Anantnag Encounter: ಉಗ್ರರ ಗುಂಡಿಗೆ ಎದೆಯೊಡ್ಡಿದವರ ಹಿಂದಿವೆ ಹೃದಯಸ್ಪರ್ಶಿ ಕತೆಗಳು - Vistara News

ದೇಶ

Anantnag Encounter: ಉಗ್ರರ ಗುಂಡಿಗೆ ಎದೆಯೊಡ್ಡಿದವರ ಹಿಂದಿವೆ ಹೃದಯಸ್ಪರ್ಶಿ ಕತೆಗಳು

Anantnag Encounter: ಮೇಜರ್ ಅವರು ತಮ್ಮ ಮಗಳಿಗೆ ಮುಂದಿನ ತಿಂಗಳು ಬಂದು ಮನೆ ಶಿಫ್ಟ್ ಮಾಡೋಣ ಎಂದರೆ, ಗುಂಡು ಎದೆಗೆ ಬೀಳುವ ಮುನ್ನ ಮನೆಗೆ
ಕಾಲ್ ಮಾಡಿ ಮಾತನಾಡಿದ್ದರು ಕರ್ನಲ್. ತಿಂಗಳ ಹಿಂದೆಯಷ್ಟೇ ಅಪ್ಪ ಆಗಿದ್ದರು ಡಿವೈಎಸ್‌ಪಿ ಭಟ್.

VISTARANEWS.COM


on

Anantnag Encounter
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ”ನಾವು ಬೇಗನೆ ಹೊಸ ಮನೆಗೆ ಹೋಗೋಣ,” ಎಂದು ತನ್ನ 2 ವರ್ಷದ ಮಗಳಿಗೆ ಹೇಳಿ ಹೋಗಿದ್ದ ಮೇಜರ್ ಆಶೀಷ್ ಧೋನೌಕ್(Major Ashish Dhonack), ಉಗ್ರರ ಗುಂಡಿಗೆ ಎದೆಯೊಡ್ಡುವ ಕೆಲವೇ ಗಂಟೆಗಳ ಹಿಂದೆ 6 ವರ್ಷದ ಮಗ ಹಾಗೂ 2 ವರ್ಷದ ಮಗಳೊಂದಿಗೆ ಮಾತನಾಡಿದ್ದ ಕರ್ನಲ್ ಮನಪ್ರೀತ್ ಸಿಂಗ್(Colonel Manpreet Singh), ತಿಂಗಳ ಹಿಂದೆಯಷ್ಟೇ ಅಪ್ಪನಾಗಿದ್ದ ಡಿವೈಎಸ್‌ಪಿ ಹುಮಾಯೂನ್ ಭಟ್ (DySP Himayun Bhat) ಅವರೀಗ ನೆನಪಷ್ಟೇ.. ದೇಶದ ಗಡಿ ರಕ್ಷಣೆಯಲ್ಲಿ ತಮ್ಮ ಪ್ರಾಣಗಳನ್ನೇ ಅರ್ಪಿಸಿ ಹುತಾತ್ಮರಾಗಿದ್ದಾರೆ. ಆದರೆ, ಅವರ ಕುಟುಂಬವನ್ನು ಶೋಕದ ಸಾಗರದಲ್ಲಿ ಮುಳುಗಿಸಿದ್ದಾರೆ(Anantnag Encounter).

ಹೊಸ ಮನೆಗೆ ಹೋಗೋಣ…

ತಿಂಗಳ ಹಿಂದೆಯಷ್ಟೇ ರಜೆ ಮೇಲೆ ಊರಿಗೆ ಹೋಗಿದ್ದ ಮೇಜರ್ ಆಶೀಷ್ ಧೋನೌಕ್ ಅವರು, ತಮ್ಮ ಎರಡು ವರ್ಷದ ಮಗಳಿಗೆ… ಮುಂದಿನ ತಿಂಗಳು ಬಂದಾಗ ಹೊಸ ಮನೆಗೆ ಹೋಗೋಣ ಪುಟ್ಟಾ ಎಂದು ಹೇಳಿದ್ದರು. ಬಹುಶಃ ಆ ಮಗುವಿಗೆ ತಮ್ಮ ಏನಾಗಿದ್ದಾರೆಂಬ ಅರಿವು ಇರಲಿಲ್ಲಕ್ಕಿಲ್ಲ. ಆದರೆ, ತಾವು ನೀಡಿದ್ದ ಪ್ರಾಮೀನ್ ಪೂರೈಸದೇ ಧೋನೌಕ್ ಅವರೀಗ ಕುಟುಂಬಸ್ಥರನ್ನು ಅಗಲಿದ್ದಾರೆ.

34 ವರ್ಷದ ಮೇಜರ್ ಧೋನೌಕ್ ಅವರು ತಿಂಗಳ ಹಿಂದೆ ತಮ್ಮ ಮನೆ ಪಟಿಯಾಲಗೆ ಆಗಮಿಸಿದ್ದರು. ಅವರ ಮೂರು ಸಹೋದರಿಯರು ಈಗ ದುಃಖದಲ್ಲಿದ್ದಾರೆ. ಕೊನೆಯದಾಗಿ ಅವರೊಂದಿಗೆ ದೂರವಾಣಿಯಲ್ಲಿ ಮಾತಾಡಿದ್ದೆವು. ಅವರು ಒಂದೂವರೆ ತಿಂಗಳ ಹಿಂದೆ ಮನೆಯಲ್ಲಿದ್ದರು. ಮನೆ ಶಿಫ್ಟ್ ಮಾಡಲು ಅಕ್ಟೋಬರ್‌ನಲ್ಲಿ ಬರುತ್ತೇನೆ ಎಂದು ಹೋದವರು ಈಗ ಹಣವಾಗಿ ಬಂದಿದ್ದಾರೆ ಎಂದು ಮೇಜರ್ ಧೋನೌಕ್ ಅವರ ಚಿಕ್ಕಪ್ಪ ಹೇಳಿದರು. ಕಳೆದಆಗಸ್ಟ್‌ನಲ್ಲಿ ಸೇನಾ ಪದಕವನ್ನು ನೀಡಲಾಯಿತು.

ಗುಂಡಿಗೆ ಎದೆಯೊಡ್ಡುವ ಮುನ್ನ…

19 ರಾಷ್ಟ್ರೀಯ ರೈಫಲ್ಸ್ ಕಮಾಂಡಿಂಗ್ ಆಫೀಸರ್ ಕರ್ನಲ್ ಮನಪ್ರೀತ್ ಸಿಂಗ್ ಅವರು, ಉಗ್ರರ ಗುಂಡಿಗೆ ಎದೆಯೊಡ್ಡುವ ಕೆಲವೇ ಗಂಟೆಗ ಮುಂಚೆ ಅವರು ತಮ್ಮ 6 ವರ್ಷದ ಮಗ ಹಾಗೂ 2 ವರ್ಷದ ಮಗಳು ಸೇರಿದಂತೆ ಕುಟುಂಬದ ಸದಸ್ಯರೊಂದಿಗೆ ಮಾತನಾಡಿದ್ದರು.

