Site icon Vistara News

Narendra Modi: ‘ಭಾರತ ಉತ್ತಮ ಕೈಗಳಲ್ಲಿದೆ’ ಎಂದು ಮೋದಿಯನ್ನು ಹೊಗಳಿದ ಹಾಲಿವುಡ್‌ ನಟ

Narendra Modi And Michael Douglas

India is in very good hands: Michael Douglas praises PM Narendra Modi at IFFI 2023

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಜಾಗತಿಕ ನಾಯಕರು ಮೆಚ್ಚುಗೆಯ ಮಾತುಗಳನ್ನಾಡುವುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ. ಈಗ ಹಾಲಿವುಡ್‌ ಖ್ಯಾತ ನಟ, ನಿರ್ಮಾಕ ಮೈಕೆಲ್‌ ಡಗ್ಲಾಸ್‌ (Michael Douglas) ಅವರು ಕೂಡ ನರೇಂದ್ರ ಮೋದಿ (Narendra Modi) ಅವರನ್ನು ಹೊಗಳಿದ್ದಾರೆ. ಗೋವಾದಲ್ಲಿ ನಡೆದ ಇಂಟರ್‌ನ್ಯಾಷನಲ್‌ ಫಿಲಂ ಫೆಸ್ಟಿವಲ್‌ ಆಫ್‌ ಇಂಡಿಯಾದಲ್ಲಿ (International Film Festival of India-IFFI) ಮಾತನಾಡಿದ ಮೈಕೆಲ್‌ ಡಗ್ಲಾಸ್‌, “ಭಾರತವು ಬಹಳ ಉತ್ತಮ ಕೈಗಳ್ಳಲಿದೆ” ಎಂದು ಹೇಳಿದರು.

“ಫಿಲಂ ಫೆಸ್ಟಿವಲ್‌ನ ಹೆಗ್ಗಳಿಕೆ ಎಂದರೆ, ಜಗತ್ತಿನ 78 ರಾಷ್ಟ್ರಗಳು ಭಾಗವಹಿಸಿವೆ. ಇದು ಭಾರತದ ಸಿನಿಮಾ ಸಾಧನೆಯ ಪ್ರತಿಬಿಂಬವಾಗಿದೆ. ಜಗತ್ತಿನಾದ್ಯಂತ ಭಾರತದ ಸಿನಿಮಾಗಳು ಮೂಡಿಸುವ ಛಾಪು ಅಷ್ಟರಮಟ್ಟಿಗೆ ಇದೆ. ಅಲ್ಲದೆ, ದೇಶವು ಉತ್ತಮ ಕೈಗಳ್ಳಲಿದೆ” ಎಂದು ಮೈಕೆಲ್‌ ಡಗ್ಲಾಸ್‌ ಹೇಳಿದರು. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್‌ ಠಾಕೂರ್‌ ಅವರ ಕುರಿತು ಕೂಡ ಹಾಲಿವುಡ್‌ ನಟ ಮೆಚ್ಚುಗೆ ವ್ಯಕ್ತಪಡಿಸಿದರು. “ಕಳೆದ ಕೆಲ ವರ್ಷಗಳಿಂದ ಸಿನಿಮಾಗಳಲ್ಲಿ ಹೆಚ್ಚಿನ ಹೂಡಿಕೆಯಾಗುತ್ತಿರುವುದನ್ನು ನಾವು ನೋಡಿದ್ದೇವೆ. ಇದಕ್ಕೆ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಅವರ ಶ್ರಮವೂ ಹೆಚ್ಚಿದೆ. ಇದರಿಂದ ಯಶಸ್ಸು ದೊಡ್ಡದಾಗಿ ಸಿಗುತ್ತಿದೆ” ಎಂದು ಶ್ಲಾಘಿಸಿದರು.

ಮೈಕೆಲ್‌ ಡಗ್ಲಾಸ್‌ ಅವರು ಗೋವಾದಲ್ಲಿ ನಡೆದ ಫಿಲಂ ಫೆಸ್ಟಿವಲ್‌ನಲ್ಲಿ ಲವಲವಿಕೆಯಿಂದ ಭಾಗವಹಿಸಿದರು. ಅವರು ತಮ್ಮ ಪತ್ನಿ ಕ್ಯಾಥರಿನ್‌ ಝೆಟಾ-ಜೋನ್ಸ್‌ ಹಾಗೂ ಪುತ್ರನೊಂದಿಗೆ ಭಾರತಕ್ಕೆ ಆಗಮಿಸಿದ್ದಾರೆ. ಇದೇ ವೇಳೆ ಅವರು ಭಾರತದ ಸಿನಿಮಾಗಳ ಗುಣಮಟ್ಟ, ಅವುಗಳ ಯಶಸ್ಸು, ಜಗತ್ತಿನ ಸಿನಿಮಾ ಕ್ಷೇತ್ರ, ಸಿನಿಮಾ ಭಾಷೆ ಸೇರಿ ಹತ್ತಾರು ವಿಷಯಗಳ ಕುರಿತು ಮಾತನಾಡಿದರು.

