Site icon Vistara News

Climate meet | ಕಲ್ಲಿದ್ದಲು ಬಳಕೆಯನ್ನೇ ಅಂತ್ಯಗೊಳಿಸುವ ಒತ್ತಡಕ್ಕೆ ಭಾರತದ ವಿರೋಧ

cop27

ಶರಮ್‌ ಎಲ್‌ ಶೇಖ್:‌ (ಈಜಿಪ್ತ್)‌ : ಕಲ್ಲಿದ್ದಲು ಬಳಕೆಯನ್ನೇ ಸ್ಥಗಿತಗೊಳಿಸಬೇಕು ಎಂಬ ಪಾಶ್ಚಿಮಾತ್ಯ ರಾಷ್ಟ್ರಗಳ ಅಂತಾರಾಷ್ಟ್ರೀಯ ಒತ್ತಡಕ್ಕೆ ಭಾರತ ವಿರೋಧಿಸಿದೆ. ಹವಾಮಾನ ಕುರಿತ ವಿಶ್ವಸಂಸ್ಥೆಯ ಸಮಾವೇಶದಲ್ಲಿ (COP27) ಭಾರತವು, ಕೇವಲ ಕಲ್ಲಿದ್ದಲು ಬಳಕೆಯೊಂದರಿಂದಲೇ ಪರಿಸರ ಮಾಲಿನ್ಯ ಆಗುವುದಿಲ್ಲ, ಪೆಟ್ರೋಲಿಯಂ, ನೈಸರ್ಗಿಕ ಅನಿಲ ಬಳಕೆಯಿಂದಲೂ (Climate meet) ಪರಿಸರಕ್ಕೆ ಹಾನಿಯಾಗುತ್ತದೆ. ಹೀಗಾಗಿ ಕೇವಲ ಕಲ್ಲಿದ್ದಲು ಒಂದನ್ನೇ ಖಳನಾಯಕನನ್ನಾಗಿಸಬಾರದು ಎಂದು ಒತ್ತಾಯಿಸಿದೆ.

ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಎಲ್ಲ ಇಂಧನಗಳ ಬಳಕೆಯನ್ನು ಹಂತ ಹಂತವಾಗಿ ಕಡಿಮೆ ಮಾಡಬೇಕು. ಅದು ಬಿಟ್ಟು ಏಕಾಏಕಿ ಕಲ್ಲಿದ್ದಲು ಬಳಕೆ ಒಂದನ್ನೇ ನಿಷೇಧಿಸುವುದು ಸರಿಯಲ್ಲ ಎಂದು ಭಾರತ ತಿಳಿಸಿದೆ.

ಇಂಧನ ಬಳಕೆಯ ವಿಚಾರದಲ್ಲಿ ಜಗತ್ತಿನ ನಾನಾ ದೇಶಗಳ ನಡುವೆ ತಾರತಮ್ಯವಿದೆ. ಭಾರತ ಪರಿಸರ ಸ್ನೇಹಿ ಹಾಗೂ ನವೀಕರಿಸಬಹುದಾದ ಇಂಧನ ಮೂಲಗಳನ್ನು ಹೆಚ್ಚು ಬಳಸಲು ಆರಂಭಿಸಿದೆ ಎಂದು ಭಾರತ ಸಮಾವೇಶದಲ್ಲಿ ಪ್ರತಿಪಾದಿಸಿದೆ.

ಭಾರತ ತನ್ನ ಇಂಧನ ಬೇಡಿಕೆಯನ್ನು ನೀಗಿಸಲು, ವಿದ್ಯುತ್‌ ಉತ್ಪಾದಿಸಲು ಕಲ್ಲಿದ್ದಲನ್ನು ಬಳಸುತ್ತಿದೆ. ಅದರ ಅಗತ್ಯವೂ ನಿರ್ಣಾಯಕವಾಗಿದೆ. ಹೀಗಾಗಿ ಈ ಹಂತದಲ್ಲಿ ಕಲ್ಲಿದ್ದಲು ಬಳಸದಂತೆ ನಿರ್ಬಂಧಿಸುವುದರಿಂದ ಭಾರತದ ಆರ್ಥಿಕ ಬೆಳವಣಿಗೆಯ ಹಿತಾಸಕ್ತಿಗೆ ಕೂಡ ಧಕ್ಕೆಯಾಗಲಿದೆ.

Exit mobile version