Site icon Vistara News

Anantnag Encounter: ಉಗ್ರರ ಗುಂಡಿಗೆ ಎದೆಯೊಡ್ಡಿದವರ ಹಿಂದಿವೆ ಹೃದಯಸ್ಪರ್ಶಿ ಕತೆಗಳು

Anantnag Encounter

ನವದೆಹಲಿ: ”ನಾವು ಬೇಗನೆ ಹೊಸ ಮನೆಗೆ ಹೋಗೋಣ,” ಎಂದು ತನ್ನ 2 ವರ್ಷದ ಮಗಳಿಗೆ ಹೇಳಿ ಹೋಗಿದ್ದ ಮೇಜರ್ ಆಶೀಷ್ ಧೋನೌಕ್(Major Ashish Dhonack), ಉಗ್ರರ ಗುಂಡಿಗೆ ಎದೆಯೊಡ್ಡುವ ಕೆಲವೇ ಗಂಟೆಗಳ ಹಿಂದೆ 6 ವರ್ಷದ ಮಗ ಹಾಗೂ 2 ವರ್ಷದ ಮಗಳೊಂದಿಗೆ ಮಾತನಾಡಿದ್ದ ಕರ್ನಲ್ ಮನಪ್ರೀತ್ ಸಿಂಗ್(Colonel Manpreet Singh), ತಿಂಗಳ ಹಿಂದೆಯಷ್ಟೇ ಅಪ್ಪನಾಗಿದ್ದ ಡಿವೈಎಸ್‌ಪಿ ಹುಮಾಯೂನ್ ಭಟ್ (DySP Himayun Bhat) ಅವರೀಗ ನೆನಪಷ್ಟೇ.. ದೇಶದ ಗಡಿ ರಕ್ಷಣೆಯಲ್ಲಿ ತಮ್ಮ ಪ್ರಾಣಗಳನ್ನೇ ಅರ್ಪಿಸಿ ಹುತಾತ್ಮರಾಗಿದ್ದಾರೆ. ಆದರೆ, ಅವರ ಕುಟುಂಬವನ್ನು ಶೋಕದ ಸಾಗರದಲ್ಲಿ ಮುಳುಗಿಸಿದ್ದಾರೆ(Anantnag Encounter).

ಹೊಸ ಮನೆಗೆ ಹೋಗೋಣ…

ತಿಂಗಳ ಹಿಂದೆಯಷ್ಟೇ ರಜೆ ಮೇಲೆ ಊರಿಗೆ ಹೋಗಿದ್ದ ಮೇಜರ್ ಆಶೀಷ್ ಧೋನೌಕ್ ಅವರು, ತಮ್ಮ ಎರಡು ವರ್ಷದ ಮಗಳಿಗೆ… ಮುಂದಿನ ತಿಂಗಳು ಬಂದಾಗ ಹೊಸ ಮನೆಗೆ ಹೋಗೋಣ ಪುಟ್ಟಾ ಎಂದು ಹೇಳಿದ್ದರು. ಬಹುಶಃ ಆ ಮಗುವಿಗೆ ತಮ್ಮ ಏನಾಗಿದ್ದಾರೆಂಬ ಅರಿವು ಇರಲಿಲ್ಲಕ್ಕಿಲ್ಲ. ಆದರೆ, ತಾವು ನೀಡಿದ್ದ ಪ್ರಾಮೀನ್ ಪೂರೈಸದೇ ಧೋನೌಕ್ ಅವರೀಗ ಕುಟುಂಬಸ್ಥರನ್ನು ಅಗಲಿದ್ದಾರೆ.

34 ವರ್ಷದ ಮೇಜರ್ ಧೋನೌಕ್ ಅವರು ತಿಂಗಳ ಹಿಂದೆ ತಮ್ಮ ಮನೆ ಪಟಿಯಾಲಗೆ ಆಗಮಿಸಿದ್ದರು. ಅವರ ಮೂರು ಸಹೋದರಿಯರು ಈಗ ದುಃಖದಲ್ಲಿದ್ದಾರೆ. ಕೊನೆಯದಾಗಿ ಅವರೊಂದಿಗೆ ದೂರವಾಣಿಯಲ್ಲಿ ಮಾತಾಡಿದ್ದೆವು. ಅವರು ಒಂದೂವರೆ ತಿಂಗಳ ಹಿಂದೆ ಮನೆಯಲ್ಲಿದ್ದರು. ಮನೆ ಶಿಫ್ಟ್ ಮಾಡಲು ಅಕ್ಟೋಬರ್‌ನಲ್ಲಿ ಬರುತ್ತೇನೆ ಎಂದು ಹೋದವರು ಈಗ ಹಣವಾಗಿ ಬಂದಿದ್ದಾರೆ ಎಂದು ಮೇಜರ್ ಧೋನೌಕ್ ಅವರ ಚಿಕ್ಕಪ್ಪ ಹೇಳಿದರು. ಕಳೆದಆಗಸ್ಟ್‌ನಲ್ಲಿ ಸೇನಾ ಪದಕವನ್ನು ನೀಡಲಾಯಿತು.

