Site icon Vistara News

Unemployment in India | ಶೇ.8.3ಕ್ಕೇರಿದ ದೇಶದ ನಿರುದ್ಯೋಗ ದರ! ಯಾವ ರಾಜ್ಯದಲ್ಲಿ ಹೆಚ್ಚು?

India's unemployment rate hits three-month high

ನವದೆಹಲಿ: ದೇಶದಲ್ಲಿ ನಿರುದ್ಯೋಗವು ಹೆಚ್ಚಾಗುತ್ತಿದೆ. 2022ರ ಡಿಸೆಂಬರ್‌ ತಿಂಗಳಲ್ಲಿ ನಿರುದ್ಯೋಗ ದರವು (Unemployment in India) ಶೇ.8.3ರಷ್ಟು ದಾಖಲಾಗಿದೆ. ಇದು 2022ರಲ್ಲಿ ಅತಿ ಹೆಚ್ಚು ನಿರುದ್ಯೋಗ ಪ್ರಮಾಣ ಎಂದು ವರದಿಯೊಂದು ತಿಳಿಸಿದೆ. ನಿರುದ್ಯೋಗ ಕುರಿತು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ(CMIE) ಮಾಹಿತಿಯನ್ನು ಬಿಡುಗಡೆ ಮಾಡಿದೆ.

2022ರ ನವೆಂಬರ್‌ನಲ್ಲಿ ನಿರುದ್ಯೋಗ ದರ ಶೇ.8ರಷ್ಟಿತ್ತು. ಸೆಪ್ಟೆಂಬರ್‌ನಲ್ಲಿ ಶೇ.43ರಷ್ಟಿತ್ತು. ಆಗಸ್ಟ್‌ನಲ್ಲಿ ಶೇ.8.28ರಷ್ಟಿತ್ತು ಮತ್ತು ಇದು 2022 ವರ್ಷದಲ್ಲಿ ಎರಡನೇ ಅತಿ ಹೆಚ್ಚು ನಿರುದ್ಯೋಗ ದರವಾಗಿದೆ . ಆಗಸ್ಟ್ ತಿಂಗಳಲ್ಲಿ ದಾಖಲಾದ ದರವನ್ನೂ ಡಿಸೆಂಬರ್‌ ತಿಂಗಳು ಮೀರಿಸಿದೆ ಎಂದು ಸಿಎಂಐಇ ತಿಳಿಸಿದೆ. ಇದೇ ವೇಳೆ, ನಗರ ನಿರುದ್ಯೋಗ ಪ್ರಮಾಣವು ಡಿಸೆಂಬರ್‌ನಲ್ಲಿ ಶೇ.10ರಷ್ಟಿತ್ತು. ಮತ್ತೊಂದೆಡೆ ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ಪ್ರಮಾಣವು ಶೇ.7.5ರಷ್ಟಿತ್ತು ಎಂದು ಮಾಹಿತಿಯಲ್ಲಿ ತಿಳಿಸಲಾಗಿದೆ.

ರಾಜ್ಯಗಳವಾರು ನಿರುದ್ಯೋಗ ಪ್ರಮಾಣವನ್ನು ಗಮನಿಸಿದರೆ, ಹರ್ಯಾಣ ಮೊದಲನೆ ಸ್ಥಾನದಲ್ಲಿ ನಿಲ್ಲುತ್ತದೆ. ಡಿಸೆಂಬರ್‌ನಲ್ಲಿ ಹರ್ಯಾಣ ಶೇ.37.4ರಷ್ಟು ನಿರುದ್ಯೋಗವನ್ನು ದಾಖಲಿಸಿದೆ. ಇದು ದೇಶದಲ್ಲೇ ಅತಿ ಹೆಚ್ಚು. ಹರ್ಯಾಣದ ನಂತರದ ಸ್ಥಾನದಲ್ಲಿ ರಾಜಸ್ಥಾನ(ಶೇ.28.5), ದಿಲ್ಲಿ(ಶೇ.20.8) ಮತ್ತು ಬಿಹಾರ ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿ ಕ್ರಮವಾಗಿ ಶೇ.19.1 ಮತ್ತು ಶೇ.18ರಷ್ಟು ನಿರುದ್ಯೋಗ ಪ್ರಮಾಣವು ದಾಖಲಾಗಿದೆ.

ಇದನ್ನೂ ಓದಿ | Mansoon session: ಏರುತ್ತಿರುವ ನಿರುದ್ಯೋಗ, ಕುಸಿಯುತ್ತಿರುವ ರೂಪಾಯಿ, ಸರಕಾರಕ್ಕಿದೆ ʻಅಗ್ನಿಪಥʼ

Exit mobile version