ನವದೆಹಲಿ: ಇಸ್ರೇಲ್ (Israel) ಮತ್ತು ಗಾಜಾಪಟ್ಟಿಯ (Gaza Strip) ಹಮಾಸ್ ಬಂಡುಕೋರರ (Hamas Terrorist) ನಡುವೆ ಭೀಕರ ಕಾಳಗ ನಡೆಯುತ್ತಿದ್ದು, ಯೋಧರು ಸೇರಿದಂತೆ 2200ಕ್ಕೂ ಅಧಿಕ ನಾಗರಿಕರು ಈವರೆಗೆ ಮೃತಪಟ್ಟಿದ್ದಾರೆ. ಕರ್ನಾಟಕವೂ (Karnataka) ಸೇರಿದಂತೆ ದೇಶದ ವಿವಿಧ ರಾಜ್ಯಗಳ ಸಾವಿರಾರು ಜನರು ಇಸ್ರೇಲ್‌ನಲ್ಲಿದ್ದು, ಅವರೆನ್ನಲ್ಲ ಸುರಕ್ಷಿತವಾಗಿ ವಾಪಸ್ ಭಾರತಕ್ಕೆ (India) ಕರೆತರಲು ಕೇಂದ್ರ ಸರ್ಕಾರವು ಆಪರೇಷನ್ ಅಜಯ (Operation Ajay) ಆರಂಭಿಸಿದೆ. ಈ ಮಾಹಿತಿಯನ್ನು ಕೇಂದ್ರ ವಿದೇಶಾಂಗ ಸಚಿವ ಎಸ್ ಜಯಶಂಕರ್ (minister S Jaishankar) ಅವರು ಎಕ್ಸ್ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.
ಇಸ್ರೇಲ್‌ನಿಂದ ಹಿಂದಿರುಗಲು ಬಯಸುವ ನಮ್ಮ ನಾಗರಿಕರಿಗೆ ಮರಳಲು ಅನುಕೂಲವಾಗುವಂತೆ ಆಪರೇಷನ್ ಅಜಯ ಪ್ರಾರಂಭಿಸಲಾಗುತ್ತಿದೆ. ವಿಶೇಷ ಚಾರ್ಟರ್ ವಿಮಾನಗಳು ಮತ್ತು ಇತರ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ವಿದೇಶದಲ್ಲಿರುವ ನಮ್ಮ ಪ್ರಜೆಗಳ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಸಂಪೂರ್ಣವಾಗಿ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಎಕ್ಸ್ ವೇದಿಕೆಯಲ್ಲಿ ಟ್ವೀಟ್ ಮಾಡಿದ್ದಾರೆ.
ಆಪರೇಷನ್ ಅಜಯ ಕುರಿತು ಜೈಶಂಕರ್ ಮಾಹಿತಿ
Launching #OperationAjay to facilitate the return from Israel of our citizens who wish to return.
— Dr. S. Jaishankar (@DrSJaishankar) October 11, 2023
Special charter flights and other arrangements being put in place.
Fully committed to the safety and well-being of our nationals abroad.
ಹಮಾಸ್ ಕಮಾಂಡರ್‌ನ ಕುಟುಂಬವೇ ಸರ್ವನಾಶ!
“ಹಮಾಸ್ ಉಗ್ರರು ಯುದ್ಧ ಆರಂಭಿಸಿದ್ದಾರೆ ಹಾಗೂ ನಾವು ಯುದ್ಧವನ್ನು ಅಂತ್ಯಗೊಳಿಸುತ್ತೇವೆ” ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಈಗಾಗಲೇ ಘೋಷಣೆ ಮಾಡಿದ್ದಾರೆ. ಅದರಂತೆ, ಮಂಗಳವಾರ ರಾತ್ರಿ (ಅಕ್ಟೋಬರ್ 10) ಇಸ್ರೇಲ್ ವಾಯುಪಡೆಯು ನಿರಂತರವಾಗಿ ಗಾಜಾಪಟ್ಟಿ ಮೇಲೆ ದಾಳಿ (Israel Palestine War) ನಡೆಸಿದೆ. ಅಷ್ಟೇ ಅಲ್ಲ, ಗಾಜಾಪಟ್ಟಿಯಲ್ಲಿರುವ ಹಮಾಸ್ ಉಗ್ರರನ್ನು ಹುಡುಕಿ ಹುಡುಕಿ ಹತ್ಯೆ ಮಾಡುತ್ತಿದೆ. ಅದರಂತೆ, ಹಮಾಸ್ ಉಗ್ರ ಸಂಘಟನೆಯ ಕಮಾಂಡರ್, ಮಿಲಿಟರಿ ವಿಭಾಗದ ಮುಖ್ಯಸ್ಥ ಹಾಗೂ ಇಸ್ರೇಲ್ ಮೇಲಿನ ದಾಳಿಯ ರೂವಾರಿಯಾದ ಮೊಹಮ್ಮದ್ ಡೈಫ್‌ನ ಕುಟುಂಬವನ್ನೇ ಇಸ್ರೇಲ್ ಸರ್ವನಾಶ ಮಾಡಿದೆ.
ಈ ಸುದ್ದಿಯನ್ನೂ ಓದಿ: Israel Palestine War: ದಾಳಿ ಮಾಡಿದವರೇ ದಿವಾಳಿ; ಗಾಜಾ ಇಸ್ರೇಲ್ ವಶಕ್ಕೆ, 3 ಸಾವಿರ ಜನ ಸಾವು
ಹೌದು, ಮೊಹಮ್ಮದ್ ಡೈಫ್‌ನ ತಂದೆ ಮೆಹ್ದತ್ ಅಲ್ ಡೈಫ್ ನಿವಾಸದ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದೆ. ಮೆಹ್ದತ್ ಅಲ್ ಡೈಫ್ ಹಾಗೂ ಮೊಹಮ್ಮದ್ ಡೈಫ್ ಸಹೋದರ ಅಬೇದ್ ಸೇರಿ ಕುಟುಂಬದ ಹಲವರು ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಉಗ್ರ ಸಂಘಟನೆಯ ಕಮಾಂಡರ್ ಮೊಹಮ್ಮದ್ ಡೈಫ್ ಕತೆ ಏನಾಗಿದೆ ಎಂಬುದರ ಕುರಿತು ಇದುವರೆಗೆ ಮಾಹಿತಿ ಲಭ್ಯವಾಗಿಲ್ಲ. ಇಸ್ರೇಲ್ ದಾಳಿಯಿಂದ ಉಗ್ರನ ತಂದೆಯ ಮನೆಯು ಧ್ವಂಸಗೊಂಡಿದ್ದು, ಅವಶೇಷಗಳ ಅಡಿಯಲ್ಲಿ ಸಿಲುಕಿದವರ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.