ನವದೆಹಲಿ: ವಿಕ್ರಮ್ (Vikram Cinema) ಚಿತ್ರದ ಮೂಲಕ ಭಾರೀ ಯಶಸ್ಸು ಕಂಡಿರುವ ತಮಿಳು ಚಿತ್ರರಂಗದ (Tamil Cinema) ಸೂಪರ್ ಸ್ಟಾರ್ ಕಮಲ್ ಹಾಸನ್ (Super Star Kamal Haasan) ಅವರು ಮತ್ತೊಂದು ದಾಖಲೆಯನ್ನು ಬರೆದಿದ್ದಾರೆ. ಕಮಲ್ ಹಾಸನ್ ಅಭಿನಯದ ಇಂಡಿಯನ್-2 (Indian 2) ಡಿಜಿಟಲ್ ಹಕ್ಕುಗಳನ್ನು (Digital Rights) ಸುಮಾರು 200 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 1996ರಲ್ಲಿ ತೆರೆ ಕಂಡು ಭಾರೀ ಯಶಸ್ವಿಯಾಗಿದ್ದ ಶಂಕರ್ ನಿರ್ದೇಶನದ ಇಂಡಿಯನ್ ಚಿತ್ರದ ಮುಂದುವರಿದ ಭಾಗವೇ ಇಂಡಿಯನ್-2. ಈ ಸಿನಿಮಾವನ್ನೂ ಶಂಕರ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ವಿಕ್ರಮ್ ಚಿತ್ರದ ಮೂಲಕ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಕಮಲ್ ಹಾಸನ್ ಅವರು ಪ್ರಭಾಸ್, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ ಅಭಿನಯದ ಕಲ್ಕಿ 2898 ಎಡಿ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ.
ಇಂಡಿಯನ್-2 ಚಿತ್ರದ ಹಕ್ಕುಗಳು ಮಾರಾಟ ಕುರಿತು ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಟಿಸಿದೆ. ಇಂಡಿಯನ್-2 ಸಿನಿಮಾ ಅತ್ಯುತ್ತಮವಾಗಿ ಮೂಡಿ ಬಂದ ಹಿನ್ನೆಲೆಯಲ್ಲಿ ಕಮಲ್ ಹಾಸನ್ ಅವರು 8 ಲಕ್ಷ ರೂ. ಮೌಲ್ಯದ ಕೈಗಡಿಯಾರವನ್ನು ನಿರ್ದೇಶಕ ಶಂಕರ್ ಅವರಿಗೆ ಗಿಫ್ಟ್ ನೀಡಿದ್ದರು.
ಈ ಬಗ್ಗೆ ಟ್ವೀಟ್ ಮಾಡಿದ್ದ ಕಮಲ್ ಹಾಸನ್ ಅವರು, ನಾನು ಇಂಡಿಯನ್-2 ಸಿನಿಮಾದ ಮುಖ್ಯ ದೃಶ್ಯಗಳನ್ನು ವೀಕ್ಷಿಸಿದೆ. ಶಂಕರ್ ಅವರಿಗೆ ಶುಭಾಶಯಗಳು. ಇದು ಅವರ ಅತ್ಯುನ್ನತ ಸಾಧನೆಯಾಗಬಾರದು. ಯಾಕೆಂದರೆ, ಅವರ ಕಲಾ ಜೀವನವೂ ಇನ್ನೂ ಅತ್ಯುನ್ನತ ಹಂತವನ್ನು ತಲುಪಬೇಕಿದೆ. ಇಷ್ಟಕ್ಕೆ ಹೆಮ್ಮೆಪಡಬೇಡಿ. ಇನ್ನೂ ಹೊಸ ಎತ್ತರದ ಹುಡುಕಾಟಗಳನ್ನು ಶೋಧಿಸಿ ಎಂದು ಹೇಳಿದ್ದರು.
ಈ ಸುದ್ದಿಯನ್ನೂ ಓದಿ: Kamal Haasan : ʻಪ್ರಾಜೆಕ್ಟ್ ಕೆʼ ಸಿನಿಮಾದಲ್ಲಿ ಕಮಲ್ ಹಾಸನ್; ಸಂಭಾವನೆ ಎಷ್ಟು ನೋಡಿ!
ಇಂಡಿಯನ್-2 ಚಿತ್ರದ ಎಲ್ಲ ಭಾಷೆಗಳ ಸ್ಟ್ರೀಮಿಂಗ್ ಡಿಜಿಟಲ್ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ 200 ಕೋಟಿ ರೂ.ಗೆ ಖರೀದಿಸಿದೆ. ಮೂಲಗಳನ್ನು ಉಲ್ಲೇಖಿಸಿದ ಸುದ್ದಿ ಮಾಡಿರುವ ಇಟೈಮ್ಸ್, ಶಂಕರ್ ಅವರು ಇಂಡಿಯನ್-2 ಚಿತ್ರವನ್ನು ಅದ್ಭುತವಾಗಿ ಮಾಡಿದ್ದಾರೆ. ಈ ಚಿತ್ರದ ಕೆಲವು ಭಾಗಗಳನ್ನು ನೋಡಿರುವ ಜನರು ಫಲಿತಾಂಶದ ಬಗ್ಗೆ ಸಂತೋಷಗೊಂಡಿದ್ದಾರೆ ಎಂದು ಹೇಳಿದೆ.
ಸಿನಿಮಾದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.