ನವೆದಹಲಿ: 2013ರಿಂದ 2017ರ ನಡುವೆ ಮತ್ತು 2018-2022ರ ಅವಧಿಯಲ್ಲಿ ಭಾರತದ ಶಸ್ತ್ರಾಸ್ತ್ರ ಆಮದಿನಲ್ಲಿ ಶೇ.11ರಷ್ಟು ಕುಸಿತವಾಗಿದೆ. ಇಷ್ಟಾಗಿಯೂ ಈಗಲೂ ಭಾರತವು ಶಸ್ತ್ರಾಸ್ತ್ರ ಆಮದಿನಲ್ಲಿ ಜಗತ್ತಿನಲ್ಲೇ ಮೊದಲನೇ ಸ್ಥಾನದಲ್ಲಿದೆ (Arms Importer) ಎಂದು ಸ್ಟಾಕ್‌ಹೋಮ್ ಇಂಟರ್‌ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್(Sipri) ಸೋಮವಾರ ಬಿಡುಗಡೆ ಮಾಡಿದ ವರಿದಯಲ್ಲಿ ತಿಳಿಸಿದೆ. ರಕ್ಷಣಾ ಉತ್ಪಾದನೆಯಲ್ಲಿ ಭಾರತವು ಆತ್ಮನಿರ್ಭರತೆಯನ್ನು ಸಾಧಿಸುವ ನಿಟ್ಟಿನಲ್ಲಿ ಈ ವರದಿ ಬಿಡುಗಡೆಯಾಗಿರುವುದು, ಚರ್ಚೆಗೆ ಕಾರಣವಾಗಿದೆ. ಇದೇ ವೇಳೆ, 2022ರಲ್ಲಿ ಉಕ್ರೇನ್ ಅತಿ ಹೆಚ್ಚು ಶಸ್ತ್ರಾಸ್ತ್ರ ಆಮದು ಮಾಡಿಕೊಂಡ ರಾಷ್ಟ್ರಗಳ ಪಟ್ಟಿಯಲ್ಲಿ ಉಕ್ರೇನ್ ಮೂರನೇ ಸ್ಥಾನದಲ್ಲಿದೆ.
ಕಳೆದ ಐದು ವರ್ಷದಲ್ಲಿ ಜಾಗತಿಕ ಶಸ್ತ್ರಾಸ್ತ್ರ ಆಮದಿನಲ್ಲಿ ಭಾರತವು ಶೇ.11ರ ದರದಲ್ಲಿ ಮೊದಲನೇ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿದೆ ಸೌದಿ ಅರೆಬಿಯಾ(ಶೇ.9.6), ಕತಾರ್(ಶೇ.6.4), ಆಸ್ಟ್ರೇಲಿಯಾ(ಶೇ.4.7) ಮತ್ತು ಚೀನಾ(ಶೇ.4.7) ರಾಷ್ಟ್ರಗಳಿವೆ.
ಇದನ್ನೂ ಓದಿ: Military Hardware Export: ಆತ್ಮನಿರ್ಭರಕ್ಕೆ ಬಲ, 13 ಸಾವಿರ ಕೋಟಿ ರೂ. ಮೌಲ್ಯದ ಮಿಲಿಟರಿ ಹಾರ್ಡ್‌ವೇರ್ ರಫ್ತು
ಇಷ್ಟಾಗಿಯೂ 2022ರಲ್ಲಿ, 2012-16 ಮತ್ತು 2017-21ರ ನಡುವೆ ಭಾರತದ ಆಮದುಗಳು ಶೇ.21 ಕುಸಿದಿದೆ. ಆದರೆ ದೇಶವು ಇನ್ನೂ ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ಆಮದುದಾರವಾಗಿದೆ ಎಂಬುದು ಅಷ್ಟೇ ನಿಜ. ಹೊಸ ವರದಿಯು ಭಾರತದ ಆಮದುಗಳ ಕುಸಿತಕ್ಕೆ ಕಾರಣಗಳು ಆಮದುಗಳನ್ನು ಸ್ಥಳೀಯ ಉತ್ಪನ್ನಗಳೊಂದಿಗೆ ಬದಲಾಯಿಸುವ ಪ್ರಯತ್ನಗಳು ಮತ್ತು ಸಂಕೀರ್ಣವಾದ ಸಂಗ್ರಹಣೆ ಪ್ರಕ್ರಿಯೆಯನ್ನು ಒಳಗೊಂಡಿವೆ ಎಂದು ಹೇಳಿದೆ.