Site icon Vistara News

VISTARA TOP 10 NEWS: ಬಿಜೆಪಿ ಶಾಸಕರ ಅನುದಾನಕ್ಕೆ ಕುತ್ತು, ಇಸ್ರೇಲ್‌ಗೆ ಭಾರತದ ಬೆಂಬಲ ಇತ್ಯಾದಿ ಪ್ರಮುಖ ಸುದ್ದಿಗಳು

Top 10 mews

1. ಕಾಡು ಕಾಪಾಡಿದ ಜನರ ಕಾಡುವ ಸರ್ಕಾರ; ರಣಾಂಗಣವಾಯ್ತು ‘ಮೀಸಲು ಅರಣ್ಯ’
ಬೆಂಗಳೂರು: ಅರಣ್ಯೇತರ ಉದ್ದೇಶಗಳಿಗೆ ಪರಿವರ್ತಿಸಲಾಗಿದ್ದಂತಹ ಅರಣ್ಯ ಭೂಮಿಯ (Forest Land) ಪೈಕಿ ಶೇಕಡಾ 40ರಷ್ಟು ಭೂಮಿಯನ್ನು ಮರಳಿ ಮೀಸಲು ಅರಣ್ಯವಾಗಿ (Reserve Forest) ಪರಿವರ್ತನೆ ಮಾಡುವ ರಾಜ್ಯ ಸರ್ಕಾರದ (State Government) ನಿರ್ಧಾರ ಈಗ ರಾಜ್ಯದಲ್ಲಿ ಸಂಘರ್ಷಕ್ಕೆ ಕಾರಣವಾಗಿದೆ. ಅರಣ್ಯ ಮತ್ತು ಕಂದಾಯ ಇಲಾಖೆಯಿಂದ (Forest and Revenue Department) ಜಂಟಿಯಾಗಿ ಸರ್ವೆ ನಡೆಸದೆ ಬೇಕಾಬಿಟ್ಟಿಯಾಗಿ ಸರ್ವೆ ನಡೆಸಿ ಮೀಸಲು ಅರಣ್ಯ ಎಂದು ಘೋಷಿಸಿದ ಪರಿಣಾಮವಾಗಿ ಕಾಡಿನಂಚಿನಲ್ಲಿ ನೂರಾರು ವರ್ಷಗಳಿಂದ ವಾಸ ಮಾಡುತ್ತಿರುವ ಹಾಗೂ ವ್ಯವಸಾಯ ಮಾಡುತ್ತಿರುವ ಮಂದಿ ಬೀದಿಪಾಲಾಗುವ ಆತಂಕದ ಸ್ಥಿತಿ ಈಗ ಎದುರಾಗಿದೆ. ಈಗ ಬೆಳ್ತಂಗಡಿಯ ಕಳೆಂಜ ಗ್ರಾಮದ ಅಮ್ಮಿನಡ್ಕದಲ್ಲಿ ರೈತರೊಬ್ಬರಿಗೆ ಮನೆ ಕಟ್ಟಲು ಬಿಡದೇ ಇರುವುದು ಸಂಘರ್ಷಕ್ಕೆ ಎಡೆಮಾಡಿ ಕೊಟ್ಟಿದೆ. ನಾಗರಿಕರ ಪರವಾಗಿ ಈಗ ವಿಸ್ತಾರ ನ್ಯೂಸ್‌ ನಿಲ್ಲುತ್ತಿದ್ದು, ಜನರ ಪರವಾಗಿ ಅಭಿಯಾನ (Vistara News Campaign‌) ಮಾಡುತ್ತಿದೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್​ ಮಾಡಿ

