Site icon Vistara News

ಇಳಿಕೆ ಗತಿಯಲ್ಲಿ ಕೊರೊನಾ, ನಾಲ್ಕನೇ ಅಲೆ ಅತಂಕ ನಿಧಾನಕ್ಕೆ ದೂರ, 12781 ಹೊಸ ಕೇಸ್‌

corona

ನವದೆಹಲಿ: ದೇಶದಲ್ಲಿ ಕೊರೊನಾ ಅಬ್ಬರ ನಿಧಾನವಾಗಿ ಇಳಿಯುತ್ತಿರುವ ಲಕ್ಷಣಗಳು ಕಾಣಿಸುತ್ತಿವೆ. ಸೋಮವಾರ ೧೨,೭೮೧ ಹೊಸ ಪ್ರಕರಣಗಳು ಪತ್ತೆ ಆಗಿವೆಯಾದರೂ ಕಳೆದ ಕೆಲವು ದಿನಗಳಿಂದ ಇಳಿಕೆಯ ಗತಿ ಕಾಣಿಸುತ್ತಿರುವುದು ಆಶಾವಾದ ಮೂಡಿಸಿದೆ. ಇದು ನಾಲ್ಕನೇ ಅಲೆಯ ಭೀತಿಯನ್ನೂ ಸ್ವಲ್ಪ ತಗ್ಗಿಸಿದೆ.

ಕಳೆದ ಶುಕ್ರವಾರ ದೇಶದಲ್ಲಿ ೧೩೦೦೦ಕ್ಕಿಂತಲೂ ಹೆಚ್ಚು ಪ್ರಕರಣ ದಾಖಲಾಗಿ ಆತಂಕ ಮೂಡಿಸಿತ್ತು. ಅದಾದ ಬಳಿಕ ಪ್ರತಿ ದಿನವೂ ಇಳಿಕೆ ಗತಿಯೇ ದಾಖಲಾಗಿದೆ. ಶನಿವಾರ ೧೨,೮೪೭, ಭಾನುವಾರ ೧೨,೮೯೯ ಪ್ರಕರಣಗಳಿದ್ದವು.

ಸೋಮವಾರ 12,781 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4,33,09,473ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲೇ 18 ಮಂದಿ ಕೊರೊನಾಗೆ ಬಲಿಯಾಗಿದ್ದು, ಸಾವನ್ನಪ್ಪಿದ್ದವರ ಸಂಖ್ಯೆ 5,24,873 ಕ್ಕೆ ಏರಿದೆ. ಸದ್ಯಕ್ಕೆ ದೇಶದಲ್ಲಿ 76,700 ಸಕ್ರಿಯ ಪ್ರಕರಣಗಳಿವೆ.

ಇದನ್ನು ಓದಿ | ತಗ್ಗದ ಕೊರೊನಾ ಅಬ್ಬರ, ದೇಶದಲ್ಲಿಂದು ಮತ್ತೆ 13,216 ಹೊಸ ಪ್ರಕರಣಗಳು

ದೇಶದಲ್ಲಿ 5 ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿದ್ದು, ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ 4,004 ಕೊರೊನಾ ಪ್ರಕರಣಗಳು ದಾಖಲಾಗಿದೆ. ನಂತರ ಕೇರಳದಲ್ಲಿ 3,376, ದೆಹಲಿ 1,530, ತಮಿಳುನಾಡು 692, ಮತ್ತು ಕರ್ನಾಟಕದಲ್ಲಿ 623 ಕೊರೊನಾ ಪಾಸಿಟಿಟ್​ ಕೇಸ್​ಗಳು ದಾಖಲಾಗುತ್ತಿದ್ದು, ಈ ಐದು ರಾಜ್ಯಗಳಲ್ಲಿ ಕೊರೊನಾ ಕಠಿಣ ಕ್ರಮಗಳನ್ನ ತೆಗೆದುಕೊಳ್ಳಲಾಗುತ್ತಿದೆ.  

ಕೊರೊನಾ ಪ್ರಕರಣಗಳು ದೇಶದಲ್ಲಿ ಮತ್ತೆ ಹೆಚ್ಚಾಗುತ್ತಿರುವ ಹಿನ್ನಲೆ ಲಸಿಕೆ ಪ್ರಕ್ರಿಯೆ ಚುರುಕುಗೊಳಿಸಲಾಗಿದೆ. ಈಗಾಗಲೇ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್​ನ್ನು ಕೂಡ ನೀಡಲಾಗುತ್ತಿದೆ. ಕಳೆದ 24 ಗಂಟೆಯಲ್ಲೇ 2,80,136 ಜನರಿಗೆ ಲಸಿಕೆ ವಿತರಣೆ ಮಾಡಲಾಗಿದೆ. ಸೋಂಕು ಮತ್ತೆ ಏರಿಕೆಯಾಗದಂತೆ ಸರ್ಕಾರ ಕೂಡ ಲಸಿಕೆ ಅಭಿಯಾನದ ಪ್ರಗತಿ ಹೆಚ್ಚಿಸಿದ್ದು, ಒಟ್ಟಾರೆ ಈವರೆಗೆ 1.96,18,66,707 ಮಂದಿಗೆ ಲಸಿಕೆ ವಿತರಣೆ ಮಾಡಲಾಗಿದೆ.

Exit mobile version