ಹೊಸದಿಲ್ಲಿ: ಒಟ್ಟು 4ಕೋಟಿ ತೆರಿಗೆದಾರರಲ್ಲಿ ಶೇ.66 ರಷ್ಟು ಜನ ಪ್ರಸಕ್ತ ಸಾಲಿನಲ್ಲಿ ಹೊಸ ಐಟಿ ರಿಟರ್ನ್ (Income Tax Return) ಆಯ್ಕೆ ಮಾಡಿಕೊಂಡಿದ್ದಾರೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ(CBDT) ಮುಖ್ಯಸ್ಥ ರವಿ ಅಗರ್ವಾಲ್ ಹೇಳಿದ್ದಾರೆ. ಆದಾಯ ತೆರಿಗೆ ಇಲಾಖೆಯೊಂದಿಗೆ ಐಟಿಆರ್‌ಗಳನ್ನು ಸಲ್ಲಿಸುವುದು ಮತ್ತು ಇತರ ವ್ಯವಹಾರಗಳನ್ನು ನಡೆಸುವುದು ಸೇರಿದಂತೆ ತೆರಿಗೆ ಪ್ರಕ್ರಿಯೆಗಳ ಸರಳೀಕರಣ ಕೇಂದ್ರ ಸರ್ಕಾರ ಮತ್ತು ನೇರ ತೆರಿಗೆ ಆಡಳಿತದ ಪ್ರಮುಖ ಗುರಿ ಎಂದಿದ್ದಾರೆ.
ಐಟಿ ರಿಟರ್ನ್ ವಿಧಾನ ಸರಳೀಕರಣಗೊಳಿಸಿದಂತೆ ಜನರು ಭಾಗಿಯಾಗುವ ಪ್ರಮಾಣವೂ ಹೆಚ್ಚುತ್ತದೆ ಎಂಬುದು ಸರ್ಕಾರ ತತ್ವವಾಗಿದೆ. ಕಳೆದ ವರ್ಷಕ್ಕೆ ಈ ಹೊತ್ತಿಗೆ ಹೋಲಿಸಿದರೆ ಈ ವರ್ಷ ಐಟಿ ರಿಟರ್ನ್ ಪ್ರಮಾಣದಲ್ಲಿ ಗಮನಾರ್ಹ ಹೆಚ್ಚಳ ಕಂಡು ಬಂದಿದೆ. ಕಳೆದ ವರ್ಷ ನಾಲ್ಕ ಕೋಟಿಗೂ ಅಧಿಕ ತೆರಿಗೆದಾರರು ಐಟಿ ರಿಟರ್ನ್ ಫೈಲ್ ಮಾಡಿದ್ದಾರೆ. ಈ ಬಾರಿ ಆ ಸಂಖ್ಯೆ ಈಗಾಗಲೇ ದಾಟಿದೆ ಎಂದು ಅವರು ತಿಳಿಸಿದ್ದಾರೆ.
ಹೊಸ ತೆರಿಗೆ ಪದ್ಧತಿ ಬಗ್ಗೆ ಸಾಕಷ್ಟು ತೆರಿಗೆದಾರರಿಗೆ ಆಸಕ್ತಿ ಇದೆ ಮತ್ತು ಇಂದಿನಂತೆ ಸುಮಾರು 66 ಪ್ರತಿಶತದಷ್ಟು ಐಟಿಆರ್ ಫೈಲಿಂಗ್‌ಗಳನ್ನು ಹೊಸ ಆಡಳಿತದ ಅಡಿಯಲ್ಲಿ ಮಾಡಲಾಗಿದೆ ಎಂದು ಅವರು ಹೇಳಿದರು. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಳವಾಗು ನಿರೀಕ್ಷೆ ಇದೆ. ಕಳೆದ ಬಾರಿ ಜುಲೈ 31 ರ ಗಡುವಿನ ಅಂತ್ಯದ ವೇಳೆಗೆ ಕೊನೆಯ ಬಾರಿಗೆ ಸುಮಾರು 7.5 ಕೋಟಿ ಐಟಿಆರ್‌ಗಳನ್ನು ಸಲ್ಲಿಸಲಾಗಿದೆ ಎಂದು ಸಿಬಿಡಿಟಿ ಮುಖ್ಯಸ್ಥರು ತಿಳಿಸಿದ್ದಾರೆ.
