ಬೆಂಗಳೂರು: ʼಇಂಡಿಯಾ ಸ್ಕಿಲ್ಸ್ ನ್ಯಾಷನಲ್ ಕಾಂಪಿಟೇಶನ್ 2024ʼ (India Skills National Competition 2024) ಸ್ಪರ್ಧಾ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಭಾನುವಾರ ದ್ವಾರಕಾದ ಯಶೋಭೂಮಿಯಲ್ಲಿ ನಡೆದಿದ್ದು, ಫ್ರಾನ್ಸ್‌ನ ಲಿಯಾನ್‌ನಲ್ಲಿ ಇದೇ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ವರ್ಲ್ಡ್ ಸ್ಕಿಲ್ಸ್‌ನಲ್ಲಿ 58 ವಿಜೇತರು ಭಾರತವನ್ನು ಪ್ರತಿನಿಧಿಸಲಿದ್ದಾರೆ.
ನಾಲ್ಕು ದಿನಗಳ ಕಾಲ ನಡೆದ ʼಇಂಡಿಯಾ ಸ್ಕಿಲ್ಸ್ ನ್ಯಾಷನಲ್ ಕಾಂಪಿಟೇಶನ್ 2024ʼ ಸ್ಪರ್ಧೆಯಲ್ಲಿ ವಾಲ್ ಮತ್ತು ಫ್ಲೋರ್ ಟೈಲಿಂಗ್, ಬ್ರಿಕ್ಲೇಯಿಂಗ್, ಕಾರ್ಪೆಂಟ್ರಿ, ಫ್ಯಾಶನ್ ಟೆಕ್ನಾಲಜಿ, 3ಡಿ ಡಿಜಿಟಲ್ ಗೇಮ್ ಆರ್ಟ್, ಕ್ಲೌಡ್ ಕಂಪ್ಯೂಟಿಂಗ್, ಮೊಬೈಲ್ ಅಪ್ಲಿಕೇಶನ್‌ಗಳ ಅಭಿವೃದ್ಧಿ, ಸ್ವಾಯತ್ತ ಮೊಬೈಲ್ ರೊಬೊಟಿಕ್ಸ್, ಆರೋಗ್ಯ ಮತ್ತು ಸಾಮಾಜಿಕ ಕಾಳಜಿ ಸೇರಿದಂತೆ 61ಕ್ಕೂ ಅಧಿಕ ಕೌಶಲ್ಯಗಳಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 900ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 400ಕ್ಕೂ ಹೆಚ್ಚು ಉದ್ಯಮ ತಜ್ಞರು ಪಾಲ್ಗೊಂಡಿದ್ದರು.
ಇದನ್ನೂ ಓದಿ: 2nd PUC Result : ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟ; ಬಾಲಕಿಯರದೇ ಮೇಲುಗೈ
ʼಇಂಡಿಯಾ ಸ್ಕಿಲ್ಸ್ ನ್ಯಾಷನಲ್ ಕಾಂಪಿಟೇಶನ್ 2024ʼ ಸ್ಪರ್ಧಾ ಕಾರ್ಯಕ್ರಮದಲ್ಲಿ ಒಡಿಶಾ ಅತಿ ಹೆಚ್ಚು ವಿಜೇತರನ್ನು ಹೊಂದಿದ್ದು, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ನಂತರದ ಸ್ಥಾನದಲ್ಲಿವೆ. 17 ಚಿನ್ನ, 13 ಬೆಳ್ಳಿ, 9 ಕಂಚಿನ ಪದಕಗಳನ್ನು ಮತ್ತು 12 ಸ್ಪರ್ಧಾಳುಗಳು ಶ್ರೇಷ್ಠತಾ ಪ್ರಶಸ್ತಿ ಪಡೆಯುವುದರೊಂದಿಗೆ ಒಡಿಶಾ ಅತಿ ಹೆಚ್ಚು ವಿಜೇತರನ್ನು ಹೊಂದಿದೆ. ಕರ್ನಾಟಕ ರಾಜ್ಯವು 13 ಚಿನ್ನ, 12 ಬೆಳ್ಳಿ, 3 ಕಂಚಿನ ಪದಕ ಮತ್ತು 19 ಶ್ರೇಷ್ಠತಾ ಪ್ರಶಸ್ತಿ, ತಮಿಳುನಾಡು 6 ಚಿನ್ನ, 8 ಬೆಳ್ಳಿ, 9 ಕಂಚು ಮತ್ತು 17 ಸ್ಪರ್ಧಾಳುಗಳು ಶ್ರೇಷ್ಠತಾ ಪ್ರಶಸ್ತಿಯನ್ನು ಪಡೆದಿದ್ದಾರೆ.