2. ಬಿಜೆಪಿ ಶಾಸಕರ ಅನುದಾನ ಕಿತ್ತು ಕಾಂಗ್ರೆಸ್‌ ಸದಸ್ಯರಿಗೆ ಕೊಟ್ಟ ಸರ್ಕಾರ! ಇದೆಂಥ ದ್ವೇಷ
ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರ (State Congress Government) ಅಕ್ಷರಶಃ ದ್ವೇಷ ರಾಜಕಾರಣಕ್ಕೆ (Hate politics) ಇಳಿದಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಈಗಾಗಲೇ ಗ್ಯಾರಂಟಿ ಯೋಜನೆ ಜಾರಿ ಮಾಡಿ ಆರ್ಥಿಕ ಸಮತೋಲನಕ್ಕೆ ಹೆಣಗಾಡುತ್ತಿರುವ ಸರ್ಕಾರ ಈಗ ಬಿಜೆಪಿ ಶಾಸಕರ ಕ್ಷೇತ್ರಗಳ ಅನುದಾನಕ್ಕೆ (BJP MLAs constituencies grant) ಕೈ ಹಾಕಿದೆ. ಈ ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ನೀಡಿದ್ದ ಕೋಟ್ಯಂತರ ರೂಪಾಯಿ ಅನುದಾನವನ್ನು ವಾಪಸ್‌ ಪಡೆದಿರುವ ಸರ್ಕಾರ ತಮ್ಮದೇ ಪಕ್ಷದ ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಿಗೆ ವರ್ಗಾಯಿಸಿದೆ. ಇದೀಗ ರಾಜ್ಯ ರಾಜಕೀಯದಲ್ಲಿ (Karnataka Politics) ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್​ ಮಾಡಿ

3. ದೀಪಾವಳಿಗೂ ಪಟಾಕಿ ಹೊಡೀಬಾರದಾ? ಸಿದ್ದರಾಮಯ್ಯ ಹೇಳಿದ್ದೇನು?
ಬೆಂಗಳೂರು: ರಾಜ್ಯದಲ್ಲಿ ಇನ್ನು ಮುಂದೆ ಮದುವೆ, ಉತ್ಸವ, ರಾಜಕೀಯ ಕಾರ್ಯಕ್ರಮಗಳಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ಆದರೆ, ದೀಪಾವಳಿಯ ವೇಳೆ ಪಟಾಕಿ ಸಿಡಿಸಲು ಯಾವುದೇ ಅಡ್ಡಿ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಸ್ಪಷ್ಟಪಡಿಸಿದ್ದಾರೆ. 14 ಮಂದಿಯನ್ನು ಬಲಿ ಪಡೆದುಕೊಂಡ ಅತ್ತಿಬೆಲೆ ಪಟಾಕಿ ದುರಂತದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಮಂಗಳವಾರ ಸಂಬಂಧಿತ ಅಧಿಕಾರಿಗಳ ಸಭೆಯನ್ನು ಕರೆದಿದ್ದರು. ಈ ಸಭೆಯ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಪಟಾಕಿ ಬಳಕೆ, ಪರವಾನಗಿ ವ್ಯವಸ್ಥೆ ಮೇಲೆ ನಿಗಾ ವಹಿಸಬೇಕಾಗಿದೆ. ಹೀಗಾಗಿ ತುಂಬ ಜನ ಸೇರುವ ಜಾತ್ರೆ, ಮೆರವಣಿಗೆ, ರಾಜಕೀಯ ಕಾರ್ಯಕ್ರಮ, ಮೆರವಣಿಗೆಗಳ ವೇಳೆ ಪಟಾಕಿ ಹೊಡೆಯದಂತೆ ನಿಷೇಧ ವಿಧಿಸಲಾಗುವುದು ಎಂದು ಸಿಎಂ ಹೇಳಿದ್ದರು. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್​ ಮಾಡಿ

