ಕೊಯಮತ್ತೂರು : ದೇಶದಲ್ಲಿ ಮೊದಲ ಬಾರಿಗೆ ಖಾಸಗಿ ಸಂಸ್ಥೆಗಳು ನಿರ್ವಹಿಸುವ ಪ್ರಯಾಣಿಕರ ರೈಲು ಸಂಚಾರ ಕಾರ್ಯರಂಭಗೊಂಡಿದೆ. ಭಾರತ್ ಗೌರವ್ ಯೋಜನೆಯಡಿ ಈ ರೈಲಿಗೆ ಚಾಲನೆ ನೀಡಲಾಗಿದ್ದು, ಈ ರೈಲು ತಮಿಳುನಾಡಿನ ಕೊತಮತ್ತೂರಿನಿಂದ ಮಹಾರಾಷ್ಟ್ರದ ಶಿರಡಿ ನಡುವೆ ಸಂಚಾರ ನಡೆಸಲಿದೆ. ಜೂನ್ 14ರ ಸಂಜೆ ಈ ಖಾಸಗಿ ರೈಲು ಸೇವೆಗೆ ಕೊಯಮತ್ತೂರು ಉತ್ತರ ರೈಲು ನಿಲ್ದಾಣದಿಂದ ಚಾಲನೆ ನೀಡಲಾಗಿದೆ.
ಈ ರೈಲು ಶಿರಡಿಗೆ ತಲುಪುವ ಮೊದಲು ತಿರುಪುರ್, ಈರೋಡ್, ಸೇಲಂ, ಜೋಲಾರ್‌ವೇಟ್, ಬೆಂಗಳೂರು ಯಲಹಂಕ, ಧರ್ಮಾವರ, ಮಂತ್ರಾಲಯದಲ್ಲಿ ಸುಮಾರು 5 ಗಂಟೆಗಳ ಕಾಲ ನಿಲುಗಡೆಯಾಗಲಿದೆ. ಅಲ್ಲದೆ ಖಾಸಗಿ ರೈಲಿನ ದರಗಳು ಭಾರತೀಯ ರೈಲುಗಳ ವಿಧಿಸುವ ನಿಯಮಿತ ರೈಲು ಟಿಕೆಟ್ ದರಗಳಿಗೆ ಸಮನಾಗಿರುತ್ತದೆ. ರೈಲು ಮಂತ್ರಾಲಯ ಮಾರ್ಗವಾಗಿ ಶಿರಡಿಗೆ ಹೋಗುವುದರಿಂದ ಮಂತ್ರಾಲಯದಲ್ಲಿ ಪ್ರಯಾಣಿಕರು ಇಳಿದು ದೇವರ ದರ್ಶನ ಮಾಡಿ ಬರುವವರೆಗೂ ರೈಲು 5 ಗಂಟೆಗೂ ಹೆಚ್ಚು ಕಾಲ ನಿಲ್ದಾಣದಲ್ಲೇ ಇರಲಿದೆ.
ಇದನ್ನು ಓದಿ| ಉಪನಗರ ರೈಲು ಯೋಜನೆಗೆ ಪ್ರಧಾನಿ ಮೋದಿ ಶಿಲಾನ್ಯಾಸ
ಪ್ರಯಾಣಿಕರಿಗೆ ಇದೊಂದು ಉತ್ತಮ ಅನುಭವ ನೀಡಲಿದ್ದು, ಒಟ್ಟು ಐದು ತಿಂಗಳ ಪ್ರಯಾಣದ ಯೋಜನೆಯನ್ನು ಈಗಾಗಲೇ ರೂಪಿಸಲಾಗಿದೆ. ಯೋಜನೆ ಪೈಕಿ ತಿಂಗಳಿಗೆ ಮೂರು ಬಾರಿ ಕೊಯಮತ್ತೂರಿನಿಂದ ಶಿರಡಿಗೆ ಪ್ರಯಾಣ ಬೆಳೆಸಲು ಅವಕಾಶ ಕಲ್ಪಿಸಿ ಕೊಡಲಾಗಿದೆ. ಒಂದು ಬಾರಿಯ ಪ್ರಯಾಣಕ್ಕೆ ಸುಮಾರು ಐದು ದಿನಗಳು ಹಿಡಿಯುತ್ತವೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಈ ಯೋಜನೆಯಿಂದಾಗಿ ಪ್ರಯಾಣಿಕರು ಹರ್ಷಗೊಂಡಿದ್ದಾರೆ. ಶಿರಡಿಗೆ ಒಂದೇ ರೈಲಿನಲ್ಲಿ ತೆರಳಬಹುದಾಗಿದ್ದು ಎಲ್ಲಿಯೂ ಹತ್ತಿ ಇಳಿಯುವ ಪ್ರಮೇಯವೇ ಇಲ್ಲ. ಇದರಿಂದ ಬಹಳ ಉಪಯುಕ್ತವಾಗಿದೆ. ಅಲ್ಲದೆ ಭಾರತೀಯ ರೈಲ್ವೆ ಟಿಕೆಟ್ ದರವಷ್ಟೇ ಈ ಖಾಸಗಿ ರೈಲಿನಲ್ಲೇ ಇದ್ದು, ಎಲ್ಲಾ ರೀತಿಯ ಸೌಲಭ್ಯವಿದೆ. ಅಲ್ಲದೆ ಶಿರಡಿಯಲ್ಲಿ ದೇವರ ದರ್ಶನಕ್ಕಾಗಿ ವಿಐಪಿ ದರ್ಶನದ ವ್ಯವಸ್ಥೆಯೂ ಇದೆ. ಎಲ್ಲಾ ರೀತಿಯ ಮೂಲ ಸೌಲಭ್ಯಗಳು ಇವೆ ಎಂದು ಪ್ರಯಾಣಿಕರು ಹೇಳಿಕೊಂಡಿದ್ದಾರೆ.
ಇದನ್ನು ಓದಿ| ಬುಲೆಟ್ ರೈಲು 2026ಕ್ಕೆ ಆರಂಭವಾಗುವ ವಿಶ್ವಾಸ ಇದೆ ಎಂದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್