Site icon Vistara News

Lithium Deposit: ಮೊದಲ ಬಾರಿಗೆ ಭಾರತದಲ್ಲಿ ಲಿಥಿಯಮ್ ನಿಕ್ಷೇಪ ಪತ್ತೆ! ಇದರಿಂದ ಏನು ಲಾಭ?

India finds lithium for the first time in J and K

ನವದೆಹಲಿ: ಇದೇ ಮೊದಲ ಬಾರಿಗೆ ದೇಶದಲ್ಲಿ ಲಿಥಿಯಮ್ ನಿಕ್ಷೇಪ (Lithium Deposit) ಪತ್ತೆಯಾಗಿದೆ. ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಸಲಾಲ್-ಹೈಮನಾ ಪ್ರದೇಶದಲ್ಲಿ 59 ಲಕ್ಷ ಟನ್ ಲಿಥಿಯಮ್ ಇರುವ ನಿಕ್ಷೇಪ ದೊರೆತಿದೆ ಎಂದು ಭಾರತೀಯ ಭೌಗೋಳಿಕ ಸರ್ವೇಕ್ಷಣಾ ಸಂಸ್ಥೆ (Geological Survey of India) ಹೇಳಿದೆ.

ಭಾರತದ ಜಮ್ಮು ಮತ್ತು ಕಾಶ್ಮೀರದಲ್ಲಿ ಇದೇ ಮೊದಲ ಬಾರಿಗೆ ಲಿಥಿಯಮ್ ನಿಕ್ಷೇಪ ಪತ್ತೆಯಾಗಿದೆ ಎಂದು ಗಣಿ ಇಲಾಖೆ ಕಾರ್ಯದರ್ಶಿ ವಿವೇಕ ಭಾರದ್ವಾಜ್ ಅವರು ಹೇಳಿದ್ದಾರೆ. ಲಿಥಿಯಂ ನಾನ್-ಫೆರಸ್ ಲೋಹವಾಗಿದ್ದು, ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಡಿಜಿಟಲ್ ಕ್ಯಾಮೆರಾಗಳು ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ರಿಚಾರ್ಜ್ ಮಾಡಬಹುದಾದ ಬ್ಯಾಟರಿಗಳಲ್ಲಿನ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಹಾರ್ಟ್ ಪೇಸ್‌ಮೇಕರ್‌ಗಳು, ಆಟಿಕೆಗಳು ಮತ್ತು ಗಡಿಯಾರಗಳಂತಹ ಕೆಲವು ಸಾಧನಗಳಲ್ಲೂ ನೀವು ಇದನ್ನು ಕಾಣಬಹುದು.

ಇದನ್ನೂ ಓದಿ: ವಿಸ್ತಾರ Explainer | ದೇಶೀಯವಾಗಿ ಲಿಥಿಯಂ ಹುಡುಕಾಟ, ಮಂಡ್ಯದಲ್ಲೇ ಇದೆ ನಿಕ್ಷೇಪ!

ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವುದಕ್ಕಾಗಿ, ಲಿಥಿಯಮ್ ಪೂರೈಕೆ ಸರಪಳಿಯನ್ನು ಬಲಪಡಿಸುವುದಕ್ಕಾಗಿ ಸರ್ಕಾರ ಹಲವಾರು ಉತ್ತೇಜನಾಕಾರಿ ಕ್ರಮಗಳನ್ನು ಕೈಗೊಂಡಿದೆ. ಆಸ್ಟ್ರೇಲಿಯಾ ಮತ್ತು ಅರ್ಜೆಂಟೀನಾ ಸೇರಿದಂತೆ ವಿವಿಧೆಡೆಯಿಂದ ಲಿಥಿಯಮ್ ತರಿಸಿಕೊಳ್ಳಲಾಗುತ್ತಿದೆ ಎಂದು ಗಣಿ ಇಲಾಖೆ ಈ ಹಿಂದೆ ಹೇಳಿತ್ತು. ನಿಕೆಲ್, ಕೋಬಾಲ್ಟ್ ಹಾಗೂ ಲಿಥಿಯಮ್ ಸೇರಿದಂತೆ ಅನೇಕ ಖನಿಜಗಳಿಗಾಗಿ ಭಾರತವು ಬೇರೆ ಬೇರೆ ರಾಷ್ಟ್ರಗಳನ್ನು ಅವಲಂಬಿಸಿದೆ.

Exit mobile version