ಮಹಾರಾಷ್ಟ್ರ 3 ಚಿನ್ನ, 5 ಬೆಳ್ಳಿ, 6 ಕಂಚಿನ ಪದಕ ಮತ್ತು 14 ಶ್ರೇಷ್ಠತಾ ಪ್ರಶಸ್ತಿ, ಉತ್ತರ ಪ್ರದೇಶ ರಾಜ್ಯವು 3 ಚಿನ್ನ, 3 ಬೆಳ್ಳಿ, 6 ಕಂಚಿನ ಪದಕಗಳು ಮತ್ತು 16 ಶ್ರೇಷ್ಠತಾ ಪ್ರಶಸ್ತಿ, ದೆಹಲಿ 5 ಚಿನ್ನ, 3 ಬೆಳ್ಳಿ, 2 ಕಂಚಿನ ಪದಕಗಳು ಮತ್ತು 10 ಶ್ರೇಷ್ಠತಾ ಪ್ರಶಸ್ತಿ, ರಾಜಸ್ಥಾನ ರಾಜ್ಯವು 2 ಚಿನ್ನ, 5 ಬೆಳ್ಳಿ, 3 ಕಂಚಿನ ಪದಕಗಳು, ಮತ್ತು 9 ಶ್ರೇಷ್ಠತಾ ಪ್ರಶಸ್ತಿ, ಹರಿಯಾಣ 2 ಚಿನ್ನ, 3 ಬೆಳ್ಳಿ, 3 ಕಂಚಿನ ಪದಕಗಳು ಮತ್ತು 13 ಶ್ರೇಷ್ಠತಾ ಪ್ರಶಸ್ತಿ, ಮಧ್ಯಪ್ರದೇಶ 1 ಚಿನ್ನ, 2 ಬೆಳ್ಳಿ, 4 ಕಂಚು, ಮತ್ತು 11 ಶ್ರೇಷ್ಠತಾ ಪ್ರಶಸ್ತಿ, ಬಿಹಾರ ರಾಜ್ಯವು 3 ಚಿನ್ನ, 1 ಬೆಳ್ಳಿ, 3 ಕಂಚು ಮತ್ತು 6 ಸ್ಪರ್ಧಾಳುಗಳು ಶ್ರೇಷ್ಠತಾ ಪ್ರಶಸ್ತಿಯನ್ನು ಪಡೆದಿದ್ದಾರೆ.
ಇದನ್ನೂ ಓದಿ: Viral Video: ಇಂಗ್ಲೀಷ್‌ನಲ್ಲೂ ಮಾತಾಡುತ್ತೆ…ಮಿಮಿಕ್ರಿನೂ ಮಾಡುತ್ತೆ ಈ ಗಿಣಿ; ವಿಡಿಯೋ ನೋಡಿದ್ರೆ ಫಿದಾ ಆಗೋದು ಗ್ಯಾರಂಟಿ!
