ನವ ದೆಹಲಿ: ಅಣ್ವಸ್ತ್ರ ಸಿಡಿತಲೆಯನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ಅಗ್ನಿ-4 ಮಧ್ಯಂತರ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯ ತರಬೇತಿ ಉಡಾವಣೆಯನ್ನು ಸೋಮವಾರ ಯಶಸ್ವಿಯಾಗಿ ನಡೆಸಲಾಗಿದೆ.
ಅಗ್ನಿ- 4 ಕ್ಷಿಪಣಿಯನ್ನು ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಮುಂಜಾನೆ 7:30 ರ ಸುಮಾರಿಗೆ ಉಡಾಯಿಸಲಾಯಿತು. ಇದು ಭಾರತದ ಸೇನಾ ಸಾಮರ್ಥ್ಯಕ್ಕೆ ಗಮನಾರ್ಹವಾದ ಸಾಮರ್ಥ್ಯವನ್ನು ಹೆಚ್ಚಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ರಕ್ಷಣಾ ಸಚಿವಾಲಯದ ಪ್ರಕಾರ, ʼʼಅಗ್ನಿ-4ರ ಯಶಸ್ವಿ ಪರೀಕ್ಷೆಯು ವಿಶ್ವಾಸಾರ್ಹ ಕನಿಷ್ಠ ಪ್ರತಿರೋಧ ಸಾಮರ್ಥ್ಯವನ್ನು ಹೊಂದಿರುವ ಭಾರತದ ನೀತಿಯನ್ನು ಪುನರುಚ್ಚರಿಸುತ್ತದೆʼʼ ಎಂದಿದೆ. ಉಡಾವಣೆ ಕಾರ್ಯಾಚರಣೆ ಎಲ್ಲ ಸುರಕ್ಷತಾ ಮಾನದಂಡಗಳನ್ನು ಪೂರೈಸಿದೆ.
ಇದನ್ನೂ ಓದಿ: ₹ 76,390 ಕೋಟಿ ಬೆಲೆಯ ದೇಶಿ ತಯಾರಿಯ ರಕ್ಷಣಾ ಸಾಮಗ್ರಿ ಖರೀದಿ