4. ಮೋದಿಗೆ ಇಸ್ರೇಲ್ ಪಿಎಂ ಫೋನ್ ಕಾಲ್!, ಇಸ್ರೇಲ್‌ಗೇ ಬೆಂಬಲ ಎಂದ ಭಾರತ
ನವದೆಹಲಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Israel pm Benjamin Netanyahu) ಅವರು ಪ್ರಧಾನಿ ನರೇಂದ್ರ ಮೋದಿ (Indian PM Narendra Modi) ಅವರಿಗೆ ದೂರವಾಣಿ ಕರೆ ಮಾಡಿ, ಇಸ್ರೇಲ್ ಮತ್ತು ಹಮಾಸ್ ಮಧ್ಯೆ ನಡೆಯುತ್ತಿರುವ ಕಾಳಗದ ಕುರಿತು ವಿಸ್ತಾರ ಮಾಹಿತಿ ನೀಡಿದ್ದಾರೆ(Israel Palestine War). ಈ ವಿಷಯವನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಹಂಚಿಕೊಂಡಿದ್ದಾರೆ. ಇಸ್ರೇಲ್- ಹಮಾಸ್ ಯುದ್ಧದಲ್ಲಿ ಮೃತಪಟ್ಟವರ ಸಂಖ್ಯೆ ಈಗ 1600ಕ್ಕೆ ಏರಿಕೆಯಾಗಿದೆ. ತಮ್ಮ ದೂರವಾಣಿ ಸಂಭಾಷಣೆ ವೇಳೆ, ಈ ಸಂಕಷ್ಟದ ಸ್ಥಿತಿಯ್ಲಲಿ ಭಾರತವು ಇಸ್ರೇಲ್ ಜತೆಗೆ ನಿಲ್ಲಲಿದೆ. ಭಾರತವು ಎಲ್ಲಾ ರೀತಿಯ ಭಯೋತ್ಪಾದನೆಯನ್ನು (Terrorism) ಬಲವಾಗಿ ಖಂಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಿ ಅವರಿಗೆ ತಿಳಿಸಿದ್ದಾರೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್​ ಮಾಡಿ
ಈ ಸುದ್ದಿಯನ್ನೂ ಓದಿ : Israel Palestine War: 1,500 ಹಮಾಸ್ ಉಗ್ರರ ಹೆಣ ಕೆಡವಿದ ಇಸ್ರೇಲ್‌
ಈ ಸುದ್ದಿಯನ್ನೂ ಓದಿ: Israel Palestine War: ಹಮಾಸ್ ಉಗ್ರರ ದಾಳಿಯ ಸೂತ್ರಧಾರಿ ಇವನೇ! ಯಾರಿವನು ಒಕ್ಕಣ್ಣ ರಾಕ್ಷಸ?

5. ಭಾರತ-ಆಫ್ಘನ್​ ಪಂದ್ಯಕ್ಕೆ ಮಳೆ ಕಾಟ ಇದೆಯೇ?; ಪಿಚ್​ ರಿಪೋರ್ಟ್, ಸಂಭಾವ್ಯ ತಂಡ ಹೀಗಿದೆ​
ನವದೆಹಲಿ: ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಬೀಗಿದ ಭಾರತ ತಂಡ ಮತ್ತೊಂದು ಪಂದ್ಯವನ್ನಾಡಲು ಸಜ್ಜಾಗಿ ನಿಂತಿದೆ. ಬುಧವಾರ ನಡೆಯುವ ವಿಶ್ವಕಪ್​ನ 9ನೇ ಪಂದ್ಯದಲ್ಲಿ ಅಫಘಾನಿಸ್ತಾನದ(India vs Afghanistan) ಸವಾಲನ್ನು ಎದುರಿಸಲಿದೆ. ಇತ್ತಂಡಗಳ ಈ ಕಾದಾಟಕ್ಕೆ ದೆಹಲಿಯ ಅರುಣ್​ ಜೇಟ್ಲಿ ಸ್ಟೇಡಿಯಂ(Arun Jaitley Stadium) ಅಣಿಯಾಗಿದೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್​ ಮಾಡಿ