2021ರಲ್ಲಿ ಶೌರ್ಯ ಸೇನಾ ಪದಕ ಪುರಸ್ಕೃತ ಸಿಖ್ ಲೈಟ್ ಪದಾತಿ ದಳದ ಕಮಾಂಡರ್ ಕರ್ನಲ್ ಸಿಂಗ್ ಅವರು ಸತ್ತ ದಿನ ಚಂಡೀಗಢದಲ್ಲಿ ತಮ್ಮ ಕುಟುಂಬದೊಂದಿಗೆ ಮಾತನಾಡಿದ್ದರು. “ನಾವು ಕೊನೆಯದಾಗಿ ಬೆಳಗ್ಗೆ 6:45 ಕ್ಕೆ ಅವರೊಂದಿಗೆ ಮಾತನಾಡಿದ್ದೆವು. ಅವರು ಒಳ್ಳೆಯ ವ್ಯಕ್ತಿ. ಕಳೆದ ವರ್ಷ, ಅವರ ಕರ್ತವ್ಯಕ್ಕಾಗಿ ಅವರಿಗೆ ಸೇನಾ ಪದಕವನ್ನು ನೀಡಲಾಗಿತು. ದೇಶಕ್ಕಾಗಿ ಪ್ರಾಣ ನೀಡಿರುವ ಅವರಿಗೆ ತಲೆಬಾಗುತ್ತೇನೆ,” ಕರ್ನಲ್ ಮನಪ್ರೀತ್ ಸಿಂಗ್ ಅವರ ಸೋದರ ಮಾವ ವೀರೇಂದ್ರ ಗಿಲ್ ಕಣ್ಣಂಚಿನಲ್ಲಿ ಜಿನಗುತ್ತಿದ್ದ ನೀರನ್ನು ತಡೆಯುತ್ತಾ ಹೇಳಿದರು.

ತಿಂಗಳ ಹಿಂದೆಯಷ್ಟೇ ಅಪ್ಪನಾಗಿದ್ದ ಹುಮಾಯೂನ್

ಯುವ ಅಧಿಕಾರಿ ಡಿವೈಎಸ್‌ಪಿ ಹುಮಾಯೂನ್ ಭಟ್ ಅವರು ತಿಂಗಳ ಹಿಂದೆಯಷ್ಟೇ ತಂದೆಯಾಗಿದ್ದರು. ಆದರೆ, ಖುಷಿಯೇನೂ ಬಹಳ ದಿನಗಳು ಉಳಿಯಲಿಲ್ಲ. ಹುಮಾಯೂನ್ ಅವರ ತಂದೆ ಜಮ್ಮು ಮತ್ತು ಕಾಶ್ಮೀರನ ನಿವೃತ್ತ ಐಜಿಪಿ ಗುಲಾಮ್ ಹಸನ್ ಭಟ್. ಹುಮಾಯೂನ್ ಕೂಡ ಉಗ್ರರರಿಗೆ ಸಿಂಹಸ್ವಪ್ನವಾಗಿದ್ದರು. ಉಗ್ರರ ವಿರುದ್ಧ ಅನೇಕ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿದ್ದರು.

ಈ ಸುದ್ದಿಯನ್ನು ಓದಿ: ಉಗ್ರರ ಜತೆ ಗುಂಡಿನ ಕಾಳಗ; ಕರ್ನಲ್, ಮೇಜರ್, ಡಿವೈಎಸ್‌ಪಿ ಹುತಾತ್ಮ

ಕಾಶ್ಮೀರದ ಬುದ್ಗಾಮ್‌ನಲ್ಲಿ ಬುಧವಾರ ಸರ್ಕಾರಿ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. ಐದು ವರ್ಷಗಳ ಪೊಲೀಸ್ ಸೇವೆಯಲ್ಲಿ ಹುಮಾಯೂನ್ ಭಟ್ ಅವರು, ಸಂಪೂರ್ಣವಾಗಿ ಉಗ್ರ ದಮನ ಗುರಿ ಹೊಂದಿರುವ ವಿಶೇಷ ಕಾರ್ಯಾಚರಣೆ ಗ್ರೂಪ್‌ನ ಕಾರ್ಯಾಚರಣೆ ಸೇರಿದಂತೆ ಅನೇಕ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದರು.

ದೇಶದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

Bengaluru Murder : ಮಹಿಳೆಯನ್ನು 50 ತುಂಡಾಗಿ ಕತ್ತರಿಸಿದವನು ಒಡಿಶಾದ ಸ್ಮಶಾನದಲ್ಲಿ ನೇಣಿಗೆ ಶರಣು!

Bengaluru Murder : ವೈಯಾಲಿಕಾವಲ್ ಮಹಿಳೆಯ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ಆರೋಪಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

VISTARANEWS.COM


on

By

Murder case
Koo

ಬೆಂಗಳೂರು: ಬೆಂಗಳೂರಿನ (Bengaluru Murder) ವೈಯಾಲಿಕಾವಲ್ ಮಹಾಲಕ್ಷ್ಮೀ ಮರ್ಡರ್ ಕೇಸ್‌ ಟ್ವಿಸ್ಟ್‌ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಮಹಿಳೆಯನ್ನು ಕೊಲೆ ಮಾಡಿದವನು ತನ್ನೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಪೊಲೀಸರ ಮುಂದೆ ಪ್ರಶ್ನೆಗಳ ಸರಮಾಲೆಯೇ ಇದೆ. ಮಹಾಲಕ್ಷ್ಮಿಯನ್ನು ಕೊಂದ ಕೊಲೆಗಾರನನ್ನು ಟ್ರೇಸ್‌ ಮಾಡಿ ಇನ್ನೇನು ಹಿಡಿಬೇಕು ಎನ್ನುವಾಗಲೇ ಕೊಲೆ ಆರೋಪಿ ಮುಕ್ತಿರಂಜನ್ ಎಂಬಾತ ಒಡಿಶಾದಲ್ಲಿ ನಿನ್ನೆ (ಸೆ.25) ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಹಾಲಕ್ಷ್ಮೀ ಮರ್ಡರ್ ಕೇಸ್ ಪೊಲೀಸರ ಮುಂದೆ ಹಲವು ಸವಾಲುಗಳನ್ನಿಟ್ಟಿದೆ‌. ಆರೋಪಿ ಅರೆಸ್ಟ್ ಆದಮೇಲೆ ಪ್ರಕರಣಕ್ಕೆ ಒಂದು ಫುಲ್ ಸ್ಟಾಪ್ ಇಡಬಹುದಿತ್ತು. ಆದರೆ ಪೊಲೀಸರಿಗೆ ಸಿಗುವ ಮುನ್ನವೆ ಆರೋಪಿ ಮುಕ್ತಿ ರಂಜನ್‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರಿಂದಾಗಿ ತನಿಖಾಧಿಕಾರಿಗಳಿಗೆ ಮುಂದಿರುವ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಸಿಗದಂತಾಗಿದೆ. ಪ್ರಕರಣದ ಆರೋಪಿಯಾಗಿದ್ದ ಒಡಿಶಾ ಮೂಲದ ಮುಕ್ತಿರಂಜನ್ ಪ್ರತಾಪ್ ರಾಯ್ ನಿನ್ನೆ ಬುಧವಾರ ಬೆಳಗ್ಗೆ ಒಡಿಶಾದ ಭದ್ರಕ್ ಜಿಲ್ಲೆಯ ಭೂನಿಪುರದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಹಾಲಕ್ಷ್ಮಿಯ ಭೀಕರ ಹತ್ಯೆಗೆ ಕಾರಣವೇನು? ಆರೋಪಿ ಹತ್ಯೆಗೈದಿದ್ದು ಹೇಗೆ ಎಂಬ ಪ್ರಶ್ನೆಗಳಿಗೆ ಸೂಕ್ತ ಉತ್ತರಗಳು ಸಿಗುವ ಮುನ್ನವೇ ಆರೋಪಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಇದನ್ನೂ ಓದಿ: Assault Case : ಮನೆಗೆ ಬಾರದ ಪತ್ನಿ; ಸಿಟ್ಟಾಗಿ ಮಾವ ಬೆಳೆದ ಅಡಿಕೆ ಗಿಡಗಳನ್ನು ನಾಶ ಮಾಡಿದ ಅಳಿಯ!

