ನವದೆಹಲಿ : ದೇಶದಲ್ಲಿ ಮತ್ತೆ ಕೊರೊನಾ ಆರ್ಭಟ ಮುಂದುವರಿದಿದೆ. ನಿನ್ನೆ ೧೧,೭೩೯ ಹೊಸ ಕೇಸ್‌ಗಳು ದಾಖಲಾಗಿದ್ದವು. ತುಸು ಕಡಿಮೆಯಾಯಿತು ಎಂಬ ನಿರಾಳತೆ ಹುಟ್ಟಿದ್ದ ಬೆನ್ನಲ್ಲೇ, ಇಂದು (ಜೂ.27) ಮತ್ತೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಕಳೆದ 24 ಗಂಟೆಯಲ್ಲಿ ಹೊಸದಾಗಿ 17,073 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇದು ನಿನ್ನೆಗಿಂತಲೂ ೫೦೦೦ದಷ್ಟು ಹೆಚ್ಚು. ಈ ಮೂಲಕ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 4,34,07,046 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಸದ್ಯ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 94,420 ಕ್ಕೆ ಏರಿದೆ, ಇನ್ನು ಒಂದೇ ದಿನದಲ್ಲಿ 21 ಮಂದಿ ಸೋಂಕಿಗೆ ಮೃತಪಟ್ಟಿದ್ದು, ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 5,25,020 ಕ್ಕೆ ಏರಿದೆ.
ಇದನ್ನು ಓದಿ| ಕೊರೊನಾ ಕೇಸು ನಿನ್ನೆಗಿಂತ ಇಂದು ಕಡಿಮೆ: 24 ಗಂಟೆಯಲ್ಲಿ 15,940 ಪ್ರಕರಣ ದಾಖಲು
ದೇಶದಲ್ಲಿ ದಿನೇದಿನೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ದಿನನಿತ್ಯದ ಪಾಸಿಟಿವಿಟಿ ರೇಟ್ 5.62% ಕ್ಕೆ ಏರಿದೆ. ಇನ್ನು ವಾರದ ಪಾಸಿಟಿವಿಟಿ ರೇಟ್ 3.39% ಕ್ಕೆ ತಲುಪಿದೆ. ಹೀಗಾಗಿ ದೇಶದಲ್ಲಿ ಲಸಿಕೆ ಅಭಿಯಾನ ಚುರುಕಾಗಿದ್ದು, ಕಳೆದ 24 ಗಂಟೆಯಲ್ಲಿ 2,49,646 ಜನರಿಗೆ ಲಸಿಕೆ ನೀಡಲಾಗಿದೆ. ಈ ಮೂಲಕ ದೇಶದಲ್ಲಿ ಒಟ್ಟಾರೆ 1,97,11,91,329 ಕೊರೊನಾ ಲಸಿಕೆ ಡೋಸ್ಗಳ ವಿತರಣೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ಕೊರೊನಾ ವೈರಸ್ 4ನೇ ಅಲೆ ಭೀತಿ; ಇಂದು 5 ಸಾವಿರದ ಗಡಿ ದಾಟಿದ ಸೋಂಕಿತರ ಸಂಖ್ಯೆ