Site icon Vistara News

India vs Bharat Row: ವಿಷ್ಣು ಪುರಾಣ ಉಲ್ಲೇಖಿಸಿ ‘ಭಾರತ’ದ ಅರ್ಥ ತಿಳಿಸಿದ್ದ ಮೋದಿ; ಹೆಸರು ಬದಲಿಗೆ ಮೊದಲೇ ಪ್ಲಾನ್?

Narendra Modi In Parliament

India vs Bharat: Amid row PM Narendra Modi's Old Video On Meaning of Bharat Goes Viral

ನವದೆಹಲಿ: ಇಂಡಿಯಾ’ ಎಂಬ ಹೆಸರನ್ನು ‘ಭಾರತ’ ಎಂಬುದಾಗಿ ಬದಲಿಸಲು ಕೇಂದ್ರ ಸರ್ಕಾರ ಸಂಸತ್‌ ವಿಶೇಷ ಅಧಿವೇಶನದಲ್ಲಿ ವಿಧೇಯಕ (India vs Bharat Row) ಮಂಡಿಸಲಿದೆ ಎಂದೇ ಹೇಳಲಾಗುತ್ತಿದೆ. ಈಗಾಗಲೇ ರಾಷ್ಟ್ರಪತಿಯವರ ಅಧಿಸೂಚನೆಯಲ್ಲಿ ‘ಪ್ರೆಸಿಡೆಂಟ್‌ ಆಫ್‌ ಭಾರತ್’‌ ಎಂದು ನಮೂದಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಪರ-ವಿರೋಧ ಚರ್ಚೆಯೂ ಶುರುವಾಗಿದೆ. ಇದರ ಬೆನ್ನಲ್ಲೇ, ಭಾರತದ ಅರ್ಥವನ್ನು ಸಾರುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೇ ಸಂಸತ್ತಿನಲ್ಲಿ ಮಾತನಾಡಿರುವ ವಿಡಿಯೊ ಈಗ ವೈರಲ್‌ ಆಗಿದೆ.

2022ರಲ್ಲಿ ನರೇಂದ್ರ ಮೋದಿ ಅವರು ಸಂಸತ್‌ನಲ್ಲಿ ಮಾತನಾಡುತ್ತ ವಿಷ್ಣುಪುರಾಣದ ಉಲ್ಲೇಖವನ್ನು ತಿಳಿಸಿದ್ದರು. “ಸಮುದ್ರದ ಉತ್ತರ ಭಾಗದಲ್ಲಿರುವುದು ಹಾಗೂ ಹಿಮಾಲಯದ ಪಶ್ಚಿಮ ಭಾಗದಲ್ಲಿರುವುದೇ ಭಾರತ. ಭಾರತದ ಪುತ್ರನೇ ಭಾರತೀಯ” ಎಂದು ನರೇಂದ್ರ ಮೋದಿ ಹೇಳಿದ್ದರು. ಈಗ ಇಂಡಿಯಾ ಎಂಬ ಹೆಸರಿನ ಬದಲಾವಣೆ ಕುರಿತು ಚರ್ಚೆಗಳು ಆರಂಭವಾಗಿರುವ ಬೆನ್ನಲ್ಲೇ ಮೋದಿ ಅವರು ಆಗ ಹೇಳಿದ್ದ ವಿಡಿಯೊ ವೈರಲ್‌ ಆಗಿದೆ. ಹಾಗೆಯೇ, ಭಾರತ ಎಂಬುದಾಗಿ ಹೆಸರು ಬದಲಿಸುವ ಉದ್ದೇಶ ಇದ್ದ ಕಾರಣಕ್ಕಾಗಿಯೇ ಹೀಗೆ ಹೇಳಿದ್ದರು ಎನ್ನಲಾಗಿದೆ.

ಮೋದಿ ಹೇಳಿಕೆಯ ವಿಡಿಯೊ

ಇತ್ತೀಚೆಗೆ ರಾಷ್ಟ್ರಪತಿ ಭವನದಿಂದ ಸೆಪ್ಟೆಂಬರ್ 9ರ G20 ಔತಣಕೂಟಕ್ಕೆ ಪ್ರತಿಪಕ್ಷಗಳಿಗೆ ಆಹ್ವಾನ ಹೋಗಿದ್ದು, ಅದರಲ್ಲಿ ʼPresident of India’ ಬದಲಿಗೆ ʼPresident of Bharatʼ ಎಂದು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷವು ಕೇಂದ್ರದ ವಿರುದ್ಧ ಟೀಕೆ ಆರಂಭಿಸಿದೆ. ಆದರೆ, ಭಾರತ ಎಂಬ ಹೆಸರೇ ದೇಶಕ್ಕೆ ಸೂಕ್ತವಾದುದು. ಇಂಡಿಯಾ ಎಂದು ಬ್ರಿಟಿಷರು ಕರೆದಿದ್ದು ಎಂಬ ವಾದಗಳೂ ಕೇಳಿಬಂದಿವೆ.

ಇದನ್ನೂ ಓದಿ: Narendra Modi: ಇಂಡಿಯಾ-ಭಾರತ ಬಗ್ಗೆ ತುಟಿಬಿಚ್ಚದಿರಿ; ಸಚಿವರಿಗೆ ಮೋದಿ ಕೊಟ್ಟ ಖಡಕ್‌ ಸೂಚನೆಗಳೇನು?

ನರೇಂದ್ರ ಮೋದಿ ಅವರು ಇಂಡಿಯಾ ವರ್ಸಸ್‌ ಭಾರತ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡದಂತೆ ಸಚಿವರಿಗೆ ಸೂಚಿಸಿದ್ದಾರೆ. ದೆಹಲಿಯಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯ ಹಿನ್ನೆಲೆಯಲ್ಲಿ ಸಚಿವರೊಂದಿಗೆ ಸಭೆ ನಡೆಸಿದ ಮೋದಿ, ಸಚಿವರಿಗೆ ಹಲವು ಸೂಚನೆ ನೀಡಿದ್ದಾರೆ. “ಸನಾತನ ಧರ್ಮದ ಕುರಿತು ಹೇಳಿಕೆ ನೀಡಿದವರು, ಹೇಳಿಕೆಯನ್ನು ಬೆಂಬಲಿಸಿದವರಿಗೆ ಸರಿಯಾದ ತಿರುಗೇಟು ನೀಡಿ. ಆದರೆ, ಇಂಡಿಯಾ ಹಾಗೂ ಭಾರತ ವಿವಾದದ ಕುರಿತು ಯಾವುದೇ ಚರ್ಚೆಯಲ್ಲಿ ಪಾಲ್ಗೊಳ್ಳುವುದು, ಹೇಳಿಕೆ ನೀಡುವುದನ್ನು ಮಾಡದಿರಿ” ಎಂಬುದಾಗಿಸ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

Exit mobile version