6. ಜನರಹಿತ ಪ್ರದೇಶಗಳಿಗೆ ಕಸ ವಿಲೇವಾರಿ ಘಟಕಗಳ ಸ್ಥಳಾಂತರ: ಡಿಕೆಶಿ
ಬೆಂಗಳೂರು: ಜನ ಸಾಮಾನ್ಯರ ತೊಂದರೆ ನಿವಾರಣೆಗೆ ಯಶವಂತಪುರ ವಿಧಾನಸಭೆ ಕ್ಷೇತ್ರದ 5, ಬ್ಯಾಟರಾಯನಪುರದ 2, ದಾಸರಹಳ್ಳಿ, ಆನೇಕಲ್, ಮಹದೇವಪುರ ಕ್ಷೇತ್ರದಲ್ಲಿನ ಕಸ ವಿಲೇವಾರಿ ಘಟಕಗಳನ್ನು (Waste Disposal Unit) ಬೆಂಗಳೂರಿನ ಹೊರಭಾಗದಲ್ಲಿ ಜನರಹಿತ ಬೆಟ್ಟ ಗುಡ್ಡ ಪ್ರದೇಶಕ್ಕೆ ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್​ ಮಾಡಿ

7. ದಕ್ಷಿಣ ಒಳನಾಡಲ್ಲಿ ಇನ್ನೆರಡು ದಿನ ಬಿಡದೆ ಸುರಿಯಲಿದೆ ಮಳೆ
ಬೆಂಗಳೂರು: ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಮತ್ತು ಕರಾವಳಿಯ ಕೆಲವು ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ (Rain News) ಸಾಧ್ಯತೆ ಇದೆ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗುವ (Karnataka Weather) ಸಾಧ್ಯತೆ ಇದೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್​ ಮಾಡಿ

8. ಬಿಗ್‌ಬಾಸ್‌ ಮನೆಯೊಳಗೆ ಹೋಗಿದ್ಯಾಕೆ?; ಹೀಗಂದಿದ್ದಾರೆ ಪ್ರದೀಪ್‌ ಈಶ್ವರ್‌
ಬೆಂಗಳೂರು: ಬಹು ನಿರೀಕ್ಷಿತ ಬಿಗ್‌ಬಾಸ್‌ ಕನ್ನಡ ಸೀಸನ್‌ 10 (BBK Season 10ಅದ್ಧೂರಿಯಾಗಿ ಆರಂಭವಾಗಿದೆ. ಬಹಳಷ್ಟು ಬದಲಾವಣೆಯೊಂದಿಗೆ ಆರಂಭವಾದ ಈ ಶೋ ಗಮನ ಸೆಳೆಯುತ್ತಿದೆ. ವೋಟಿಂಗ್‌ ಮೂಲಕ ಈ ಬಾರಿ ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಮಧ್ಯೆ ಸೋಮವಾರ ಅಚ್ಚರಿ ಎಂಬಂತೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಬಿಗ್‌ಬಾಸ್‌ ಮನೆಗೆ ಭೇಟಿ ನೀಡಿದರು. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್​ ಮಾಡಿ

9. ಮುಂಬೈನಲ್ಲಿ ನಡೆಯಲಿದೆ ಐತಿಹಾಸಿಕ ಒಲಿಂಪಿಕ್ಸ್​ ಅಧಿವೇಶನ; ಏನಿದರ ವಿಶೇಷ?
ಮುಂಬಯಿ: ಐಒಸಿ ಅಧಿವೇಶನವು (IOC Session) ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (International Olympic Committee) ಕಾರ್ಯನಿರ್ವಾಹಕ ಮಂಡಳಿಯ ಎಲ್ಲಾ ಸದಸ್ಯರ ಸಭೆಯಾಗಿದೆ. ಈ ಸಭೆಯಲ್ಲಿ ನಾಮನಿರ್ದೇಶನಗೊಂಡಿರುವ ಸದಸ್ಯರು ಕೂಡ ಭಾಗವಹಿಸಲಿದ್ದಾರೆ. ಮುಂಬರುವ ಅಧಿವೇಶನವು 141 ನೇ ಐಒಸಿ ಅಧಿವೇಶನವಾಗಿದೆ. ಇದು ಈ ಬಾರಿ ಭಾರತದ ವಾಣಿಜ್ಯ ರಾಜಧಾನಿ ಮುಂಬಯಿನಲ್ಲಿ ಆಯೋಜನೆಗೊಂಡಿದೆ. ರಿಲಯನ್ಸ್​ ಫೌಂಡೇಷನ್​​ನ ಮುಖ್ಯಸ್ಥರಾದ ನೀತಾ ಅಂಬಾನಿ ಅವರ ಶ್ರಮದಿಂದಾಗಿ ಈ ಅಧಿವೇಶನಕ್ಕೆ ಭಾರತವು ಈ ಬಾರಿ ಆತಿಥ್ಯ ವಹಿಸುತ್ತಿದೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್​ ಮಾಡಿ

