದಾರೆ. ನಾನು 2014ರಲ್ಲಿ ನಾನು ನೋಡಿದ್ದಾಗ ಎಲ್ಲಾ ಕಡೆ ಗುಂಡಿಗಳೆ ಬಿದ್ದಿದ್ದವು. ಪ್ರಪಂಚದ ಸಣ್ಣ ಸಣ್ಣ ದೇಶಗಳು ಉತ್ತುಂಗಕ್ಕೆ ಏರುತ್ತಿದ್ದರೆ, ಭಾರತ ಇಲ್ಲೇ ಉಳಿದುಕೊಂಡಿತ್ತು. ಪಂಚಾಯತ್ನಿಂದ ಮೇಲಿನವರೆಗೆ ಎಲ್ಲರೂ ಕಾಂಗ್ರೆಸ್ಸಿಗರಿಗೆ ಜೀ ಹುಜೂರ್ ಎನ್ನುತ್ತಿದ್ದರು. ಟೋಕನ್ ತೆಗೆದುಕೊಳ್ಳುವುರು ಕೆಲಸ ಮಾಡುವುದು ಆಗಿತ್ತು. ನಾವು ಒಂದೊಂದೇ ವಿಚಾರವನ್ನು ಇಟ್ಟುಕೊಂಡು ಶಾಶ್ವತ ಪರಿಹಾರ ಹುಡುಕುತ್ತಿದ್ದೇವೆ. ನಾವು ಬಂದಮೇಲೆ ಮೂರು ಕೋಟಿ ಮನೆಗೆ ನಲ್ಲಿ ಮೂಲಕ ನೀರು ನೀಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. .
ಇದನ್ನೂ ಓದಿ: ಪ್ರಧಾನಿ ಮೋದಿ ಸಿಕ್ಕಾಪಟೆ ಶಾಕ್ ಆಗಿದ್ದಾರೆ, ಸಂಸತ್ತಿನಲ್ಲಿ ನನ್ನ ಯಾವ ಪ್ರಶ್ನೆಗೂ ಉತ್ತರಿಸಿಲ್ಲ ಎಂದ ರಾಹುಲ್ ಗಾಂಧಿ
ಕಾಂಗ್ರೆಸ್ಸಿಗರು ಏನು ಮಾಡಿದರು?
ಕಾಂಗ್ರೆಸ್ನವರು ಗರೀಬಿ ಹಠಾವೋ (ಬಡತನ ನಿರ್ಮೂಲನೆ ಮಾಡುತ್ತೇವೆ) ಎಂದು ಹೇಳಿದರು. ಆದರೆ 4 ದಶಕಗಳ ಕಾಲ ಏನೂ ಮಾಡಲಿಲ್ಲ. ಆದರೆ ನಾವು ಈ ದೇಶದ ಪ್ರತಿ ವರ್ಷದ ಜನರ ನಿರೀಕ್ಷೆ, ಆಕಾಂಕ್ಷೆಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಹಾಗೇ, ಕೆಲಸದ ವಿಧಾನವನ್ನು ನಾವು ತಂತ್ರಜ್ಞಾನದ ಶಕ್ತಿಯೊಂದಿಗೆ ಮಿಳಿತಗೊಳಿಸಿದ್ದೇವೆ. ಎಲ್ಲ ಕ್ಷೇತ್ರದಲ್ಲಿ ಕೆಲಸದ ವೇಗ ಮತ್ತು ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸುವುದು ನಮ್ಮ ಉದ್ದೇಶ ಎಂದು ಅವರು ಹೇಳಿದರು.