Site icon Vistara News

PM Modi Parliament Speech: ದೇಶದಲ್ಲೀಗ ರಾಜಕೀಯ ಸ್ಥಿರತೆ ಸಾಧನೆ, ಸಂಸತ್ತಲ್ಲಿ ಮೋದಿ ಉವಾಚ

Narendra Modi In Parliament

#image_title

ನವದೆಹಲಿ: “ಭಾರತವು ಈಗ ಕಳೆದ ಹಲವು ದಶಕಗಳಲ್ಲಿಯೇ ರಾಜಕೀಯವಾಗಿ ಹೆಚ್ಚಿನ ಸ್ಥಿರತೆ ಹೊಂದಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಂಸತ್ತಿನಲ್ಲಿ ರಾಷ್ಟ್ರಪತಿಯವರ ವಂದನಾ ನಿರ್ಣಯಕ್ಕೆ ಉತ್ತರ ನೀಡುವ ವೇಳೆ ಹಲವು ವಿಷಯಗಳನ್ನು (PM Modi Parliament Speech) ಪ್ರಸ್ತಾಪಿಸಿದರು. ಇದೇ ವೇಳೆ ಅವರು ರಾಜಕೀಯ ಸ್ಥಿರತೆ ಬಗ್ಗೆ ಮಾತನಾಡಿದರು.

“ಕಳೆದ ಎರಡು ದಶಕಗಳಲ್ಲಿ ಭಾರತದಲ್ಲಿ ರಾಜಕೀಯ ಅಸ್ಥಿರತೆ ಇತ್ತು. ಆದರೆ, ಈಗ ಭಾರತದಲ್ಲಿ ರಾಜಕೀಯ ಸ್ಥಿರತೆ ಇದೆ. ಇದಕ್ಕೂ ಮೊದಲು ಸರ್ಕಾರಗಳು ಅಸ್ತಿತ್ವದಲ್ಲಿದ್ದಾಗ ದೇಶದಲ್ಲಿ ರಾಜಕೀಯ ಅಸ್ಥಿರತೆ ಇತ್ತು. ವಿಶ್ವವು ಅಭಿವೃದ್ಧಿ ಹೊಂದುತ್ತಿದ್ದರೆ, ಭಾರತದಲ್ಲಿ ಮಾತ್ರ ೨ಜಿ, ಕಾಮನ್‌ವೆಲ್ತ್‌ ಗೇಮ್ಸ್‌ ಸೇರಿ ಹಲವು ಹಗರಣಗಳ ಚರ್ಚೆಯಾಗುತ್ತಿತ್ತು. ಆದರೆ, ದೇಶದ ಚಿತ್ರಣವೀಗ ಬದಲಾಗಿದೆ. ರಾಜಕೀಯ ಅಸ್ಥಿರತೆಯು ದೇಶವನ್ನು ಏಳಿಗೆಯತ್ತ ಕೊಂಡೊಯ್ಯುತ್ತಿದೆ” ಎಂದು ಹೇಳಿದರು.

ಯುಪಿಎ ಸರ್ಕಾರದ ಮೊದಲ ಹಾಗೂ ಎರಡನೇ ಅವಧಿಯ ಆಡಳಿತವನ್ನು ಮೋದಿ ಟೀಕಿಸಿದರು. “೨೦೦೪ರಿಂದ ೨೦೧೪ರ ಅವಧಿಯಲ್ಲಿ ಭಾರತದ ವಿತ್ತೀಯ ಸ್ಥಿತಿ ದುಸ್ಥರವಾಗಿತ್ತು. ಹಣದುಬ್ಬರವು ಎರಡು ಅಂಕಿಗಳನ್ನು ದಾಟಿತ್ತು. ಆದರೆ, ಈಗ ಭಾರತವು ಏಳಿಗೆಯತ್ತ ಸಾಗುತ್ತಿದೆ. ಇದೇ ಕೆಲವರಿಗೆ ನುಂಗಲಾರದ ತುತ್ತಾಗಿದೆ” ಎಂದು ಪ್ರತಿಪಕ್ಷಗಳಿಗೆ ಕುಟುಕಿದರು.

ಇದನ್ನೂ ಓದಿ: Modi In Karnataka: ರಾಗಿ ಮುದ್ದೆ, ರಾಗಿ ರೊಟ್ಟಿ ಸ್ವಾದಕ್ಕೆ ಮನಸೋತ ನರೇಂದ್ರ ಮೋದಿ!

Exit mobile version