ಹೊಸದಿಲ್ಲಿ: ಆದಾಯ ತೆರಿಗೆ ಇಲಾಖೆಯು (Income Tax department) ಏಪ್ರಿಲ್ ಮತ್ತು ಆಗಸ್ಟ್ ನಡುವೆ ಸುಮಾರು 500,000 ತೆರಿಗೆದಾರರಿಗೆ ನೋಟಿಸ್ (Income Tax Notice) ನೀಡಿದೆ. ಹಿಂದಿನ ಹಣಕಾಸು ವರ್ಷ ಮತ್ತು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಮಹತ್ವದ ವಹಿವಾಟು ಡೇಟಾವನ್ನು ವಿಶ್ಲೇಷಿಸಿದ ನಂತರ ಈ ನೋಟೀಸ್‌ಗಳನ್ನು ಕಳುಹಿಸಲಾಗಿದೆ.
ನೋಟಿಸ್ ಪಡೆದವರು ಶೂನ್ಯ ತೆರಿಗೆ ಮತ್ತು ಕಡಿಮೆ ಮುಂಗಡ ತೆರಿಗೆ ಪಾವತಿದಾರರು. ಜೂನ್ ತ್ರೈಮಾಸಿಕದಲ್ಲಿ ಮುಂಗಡ ತೆರಿಗೆ ಪಾವತಿಯು ತೆರಿಗೆದಾರರು ಹೆಚ್ಚಿನ ಮೌಲ್ಯದ ಖರ್ಚುಗಳಿಗೆ ಹೋಲಿಸಿದರೆ ಕಡಿಮೆ ತೆರಿಗೆಗಳನ್ನು ಪಾವತಿಸಿರುವುದನ್ನು ಸೂಚಿಸುತ್ತದೆ. ಹೊಂದಾಣಿಕೆಯಾಗದಿರುವುದರಿಂದ ಸೆಪ್ಟೆಂಬರ್ 15ರಂದು ಬಾಕಿ ಇರುವ ಮುಂಗಡ ತೆರಿಗೆಯ ಎರಡನೇ ಕಂತಿನ ಮೊದಲು ಈ ಕ್ರಮ ಕೈಗೊಳ್ಳಲಾಗಿದೆ.
ಆದಾಯ ತೆರಿಗೆ ಇಲಾಖೆಯ ಸಂಪೂರ್ಣ ಡಿಜಿಟಲೀಕರಣದ ಬಳಿಕ ಹಾಗೂ ತೆರಿಗೆ ಪದ್ಧತಿಯ ಪರಿಷ್ಕರಣೆಯ ಬಳಿಕ ಸಣ್ಣಪುಟ್ಟ ತೆರಿಗೆ ವಂಚನೆಯೂ ಇಲಾಖೆಯ ಗಮನಕ್ಕೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ತಪ್ಪಾಗಿ ಕ್ಲೇಮ್ ಮಾಡಲಾದ ಹಲವಾರು ತೆರಿಗೆ ಕಡಿತ ಸೌಲಭ್ಯಗಳನ್ನು ಪ್ರಶ್ನಸಿಯೂ ಈ ನೋಟೀಸ್‌ಗಳನ್ನು ಕಳುಹಿಸಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: Income tax return filing : ಆದಾಯ ತೆರಿಗೆ ವಿವರಗಳನ್ನು ಯಾರು, ಹೇಗೆ ಸಲ್ಲಿಸಬೇಕು?