Site icon Vistara News

Ballistic Missile | ಪರಮಾಣು ಜಲಾಂತರ್ಗಾಮಿ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿ

Ballistic

ನವದೆಹಲಿ: ಭಾರತದ ಮೊದಲ ದೇಶೀಯ ನಿರ್ಮಿತ ಜಲಾಂತರ್ಗಾಮಿ ಐಎನ್‌ಎಸ್‌ ಅರಿಹಂತ್‌ನಿಂದ ಸಬ್‌ಮರೀನ್‌ ಲಾಂಚ್ಡ್‌ ಬ್ಯಾಲಿಸ್ಟಿಕ್‌ ಕ್ಷಿಪಣಿಯ (SLBM) (Ballistic Missile) ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ. ಇದರಿಂದ ಸಾಗರ ಪ್ರದೇಶದಲ್ಲಿ ಭಾರತದ ಬಲ ಹೆಚ್ಚಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಹಾಗೆಯೇ, ಪರಮಾಣು ನಿರೋಧಕ ಸಾಮರ್ಥ್ಯವೂ ಹೆಚ್ಚಾದಂತಾಗಿದೆ.

“ಬಂಗಾಳ ಕೊಲ್ಲಿಯಿಂದ (Bay Of Bengal) ಉಡಾವಣೆಯಾದ ಬ್ಯಾಲಿಸ್ಟಿಕ್‌ ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿದೆ. ಇದರಿಂದ ಸಾಗರ ಪ್ರದೇಶದಲ್ಲಿ ಭಾರತದ ವಿಶ್ವಾಸಾರ್ಹತೆ, ಆತ್ಮವಿಶ್ವಾಸ ಹೆಚ್ಚಾಗಿದೆ” ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ. ಇದರಿಂದ ಸಾಗರ ಪ್ರದೇಶದಲ್ಲಿ ಚೀನಾ ಹಾಗೂ ಪಾಕಿಸ್ತಾನದ ಯಾವುದೇ ಉಪಟಳ, ಆಕ್ರಮಣಕಾರಿ ಚಟುವಟಿಕೆಯನ್ನು ನಿಯಂತ್ರಿಸಬಹುದಾಗಿದೆ ಎಂದು ತಿಳಿದುಬಂದಿದೆ.

ಐಎನ್‌ಎಸ್‌ ಅರಿಹಂತ್‌, ಮೊದಲ ದೇಶೀಯ ಪರಮಾಣು ಜಲಾಂತರ್ಗಾಮಿಯಾಗಿದೆ. ಇದರಿಂದ ಬ್ಯಾಲಿಸ್ಟಿಕ್‌ ಕ್ಷಿಪಣಿಯನ್ನು ಉಡಾವಣೆ ಮಾಡಲಾಗಿದೆ. ಐಎನ್‌ಎಸ್‌ ಅರಿಹಂತ್‌ಗೆ ಮೊದಲ ಬಾರಿಗೆ ೨೦೦೯ರಲ್ಲಿ ಚಾಲನೆ ನೀಡಲಾಯಿತು. ಜಗತ್ತಿನಲ್ಲಿಯೇ ಪರಮಾಣು ಹೊಂದಿರುವ ಆರನೇ ರಾಷ್ಟ್ರ ಎಂಬ ಖ್ಯಾತಿ ಭಾರತದ್ದಾಗಿದೆ.

ಇದನ್ನೂ ಓದಿ | VSHORADS Missile | ಕಡಿಮೆ ವ್ಯಾಪ್ತಿಯ ಗುರಿ ಹೊಡೆದುರುಳಿಸುವ ಕ್ಷಿಪಣಿಯ ಪರೀಕ್ಷೆ ಯಶಸ್ವಿ

Exit mobile version