10. ಹಿತ್ತಲಿನಲ್ಲಿ ಯಾರೂ ಎತ್ತಲಾರದಂಥ 1247 ಕೆಜಿ ತೂಕದ ಕುಂಬಳಕಾಯಿ ಬೆಳೆದ ಶಿಕ್ಷಕ!
ವಾಷಿಂಗ್ಟನ್: ಅಮೆರಿಕದ ಶಿಕ್ಷಕರೊಬ್ಬರು (American Teacher) ತಮ್ಮ ಹಿತ್ತಲಿನಲ್ಲಿ ಬೃಹತ್ ಗಾತ್ರದ ಕುಂಬಳ ಕಾಯಿಯನ್ನು (Big Pumpkin) ಬೆಳೆದು ಎಲ್ಲರ ಗಮನ ಸೆಳೆದಿದ್ದಾರೆ. ಈ ಕುಂಬಳ ಕಾಯಿ ಸುಮಾರು 1247 ಕಿಲೋ ಗ್ರಾಮ್ ತೂಗುತ್ತದೆ! ಈ ಬೃಹತ್ ಕುಂಬಳಕಾಯಿಗೆ ಅವರು ಅಮೆರಿಕದ ಬಾಸ್ಕೆಟ್ ಬಾಲ್ ದಂತಕತೆ ಮೈಕೆಲ್ ಜೋರ್ಡನ್(Michael Jordan) ಎಂದು ನಾಮಕರಣ ಮಾಡಿದ್ದಾರೆ. ಅಂದ ಹಾಗೆ, ಈ ಗಜಗಾತ್ರದ ಕುಂಬಳಕಾಯಿ ಬೆಳೆದವರು ಅಮೆರಿಕದ ಮಿನ್ನೇಸೋಟ (Minnesota teacher) ರಾಜ್ಯದ ಟ್ರಾವಿಸ್ ಗಿಂಜರ್ (Travis Gienger) ಅವರು. ಅನೋಕಾ ಟೆಕ್ನಿಕಲ್ ಕಾಲೇಜಿನಲ್ಲಿ ತೋಟಗಾರಿಕೆಯನ್ನು ಕಲಿಸುವ ಟ್ರಾವಿಸ್ ಗಿಂಜರ್ ಅವರು, ಕ್ಯಾಲಿಫೋರ್ನಿಯಾದ ಹಾಫ್ ಮೂನ್ ಬೇನಲ್ಲಿ 50 ನೇ ವಿಶ್ವ ಚಾಂಪಿಯನ್‌ಶಿಪ್ ಕುಂಬಳಕಾಯಿ ಪ್ರದರ್ಶನಕ್ಕಾಗಿ ಈ ಬೃಹತ್ ಕುಂಬಳಕಾಯಿ ಬೆಳೆದಿದ್ದಾರೆ. ಇದು ವಿಶ್ವದಲ್ಲಿ ಅತಿ ತೂಕದ ಕುಂಬಳಕಾಯಿ ಎಂಬ ದಾಖಲೆಯನ್ನು ಮಾಡಿದೆ(Viral News). ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್​ ಮಾಡಿ

Exit mobile version