Site icon Vistara News

4 ಲಕ್ಷ ಕೋಟಿ ಡಾಲರ್ ದಾಟಿದ ಭಾರತದ ಜಿಡಿಪಿ! ಬಿಜೆಪಿ ನಾಯಕರ ಅಭಿನಂದನೆ ಸುರಿಮಳೆ

India will become a 7 trillion dollar economy by 2023 Says Finance Ministry

ನವದೆಹಲಿ: ಭಾರತದ ಆರ್ಥಿಕತೆಯು (Indian Economy) ಭಾನುವಾರ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದ್ದು, ಅದರ ಒಟ್ಟು ನಾಮಿನಲ್ ದೇಶೀಯ ಉತ್ಪನ್ನ (GDP) ಇದೇ ಮೊದಲ ಬಾರಿಗೆ 4 ಟ್ರಿಲಿಯನ್ ಡಾಲರ್‌ (4 Trillion Dollar) ದಾಟಿದೆ. ಆದರೆ, ಈ ವಿಷಯವನ್ನು ವಿತ್ತ ಸಚಿವಾಲಯ (Finance Ministry) ಅಥವಾ ರಾಷ್ಟ್ರೀಯ ಸಾಂಖೀಕ ಕಚೇರಿಯು (National Statistical Office) ಖಚಿತಪಡಿಸಿಲ್ಲ. ಮಾಧ್ಯಮಗಳು ಈ ಕುರಿತು ವರದಿ ಮಾಡಿವೆ(Media Report).

ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಡೇಟಾವನ್ನು ಆಧರಿಸಿ ಎಲ್ಲಾ ದೇಶಗಳಿಗೆ ಲೈವ್ ಟ್ರ್ಯಾಕಿಂಗ್ ಜಿಡಿಪಿ ಫೀಡ್‌ನ ಸ್ಕ್ರೀನ್‌ಗ್ರಾಬ್ ಅನ್ನು ಹಲವಾರು ಹಿರಿಯ ಬಿಜೆಪಿ ನಾಯಕರು ಸೇರಿದಂತೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಸ್ಕ್ರೀನ್ ಶಾಟ್ ಷೇರ್ ಮಾಡಿಕೊಂಡಿರುವ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರು, ಜಾಗತಿಕ ವೇದಿಕೆಯಲ್ಲಿ ಭಾರತದ ಮಹತ್ವದ ಪಾತ್ರ ಎಂದು ಟ್ವೀಟ್ ಮಾಡಿದ್ದಾರೆ. ಭಾರತವು ಜಿಡಿಪಿಯಲ್ಲಿ 4 ಟ್ರಿಲಿಯನ್ ದಾಟುವ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ. ಇದು ನಮ್ಮ ಜಾಗತಿಕ ಉಪಸ್ಥಿತಿಯಲ್ಲಿ ಮಹತ್ವದ ಕ್ಷಣವನ್ನು ಗುರುತಿಸುತ್ತದೆ. ಪಿಎಂ ಮೋದಿಯವರ ನಾಯಕತ್ವವು ಭಾರತವನ್ನು ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ದಿದೆ ಎಂದು ಅವರು ಬರೆದುಕೊಂಡಿದ್ದಾರೆ.

ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಈ ಫೋಟೋವನ್ನು ಷೇರ್ ಮಾಡಿಕೊಂಡಿದ್ದು, ಇದು ಕ್ರಿಯಾತ್ಮಕ, ದೂರದೃಷ್ಟಿಯ ನಾಯಕತ್ವ ಫಲದಂತೆ ತೋರುತ್ತದೆ ಎಂದು ಹೇಳಿಕೊಂಡಿದ್ದಾರೆ. ನಮ್ಮ ರಾಷ್ಟ್ರವು 4 ಟ್ರಿಲಿಯನ್ ಜಿಡಿಪಿ ಮೈಲಿಗಲ್ಲನ್ನು ದಾಟುತ್ತಿರುವಂತೆ ನನ್ನ ಸಹ ಭಾರತೀಯರಿಗೆ ಅಭಿನಂದನೆಗಳು! ನಿಮಗೆ ಹೆಚ್ಚಿನ ಶಕ್ತಿ, ನಿಮಗೆ ಹೆಚ್ಚು ಗೌರವ ಪ್ರಧಾನಿ ಮೋದಿ ಎಂದು ಅವರು ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ.

ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಅವರು, ಜಿಡಿಪಿಯು ಮೊದಲ ಬಾರಿಗೆ 4 ಟ್ರಿಲಿಯನ್‌ಗೆ ತಲುಪಿ, ಮುಂದೆ ಸಾಗುತ್ತಿದೆ. ಅಭಿನಂದನೆಗಳು. 5 ಟ್ರಿಲಿಯನ್ ಆರ್ಥಿಕತೆಯತ್ತ ಸಾಗುತ್ತಿದ್ದು, ಇದು ಮೋದಿ ಅವರ ಗ್ಯಾರಂಟಿ ಎಂದು ಟ್ವೀಟ್ ಮಾಡಿದ್ದಾರೆ.

ಆಂಧ್ರಪ್ರದೇಶದ ಬಿಜೆಪಿ ಅಧ್ಯಕ್ಷೆ ಡಿ ಪುರಂದೇಶ್ವರಿ ಅವರು ಟ್ವೀಟ್ ಮಾಡಿ, 4 ಲಕ್ಷ ಕೋಟಿ ಡಾಲರ್ ಆರ್ಥಿಕತೆಯಾಗಿದ್ದಕ್ಕೆ ಅಭಿನಂದನೆಗಳು ಭಾರತ್. ಕಳೆದ 9.5 ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರವು ಪರಿಚಯಿಸಿದ ಮತ್ತು ಜಾರಿಗೆ ತಂದ ಅದ್ಭುತ ಸುಧಾರಣೆಗಳಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಹೇಳಿದ್ದಾರೆ. ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಕೂಡ ಅಭಿನಂದನೆ ಸಲ್ಲಿಸಿದ್ದಾರೆ. ಜಗತ್ತಿನಲ್ಲೇ ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆ ರಾಷ್ಟ್ರವಾಗಲು ಇನ್ನು ಕೇವಲ ಎರಡು ವರ್ಷಗಳು ಸಾಕು ಎಂದು ಅವರು ಟ್ವೀಟ್ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ : Retail Inflation: ಶೇ.4.87ಕ್ಕೆ ಇಳಿಕೆಯಾದ ಚಿಲ್ಲರೆ ಹಣದುಬ್ಬರ!

Exit mobile version