Site icon Vistara News

India vs Bharat Row: ‘ಭಾರತ’ ಹೆಸರಿನ ಬಗ್ಗೆ 1949ರಲ್ಲೇ ಭಾರಿ ಚರ್ಚೆ; ಅಂಬೇಡ್ಕರ್‌ ಅಭಿಪ್ರಾಯ ಏನಿತ್ತು?

Dr BR Ambedkar On Bharat

India vs Bharat Row: What did Dr BR Ambedkar say on Bharat during dabate in 1949?

ನವದೆಹಲಿ: ದೇಶದೆಲ್ಲೆಡೆ ಈಗ ‘ಇಂಡಿಯಾ’ ಹಾಗೂ ‘ಭಾರತ’ ಎಂಬ ಪದಗಳದ್ದೇ ಚರ್ಚೆ ನಡೆಯುತ್ತಿದೆ. ಇತ್ತೀಚೆಗೆ ರಾಷ್ಟ್ರಪತಿ ಭವನದಿಂದ ಸೆಪ್ಟೆಂಬರ್ 9ರ G20 ಔತಣಕೂಟಕ್ಕೆ ಪ್ರತಿಪಕ್ಷಗಳಿಗೆ ಆಹ್ವಾನ ನೀಡಿದ್ದು, ಅದರಲ್ಲಿ ʼPresident of India’ ಬದಲಿಗೆ ʼPresident of Bharatʼ ಎಂದು ಉಲ್ಲೇಖಿಸಿದ ಬಳಿಕವಂತೂ, ಕೇಂದ್ರ ಸರ್ಕಾರವು ಇಂಡಿಯಾ ಎಂಬ ಹೆಸರನ್ನು ಭಾರತ ಎಂಬುದಾಗಿ ಬದಲಿಸುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇದರ ಬೆನ್ನಲ್ಲೇ, ಭಾರತ ಎಂಬ ಪದ ಹೇಗೆ ಸೇರಿಸಲಾಯಿತು, ಭಾರತ ಎಂಬ ಪದದ ಪರ ಡಾ.ಬಿ.ಆರ್.ಅಂಬೇಡ್ಕರ್‌ ಅವರ ಅಭಿಪ್ರಾಯ ಏನಾಗಿತ್ತು ಎಂಬ ಚರ್ಚೆಯೂ ಗಮನ ಸೆಳೆದಿದೆ.

ಹಾಗೆ ನೋಡಿದರೆ, ಭಾರತ ಎಂಬ ಪದವನ್ನು ದೇಶದ ಸಂವಿಧಾನದಲ್ಲಿ ಸೇರಿಸಲು ಸಂವಿಧಾನ ರಚನಾ ಸಮಿತಿಯಲ್ಲಿದ್ದ ಹೆಚ್ಚಿನ ಜನರಿಗೆ ಇಷ್ಟವಿರಲಿಲ್ಲ. ಆದರೆ, 1949ರ ಸೆಪ್ಟೆಂಬರ್‌ 17ರಂದು ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಭಾರತ ಎಂಬ ಪದದ ಅಳವಡಿಕೆಯ ಪರ ನಿಂತರು. ಸಂವಿಧಾನದ 1ನೇ ವಿಧಿಯಲ್ಲಿ ಭಾರತ ಎಂಬ ಹೆಸರು ಸೇರಿಸಬೇಕು ಎಂದು ಪ್ರಸ್ತಾಪಿಸಿದರು. ಇದಾದ ಬಳಿಕವೇ “ಇಂಡಿಯಾ, ಇದು ಭಾರತ, ರಾಜ್ಯಗಳ ಒಕ್ಕೂಟವಾಗಿದೆ” ಎಂಬ ಸಾಲು ಸೇರಿಸಲಾಯಿತು ಎಂದು ಪುಸ್ತಕಗಳ ಉಲ್ಲೇಖದಿಂದ ತಿಳಿದುಬಂದಿದೆ.

