ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಗುರುವಾರ ಶ್ವೇತಭವನದಲ್ಲಿ ಭವ್ಯ ಸ್ವಾಗತವನ್ನು ಕೋರಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ (President Joe Biden) ಅವರು ಬರಮಾಮಾಡಿಕೊಂಡರು. ಈ ವೇಳೆ, ಮೋದಿ ಅವರಿಗೆ 10 ಸಾಂಗ್ ಸೆಲ್ಯುಟ್ ಮೂಲಕ ಗೌರವ ನೀಡಲಾಯಿತು. ಅಲ್ಲದೇ ಉಭಯ ದೇಶಗಳ ರಾಷ್ಟ್ರಗೀತೆಗಳನ್ನು ಹಾಡಲಾಯಿತು. ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ವಿಶ್ವ ಶಾಂತಿಗಾಗಿ ಭಾರತ (India) ಮತ್ತು ಅಮೆರಿಕಗಳೆರಡೂ (America) ಜತೆಗೂಡಿ ಕೆಲಸ ಮಾಡಲಿವೆ ಎಂದು ಹೇಳಿದರು(PM Modi US Visit:).
Speaking at the White House. https://t.co/qrAuu1wlnj
— Narendra Modi (@narendramodi) June 22, 2023
ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಆಧರಿಸಿದೆ. ಎರಡೂ ದೇಶಗಳ ಸಂವಿಧಾನಗಳು ‘ನಾವು ಜನರು’ ಎಂಬ ಪದಗುಚ್ಛದಿಂದ ಪ್ರಾರಂಭವಾಗುತ್ತವೆ. ಎರಡೂ ದೇಶಗಳು ತಮ್ಮ ವೈವಿಧ್ಯತೆಯ ಬಗ್ಗೆ ಹೆಮ್ಮೆಪಡುತ್ತವೆ. ಕರೋನಾ ನಂತರದ ಯುಗದಲ್ಲಿ ಜಗತ್ತು ಹೊಸ ರೂಪ ಪಡೆಯುತ್ತಿದೆ. ಜಾಗತಿಕ ಕಲ್ಯಾಣ, ವಿಶ್ವ ಶಾಂತಿ ಮತ್ತು ಸ್ಥಿರತೆಗಾಗಿ ಒಟ್ಟಾಗಿ ಕೆಲಸ ಮಾಡಲು ನಾವು ಒಗ್ಗಟ್ಟಾಗಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ವೇಳೆ ಹೇಳಿದರು.
ಇದೇ ವೇಳೆ ಮಾತನಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಮೋದಿಯೊಂದಿಗಿನ ತಮ್ಮ ಸಂಬಂಧವನ್ನು ತೆರೆದಿಟ್ಟರು. ನಾನು ಉಪಾಧ್ಯಕ್ಷನಾಗಿದ್ದಾಗಿನಿಂದ ನಾವು ಒಟ್ಟಿಗೆ ಸಾಕಷ್ಟು ಸಮಯ ಕಳೆದಿದ್ದೇವೆ. ನಾನು ಅಧ್ಯಕ್ಷರಾದ ನಂತರ, ನಾವು ಸತ್ಯದ ಆಧಾರದ ಮೇಲೆ ಸಂಬಂಧವನ್ನು ಬೆಳೆಸಿದ್ದೇವೆ. ಸದ್ಯದ ಜಾಗತಿಕ ಪರಿಸ್ಥಿತಿಯನ್ನು ಅವಲೋಕಿಸಿದರೆ, ಭಾರತ ಮತ್ತು ಅಮೆರಿಕ ಒಟ್ಟಿಗೆ ಕೆಲಸ ಮಾಡುವುದು ಬಹಳ ಮುಖ್ಯ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ: PM Modi US Visit: ಅಮೆರಿಕಕ್ಕೆ ತೆರಳಿ ಕನ್ನಡಿಗರ ಬಹುದಿನಗಳ ಆಸೆ ಈಡೇರಿಸಿದ ಮೋದಿ
ಅಮೆರಿಕದ ಸಂಪ್ರದಾಯದಂತೆ ಮೋದಿ ಅವರಿಗೆ ಶ್ವೇತಭವನದ ಗೌರವ ರಕ್ಷೆಯನ್ನು ನೀಡಲಾಯಿತು. ಭಾರತ ಮತ್ತು ಅಮೆರಿಕದ ಧ್ವಜಗಳೊಂದಿಗೆ ಅಮೆರಿಕ ಸೈನಿಕರ ಪರೇಡ್ ಮಾಡಿದರು. ಶ್ವೇತಭವನಕ್ಕೆ ಮೋದಿ ಅವರನ್ನು ಹಾಡಿನ ನಮನದೊಂದಿಗೆ ಸ್ವಾಗತಿಸಲಾಯಿತು.
ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.