ನವ ದೆಹಲಿ: ದೇಶದಲ್ಲಿ ಕೊರೊನಾ ಏರಿಳಿತ ಮುಂದುವರಿದಿದ್ದು, ಭಾನುವಾರ (ಜು.3) 16,103 ಪ್ರಕರಣಗಳು ಪತ್ತೆಯಾಗಿದ್ದರೆ ಸೋಮವಾರಕ್ಕೆ ಅದು 16,135ಕ್ಕೇರಿದೆ. ದೇಶದಲ್ಲಿ ಒಟ್ಟು ರೊನಾ ಸೋಂಕಿತರ ಸಂಖ್ಯೆ 4,35,02,429 ಕ್ಕೆ ಏರಿಕೆಯಾಗಿದೆ.
ಪ್ರಸ್ತುತ ದೇಶದಲ್ಲಿ 1,13,864 ಸಕ್ರಿಯ ಪ್ರಕರಣಗಳಿದೆ. ಇನ್ನು ಒಂದೇ ದಿನದಲ್ಲಿ ಮಹಾಮಾರಿ ಸೋಂಕಿಗೆ 24 ಮಂದಿ ಸಾವನ್ನಪ್ಪಿದ್ದು, ಮೃತಪಟ್ಟವರ ಸಂಖ್ಯೆ 5,25,223ಕ್ಕೆ ಏರಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಸಮಯದಲ್ಲಿ ಗುಣಮುಖರಾಗುತ್ತಿರುವ ಸಂಖ್ಯೆಯು ಹೆಚ್ಚಾಗುತ್ತಿರುವುದು ಕೊಂಚ ಸಮಾಧಾನ ತರಿಸಿದೆ. ಕಳೆದ 24 ಗಂಟೆಯಲ್ಲಿ 13,958 ಮಂದಿ ಸೊಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟಾರೆ ಈವರೆಗೂ 4,28,79,477 ಮಂದಿ ಕೊರೊನಾದಿಂದ ಚೇತರಿಕೆ ಕಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಮಹಾರಾಷ್ಟ್ರ, ತಮಿಳುನಾಡು, ಕೇರಳ, ದೆಹಲಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪ್ರತಿದಿನ ಸಾವಿರ ಕೇಸ್ಗಳು ದಾಖಲಾಗುತ್ತಿವೆ. ಹೀಗಾಗಿ ಸೋಂಕು ನಿಯಂತ್ರಿಸಲು ಸರ್ಕಾರಗಳು ಹೆಣಗಾಡುತ್ತಿದ್ದು, ಕಠಿಣ ಕ್ರಮಕ್ಕೆ ಮುಂದಾಗಿದೆ ಈಗಾಗಲೇ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಿದೆ. ಇದರ ಜತೆಗೆ ಕೊರೊನಾ ಲಸಿಕೆಯನ್ನು ಕೂಡ ಚುರುಕುಗೊಳಿಸಿದೆ. ಕಳೆದ 24 ಗಂಟೆಯಲ್ಲಿ ಹೊಸದಾಗಿ 1,78,383 ಮಂದಿಗೆ ಕೊರೊನಾ ಲಸಿಕೆಯನ್ನು ವಿತರಣೆ ಮಾಡಲಾಗಿದೆ. ಒಟ್ಟಾರೆ ದೇಶದಲ್ಲಿ 1,97,98,21,197 ಕೊರೊನಾ ಡೋಸ್ಗಳನ್ನು ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶ ತಿಳಿಸಿದೆ.
ಇದನ್ನು ಓದಿ | ಮುಂದುವರಿದ ಕೊರೊನಾ ಆರ್ಭಟ: ಕಳೆದ 24 ಗಂಟೆಯಲ್ಲಿ 17,092 ಕೇಸು, 29 ಮಂದಿ ಸಾವು