ಮದುವೆ ಆಗುವಂತೆ ಒತ್ತಾಯಿಸಿದ್ದಳು ಮಹಾಲಕ್ಷ್ಮಿ

ಇನ್ನು ತನಿಖೆ ವೇಳೆ ಒಂದಷ್ಟು ಸ್ಫೋಟಕ ವಿಚಾರಗಳು ಹೊರ ಬಿದ್ದಿದ್ದು, ಮದುವೆಯಾಗುವಂತೆ ಮುಕ್ತಿ ರಂಜನ್‌ನ ಮಹಾಲಕ್ಷ್ಮಿ ಒತ್ತಾಯಿಸುತ್ತಿದ್ದಳು ಎನ್ನಲಾಗಿದೆ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ಆಗಿ ಕೊಲೆ ನಡೆದಿರಬಹುದು ಎಂಬ ಅನುಮಾನ ಮೂಡಿದೆ. ಮಹಾಲಕ್ಷ್ಮಿ ಹಾಗೂ ಮುಕ್ತಿ ರಂಜನ್‌ ಇಬ್ಬರು ಒಂದೆ ಕಡೆ ಕೆಲಸ ಮಾಡುತ್ತಿದ್ದರು. ಹೀಗಾಗಿ ಇಬ್ಬರ ಮಧ್ಯೆ ಸ್ನೇಹ, ಸಲುಗೆ ಬೆಳದಿತ್ತು.

ಮುಕ್ತಿರಂಜನ್‌ನನ್ನು ತುಂಬಾ ಹಚ್ಡಿಕೊಂಡಿದ್ದ ಮಹಾಲಕ್ಷ್ಮಿ ಆತನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದಳು. ಕೆಲಸ ಮಾಡುತ್ತಿದ್ದ ಸ್ಟೋರ್‌ನಲ್ಲಿ ಬೇರೆ ಹುಡುಗೀಯರ ಜತೆ ಮುಕ್ತಿರಂಜನ್‌ ಮಾತನಾಡಿದರೆ ಮಹಾಲಕ್ಷ್ಮಿ ಸ್ವಲ್ಪವೂ ಸಹಿಸುತ್ತಿರಲಿಲ್ಲ. ಕೂಡಲೇ ಆ ಯುವತಿಯರಿಗೆ ವಾರ್ನ್ ಮಾಡುತ್ತಿದ್ದಳು. ಇನ್ನು ಮುಕ್ತಿರಂಜನ್ ಸಹ ಸ್ವತಃ ಹಠಮಾರಿ ಸ್ವಭಾವದವನಾಗಿದ್ದ ಎಂಬುದು ಇದುವರೆಗಿನ ತನಿಖೆಯಲ್ಲಿ ತಿಳಿದು ಬಂದಿದೆ. ಸೆಪ್ಟೆಂಬರ್ 1ರಂದು ಇಬ್ಬರೂ ಕೆಲಸಕ್ಕೆ ಹಾಜರಾಗಿದ್ದರು. ಎರಡನೇ ತಾರೀಖು ಇಬ್ಬರೂ ರಜೆ ಹಾಕಿ ವೈಯಾಲಿಕಾವಲ್ ಮನೆಗೆ ಹೋಗಿದ್ದರಂತೆ. ಈ ವೇಳೆ ಜಗಳ ಆಗಿ, ಕೊಲೆ ಮಾಡಿ ಮುಕ್ತಿರಂಜನ್‌ ಎಸ್ಕೇಪ್ ಆಗಿರಬಹುದು ಎನ್ನಲಾಗಿದೆ.

ಮನೆಯಲ್ಲಿ ಎಲ್ಲೂ ರಕ್ತ ಹರಿದಿಲ್ಲ; ಮೂವರ ಫಿಂಗರ್‌ ಪ್ರಿಂಟ್‌ ಪತ್ತೆ

ಮಹಾಲಕ್ಷ್ಮಿಯನ್ನು ಹತ್ಯೆ ಮಾಡಿರುವ ಬಗ್ಗೆಯಂತೂ ಪೊಲೀಸರಿಗೆ ಅನುಮಾನಗಳ ಮೇಲೆ ಅನುಮಾನ ಹುಟ್ಟಿಸಿದೆ. ದೇಹ ಕತ್ತರಿಸುವ ರೀತಿ, ಮನೆಯಲ್ಲಿ ರಕ್ತ ಎಲ್ಲಿಯೂ ಸಹ ಸಿಡಿಯದಂತೆ ಮೃತದೇಹ ಕತ್ತರಿಸಲಾಗಿದೆ. ಹತ್ಯೆಗೈದು ಮೃತದೇಹದ ರಕ್ತ ಹರಿದ ನಂತರ ಕತ್ತರಿಸಲಾಗಿತ್ತಾ ಅನ್ನೋ ಪ್ರಶ್ನೆ ಮುಂದಿವೆ. ಅಲ್ಲದೇ ಮನೆಯಲ್ಲಿ ಇಬ್ಬರಿಂದ ಮೂರು ಜನರ ಫಿಂಗರ್ ಪ್ರಿಂಟ್‌ಗಳು ಪತ್ತೆಯಾಗಿದ್ದು, ಆರೋಪಿಯ ಕೃತ್ಯಕ್ಕೆ ಬೇರೆ ಯಾರಾದರೂ ಸಾಥ್ ನೀಡಿದ್ದರಾ? ಹತ್ಯೆಗೈದು ಇಷ್ಟು ದಿನ ಆರೋಪಿ ತಲೆಮರೆಸಿಕೊಂಡಿದ್ದೆಲ್ಲಿ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿತ್ತು. ಆದರೆ ಪೊಲೀಸರಿಗೆ ಸಿಗುವ ಮುನ್ನವೇ ಆರೋಪಿ ಆತ್ಮಹತ್ಯೆ ಮಾಡಿಕೊಂಡಿರುವುದು ಪೊಲೀಸರ ತಲೆ ಕೆಡಿಸಿದೆ.

ಸದ್ಯ ಒಡಿಶಾದಲ್ಲಿ ಬೀಡುಬಿಟ್ಟಿರುವ ಬೆಂಗಳೂರು ಪೊಲೀಸರು, ಆರೋಪಿಯ ಕುಟುಂಬಸ್ಥರಿಂದ ಮಾಹಿತಿ ಪಡಿತಿದೆ. ಈಗಾಗಲೇ ರಾಜ್ಯ ಪೊಲೀಸರ ಎರಡು ತಂಡಗಳು ಒಡಿಶಾದಲ್ಲಿರುವುದರಿಂದ ಕಾನೂನು ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ. ಮತ್ತೊಂದು ಕಡೆ ಮಹಿಳೆ ಮೊಬೈಲ್ ಎಫ್‌ಎಸ್‌ಎಲ್‌ಗೆ ಕಳಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Special Trains : ಹಬ್ಬಗಳ ಸೀಸನ್‌; ವಿಶೇಷ ರೈಲುಗಳ ಸೇವೆ ತಿಂಗಳಾಂತ್ಯದವರೆಗೆ ವಿಸ್ತರಣೆ

Special Trains : ಹಬ್ಬಗಳ ಸೀಸನ್‌ ಹಿನ್ನೆಲೆಯಲ್ಲಿ ವಿಶೇಷ ರೈಲುಗಳ ಸೇವೆ ತಿಂಗಳಾಂತ್ಯದವರೆಗೆ ವಿಸ್ತರಣೆ ಮಾಡಲಾಗಿದೆ.