ಅಂತಾರಾಷ್ಟ್ರಿಯ ಖ್ಯಾತಿಯ ಆಫ್ರಿಕನ್​-ಅಮೆರಿಕನ್​ ಗಾಯಕಿ ಮೇರಿ ಮಿಲ್​​ಬೆನ್ ಅವರು ಕೂಡ ಕೆಲ ದಿನಗಳ ಹಿಂದೆ ಮೋದಿ ಎಂದರೆ ನನಗಿಷ್ಟ ಎಂದಿದ್ದರು. “ನೀವೇಕೆ ನರೇಂದ್ರ ಮೋದಿ ಅವರನ್ನು ಬೆಂಬಲಿಸುತ್ತೀರಿ ಎಂದು ತುಂಬ ಜನ ಕೇಳುತ್ತಾರೆ. ಹೌದು, ನಾನು ಮೋದಿ ಅವರನ್ನು ಬೆಂಬಲಿಸುತ್ತೇನೆ. ಏಕೆಂದರೆ ಅವರೊಬ್ಬ ಅದ್ಭುತ ನಾಯಕ. ಭಾರತೀಯರ ಏಳಿಗೆಗೆ ಮೋದಿ ಕೊಡುಗೆ ಹೆಚ್ಚಿದೆ. ಅವರು ಭಾರತ-ಅಮೆರಿಕ ಸಂಬಂಧ, ಜಾಗತಿಕ ಆರ್ಥಿಕ ಸ್ಥಿರತೆ ಕಾಪಾಡುವ ದಿಸೆಯಲ್ಲೂ ಅತ್ಯುತ್ತಮ ನಾಯಕ. ಅಲ್ಲದೆ, ನಾನು ಭಾರತವನ್ನು ತುಂಬ ಪ್ರೀತಿಸುತ್ತೇನೆ. ಹಾಗೆಯೇ, ಮೋದಿ ಅವರನ್ನೂ ಇಷ್ಟಪಡುತ್ತೇನೆ” ಎಂದು ತಿಳಿಸಿದ್ದರು.

ಇದನ್ನೂ ಓದಿ: Imran Khan: ನವಾಜ್ ಷರೀಫ್‌ರನ್ನು ಟೀಕಿಸಿ, ಮೋದಿಯನ್ನು ಹೊಗಳಿದ ಪಾಕ್‌ ಮಾಜಿ ಪಿಎಂ ಇಮ್ರಾನ್ ಖಾನ್!

ಕಳೆದ ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಂಡಿದ್ದಾಗ ವೇದಿಕೆ ಮೇಲೆ ಮೇರಿ ಮಿಲ್‌ಬೆನ್‌ ಅವರು ಭಾರತದ ರಾಷ್ಟ್ರಗೀತೆ ಹಾಡಿದ್ದರು. ಈ ವಿಡಿಯೊ ಭಾರಿ ವೈರಲ್‌ ಆಗಿತ್ತು. ಭಾರತದ ರಾಷ್ಟ್ರಗೀತೆ ಹಾಡಿದ ಗಾಯಕಿ ಮೇರಿ ಮಿಲ್​​ಬೆನ್​ ​ ಅವರನ್ನು ಅಭಿನಂದಿಸಲು ಪ್ರಧಾನಿ ಮೋದಿ ವೇದಿಕೆಗೆ ಬಂದಿದ್ದರು. ಚಪ್ಪಾಳೆ ತಟ್ಟುತ್ತ ಬಂದ ಪ್ರಧಾನಿ ಮೋದಿ ಪಾದವನ್ನು ಸ್ಪರ್ಶಿಸಿ ಗಾಯಕಿ ಮೇರಿ ಮಿಲ್​​ಬೆನ್​ ​​ನಮಿಸಿದ್ದರು. ಅದಕ್ಕೆ ಪ್ರತಿಯಾಗಿ ಪ್ರಧಾನಿಯವರೂ ಗೌರವದಿಂದ ಬಾಗಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version