ಹಳೆಯ ತೆರಿಗೆ ಪದ್ದತಿ ಕೊನೆಯಾಗುತ್ತಾ?
ಹೊಸ ತೆರಿಗೆ ಪದ್ದತಿ ಜಾರಿಗೆ ಬಂದ ನಂತರ ಹಳೆಯ ತೆರಿಗೆ ಪದ್ದತಿ ಇನ್ನು ಮುಂದೆ ಕೊನೆಯಾಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅಗರ್ವಾಲ್, ಜನರ ಪ್ರತಿಕ್ರಿಯೆ ಆಧಾರದಲ್ಲಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಸೂಕ್ತ ಸಂದರ್ಭದಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
ಐಟಿ ರಿಟರ್ನ್ ಫೈಲಿಂಗ್ ಕೊನೆ ದಿನ ಯಾವುದು?
ಇನ್ನು ಈ ವರ್ಷದ ಐಟಿ ರಿಟರ್ನ್ ಫೈಲಿಂಗ್ ಮಾಡಲು ಕೊನೆಯ ದಿನಾಂಕ ಯಾವುದು ಎಂದು ನೋಡುವುದಾರೆ ಜು.31 ಆಗಿದೆ. ಜು.31 ರಂದೇ ಕೊನೆಯ ದಿನಾಂಕವಾಗಿದೆ.
ಏನಿದು ಐಟಿ ರಿಟರ್ನ್?
ಆದಾಯ ತೆರಿಗೆ ರಿಟರ್ನ್ (ITR) ಒಬ್ಬ ವ್ಯಕ್ತಿಯು ತನ್ನ ಆದಾಯ ಮತ್ತು ಆ ವರ್ಷದಲ್ಲಿ ಪಾವತಿಸಬೇಕಾದ ತೆರಿಗೆಗಳ ಬಗ್ಗೆ ಮಾಹಿತಿಯನ್ನು ಸಲ್ಲಿಸಲು ಭಾರತದ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸುವ ಒಂದು ರೂಪವಾಗಿದೆ. ಐಟಿಆರ್‌ನಲ್ಲಿ ಸಲ್ಲಿಸಿದ ಮಾಹಿತಿಯು ಮುಂದಿನ ವರ್ಷದ ಏಪ್ರಿಲ್ 1 ರಿಂದ ಮಾರ್ಚ್ 31 ರ ನಡುವಿನ ನಿರ್ದಿಷ್ಟ ಹಣಕಾಸು ವರ್ಷಕ್ಕೆ ಅನ್ವಯಿಸಬೇಕು.
ನೀವು ಗಳಿಸುವ ಆದಾಯವು ಸಂಬಳ, ವ್ಯವಹಾರದಲ್ಲಿ ಲಾಭ, ಮನೆ ಅಥವಾ ಆಸ್ತಿಯ ಮಾರಾಟ, ಲಾಭಾಂಶ ಅಥವಾ ಬಂಡವಾಳ ಲಾಭಗಳು ಮತ್ತು ಇತರರಲ್ಲಿ ಪಡೆದ ಬಡ್ಡಿಯಂತಹ ಮೂಲಗಳಿಂದ ಆಗಿರಬಹುದು. ಒಂದು ವರ್ಷದಲ್ಲಿ ನೀವು ಹೆಚ್ಚುವರಿಯಾಗಿ ತೆರಿಗೆಯನ್ನು ಪಾವತಿಸಿದ್ದರೆ, ಅದನ್ನು ನೀವು ಆದಾಯ ತೆರಿಗೆ ಇಲಾಖೆಯಿಂದ ಮರುಪಾವತಿಯನ್ನು ಪಡೆಯಬಹುದಾಗಿದೆ.
ಇದನ್ನೂ ಓದಿ: Income Tax Returns: ಆದಾಯ ತೆರಿಗೆ ರಿಟರ್ನ್ಸ್; ಯಾವ ಆದಾಯದವರಿಗೆ ಯಾವ ಫಾರ್ಮ್?