ಗುಂಡಿಗೆ ಎದೆಯೊಡ್ಡುವ ಮುನ್ನ…

19 ರಾಷ್ಟ್ರೀಯ ರೈಫಲ್ಸ್ ಕಮಾಂಡಿಂಗ್ ಆಫೀಸರ್ ಕರ್ನಲ್ ಮನಪ್ರೀತ್ ಸಿಂಗ್ ಅವರು, ಉಗ್ರರ ಗುಂಡಿಗೆ ಎದೆಯೊಡ್ಡುವ ಕೆಲವೇ ಗಂಟೆಗ ಮುಂಚೆ ಅವರು ತಮ್ಮ 6 ವರ್ಷದ ಮಗ ಹಾಗೂ 2 ವರ್ಷದ ಮಗಳು ಸೇರಿದಂತೆ ಕುಟುಂಬದ ಸದಸ್ಯರೊಂದಿಗೆ ಮಾತನಾಡಿದ್ದರು.

2021ರಲ್ಲಿ ಶೌರ್ಯ ಸೇನಾ ಪದಕ ಪುರಸ್ಕೃತ ಸಿಖ್ ಲೈಟ್ ಪದಾತಿ ದಳದ ಕಮಾಂಡರ್ ಕರ್ನಲ್ ಸಿಂಗ್ ಅವರು ಸತ್ತ ದಿನ ಚಂಡೀಗಢದಲ್ಲಿ ತಮ್ಮ ಕುಟುಂಬದೊಂದಿಗೆ ಮಾತನಾಡಿದ್ದರು. “ನಾವು ಕೊನೆಯದಾಗಿ ಬೆಳಗ್ಗೆ 6:45 ಕ್ಕೆ ಅವರೊಂದಿಗೆ ಮಾತನಾಡಿದ್ದೆವು. ಅವರು ಒಳ್ಳೆಯ ವ್ಯಕ್ತಿ. ಕಳೆದ ವರ್ಷ, ಅವರ ಕರ್ತವ್ಯಕ್ಕಾಗಿ ಅವರಿಗೆ ಸೇನಾ ಪದಕವನ್ನು ನೀಡಲಾಗಿತು. ದೇಶಕ್ಕಾಗಿ ಪ್ರಾಣ ನೀಡಿರುವ ಅವರಿಗೆ ತಲೆಬಾಗುತ್ತೇನೆ,” ಕರ್ನಲ್ ಮನಪ್ರೀತ್ ಸಿಂಗ್ ಅವರ ಸೋದರ ಮಾವ ವೀರೇಂದ್ರ ಗಿಲ್ ಕಣ್ಣಂಚಿನಲ್ಲಿ ಜಿನಗುತ್ತಿದ್ದ ನೀರನ್ನು ತಡೆಯುತ್ತಾ ಹೇಳಿದರು.

ತಿಂಗಳ ಹಿಂದೆಯಷ್ಟೇ ಅಪ್ಪನಾಗಿದ್ದ ಹುಮಾಯೂನ್

ಯುವ ಅಧಿಕಾರಿ ಡಿವೈಎಸ್‌ಪಿ ಹುಮಾಯೂನ್ ಭಟ್ ಅವರು ತಿಂಗಳ ಹಿಂದೆಯಷ್ಟೇ ತಂದೆಯಾಗಿದ್ದರು. ಆದರೆ, ಖುಷಿಯೇನೂ ಬಹಳ ದಿನಗಳು ಉಳಿಯಲಿಲ್ಲ. ಹುಮಾಯೂನ್ ಅವರ ತಂದೆ ಜಮ್ಮು ಮತ್ತು ಕಾಶ್ಮೀರನ ನಿವೃತ್ತ ಐಜಿಪಿ ಗುಲಾಮ್ ಹಸನ್ ಭಟ್. ಹುಮಾಯೂನ್ ಕೂಡ ಉಗ್ರರರಿಗೆ ಸಿಂಹಸ್ವಪ್ನವಾಗಿದ್ದರು. ಉಗ್ರರ ವಿರುದ್ಧ ಅನೇಕ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿದ್ದರು.

ಈ ಸುದ್ದಿಯನ್ನು ಓದಿ: ಉಗ್ರರ ಜತೆ ಗುಂಡಿನ ಕಾಳಗ; ಕರ್ನಲ್, ಮೇಜರ್, ಡಿವೈಎಸ್‌ಪಿ ಹುತಾತ್ಮ

ಕಾಶ್ಮೀರದ ಬುದ್ಗಾಮ್‌ನಲ್ಲಿ ಬುಧವಾರ ಸರ್ಕಾರಿ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. ಐದು ವರ್ಷಗಳ ಪೊಲೀಸ್ ಸೇವೆಯಲ್ಲಿ ಹುಮಾಯೂನ್ ಭಟ್ ಅವರು, ಸಂಪೂರ್ಣವಾಗಿ ಉಗ್ರ ದಮನ ಗುರಿ ಹೊಂದಿರುವ ವಿಶೇಷ ಕಾರ್ಯಾಚರಣೆ ಗ್ರೂಪ್‌ನ ಕಾರ್ಯಾಚರಣೆ ಸೇರಿದಂತೆ ಅನೇಕ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದರು.

ದೇಶದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ.

Exit mobile version