VISTARANEWS.COM


on

By

Service of special trains extended till month-end to compensate for heavy traffic during festive season
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಹಬ್ಬದ ಋತುವಿನಲ್ಲಿ ಹೆಚ್ಚಿನ ದಟ್ಟಣೆಯನ್ನು ಸರಿದೂಗಿಸಲು, ದಕ್ಷಿಣ ರೈಲ್ವೆಯು (Special Trains) ಈಗಾಗಲೇ ಎರ್ನಾಕುಲಂ ಮತ್ತು ಯಲಹಂಕ ನಿಲ್ದಾಣಗಳ ನಡುವೆ ಓಡಿಸಲಾಗುತ್ತಿದ್ದ ವಿಶೇಷ ರೈಲುಗಳ ಸೇವೆಯನ್ನು ಹೆಚ್ಚುವರಿ ನಾಲ್ಕು ಟ್ರಿಪ್ಗಳಿಗೆ ವಿಸ್ತರಿಸಲು ಸೂಚಿಸಿದೆ. ವಿವರಗಳು ಈ ಕೆಳಗಿನಂತಿವೆ.

  1. 1) ರೈಲು ಸಂಖ್ಯೆ 06101 ಎರ್ನಾಕುಲಂ-ಯಲಹಂಕ ಟ್ರೈ-ವೀಕ್ಲಿ ಎಕ್ಸ್ ಪ್ರೆಸ್ ವಿಶೇಷ ರೈಲನ್ನು ಈ ಹಿಂದೆ ಸೆಪ್ಟೆಂಬರ್ 18 ರವರೆಗೆ ಓಡಿಸಲು ಸೂಚಿಸಲಾಗಿತ್ತು, ಈಗ ನಾಲ್ಕು ಹೆಚ್ಚುವರಿ ಟ್ರಿಪ್ಗಳೊಂದಿಗೆ ಸಪ್ಟೆಂಬರ್ 22 ರಿಂದ 29, 2024 ರವರೆಗೆ ವಿಸ್ತರಿಸಲಾಗಿದೆ.
  2. 2) ರೈಲು ಸಂಖ್ಯೆ 06102 ಯಲಹಂಕ-ಎರ್ನಾಕುಲಂ ಟ್ರೈ-ವೀಕ್ಲಿ ಎಕ್ಸ್ ಪ್ರೆಸ್ ವಿಶೇಷ ರೈಲುನ್ನು ಈ ಹಿಂದೆ ಸೆಪ್ಟೆಂಬರ್ 19 ರವರೆಗೆ ಓಡಿಸಲು ಸೂಚಿಸಲಾಗಿತ್ತು, ಈಗ ನಾಲ್ಕು ಹೆಚ್ಚುವರಿ ಟ್ರಿಪ್ಗಳಿಗಾಗಿ ಸೆಪ್ಟೆಂಬರ್ 23 ರಿಂದ 30 ರವರೆಗೆ ವಿಸ್ತರಿಸಲಾಗಿದೆ.

ಅಸ್ತಿತ್ವದಲ್ಲಿರುವ ಸಮಯ ಮತ್ತು ನಿಲುಗಡೆಗಳ ಪ್ರಕಾರ ಈ ರೈಲುಗಳು ಚಲಿಸುವುದನ್ನು ಮುಂದುವರಿಸಲಾಗಿದೆ.

ದಸರಾ ಹಬ್ಬಕ್ಕೆ 34 ರೈಲುಗಳಿಗೆ ತಾತ್ಕಾಲಿಕ ಹೆಚ್ಚುವರಿ ಬೋಗಿಗಳ ಜೋಡಣೆ

ಬೆಂಗಳೂರು: ದಸರಾ ಹಬ್ಬದ (Dasara 2024) ಸಮಯದಲ್ಲಿ ಪ್ರಯಾಣಿಕರ ನಿರೀಕ್ಷಿತ ಹೆಚ್ಚುವರಿ ದಟ್ಟಣೆಯನ್ನು ಕಡಿಮೆಗೊಳಿಸುವ ಸಲುವಾಗಿ, ನೈರುತ್ಯ ರೈಲ್ವೆಯು 34 ರೈಲುಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿಗಳನ್ನು ಜೋಡಿಸಲು ನಿರ್ಧರಿಸಿದೆ.

1)ಅಕ್ಟೋಬರ್ 4 ರಿಂದ 15 ರವರೆಗೆ ರೈಲು ಸಂಖ್ಯೆ 17301 ಮೈಸೂರು-ಬೆಳಗಾವಿ ಎಕ್ಸ್‌ಪ್ರೆಸ್‌
2) ಅಕ್ಟೋಬರ್ 1 ರಿಂದ 12 ರವರೆಗೆ ಬೆಳಗಾವಿ-ಮೈಸೂರು ಎಕ್ಸ್‌ಪ್ರೆಸ್‌ (17302)
3) ಅಕ್ಟೋಬರ್ 2 ರಿಂದ 13 ರವರೆಗೆ ಮೈಸೂರು-ಚಾಮರಾಜನಗರ-ಮೈಸೂರು ಎಕ್ಸ್‌ಪ್ರೆಸ್‌ (06233/06234)
4) ಅಕ್ಟೋಬರ್ 2 ರಿಂದ 13 ರವರೆಗೆ ಮೈಸೂರು-ಬಾಗಲಕೋಟ ಬಸವ ಎಕ್ಸ್‌ಪ್ರೆಸ್‌ (17307)
5) ಅಕ್ಟೋಬರ್ 3 ರಿಂದ 14 ರವರೆಗೆ ಬಾಗಲಕೋಟ-ಮೈಸೂರು ಬಸವ ಎಕ್ಸ್‌ಪ್ರೆಸ್‌ (17308)
6) ಅಕ್ಟೋಬರ್ 1 ರಿಂದ 12 ರವರೆಗೆ ಎಸ್ಎಸ್ಎಸ್ ಹುಬ್ಬಳ್ಳಿ-ಮೈಸೂರು ಹಂಪಿ ಎಕ್ಸ್‌ಪ್ರೆಸ್‌ (16591)
7) ಅಕ್ಟೋಬರ್ 4 ರಿಂದ 15 ರವರೆಗೆ ಮೈಸೂರು-ಎಸ್ಎಸ್ಎಸ್ ಹುಬ್ಬಳ್ಳಿ ಹಂಪಿ ಎಕ್ಸ್‌ಪ್ರೆಸ್‌ (16592)
8) ಅಕ್ಟೋಬರ್ 2 ರಿಂದ 13 ರವರೆಗೆ ಮೈಸೂರು-ಪಂಢರಪುರ ಗೋಲಗುಂಬಜ್ ಎಕ್ಸ್‌ಪ್ರೆಸ್‌ (16535)
9) ಅಕ್ಟೋಬರ್ 3 ರಿಂದ 14 ರವರೆಗೆ ಪಂಢರಪುರ ಗೋಲಗುಂಬಜ್ ಎಕ್ಸ್‌ಪ್ರೆಸ್‌ (16536)

ಈ ಎಲ್ಲ ರೈಲುಗಳಿಗೆ ತಲಾ ಒಂದು ಸ್ಲೀಪರ್ ಕ್ಲಾಸ್ ಹೆಚ್ಚುವರಿ ಬೋಗಿಗಳನ್ನು ಜೋಡಿಸಲಾಗುತ್ತಿದೆ. ಅಕ್ಟೋಬರ್ 3 ರಿಂದ 12 ರವರೆಗೆ ರೈಲು ಸಂಖ್ಯೆ 16227 ಮೈಸೂರು-ತಾಳಗುಪ್ಪ ಎಕ್ಸ್‌ಪ್ರೆಸ್‌ ಮತ್ತು ಅಕ್ಟೋಬರ್ 4 ರಿಂದ 13 ರವರೆಗೆ ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್‌ (16228) ರೈಲುಗಳಿಗೆ ತಲಾ ಎರಡು ಸ್ಲೀಪರ್ ಕ್ಲಾಸ್ ಹೆಚ್ಚುವರಿ ಬೋಗಿಗಳನ್ನು ಜೋಡಿಸಲಾಗುತ್ತಿದೆ.