47 ಕೌಶಲ್ಯ ಸ್ಪರ್ಧೆಗಳನ್ನು ಆನ್‌ಸೈಟ್‌ನಲ್ಲಿ ನಡೆಸಿದರೆ, ಕರ್ನಾಟಕ, ಹರಿಯಾಣ, ಉತ್ತರ ಪ್ರದೇಶ ಮತ್ತು ಗುಜರಾತ್‌ನಲ್ಲಿ ಲಭ್ಯವಿರುವ ಅತ್ಯುತ್ತಮ ಮೂಲಸೌಕರ್ಯಗಳನ್ನು ಗಮನದಲ್ಲಿಟ್ಟುಕೊಂಡು ಆಫ್‌ಸೈಟ್‌ನಲ್ಲಿ 14 ಕೌಶಲ್ಯ ಸ್ಪರ್ಧೆಗಳನ್ನು ನಡೆಸಲಾಯಿತು. ಸ್ಪರ್ಧಾ ಕಾರ್ಯಕ್ರಮದಲ್ಲಿ 86 ಸ್ಪರ್ಧಿಗಳೊಂದಿಗೆ ತಮಿಳುನಾಡು ಗರಿಷ್ಠ ಭಾಗವಹಿಸುವಿಕೆಗೆ ಸಾಕ್ಷಿಯಾಗಿದೆ, ನಂತರ ಒಡಿಶಾ (64), ಕರ್ನಾಟಕ (61), ಪಂಜಾಬ್ (53), ಮತ್ತು ಹರಿಯಾಣದಿಂದ 47 ಸ್ಪರ್ಧಿಗಳು ಭಾಗವಹಿಸಿದ್ದರು.
ಈ ವೇಳೆ ಕೌಶಲ್ಯಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ಕಾರ್ಯದರ್ಶಿ ಅತುಲ್ ಕುಮಾರ್ ತಿವಾರಿ ಮಾತನಾಡಿ, ಸ್ಪರ್ಧೆಯ ವಿನ್ಯಾಸ ಮತ್ತು ಕಾರ್ಯಗತಗೊಳಿಸುವಿಕೆಯು ನಿಖರವಾಗಿತ್ತು ಮಾತ್ರವಲ್ಲದೆ ಭಾಗವಹಿಸುವವರು, ಮಾರ್ಗದರ್ಶಕರು, ಉದ್ಯಮದ ವೃತ್ತಿಪರರು, ಸಾರ್ವಜನಿಕರಿಂದ ಹೆಚ್ಚಿನ ಮೆಚ್ಚುಗೆ ಗಳಿಸಿದ್ದಾರೆ. ʼಇಂಡಿಯಾ ಸ್ಕಿಲ್ಸ್ ನ್ಯಾಷನಲ್ ಕಾಂಪಿಟೇಶನ್ 2024ʼ ಅಭೂತಪೂರ್ವ ಯಶಸ್ಸನ್ನು ಕಂಡಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Rameshwaram Cafe Blast: ಬೆಂಗಳೂರಿನ 4 ಕಡೆ ಸೇರಿ ದೇಶಾದ್ಯಂತ ಎನ್‌ಐಎ ದಾಳಿ
ಈ ಸಂದರ್ಭದಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ಕಾರ್ಯದರ್ಶಿ ಅತುಲ್ ಕುಮಾರ್ ತಿವಾರಿ, ಖ್ಯಾತ ನಿರ್ಮಾಪಕ, ಪದ್ಮಶ್ರೀ ಪುರಸ್ಕೃತ ರಮೇಶ್ ಸಿಪ್ಪಿ, ವೃತ್ತಿಪರ ಶಿಕ್ಷಣ ಮತ್ತು ತರಬೇತಿ ರಾಷ್ಟ್ರೀಯ ಮಂಡಳಿ ಅಧ್ಯಕ್ಷ ಡಾ. ನಿರ್ಮಲಜೀತ್ ಸಿಂಗ್ ಕಲ್ಸಿ ವೇದ್ ಮಣಿ ತಿವಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.