ಪ್ರಧಾನಿ ನೋಟಿಫಿಕೇಷನ್‌ನಲ್ಲೂ ಭಾರತ

ಭಾರತ ಎಂಬ ಪದವನ್ನು ಸಂವಿಧಾನದಲ್ಲಿ ಸೇರಿಸುವ ಕುರಿತು ತೀವ್ರ ಚರ್ಚೆಯಾಯಿತು. ಮೊದಲಿಗೆ ಅಂಬೇಡ್ಕರ್‌ ಅವರು ಭಾರತ ಪದ ಸೇರಿಸಲು ಪ್ರಸ್ತಾಪಿಸಿದರು. ಇದಾದ ಬಳಿಕ ಆಲ್‌ ಇಂಡಿಯಾ ಫಾರ್ವರ್ಡ್‌ ಬ್ಲಾಕ್‌ ಲೀಡರ್‌ ಎಚ್‌.ವಿ.ಕಾಮತ್‌ ಅವರು ತಿದ್ದುಪಡಿ ಪ್ರಸ್ತಾಪ ಮುಂದಿರಿಸಿದರು. ಹಲವು ನಾಯಕರು ಭಾರತ ಎಂಬ ಪದ ಸೇರಿಸುವ ಅವಶ್ಯಕತೆ, ಅನಿವಾರ್ಯತೆ, ಅದರ ಮಹತ್ವದ ಕುರಿತು ಅಭಿಪ್ರಾಯ ಮಂಡಿಸಿದ ಬಳಿಕವೇ ಪದವನ್ನು ಸೇರಿಸಲಾಯಿತು ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: India vs Bharat Row: ವಿಧೇಯಕಕ್ಕೂ ಮೊದಲೇ ‘ಭಾರತ’ಮಯ; ಪ್ರಧಾನಿ ಅಧಿಸೂಚನೆಯಲ್ಲೂ ‘ಭಾರತ’

ʼಇಂಡಿಯಾʼವನ್ನು ಬದಲಿಸಿ ʼಭಾರತʼವನ್ನು ಸ್ಥಾಪಿಸಬೇಕು ಎಂಬುದು ಬಿಜೆಪಿಯ ಬಹುಕಾಲದ ಆಶಯವಾಗಿದೆ. ಈ ಹಿಂದೆ ಹಿಮಂತ ಬಿಸ್ವ ಶರ್ಮಾ, ಆರೆಸ್ಸೆಸ್‌ ಮುಖಂಡ ಮೋಹನ ಭಾಗವತ್‌ ಕೂಡ ಈ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ಡಿಸೆಂಬರ್ 2022ರಲ್ಲಿ, ಗುಜರಾತ್‌ನ ಆನಂದ್‌ನ ಬಿಜೆಪಿ ಸಂಸದ ಮಿತೇಶ್ ಪಟೇಲ್ ಅವರು ʼಇಂಡಿಯಾʼವನ್ನು “ಭಾರತ್” ಅಥವಾ “ಭಾರತ್ ವರ್ಷ್” ಎಂದು ಮರುನಾಮಕರಣ ಮಾಡುವ ಬಗ್ಗೆ ಲೋಕಸಭೆಯಲ್ಲಿ ಪ್ರಶ್ನೆಯನ್ನು ಎತ್ತಿದ್ದರು. ಸೆಪ್ಟೆಂಬರ್ 1949ರಲ್ಲಿ ಸಂವಿಧಾನ ಸಭೆಯು ಈ ಬಗ್ಗೆ ಚರ್ಚಿಸಿತ್ತು. “ಇಂಡಿಯಾ” ಎಂಬುದು ದೇಶವು ಒಳಪಟ್ಟ ಗುಲಾಮಗಿರಿಯನ್ನು ಸೂಚಿಸುತ್ತದೆ. ಇದು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯಿಂದ ಬಂದಿದೆ ಎಂದು ಪಟೇಲ್ ಪ್ರತಿಪಾದಿಸಿದ್ದರು.

ಕೇಂದ್ರದ ಸ್ಪಷ್ಟನೆ ಏನು?

ಭಾರತ ಎಂಬುದಾಗಿ ಹೆಸರು ಬದಲಾವಣೆ ಕುರಿತು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಸ್ಪಷ್ಟನೆ ನೀಡಿದ್ದು, ಇದೆಲ್ಲ ವದಂತಿ ಎಂದು ಹೇಳಿದ್ದಾರೆ. “ಹೆಸರು ಬದಲಾವಣೆ ಕುರಿತು ಹಬ್ಬಿಸಿರುವುದೆಲ್ಲ ವದಂತಿಯಾಗಿದೆ. ಇದು ಪ್ರತಿಪಕ್ಷಗಳ ಮನಸ್ಥಿತಿಗೂ ಹಿಡಿದ ಕನ್ನಡಿಯಾಗಿದೆ. ಅಷ್ಟಕ್ಕೂ, ದೇಶದಲ್ಲಿ ‘ಭಾರತ’ ಎಂಬ ಹೆಸರನ್ನು ವಿರೋಧಿಸುವವರು ಯಾರು? ಯಾರಾದರೂ ವಿರೋಧಿಸುತ್ತಾರೆ ಎಂದಾದರೆ, ಅವರ ಮನಸ್ಥಿತಿ ಗೊತ್ತಾಗುತ್ತದೆ” ಎಂದು ಅನುರಾಗ್‌ ಠಾಕೂರ್‌ ತಿಳಿಸಿದ್ದಾರೆ ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

Exit mobile version