ಪ್ಯಾಸೆಂಜರ್‌ ರೈಲುಗಳಿಗೆ ಹೆಚ್ಚುವರಿ ಬೋಗಿಗಳ ಜೋಡಣೆ

ಅಕ್ಟೋಬರ್ 4 ರಿಂದ 13 ರವರೆಗೆ ರೈಲು ಸಂಖ್ಯೆ 06543/06544 ಮೈಸೂರು-ಚಾಮರಾಜನಗರ-ಮೈಸೂರು ಪ್ಯಾಸೆಂಜರ್ ಸ್ಪೆಷಲ್, ಅಕ್ಟೋಬರ್ 4 ರಿಂದ 13 ರವರೆಗೆ ತಾಳಗುಪ್ಪ-ಮೈಸೂರು ಕುವೆಂಪು ಎಕ್ಸ್‌ಪ್ರೆಸ್‌ (16221), ಅಕ್ಟೋಬರ್ 3 ರಿಂದ 12 ರವರೆಗೆ ಮೈಸೂರು-ತಾಳಗುಪ್ಪ ಕುವೆಂಪು ಎಕ್ಸ್‌ಪ್ರೆಸ್‌, ಅಕ್ಟೋಬರ್ 3 ರಿಂದ 12 ರವರೆಗೆ ಕೆಎಸ್ಆರ್ ಬೆಂಗಳೂರು-ಅರಸೀಕೆರೆ-ಕೆಎಸ್ಆರ್ ಬೆಂಗಳೂರು ಪ್ಯಾಸೆಂಜರ್ (06273/06274), ಅಕ್ಟೋಬರ್ 3 ರಿಂದ 12 ರವರೆಗೆ ಕೆಎಸ್ಆರ್ ಬೆಂಗಳೂರು-ಚನ್ನಪಟ್ಟಣ-ಕೆಎಸ್ಆರ್ ಬೆಂಗಳೂರು ಪ್ಯಾಸೆಂಜರ್ (06581/06582), ಅಕ್ಟೋಬರ್ 3 ರಿಂದ 12 ರವರೆಗೆ ಅರಸೀಕೆರೆ-ಮೈಸೂರು ಪ್ಯಾಸೆಂಜರ್ (06213), ಅಕ್ಟೋಬರ್ 5 ರಿಂದ 14 ರವರೆಗೆ ಮೈಸೂರು-ಅರಸೀಕೆರೆ ಪ್ಯಾಸೆಂಜರ್ (06214), ಅಕ್ಟೋಬರ್ 3 ರಿಂದ 12 ರವರೆಗೆ ಮೈಸೂರು-ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್‌ (16225), ಅಕ್ಟೋಬರ್ 5 ರಿಂದ 14 ರವರೆಗೆ ಶಿವಮೊಗ್ಗ ಟೌನ್-ಮೈಸೂರು ಎಕ್ಸ್‌ಪ್ರೆಸ್‌ (16226), ಅಕ್ಟೋಬರ್ 3 ರಿಂದ 12 ರವರೆಗೆ ಶಿವಮೊಗ್ಗ ಟೌನ್-ಚಿಕ್ಕಮಗಳೂರು ಪ್ಯಾಸೆಂಜರ್ (07365), ಅಕ್ಟೋಬರ್ 5 ರಿಂದ 14 ರವರೆಗೆ ಚಿಕ್ಕಮಗಳೂರು-ಶಿವಮೊಗ್ಗ ಟೌನ್ ಪ್ಯಾಸೆಂಜರ್ (07366), ಅಕ್ಟೋಬರ್ 4 ರಿಂದ 13 ರವರೆಗೆ ಚಿಕ್ಕಮಗಳೂರು-ಯಶವಂತಪುರ-ಚಿಕ್ಕಮಗಳೂರು ಎಕ್ಸ್‌ಪ್ರೆಸ್‌ (16239/16240), ಅಕ್ಟೋಬರ್ 1 ರಿಂದ 12 ರವರೆಗೆ ಅರಸೀಕೆರೆ-ಮೈಸೂರು ಪ್ಯಾಸೆಂಜರ್ (06267), ಅಕ್ಟೋಬರ್ 4 ರಿಂದ 15 ರವರೆಗೆ ಮೈಸೂರು-ಅರಸೀಕೆರೆ ಪ್ಯಾಸೆಂಜರ್ (06268), ಅಕ್ಟೋಬರ್ 1 ರಿಂದ 12 ರವರೆಗೆ ಮೈಸೂರು-ಎಸ್ಎಂವಿಟಿ ಬೆಂಗಳೂರು ಪ್ಯಾಸೆಂಜರ್ (06269), ಅಕ್ಟೋಬರ್ 3 ರಿಂದ 14 ರವರೆಗೆ ಎಸ್ಎಂವಿಟಿ ಬೆಂಗಳೂರು-ಮೈಸೂರು (06270), ಅಕ್ಟೋಬರ್ 2 ರಿಂದ 13 ರವರೆಗೆ ಎಸ್ಎಂವಿಟಿ ಬೆಂಗಳೂರು-ಕರೈಕಲ್ ಎಕ್ಸ್‌ಪ್ರೆಸ್‌ (16529) ಮತ್ತು ಅಕ್ಟೋಬರ್ 3 ರಿಂದ 14 ರವರೆಗೆ ಕರೈಕಲ್-ಎಸ್ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲುಗಳಿಗೆ ತಲಾ ಒಂದು ಸಾಮಾನ್ಯ ದ್ವಿತೀಯ ದರ್ಜೆ ಹೆಚ್ಚುವರಿ ಬೋಗಿಗಳನ್ನು ಜೋಡಿಸಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Bengaluru News : ನಾವಿಲ್ಲ ಅಂದರೆ ಬೆಂಗಳೂರು ಖಾಲಿ ಖಾಲಿ ಎಂದ ನಾರ್ಥಿ ಲೇಡಿ; ʻತೊಲಗ್ರೋ ಮೊದಲುʼಎಂದು ಅಭಿಯಾನ ಶುರು

Bengaluru News : ಇತ್ತೀಚೆಗೆ ಹೊರರಾಜ್ಯದಿಂದ ಬಂದವರು ಬೆಂಗಳೂರು ಹಾಗೂ ಬೆಂಗಳೂರಿಗರ ಕುರಿತು ಹಾಗೂ ಕನ್ನಡ ಭಾಷೆಯ ಸಂಬಂಧ ಕೀಳಾಗಿ ಮಾತನಾಡುವವರ ಸಂಖ್ಯೆ ಹೆಚ್ಚಾಗಿದೆ. ಸದ್ಯ ನಾವಿಲ್ಲ ಅಂದರೆ ಬೆಂಗಳೂರು ಖಾಲಿ ಖಾಲಿ ಎಂದು ಲೇವಡಿ ಮಾಡಿ ಮಾತನಾಡಿದ ನಾರ್ಥಿ ಲೇಡಿಗೆ ನೆಟ್ಟಿಗರು ಬಿಸಿಮುಟ್ಟಿಸುತ್ತಿದ್ದಾರೆ. ʻತೊಲಗ್ರೋ ಮೊದಲುʼಎಂದು ಅಭಿಯಾನ ಕೂಡ ಶುರುವಾಗಿದೆ.

