Site icon Vistara News

Space Economy: 2040ಕ್ಕೆ ಭಾರತದ ಬಾಹ್ಯಾಕಾಶ ಆರ್ಥಿಕತೆ 40 ಶತಕೋಟಿ ಡಾಲರ್‌ಗೆ ಏರಿಕೆ!

India space economy will reach 40 billion dollar by 2040 Says union minister

ನವದೆಹಲಿ: ಭಾರತದ ಬಾಹ್ಯಾಕಾಶ ಆರ್ಥಿಕತೆಯು (India space economy) 2024ರ ಹೊತ್ತಿಗೆ ಅಂದಾಜು 40 ಶತಕೋಟಿ ಡಾಲರ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ, ಅಣು ಇಂಧನ, ಬಾಹ್ಯಾಕಾಶ ಕೇಂದ್ರ ಸಚಿವ ಜಿತೇಂದ್ರ ಸಿಂಗ್ (Union Minister Jitendra Singh) ಅವರು ಹೇಳಿದ್ದಾರೆ. ಇಸ್ರೋ ರಾಕೆಟ್‌ (ISRO Rocket Launch Anniversary) ಉಡಾವಣೆಯ 60ನೇ ವರ್ಷಾಚರಣೆಯಲ್ಲಿ ಪಾಲ್ಗೊಂಡು ಈ ವಿಷಯ ತಿಳಿಸಿದರು.

ಸದ್ಯ ಭಾರತದ ಬಾಹ್ಯಾಕಾಶ ಆರ್ಥಿಕತೆ 8 ಮಿಲಿಯನ್ ಡಾಲರ್ ಇದ್ದು, ನಿರೀಕ್ಷಿತ ಬೆಳವಣಿಗೆಗೆ ಹೋಲಿಸಿದರೆ ಇದು ತುಸು ಕಮ್ಮಿ ಎಂದು ಹೇಳಬಹುದು. ಆದರೆ, ಭಾರತವು ವಿದೇಶಿ ಉಪಗ್ರಹಗಳ ಉಡಾವಣೆಯಲ್ಲಿ ಮಹತ್ವದ ಬೆಳವಣಿಗೆಯನ್ನು ದಾಖಲಿಸುತ್ತಿದೆ. ಯುರೋಪಿಯನ್ ರಾಷ್ಟ್ರಗಳ ಉಡಾವಣೆ ಮೂಲಕ 230ರಿಂದ 240 ಯುರೋ ಹಾಗೂ ಅಮೆರಿಕಾದ ಉಪಗ್ರಹಗಳ ಉಡಾವಣೆಯ ಮೂಲಕ ಸುಮಾರು 170ರಿಂದ 180 ಮಿಲಿಯನ್ ಡಾಲರ್ ಆದಾಯಕ್ಕೆ ಕಾರಣವಾಗಿದೆ ಎಂಬ ಅಂಶವನ್ನು ಕೇಂದ್ರ ಸಚಿವರು ಒತ್ತಿ ಹೇಳಿದರು.

ಇಸ್ರೋ ರಾಕೆಟ್ ಉಡಾವಣೆ ಕಾರ್ಯಕ್ರಮದ 60ನೇ ವಾರ್ಷಿಕೋತ್ಸವದಲ್ಲಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಪಾಲ್ಗೊಂಡಿದ್ದರು. ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ, ಅನು ಸಂಧನ್‌ನ ಪರಿವರ್ತಕ ಪಾತ್ರದ ಕುರಿತು ಈ ವೇಳೆ ಚರ್ಚಿಸಿದರು. ಶೇ.70ಕ್ಕೂ ಅಧಿಕ ನಮ್ಮ ಬಾಹ್ಯಾಕಾಶ ಸಂಪನ್ಮೂಲಗಳು ಸರ್ಕಾರೇತರ ವಲಯಗಳಿಂದ ಬರುತ್ತಿದೆ. ಹಾಗಾಗಿ, ಇದು ಸಂಪನ್ಮೂಲಗಳ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಬಾಹ್ಯಾಕಾಶ ವಲಯದಲ್ಲಿ ಸಂಪನ್ಮೂಲಗಳ ಸವಾಲುಗಳಿರುವುದನ್ನು ಕೇಂದ್ರ ಸಚಿವ ಸಿಂಗ್ ಅವರು ಒಪ್ಪಿಕೊಂಡಿದ್ದಾರೆ. ಆದರೂ ಭಾರತದ ವೈಜ್ಞಾನಿಕ ಪರಿಣತಿಯು ಮಾತ್ರ ಅಗಾಧವಾಗಿದೆ. ಚಂದ್ರಾಯನದಮ ಮೂಲಕ ಚಂದ್ರನ ಮೇಲೆ ನೀರಿನ ಕಣಗಳ್ನು ಪತ್ತೆಮ ಮಾಡುವಂಥ ವಿಶಿಷ್ಟ ಸಾಧನೆಗಳು ವ್ಯಾಪಕ ಗಮನ ಸೆಳೆದಿವೆ ಎಂಬುದು ಅವರ ಅಭಿಪ್ರಾಯವಾಗಿತ್ತು.

