Site icon Vistara News

ಒಂದೇ ದಿನ 20,038 ಮಂದಿಗೆ ಕೋವಿಡ್ ಸೋಂಕು, ಏಕಾಏಕಿ ಭಾರಿ ಏರಿಕೆ, 47 ಮಂದಿ ಸಾವು

coronavirus

ನವ ದೆಹಲಿ: ದೇಶದಲ್ಲಿ ಕೋವಿಡ್ ಪ್ರಕರಣಗಳು ಸತತ ಎರಡನೇ ದಿನ ೨೦೦೦೦ ಮೀರಿವೆ. ಗುರುವಾರ (ಜು.14) 20,139 ಕೋವಿಡ್ ಪ್ರಕರಣಗಳು ದಾಖಲಾಗಿದ್ದರೆ, ಶುಕ್ರವಾರವೂ 20,038 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ೪೭ ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟಾರೆ ಕೋವಿಡ್ ಸೋಂಕಿತರ ಸಂಖ್ಯೆ 4,37,10,027ಕ್ಕೆ ಏರಿದೆ. ಕೆಲವು ದಿನಗಳ ಹಿಂದೆ ಕೋವಿಡ್‌ ಪ್ರಕರಣಗಳ ಸಂಖ್ಯೆ ಸ್ವಲ್ಪ ಇಳಿಮುಖವಾಗಿತ್ತು.

ಪ್ರಸ್ತುತ ದೇಶದಲ್ಲಿ 1,39,073 ಸಕ್ರಿಯ ಪ್ರಕರಣಗಳಿವೆ. ಒಟ್ಟಾರೆ ಪಾಸಿಟಿವಿಟಿ ದರ 0.32%ರಷ್ಟು ಇದ್ದು, ಸೋಂಕಿನಿಂದ ಗುಣಮುಖರಾಗುವ ಸಂಖ್ಯೆ ಕೊಂಚ ಏರಿಕೆ ಕಾಣುತ್ತಿದೆ. ಕಳೆದ 24 ಗಂಟೆಯಲ್ಲಿ 16,994 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಒಟ್ಟಾರೆ ಚೇತರಿಕೆ ಕಂಡವರ ಸಂಖ್ಯೆ 4,30,45,350 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಇದನ್ನು ಓದಿ| ಕೊರೊನಾ ಇಳಿಮುಖ: 24 ಗಂಟೆಯಲ್ಲಿ 13,615 ಕೇಸ್‌, ಸಾವಿನ ಸಂಖ್ಯೆ 20

ಮಹಾರಾಷ್ಟ್ರ, ಕೇರಳ, ಕರ್ನಾಟಕ, ದೆಹಲಿಯಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿದ್ದು, ಅದರಲ್ಲೂ ಕರ್ನಾಟಕದಲ್ಲಿ ಪ್ರತಿನಿತ್ಯ ಸಾವಿರ ಕೇಸ್​ಗಳು ದಾಖಲಾಗುತ್ತಿರುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಈ ಹಿಂದೆ ದಂಡ ಇಲ್ಲ ಆದರೆ ಮಾಸ್ಕ್ ಧರಿಸಬೇಕು ಅಂತ ಸರ್ಕಾರ ಹೇಳಿತ್ತು. ಆದರೆ, ಈಗ ಸೋಂಕು ಹೆಚ್ಚಾಗುತ್ತಿರುವ ಕಾರಣ ರಾಜಧಾನಿ ಬೆಂಗಳೂರಿನಲ್ಲಿ ಮಾಸ್ಕ್ ಕಡ್ಡಾಯ ಮಾಡಿದ್ದು, ಮಾಸ್ಕ್​ ಧರಿಸದಿದ್ದರೆ ದಂಡ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದೆ.

ದೇಶದಲ್ಲಿ ಒಂದೇ ದಿನದಲ್ಲಿ 18,92,969 ಮಂದಿಗೆ ಕೋವಿಡ್ ಲಸಿಕೆ ವಿತರಣೆ ಮಾಡಲಾಗಿದೆ. ಈ ಮೂಲಕ ಒಟ್ಟಾರೆ 1,99,47,34,994 ಕೋವಿಡ್ ಡೋಸ್​ ವಿತರಣೆ ಮಾಡಲಾಗಿದೆ. ಇಷ್ಟೇ ಅಲ್ಲದೆ ಇಂದಿನಿಂದ ವಯಸ್ಕರಿಗೂ ಕೂಡ ಬೂಸ್ಟರ್​ ಡೋಸ್​ ವಿತರಣೆ ಮಾಡಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದನ್ನು ಓದಿ| ಕೊರೊನಾ ಕಾಟ ಸ್ವಲ್ಪ ಇಳಿಕೆ: 24 ಗಂಟೆಯಲ್ಲಿ 16,678 ಮಂದಿಗೆ ಪಾಸಿಟಿವ್, 26 ಸಾವು

Exit mobile version