VISTARANEWS.COM


on

By

Bad comment from North Indian woman on Bengaluru city Quit First campaign started
Koo

ಬೆಂಗಳೂರು: ಅತಿಥಿ ದೇವೋ ಭವ ಎಂಬ ಶಬ್ಧ ನಮ್ಮ ದೇಶದ ಘೋಷ ವಾಕ್ಯ . ಅದು ರಾಜ್ಯದ ಮಟ್ಟಕ್ಕೂ ಅನ್ವಯವಾಗುತ್ತದೆ. ಮೂಲ ನಿವಾಸಿಗಳಿಗೆ ಹೊರಗಿಂದ ಬಂದವರು ಗೌರವ ಕೊಡಬೇಕು. ಆದರೆ ಬೆಂಗಳೂರು ನಗರದಲ್ಲಿ (Bengaluru News) ಆ ತರಹ ವಾತಾವರಣ ಇಲ್ಲದಂತಾಗಿದೆ. ಮತ್ತೊಮ್ಮೆ ಉತ್ತರ ಭಾರತದ ಮಹಿಳೆ ಬೆಂಗಳೂರು ನಗರದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ʻತೊಲಗ್ರೋ ಮೊದಲುʼ ಎಂಬ ಹ್ಯಾಷ್‌ಟ್ಯಾಗ್‌ ಮೂಲಕ ಅಭಿಯಾನ ಶುರುವಾಗಿದೆ.

ಮೊದಲನೇದಾಗಿ ನಾರ್ತ್, ಸೌತ್‌, ಈಸ್ಟ್ , ವೆಸ್ಟ್ ಇಂಡಿಯಾ ಎಂಬುದೆಲ್ಲ ಗುರುತಿಗಾಗಿ ಅಷ್ಟೆ ಇರುವುದು. ಆದರೆ ಕೆಲ ವ್ಯಕ್ತಿಗಳು ಡಿವೈಡ್ ಮಾಡಿ ಕೀಳಾಗಿ ನೋಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆಂಬುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಉತ್ತರ ಭಾರತದ ಮಹಿಳೆಯೊಬ್ಬಳು ಬೆಂಗಳೂರಿನ ಬಗ್ಗೆ ರೀಲ್ಸ್ ಮಾಡಿ ಅವಮಾನ ಮಾಡುವಂತೆ ಮಾತನಾಡಿದ್ದಾಳೆ.

ಕಾಮೆಂಟ್‌ ಮೂಲಕವೇ ಬಿಸಿ ಮುಟ್ಟಿಸಿದ ಸ್ಯಾಂಡಲ್‌ವುಡ್‌

ಈ ಹಿಂದೆ ಆಟೋ ಚಾಲಕನ ಜತೆ ಕಿರಿಕ್ ಮಾಡಿಕೊಂಡಿದ್ದ ಮಹಿಳೆಯೊಬ್ಬಳು, ಬೆಂಗಳೂರಿನವರಿಗೆ ಡೀಸೆನ್ಸಿ ಇಲ್ಲ ಎಂದು ವಿಡಿಯೊ ಮಾಡಿದ್ದಳು. ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ನಾನು ಹಾಗೇ ಹೇಳಿಲ್ಲ, ಮಾತಿನಿಂದ ನೋವು ಆಗಿದ್ದರೆ ಕ್ಷಮಿಸಿ ಅಂತ ಸಮಜಾಯಿಷಿ ನೀಡಲು ಮುಂದಾಗಿದ್ದಳು. ಅದರ ಬೆನ್ನಲ್ಲೆ ಈಗ ಮತ್ತೊಬ್ಬ ಮಹಿಳೆ ತನ್ನ ಮನಸ್ಸಿನ ವಿಕಾರತೆಯನ್ನು ಹೊರಹಾಕಿದ್ದಾಳೆ.

ಮಹಿಳೆಯೊಬ್ಬಳು ವಿಡಿಯೋದಲ್ಲಿ ನಾವೆಲ್ಲ ನಾರ್ಥಿಗಳು ಬೆಂಗಳೂರು ಬಿಟ್ಟರೆ, ಎಲ್ಲ ನಗರದ ಪಿಜಿಗಳು ಖಾಲಿ ಖಾಲಿಯಾಗಿರುತ್ತದೆ. ಕೋರಮಂಗಲದ ಪಬ್‌ಗಳು ಬಿಕೋ ಎನ್ನುತ್ತಿರುತ್ತೆ ಎಂದು ವಿಡಿಯೋ ಮಾಡಿದ್ದಾಳೆ. ಅಂದರೆ ನಾರ್ಥ್‌ ಇಂಡಿಯನ್‌ಗಳಿಂದ ಮಾತ್ರ ಬೆಂಗಳೂರು ಉದ್ದಾರ ಆಗಿದೆ ಎಂಬ ಭ್ರಮೆಯಲ್ಲಿರುವುದು ಇಲ್ಲಿ ಸ್ಪಷ್ಟವಾಗಿದೆ. ಇನ್ನೂ ಈ ವಿಡಿಯೊಗೆ ಸಾರ್ವಜನಿಕರು ಮಾತ್ರವಲ್ಲದೆ ಸೆಲೆಬ್ರಿಟಿಗಳಿಂದ ಕೂಡ ಆಕ್ರೋಶ ವ್ಯಕ್ತವಾಗಿದೆ.

ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ʻಪ್ಲೀಸ್ ಲೀವ್ʼ ಎಂದರೆ, ನಟಿ ಚೈತ್ರಾ ಆಚಾರ್ ಬೇಗ ಇಲ್ಲಿಂದ ಹೊರಡಿ ನಾವು ಡ್ಯಾನ್ಸರ್‌ಗಳಿಲ್ಲದ ಪಬ್‌ಗಳನ್ನು ನೋಡಬಹುದು . ಮೊದಲು ಇಲ್ಲಿಂದ ತೊಲಗಿ ಎಂಬರ್ಥದಲ್ಲಿ ಕಾಮೆಂಟ್‌ಗೆ ರಿಪ್ಲೇ ಕೊಟ್ಟಿದ್ದಾರೆ. ಅಷ್ಟೇಲ್ಲದೆ ನಿರೂಪಕಿ ಕಂ ನಟಿ ಅನುಪಮ ಗೌಡ , ರೂಪೇಶ್ ರಾಜಣ್ಣ ಸೇರಿ ಹಲವು ಮಂದಿ ಖಡಕ್ ಉತ್ತರ ಕೊಟ್ಟಿದ್ದಾರೆ. ಅಷ್ಟೆ ಅಲ್ಲದೆ ಹ್ಯಾಷ್ ಟ್ಯಾಗ್ ಹಾಕಿ ತೊಲಗ್ರೋ ಬೇಗ ಎಂಬ ಅಭಿಯಾನವೂ ಶುರುವಾಗಿದೆ. ಬೆಂಗಳೂರಿನಲ್ಲಿದ್ದುಕೊಂಡು ಪದೆ ಪದೇ ನಗರವನ್ನು ತುಚ್ಛವಾಗಿ ಮಾತನಾಡುವವರ ವಿರುದ್ಧ ಕ್ರಮವನ್ನು ಕೈಗೊಳ್ಳಬೇಕಿದೆ. ಇಲ್ಲದಿದ್ದಲ್ಲಿ ವಿಚಾರ ಕೈ ಮೀರಿ ಹೋಗುವ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Tirupati laddu Row : ತಿರುಪತಿ ಲಡ್ಡು ಬಳಿಕ ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದವನ್ನೂ ಪರೀಕ್ಷೆಗೊಳಪಡಿಸಿ; ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹ

Tirupati laddu Row : ತಿರುಮಲ ತಿರುಪತಿಯಲ್ಲಿ ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಬಳಸಿದ ಕಾರಣ ರಾಜ್ಯದಲ್ಲಿನ ಪವಿತ್ರ ಕ್ಷೇತ್ರಗಳ ಪ್ರಸಾದವನ್ನು ತಕ್ಷಣ ಪರೀಕ್ಷೆಗೆ ಒಳಪಡಿಸುವುದು ಒಳಿತು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದ್ದಾರೆ

VISTARANEWS.COM


on

By

Also test the prasadam of the holy places of the state Pralhad Joshi urges state government
Koo

ನವದೆಹಲಿ: ತಿರುಪತಿ ಪ್ರಕರಣದ (Tirupati laddu Row) ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಪವಿತ್ರ ಕ್ಷೇತ್ರಗಳ ಪ್ರಸಾದವನ್ನೂ ಪರೀಕ್ಷೆಗೆ ಒಳಪಡಿಸಲು ರಾಜ್ಯ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದ್ದಾರೆ. ನವದೆಹಲಿಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿ, ತಿರುಪತಿ ಪ್ರಸಾದದ ವಿಚಾರವಾಗಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿದರು.