ಚಂದ್ರಯಾನದಲ್ಲಿ ಇಡೀ ದೇಶವೇ ಒಳಗೊಂಡಿತ್ತು. ಇದೊಂದು ರೀತಿಲ್ಲಿ ಇಡೀ ವಿಜ್ಞಾನ, ಇಡೀ ಸರ್ಕಾರ ಮತ್ತು ಇಡೀ ದೇಶವೇ ಒಳಗೊಂಡಿರುವ ಸಾಧನೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಹೇಳಿದರು. ಬಾಹ್ಯಾಕಾಶ ವಲಯವನ್ನು ಖಾಸಗಿಗೆ ಮುಕ್ತ ಮಾಡಿರುವುದು ಪ್ರಮುಖ ಪಲ್ಲಟವಾಗಿದೆ. ಈ ನಡೆಯಿಂದ ಭಾರತದ ಬಾಹ್ಯಾಕಾಶ ವಲಯದಲ್ಲಿ ನಿಧಿ ಮತ್ತು ಜ್ಞಾನ ಹೆಚ್ಚಳಕ್ಕೆ ಕಾರಣವಾಗಿದೆ. ಹಾಗೆಯೇ ಬಾಹ್ಯಾಕಾಶ ವಿಜ್ಞಾನದಲ್ಲಿ ಸಾರ್ವಜನಿಕ ಸಹಭಾಗಿತ್ವವನ್ನು ಇದು ಹೆಚ್ಚಿಸಿದೆ ಎಂದು ಅವರು ಅಭಿಪ್ರಾಯಪಟ್ಟರು.

ಗಗನಯಾನ ಮಾನವ ಬಾಹ್ಯಾಕಾಶ ಯಾನ ಮಿಷನ್ ಈಗ ಸದ್ಯದ ಪ್ರಮುಖ ಕೇಂದ್ರೀಕೃತ ಯೋಜನೆಯಾಗಿದೆ. ಈಗಾಗಲೇ ಪ್ರಾಯೋಗಿಕ ಹಾರಾಟ ಪರೀಕ್ಷೆ ನಡೆಸಲಾಗಿದೆ. 2025 ರ ವೇಳೆಗೆ, ಭಾರತವು ಮನುಷ್ಯನನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಗುರಿಯನ್ನು ಹೊಂದಿದೆ ಮತ್ತು ಸುರಕ್ಷಿತವಾಗಿ ಮರಳುವುದನ್ನು ಖಚಿತಪಡಿಸುತ್ತದೆ. ಇದಕ್ಕೂ ಮುನ್ನ, ಗಗನಯಾತ್ರಿಗಳ ಕ್ರಿಯೆಗಳನ್ನು ಅನುಕರಿಸುವ ಮಹಿಳಾ ರೋಬೋಟ್ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ ಎಂದು ಅವರು ಕೇಂದ್ರ ಸಚಿವರು ಇದೇ ವೇಳೆ ಹೇಳಿದರು.

ಈ ಸುದ್ದಿಯನ್ನೂ ಓದಿ: ಚಂದ್ರನಿಂದ ಮಣ್ಣು, ಕಲ್ಲು ಸ್ಯಾಂಪಲ್ಸ್ ಭೂಮಿಗೆ ತರಲು ಸಜ್ಜಾದ ಇಸ್ರೋ!

Exit mobile version