ನವದೆಹಲಿ: ಚೀನಾ (China) ಗಡಿಯಲ್ಲಿ, ಸುಮಾರು 20 ವರ್ಷಗಳ ಹಿಂದೆ ಆರಂಭವಾಗಿದ್ದ ಭಾರತದ ಬೃಹತ್ ಜಲವಿದ್ಯುತ್ ಪ್ರಾಜೆಕ್ಟ್ ಸನ್ನದ್ಧವಾಗಿದೆ(Mega Hydropower Project).ಈ ಹೈಡ್ರೋಪವರ್ ಪ್ರಾಜೆಕ್ಟ್ ಕಾರ್ಯಾರಂಭ ಮಾಡಿದರೆ, ದೇಶದ (India) ಇಂಧನ ಸ್ವಾಲಂಬನೆಯಲ್ಲಿ ಹೊಸ ಬದಲಾವಣೆಯಾಗಲಿದೆ. ಸಾರ್ವಜನಿಕ ವಲಯದ ಎನ್‌ಎಚ್‌ಪಿಸಿ ಮುಂದಿನ ತಿಂಗಳು ಪ್ರಾಯೋಗಿಕವಾಗಿ ಸುಭನಾಸಿರಿ ಲೋಯರ್ ಪ್ರಾಜೆಕ್ಟ್ ಆರಂಭಿಸಲಿದೆ. ಈ ಪ್ರಾಜೆಕ್ಟ್‌ಗೆ ಸುಮಾರು 213 ಶತಕೋಟಿ ರೂಪಾಯಿ (2.6 ಶತಕೋಟಿ ಡಾಲರ್) ವೆಚ್ಚ ಮಾಡಲಾಗುತ್ತಿದೆ.
ರಾಜೇಂದ್ರ ಪ್ರಸಾದ್ ಗೋಯಲ್ ಅವರ ಪ್ರಕಾರ, ಈ ಹೈಡ್ರೋಪವರ್ ಪ್ರಾಜೆಕ್ಟ್‌ನ ಮೊದಲ ಘಟಕವು ಡಿಸೆಂಬರ್ ಹೊತ್ತಿಗೆ ಆರಂಭವಾಗಲಿದೆ. 2024ರ ಹೊತ್ತಿಗೆ ಎಲ್ಲ 8 ಘಟಕಗಳು ವಿದ್ಯುತ್ ಉತ್ಪಾದನೆಯನ್ನು ಆರಂಭಿಸಲಿವೆ. ಈ ಹೈಡ್ರೋಪವರ್ ಪ್ರಾಜೆಕ್ಟ್‌ನಿಂದಾಗಿ ದೇಶದ ವಿದ್ಯುತ್ ಬೇಡಿಕೆಯಲ್ಲಿನ ಏರಿಳಿತಗಳನ್ನು ಪೂರೈಸಲು ಸಾಧ್ಯವಾಗಲಿದೆ.
ಈ ಪ್ರಾಜೆಕ್ಟ್‌ನಿಂದಾಗಿ ಸೌರ ಮತ್ತು ಪವನ ಶಕ್ತಿ ಉತ್ಪಾದನೆಯು ಗ್ರಿಡ್ ಅನ್ನು ಸಮತೋಲನಗೊಳಿಸಲು ನಿರ್ಣಾಯಕವಾಗಿದೆ. ಆದಾಗ್ಯೂ, 2003ರಲ್ಲಿ ಪ್ರಾರಂಭವಾದ 2-ಗಿಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಈ ಯೋಜನೆಯು, ಪ್ರತಿಭಟನೆಗಳು ಮತ್ತು ವ್ಯಾಜ್ಯಗಳಿಂದ ವಿಳಂಬವಾಯಿತು. ಈ ಯೋಜನೆಯಿಂದ ಪರಿಸರಕ್ಕೆ ಹಾನಿಯಾಗಲಿದೆ ಎಂಬ ಕಾರಣಕ್ಕೆ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು.
ಹಾಗೆಯೇ, ಈ ಯೋಜನೆಯ ವೆಚ್ಚವು ಈಗ 2.6 ಬಿಲಿಯನ್ ಡಾಲರ್‍ಗೆ ತಲುಪಿದೆ. ಈಗಿನ ವೆಚ್ಚವು, ಮೂಲ ವೆಚ್ಚದ ಮೂರು ಪಟ್ಟು ಅಧಿಕವಾಗಿ ಬೆಳೆದಿದೆ. ಎಂಟು ವರ್ಷಗಳ ಅಮಾನಿತ್ತಿನ ಬಳಿಕ ಯೋಜನೆಯ ಕೆಲಸವನ್ನು ಆರಂಭಿಸಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 2019ರಲ್ಲಿ ತನ್ನ ಒಪ್ಪಿಗೆಯನ್ನು ನೀಡಿತು.
ಈ ಸುದ್ದಿಯನ್ನೂ ಓದಿ: Sethusamudram Project | ಸೇತುಸಮುದ್ರಂ ಪ್ರಾಜೆಕ್ಟ್‌ಗೆ ತಮಿಳುನಾಡು ವಿಧಾನಸಭೆ ನಿರ್ಣಯ, ಬಿಜೆಪಿಯಿಂದಲೂ ಬೆಂಬಲ!
ನಾವು ಜಲವಿದ್ಯುತ್ ಯೋಜನೆಯನ್ನು ನಿರ್ಮಿಸಲು ಪ್ರಾರಂಭಿಸುವ ಮೊದಲು ನಾವು ವಿವಿಧ ಇಲಾಖೆಗಳಿಂದ ಸುಮಾರು 40 ಅನುಮೋದನೆಗಳನ್ನು ಪಡೆಯಬೇಕಾಗಿದೆ. ಈ ಹಂತದಲ್ಲಿ ಎಲ್ಲಾ ಪರಿಶೀಲನೆಗಳನ್ನು ಮಾಡಬೇಕು. ಕೆಲಸ ಆರಂಭವಾದ ಮೇಲೆ ಎದುರಾಗುವ ಯಾವುದೇ ಅಡ್ಡಿಗಳು ಸಮಸ್ಯೆಗಳನ್ನು ತಂದೊಡ್ಡುತ್ತವೆ ಎಂದು ಗೋಯಲ್ ಅವರು ತಿಳಿಸಿದ್ದಾರೆ.