ತಿರುಮಲ ತಿರುಪತಿಯಲ್ಲಿ ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಬಳಸಿದ ಕಾರಣ ರಾಜ್ಯದಲ್ಲಿನ ಪವಿತ್ರ ಕ್ಷೇತ್ರಗಳ ಪ್ರಸಾದವನ್ನು ತಕ್ಷಣ ಪರೀಕ್ಷೆಗೆ ಒಳಪಡಿಸುವುದು ಒಳಿತು ಎಂದು ಸಚಿವರು ಅಭಿಪ್ರಾಯಿಸಿದರು. ಹಿಂದೂಗಳ ಪವಿತ್ರ ಕ್ಷೇತ್ರವಾದ ತಿರುಮಲ ತಿರುಪತಿಯಲ್ಲಿ ಪ್ರಸಾದಕ್ಕೆ ಜಾನುವಾರುಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಬಳಸುತ್ತಿದ್ದರು!? ಎಂಬ ಸಂಗತಿ ಹಿಂದೂ ಸಮಾಜವನ್ನು ಚಿಂತೆಗೀಡು ಮಾಡಿದೆ ಎಂದು ಜೋಶಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಅಧಿಕಾರ ಅವಧಿಯಲ್ಲಿ ಈ ರೀತಿ ಹಲವು ಹಿಂದೂ ವಿರೋಧಿ ಕ್ರಮಗಳಿಗೆ ಬೆಂಬಲವಾಗಿ ನಿಂತಿರುವುದು ಅಕ್ಷಮ್ಯ ಎಂದು ಪ್ರತಿಕ್ರಿಯಿಸಿದ್ದಾರೆ. ಅಷ್ಟೇ ಅಲ್ಲ, ತಿರುಮಲ ತಿರುಪತಿಯ ಟ್ರಸ್ಟ್ ನಲ್ಲಿ ಜಗನ್ ರೆಡ್ಡಿ ಅವರು ಹಿಂದೂಯೇತರರನ್ನೂ ಟ್ರಸ್ಟ್ ಸದಸ್ಯರನ್ನಾಗಿ ಮಾಡಿದ್ದರು ಎಂದು ಜೋಶಿ ಆರೋಪಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ಮತ್ತೆ ಈ ರೀತಿಯ ವಿಚಾರಗಳು ಮರುಕಳಿಸಬಾರದು. ಆ ನಿಟ್ಟಿನಲ್ಲಿ ನೂತನ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಸದಾ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

ಕರ್ನಾಟಕದಲ್ಲೂ ಎಚ್ಚರ ವಹಿಸಿ: ಆಂಧ್ರಪ್ರದೇಶ ಪ್ರಕರಣದಿಂದ ಕರ್ನಾಟಕ ಸಹ ಎಚ್ಚೆತ್ತುಕೊಳ್ಳಬೇಕು. ಎಲ್ಲಾ ಪವಿತ್ರ ಕ್ಷೇತ್ರಗಳ ಪ್ರಸಾದಗಳನ್ನ ತ್ವರಿತವಾಗಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಸಚಿವ ಜೋಶಿ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಧಾರ್ಮಿಕ ಟ್ರಸ್ಟ್ ಗೆ ಬೇಡ ಹಿಂದೂಯೇತರರ ನೇಮಕ: ಹಿಂದೂ ಧಾರ್ಮಿಕ ಟ್ರಸ್ಟ್ ಗಳಲ್ಲಿ ಹಿಂದೂಯೇತರರನ್ನು ನೇಮಕ ಮಾಡಬಾರದು ಎಂದೂ ಸಚಿವ ಪ್ರಲ್ಹಾದ ಜೋಶಿ ಸರ್ಕಾರಕ್ಕೆ ಆಗ್ರಹಿದ್ದಾರೆ.

ಲಡ್ಡು ಪ್ರಸಾದಕ್ಕೆ ಪ್ರಾಣಿಯ ಕೊಬ್ಬು ಬಳಕೆ- ತನಿಖೆಗೆ ಸಿಟಿ ರವಿ ಆಗ್ರಹ

ತಿರುಪತಿ ತಿಮ್ಮಪ್ಪನ ಪ್ರಸಾದಕ್ಕೆ ಪ್ರಾಣಿ ಕೊಬ್ಬು ಬಳಕೆ ಆರೋಪದ ಕುರಿತು ಚಿಕ್ಕಮಗಳೂರಿನಲ್ಲಿ ಮಾಜಿ ಸಚಿವ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದಾರೆ. ತಿರುಪತಿ ಕೋಟ್ಯಾಂತರ ಭಕ್ತರ ಶ್ರದ್ಧೆಯ ಧಾರ್ಮಿಕ ಸ್ಥಳವಾಗಿದೆ. ಸಾವಿರಾರು ವರ್ಷಗಳಿಂದ ಬಾಲಾಜಿ ಜತೆ ಅವಿನಾಭಾವ ಸಂಬಂಧವಿದೆ. ವಾರಕ್ಕೊಮ್ಮೆ ಬಾಲಾಜಿ ದರ್ಶನಕ್ಕೆ ಹೋಗುವವರು ಇದ್ದಾರೆ. ತಿರುಪತಿ ಲಡ್ಡು ಪ್ರಸಾದಕ್ಕೆ ಇರುವ ಭಾವನೆಯೇ ಬೇರೆ.

ಅದು ಕೋಟ್ಯಾಂತರ ಭಕ್ತರಿಗೆ ಕೇವಲ ಸಿಹಿ ಅಲ್ಲ ಭಕ್ತಿಯ ಪ್ರಸಾದವಾಗಿದೆ. ಇಂತಹ ಪ್ರಸಾದ ತಯಾರಿಸುವಾಗ ಧಾರ್ಮಿಕ ಸ್ಯಾಂಟಿಟಿ ಕಾಪಾಡಿಕೊಳ್ಳಬೇಕು. ಕರ್ನಾಟಕದಿಂದಲೇ ನಂದಿನಿ ತುಪ್ಪ ಅಲ್ಲಿಗೆ ಸರಬರಾಜಾಗುವುದನ್ನ ಕೇಳಿದ್ದೇನೆ. ಪ್ರಸಾದಕ್ಕೆ ಪ್ರಾಣಿಯ ಕೊಬ್ಬು ಬಳಕೆ ಎಂಬ ಮಾತು ಆಶ್ಚರ್ಯ-ಆಘಾತ ಎರಡೂ ಆಗಿದೆ. ಧಾರ್ಮಿಕ ಶ್ರದ್ಧಾ ಕೇಂದ್ರದಲ್ಲಿ ಈ ರೀತಿ ಮಾಡುವ ಯೋಚನೆಯಾದರೂ ಯಾರಿಗೆ ಬರುತ್ತೆ. ಯಾರಿಗೆ ಗುತ್ತಿಗೆ ನೀಡಿದ್ದರು ಎಲ್ಲವನ್ನು ಗಂಭೀರವಾಗಿ ತನಿಖೆ ನಡೆಸಬೇಕು. ಇದು ನಮ್ಮ ಭಾವನೆ, ನಂಬಿಕೆ, ಶ್ರದ್ಧೆಯ ಪ್ರಶ್ನೆ, ಅದಕ್ಕೆ ಧಕ್ಕೆಯಾಗುತ್ತೆ. ಸಮಗ್ರ ತನಿಖೆಯಾದರೆ ಭಕ್ತರ ಮನಸ್ಸಿಗೆ ಸ್ಪಷ್ಟತೆ ಬರಲಿದೆ ಎಂದರು.

ತಿರುಪತಿಗೆ 350 ಮೆಟ್ರಿಕ್ ಟನ್ ತುಪ್ಪ ರವಾನೆ

ತಿರುಪತಿ ಪ್ರಸಾದ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಆರೋಪ ವಿಚಾರವಾಗಿ ಕೆಎಂಎಫ್ ಅಧ್ಯಕ್ಷ ಭೀಮಾನಾಯಕ್ ಪ್ರತಿಕ್ರಿಯಿಸಿದ್ದಾರೆ. ಮೊದಲಿಗೆ ಸಿಎಂ ಚಂದ್ರಬಾಬು ನಾಯ್ಡು ಮಾಡಿರುವ ಆರೋಪಕ್ಕೂ, ‌ನಮ್ಮ ನಂದಿನಿಗೂ ಯಾವುದೇ ಸಂಬಂಧವಿಲ್ಲ. ಕಳೆದ ಕೆಲ ದಿನಗಳ ಹಿಂದೆ ಟಿಟಿಡಿ ಪ್ರೆಸ್ ಮೀಟ್ ಮಾಡಿದೆ. ನಂದಿನಿ ಹಾಲು ಹೊರಗಿಟ್ಟು ಬೇರೆ ಬೇರೆ ತುಪ್ಪ ತೆಗೆದುಕೊಂಡಿದ್ದಾರೆ. ಇದರ ಉದ್ದೇಶ ಏನು ಅಂತ ಟಿಟಿಡಿ ಅವರು ಕೇಳಿದ್ದಾರೆ. ಹಿಂದೆ ನಂದಿನಿ ತುಪ್ಪ ಏಕೆ ಬೇಡ ಅಂತ ಹೇಳಿದ್ದರು ಅನ್ನೋದು ನಮ್ಮಗೆ ಗೊತ್ತಿಲ್ಲ.

ಈಗ ಮತ್ತೆ ನಂದಿನಿ ಹಾಲು ಬೇಕು ಅಂತ ಶಿಫಾರಸ್ಸು ಮಾಡಿದ್ದಾರೆ.ಈಗ ಮತ್ತೆ ಕಳೆದ ಒಂದು ತಿಂಗಳಿನಿಂದ 350 ಮೆಟ್ರಿಕ್ ಟನ್ ತುಪ್ಪ ಹೋಗುತ್ತಿದೆ. ಈಗ ಆರೋಪ ಅಷ್ಟೇ ಪ್ರಾಣಿ ಕೊಬ್ಬಿನ ಅಂಶ ಬಳಕೆ ಆಗ್ತಾಯಿತ್ತಾ ಅನ್ನೋ ವರದಿ ಬರಬೇಕು. ಒಂದೂ ವೇಳೆ ಬಳಕೆ ಆಗ್ತಾಯಿತ್ತು ಅಂದರೆ ದುರದೃಷ್ಟಕರ ವಿಚಾರ ಇದು. ಒಟ್ಟಾರೆ ಈಗ ನಾವು ನಂದಿನಿಯಿಂದ ತುಪ್ಪ ಕೊಡಲು ತಯಾರಿ ಇದ್ದೀವಿ ಅಂದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Murder case
ಬೆಂಗಳೂರು12 ಗಂಟೆಗಳು ago

Bengaluru Murder : ಮಹಿಳೆಯನ್ನು 50 ತುಂಡಾಗಿ ಕತ್ತರಿಸಿದವನು ಒಡಿಶಾದ ಸ್ಮಶಾನದಲ್ಲಿ ನೇಣಿಗೆ ಶರಣು!

assault case
ಹಾವೇರಿ13 ಗಂಟೆಗಳು ago

Assault Case : ಮನೆಗೆ ಬಾರದ ಪತ್ನಿ; ಸಿಟ್ಟಾಗಿ ಮಾವ ಬೆಳೆದ ಅಡಿಕೆ ಗಿಡಗಳನ್ನು ನಾಶ ಮಾಡಿದ ಅಳಿಯ!

Murder case
ದಾವಣಗೆರೆ13 ಗಂಟೆಗಳು ago

Murder Case : ಪತಿಗೆ ನಿದ್ರೆ ಮಾತ್ರೆ ಕೊಟ್ಟು ರಾತ್ರಿ ಹೊತ್ತು ಪ್ರಿಯಕರನ ಸೇರುತ್ತಿದ್ದಳು ಮಳ್ಳಿ! ಪತ್ನಿಯ ಅಕ್ರಮ ಸಂಬಂಧಕ್ಕೆ ಪತಿ ಬಲಿ

new serial
ಬೆಂಗಳೂರು16 ಗಂಟೆಗಳು ago

New Serial : ಡಿಫರೆಂಟ್ ಕಥೆಯೊಂದಿಗೆ ಕಿರುತೆರೆಯಲ್ಲಿ ಶುರುವಾಗ್ತಿದೆ ʻನಿನ್ನ ಜೊತೆ ನನ್ನ ಕಥೆʼ

World Retinal Day 2024
ಪ್ರಮುಖ ಸುದ್ದಿ17 ಗಂಟೆಗಳು ago

World Retinal Day 2024 : ಶಾಕಿಂಗ್‌ ನ್ಯೂಸ್‌; ಜಾಗತಿಕವಾಗಿ 1 ಬಿಲಿಯನ್ ಜನರು ತಮ್ಮ ದೃಷ್ಟಿಯನ್ನು ಕಳೆದುಕೊಳ್ಳುತ್ತಿದ್ದರಂತೆ!

MUda Scam
ರಾಜಕೀಯ17 ಗಂಟೆಗಳು ago

Muda Scam : ಸಿದ್ದರಾಮಯ್ಯ ರಾಜೀನಾಮೆಗೆ ಹೆಚ್ಚಾದ ಒತ್ತಡ; ಫ್ರೀಡಂ ಪಾರ್ಕ್‌ನಲ್ಲಿ ಜೆಡಿಎಸ್‌ ಪ್ರತಿಭಟನೆ

Cancer Treatment AI
ಆರೋಗ್ಯ17 ಗಂಟೆಗಳು ago

Cancer Treatment : ವೈದ್ಯಕೀಯ ಲೋಕದಲ್ಲಿ ಎಐ; ಕ್ಯಾನ್ಸರ್‌ಕಾರಕ ಗಡ್ಡೆ ಪತ್ತೆಗೂ ಬಂದಿದೆ ಎಐ ಚಾಲಿತ ಸೈಬರ್‌ನೈಫ್‌-ಎಸ್7 ಸಿಸ್ಟಮ್‌!

Dina Bhavishya
ಭವಿಷ್ಯ18 ಗಂಟೆಗಳು ago

Dina Bhavishya :ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Self Harming
ಕೋಲಾರ2 ದಿನಗಳು ago

Self Harming : ಹೆಂಡ್ತಿ ಮನೆಯವರ ಕಿರುಕುಳ; ವಿಡಿಯೊ ಮಾಡಿ ಮಾರ್ಕಂಡೇಶ್ವರ ಬೆಟ್ಟದಲ್ಲಿ ನೇಣಿಗೆ ಶರಣು

karnataka weather Forecast
ಮಳೆ2 ದಿನಗಳು ago

Karnataka Weather : ರಾಜ್ಯಾದ್ಯಂತ ವ್ಯಾಪಕ ಮಳೆ ; ಉಡುಪಿ, ಉತ್ತರ ಕನ್ನಡಕ್ಕೆ ರೆಡ್‌ ಅಲರ್ಟ್‌

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ12 ತಿಂಗಳುಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ11 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ11 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್4 ವಾರಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್4 ವಾರಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 ತಿಂಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 ತಿಂಗಳುಗಳು ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